AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral News: 40 ವರ್ಷ ಹಿಂದಿನ ಕೇಕ್ ತುಂಡು​ 19 ಲಕ್ಷ ರೂ.ಗೆ ಹರಾಜು; ಇದು ಅಂತಿಂಥಾ ಕೇಕ್ ಅಲ್ಲ!

ಬ್ರಿಟನ್ ರಾಜ ಚಾರ್ಲ್ಸ್​ ಮತ್ತು ಪ್ರಿನ್ಸೆಸ್ ಡಯಾನಾ ಅವರ ಮದುವೆಯ ಸಂದರ್ಭದಲ್ಲಿ ಕತ್ತರಿಸಿದ್ದ ಕೇಕ್ ತುಂಡನ್ನು 19 ಲಕ್ಷ ರೂ.ಗೆ ಹರಾಜು ಹಾಕಲಾಗಿದೆ.

Viral News: 40 ವರ್ಷ ಹಿಂದಿನ ಕೇಕ್ ತುಂಡು​ 19 ಲಕ್ಷ ರೂ.ಗೆ ಹರಾಜು; ಇದು ಅಂತಿಂಥಾ ಕೇಕ್ ಅಲ್ಲ!
ಹರಾಜಾದ ಕೇಕ್
TV9 Web
| Edited By: |

Updated on: Aug 13, 2021 | 7:43 PM

Share

ಲಂಡನ್​ನಲ್ಲಿ 40 ವರ್ಷಗಳ ಹಿಂದಿನ ಕೇಕ್ ಅನ್ನು ಹರಾಜಿಗೆ ಇಡಲಾಗಿದೆ. ಈ ಕೇಕ್​ನ ಒಂದು ತುಂಡಿಗೆ ಬರೋಬ್ಬರಿ 19 ಲಕ್ಷ ರೂ. ನೀಡಲಾಗಿದೆ. 4 ದಶಕಗಳ ಹಿಂದಿನ ಕೇಕ್​ಗೆ ಇಷ್ಟು ದೊಡ್ಡ ಮೊತ್ತವನ್ನು ನೀಡಲು ಕಾರಣವೇನು? ಎಂದು ನಿಮಗೆ ಅಚ್ಚರಿಯಾಗಬಹುದು. ಇದು ಅಂತಿಂಥಾ ಕೇಕ್ ಅಲ್ಲ. ಬ್ರಿಟನ್ ರಾಜಮನೆತನದ ಪ್ರಿನ್ಸ್ ಚಾರ್ಲ್ಸ್ ಮತ್ತು ರಾಜಕುಮಾರಿ ಡಯಾನಾ ಅವರ ಮದುವೆಯ ಕೇಕ್ ಎಂಬುದೇ ವಿಶೇಷ. 40 ವರ್ಷಗಳ ಹಿಂದೆ ಡಯಾನಾ ಹಾಗೂ ಚಾರ್ಲ್ಸ್​ ಮದುವೆಯ ಸಂದರ್ಭದಲ್ಲಿ ಕಟ್ ಮಾಡಲಾಗಿದ್ದ ಕೇಕ್ ಅನ್ನು ಹರಾಜಿಗಿಡಲಾಗಿದೆ.

ಬ್ರಿಟನ್ ರಾಜ ಚಾರ್ಲ್ಸ್​ ಮತ್ತು ಪ್ರಿನ್ಸೆಸ್ ಡಯಾನಾ ಅವರ ಮದುವೆಯ ನೆನಪಿಗಾಗಿ ಈ ಬೃಹತ್ ಕೇಕ್ ಅನ್ನು ಸಂರಕ್ಷಿಸಿ ಇಡಲಾಗಿತ್ತು. ಆ. 11ರಂದು ಈ ಕೇಕ್ ಅನ್ನು ಹರಾಜಿಗಿಡಲಾಗಿದ್ದು, 700 ಗ್ರಾಂಗಿಂತ ಹೆಚ್ಚು ಇರುವ ಕೇಕ್ ತುಂಡು ಸರಿಸುಮಾರು 19 ಲಕ್ಷ ರೂ.ಗೆ ಮಾರಾಟವಾಗಿದೆ. 1981ರ ಜುಲೈ 29ರಂದು ಚಾರ್ಲ್ಸ್​ ಹಾಗೂ ಡಯಾನಾ ಅವರ ಮದುವೆ ನಡೆದಿತ್ತು. ಆ ಮದುವೆಯಲ್ಲಿ ಕಟ್ ಮಾಡಲಾಗಿದ್ದ ಕೇಕ್ ತುಂಡೊಂದನ್ನು ಮೊಯಿರಾ ಸ್ಮಿತ್ ಎಂಬ ವ್ಯಕ್ತಿಗೆ ನೀಡಲಾಗಿತ್ತು. ಅವರು ಡಯಾನಾ ಹಾಗೂ ಚಾರ್ಲ್ಸ್ ಮದುವೆಯ ನೆನಪಿಗಾಗಿ ಆ ಕೇಕ್ ಅನ್ನು ಸಂರಕ್ಷಿಸಿ ಇಟ್ಟಿದ್ದರು. ಬಳಿಕ 2008ರಲ್ಲಿ ಅದನ್ನು ಬೇರೆಯವರಿಗೆ ಮಾರಾಟ ಮಾಡಿದ್ದರು. ಆ ಕೇಕ್ ಅನ್ನು ಖರೀದಿಸಿದ ವ್ಯಕ್ತಿ ಆ ಕೇಕ್ ಅನ್ನು ಈಗ ಹರಾಜಿಗಿಟ್ಟಿದ್ದಾರೆ.

Cake Viral Photo

ಹರಾಜಾದ ಕೇಕ್

40 ವರ್ಷಗಳ ಹಿಂದೆ ಈ ಕೇಕ್ ತಯಾರಿಸಲು 14 ವಾರಗಳು ಬೇಕಾಗಿತ್ತು. ಕೇಕ್ ಮಾರ್ಜಿಪಾನ್ ಬೇಸ್ ಅನ್ನು ಹೊಂದಿರುವ ಈ ಕೇಕ್ ಅನ್ನು ಕೆಂಪು, ನೀಲಿ ಮತ್ತು ಬೆಳ್ಳಿಯಲ್ಲಿ ಚಿತ್ರಿಸಿದ ರಾಯಲ್ ಕೋಟ್ ಆಫ್ ಆರ್ಮ್ಸ್‌ನ ಸಕ್ಕರೆ ರೂಪದಲ್ಲಿ ಅಲಂಕರಿಸಲಾಗಿದೆ. ಈ ಕೇಕ್ ಅನ್ನು ಪಡೆದಿದ್ದ ಮೊಯಿರಾ ಸ್ಮಿತ್ ಕ್ಲಾರೆನ್ಸ್ ಹೌಸ್‌ನಲ್ಲಿರುವ ರಾಣಿ ಎಲಿಜಬೆತ್ ಕುಟುಂಬದ ಸದಸ್ಯರಾಗಿದ್ದರು. ಈ ಹಿನ್ನೆಲೆಯಲ್ಲಿ ಮದುವೆಯ ದಿನ ಅವರಿಗೆ ಕೇಕ್ ನೀಡಲಾಗಿತ್ತು.

ಮದುವೆಯಾದ 11 ವರ್ಷಗಳಲ್ಲೇ ಚಾರ್ಲ್ಸ್ ಹಾಗೂ ಡಯಾನಾ ದಾಂಪತ್ಯದಲ್ಲಿ ಬಿರುಕು ಬಿಟ್ಟಿತ್ತು. 1996ರಲ್ಲಿ ಅವರಿಬ್ಬರೂ ವಿಚ್ಛೇದನ ಪಡೆದಿದ್ದರು. 1997ರಲ್ಲಿ ಕಾರು ಅಪಘಾತದಲ್ಲಿ ಡಯಾನಾ ಸಾವನ್ನಪ್ಪಿದ್ದರು.

ಇದನ್ನೂ ಓದಿ: Viral News: ವಿಚಿತ್ರವಾದರೂ ಸತ್ಯ; ಚಲಿಸುತ್ತಿದ್ದ ಆಟೋ ಮೇಲೆ ಹಲಸಿನ ಹಣ್ಣು ಬಿದ್ದು ಆಸ್ಪತ್ರೆ ಸೇರಿದ ಚಾಲಕ!

Viral News: 2 ಲಕ್ಷ ರೂ.ಗೆ ಮಾರಾಟವಾಯ್ತು 90 ಪೈಸೆಯ ಚಮಚ! ಹರಾಜಿಗೆ ಹಾಕಿದ್ದ ಮಾಲೀಕನೇ ಶಾಕ್

(40-year-old piece of the wedding cake Piece of Prince Charles and Diana was auctioned with Large Amount)

Follow Us
TV9 Web
TV9 Web

TV9 Kannada

Read More
ಕೆವಿಎನ್ ಹಾಗೂ ಸುಪ್ರೀತ್ ಬಗ್ಗೆ ನಿರ್ಮಾಪಕ ಉದಯ್ ಮೆಹ್ತಾ ಮಾತು
ಕೆವಿಎನ್ ಹಾಗೂ ಸುಪ್ರೀತ್ ಬಗ್ಗೆ ನಿರ್ಮಾಪಕ ಉದಯ್ ಮೆಹ್ತಾ ಮಾತು
ಮುಡಾ ಹಗರಣ: ಸೈಟ್​​ ಖರೀದಿಸಿದವರಲ್ಲಿ ಹೆಚ್ಚಿದ ಆತಂಕ
ಮುಡಾ ಹಗರಣ: ಸೈಟ್​​ ಖರೀದಿಸಿದವರಲ್ಲಿ ಹೆಚ್ಚಿದ ಆತಂಕ
ಬಿಗ್​​ಬಾಸ್ ಸ್ಪರ್ಧಿಗಳ ತಲೆ ಮೇಲೆ ಸಗಣಿ ನೀರು, ಕಸ: ವಿಡಿಯೋ ನೋಡಿ
ಬಿಗ್​​ಬಾಸ್ ಸ್ಪರ್ಧಿಗಳ ತಲೆ ಮೇಲೆ ಸಗಣಿ ನೀರು, ಕಸ: ವಿಡಿಯೋ ನೋಡಿ
ಮಳೆಗಾಲದಲ್ಲಿ ಕೆಸರುಮಯ ರಸ್ತೆ, ಆಟದ ಮೈದಾನವೂ ಇಲ್ಲ
ಮಳೆಗಾಲದಲ್ಲಿ ಕೆಸರುಮಯ ರಸ್ತೆ, ಆಟದ ಮೈದಾನವೂ ಇಲ್ಲ
ಸಿದ್ದರಾಮಯ್ಯ ಪ್ರತಿಮೆ ತೆರವುಗೊಳಿಸಿದ್ದಕ್ಕೆ ಸಿಡಿದೆದ್ದ ಕುರುಬ ಸಮುದಾಯ
ಸಿದ್ದರಾಮಯ್ಯ ಪ್ರತಿಮೆ ತೆರವುಗೊಳಿಸಿದ್ದಕ್ಕೆ ಸಿಡಿದೆದ್ದ ಕುರುಬ ಸಮುದಾಯ
ತುಂಗಭದ್ರಾ ಡ್ಯಾಮ್‌ನಿಂದ ಕಾರ್ಖಾನೆಗಳಿಗೆ ಅನಧಿಕೃತ ನೀರು ಸರಬರಾಜು
ತುಂಗಭದ್ರಾ ಡ್ಯಾಮ್‌ನಿಂದ ಕಾರ್ಖಾನೆಗಳಿಗೆ ಅನಧಿಕೃತ ನೀರು ಸರಬರಾಜು
ಸಚಿವ ಯತೀಂದ್ರ ಸಿದ್ದರಾಮಯ್ಯ ವಿರುದ್ಧ ಲೋಕಾಯುಕ್ತಕ್ಕೆ ದೂರು
ಸಚಿವ ಯತೀಂದ್ರ ಸಿದ್ದರಾಮಯ್ಯ ವಿರುದ್ಧ ಲೋಕಾಯುಕ್ತಕ್ಕೆ ದೂರು
ಚಿತ್ರದುರ್ಗದಲ್ಲಿ ಮಹಾಗಣಪತಿ ಉತ್ಸವಕ್ಕೆ ನಗರ ದೇವತೆಗಳ ಮೆರುಗು
ಚಿತ್ರದುರ್ಗದಲ್ಲಿ ಮಹಾಗಣಪತಿ ಉತ್ಸವಕ್ಕೆ ನಗರ ದೇವತೆಗಳ ಮೆರುಗು
ಬೆಂಗಳೂರಿನ ಮಟನ್ ಶಾಪ್‌ನಲ್ಲಿ ನಡೀತಿತ್ತು ಡ್ರಗ್ಸ್ ಮಾರಾಟ! ಇಬ್ಬರ ಬಂಧನ
ಬೆಂಗಳೂರಿನ ಮಟನ್ ಶಾಪ್‌ನಲ್ಲಿ ನಡೀತಿತ್ತು ಡ್ರಗ್ಸ್ ಮಾರಾಟ! ಇಬ್ಬರ ಬಂಧನ
ಕಾಮನ್‌ವೆಲ್ತ್ ಪವರ್‌ಲಿಫ್ಟಿಂಗ್: ಕನ್ನಡಿಗ ಸಚಿನ್ ಸಾಳುಂಕೆಗೆ ಬೆಳ್ಳಿ ಪದಕ
ಕಾಮನ್‌ವೆಲ್ತ್ ಪವರ್‌ಲಿಫ್ಟಿಂಗ್: ಕನ್ನಡಿಗ ಸಚಿನ್ ಸಾಳುಂಕೆಗೆ ಬೆಳ್ಳಿ ಪದಕ