AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral News: ವಿಚಿತ್ರವಾದರೂ ಸತ್ಯ; ಚಲಿಸುತ್ತಿದ್ದ ಆಟೋ ಮೇಲೆ ಹಲಸಿನ ಹಣ್ಣು ಬಿದ್ದು ಆಸ್ಪತ್ರೆ ಸೇರಿದ ಚಾಲಕ!

ರಸ್ತೆಯಲ್ಲಿ ಸಾಗುತ್ತಿದ್ದ ಆಟೋದ ಮೇಲೆ ಮರದಿಂದ ಹಲಸಿನ ಹಣ್ಣು ಬಿದ್ದು ಅದು ಆಟೋ ಚಾಲಕನ ತಲೆಗೆ ಬಡಿದು ಆತನಿಗೆ ಗಂಭೀರವಾಗಿ ಗಾಯವಾಗಿ ಪ್ರಜ್ಞೆ ತಪ್ಪಿರುವ ವಿಚಿತ್ರ ಘಟನೆ ಕೇರಳದಲ್ಲಿ ನಡೆದಿದೆ.

Viral News: ವಿಚಿತ್ರವಾದರೂ ಸತ್ಯ; ಚಲಿಸುತ್ತಿದ್ದ ಆಟೋ ಮೇಲೆ ಹಲಸಿನ ಹಣ್ಣು ಬಿದ್ದು ಆಸ್ಪತ್ರೆ ಸೇರಿದ ಚಾಲಕ!
ಹಲಸಿನ ಮರ
TV9 Web
| Edited By: |

Updated on: Aug 10, 2021 | 5:13 PM

Share

ಇದನ್ನು ಆಕ್ಸಿಡೆಂಟ್ ಎನ್ನುತ್ತೀರೋ ಅಥವಾ ಹಣೆಬರಹ ಎನ್ನುತ್ತೀರೋ ನಿಮಗೆ ಬಿಟ್ಟಿದ್ದು. ಅದೃಷ್ಟ ಚೆನ್ನಾಗಿದ್ದರೆ ಹುಲಿ ಬಾಯಿಂದ ಬೇಕಾದರೂ ತಪ್ಪಿಸಿಕೊಂಡು ಬರಬಹುದು, ಅದೃಷ್ಟ ಸರಿಯಿಲ್ಲದಿದ್ದರೆ ಸಾಯಗಲು ಒಂದು ಗುಂಡು ಸೂಜಿ ಸಾಕು ಎಂಬ ಮಾತೊಂದಿದೆ. ಅದೇ ರೀತಿ ಹಲಸಿನ ಹಣ್ಣೊಂದು (Jackfruit)  ಆಟೋ ರಿಕ್ಷಾದ ಮೇಲೆ ಬಿದ್ದ ಪರಿಣಾಮವಾಗಿ ಒಳಗೆ ಕುಳಿತಿದ್ದ ಆಟೋ ಚಾಲಕ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ಸೇರಿರುವುದು ಅತ್ಯಂತ ವಿಚಿತ್ರ ಘಟನೆ ಕೇರಳದಲ್ಲಿ ನಡೆದಿದೆ.

ಕೊಟ್ಟಾಯಂನ ಜಿಲ್ಲೆಯ ಕಾಪಿಕ್ಕಾಡ್​ನವರಾದ 55 ವರ್ಷದ ಸುದರ್ಶನ್​ ಆಟೋ ರಿಕ್ಷಾ ಓಡಿಸಿಯೇ ಬದುಕು ಕಟ್ಟಿಕೊಂಡವರು. ಹಲವಾರು ವರ್ಷಗಳಿಂದ ಆಟೋ ಓಡಿಸುತ್ತಿರುವ ಅವರು ಬೆಳಗ್ಗೆ ಯಾರ ಮುಖ ನೋಡಿದ್ದರೋ ಗೊತ್ತಿಲ್ಲ ಹಲಸಿನ ಹಣ್ಣೊಂದು ಅವರ ಶತ್ರುವಾಗಿ ಮೇಲಿಂದ ಬಿದ್ದಿತ್ತು. ಹಾಗಂತ ಕೆಳಗೆ ನಿಂತಾಗ ತಲೆ ಮೇಲೆ ಹಲಸಿನ ಕಾಯಿ ಬಿದ್ದು ಗಾಯವಾದರೆ ಅದೊಂದು ಕತೆ. ಆದರೆ, ರಸ್ತೆಯಲ್ಲಿ ಚಲಿಸುತ್ತಿದ್ದ ಆಟೋದ ಮೇಲೆ ಪಕ್ಕದಲ್ಲಿದ್ದ ಮರದಿಂದ ದೊಡ್ಡದಾದ ಹಲಸಿನ ಹಣ್ಣು ಬಿದ್ದಿದೆ. ಆಟೋದ ಮೇಲೆ ವೇಗವಾಗಿ ಬಿದ್ದ ಹಲಸಿನಹಣ್ಣು ಆಟೋ ಚಲಾಯಿಸುತ್ತಿದ್ದ ಸುದರ್ಶನ್​ ಅವರ ತಲೆಗೆ ಬಡಿದಿದೆ. ಆ ರಭಸಕ್ಕೆ ಆಟೋದಿಂದ ಕೆಳಗೆ ಬಿದ್ದ ಸುದರ್ಶನ್​ ಅವರಿಗೆ ಪ್ರಜ್ಞೆ ತಪ್ಪಿದೆ. ತಕ್ಷಣ ಅವರನ್ನು ಆಸ್ಪತ್ರೆಗೆ ಸೇರಿಸಲಾಗಿದ್ದು, ತಲೆಗೆ ಜೋರಾದ ಏಟಾಗಿದೆ.

ಸುದರ್ಶನ್​ ಅವರ ಆಟೋದಲ್ಲಿ ಆ ವೇಳೆ ಯಾವುದೇ ಪ್ರಯಾಣಿಕರೂ ಇರಲಿಲ್ಲಿ. ಪ್ರಯಾಣಿಕರನ್ನು ಅವರ ಮನೆಗೆ ಬಿಟ್ಟು ತನ್ನ ಮನೆಗೆ ಹೋಗುತ್ತಿದ್ದ ವೇಳೆ ಈ ಅವಘಡ ಸಂಭವಿಸಿದೆ. ಚಾಲಕನ ಸೀಟ್​ ಮೇಲ್ಭಾಗದಲ್ಲೇ ಬಿದ್ದ ಹಲಸಿನ ಹಣ್ಣ ಸೀದಾ ಆಟೋ ರಿಕ್ಷಾದ ಮೇಲ್ಭಾಗದಿಂದ ಸುದರ್ಶನ್​ ಅವರ ತಲೆಗೆ ಬಡಿದಿದೆ. ಮರದಿಂದ ತಲೆ ಮೇಲೆ ಹಲಸಿನ ಹಣ್ಣು ಬಿದ್ದ ರಭಸಕ್ಕೆ ಸುದರ್ಶನ್​ ಪ್ರಜ್ಞೆ ತಪ್ಪಿ ರಸ್ತೆ ಮೇಲೆ ಬಿದ್ದಿದ್ದಾರೆ. ಈ ರೀತಿಯಾಗಿಯೂ ಅಪಘಾತ ಸಂಭವಿಸುತ್ತಾ? ಎಂದು ಅಲ್ಲಿದ್ದವರಿಗೆ ಶಾಕ್ ಆಗುವ ರೀತಿಯಲ್ಲಿ ಹಲಸಿನ ಹಣ್ಣೊಂದು ಅವಾಂತರ ಸೃಷ್ಟಿಸಿದೆ.

ಸುದರ್ಶನ್​ ಕೆಳಗೆ ಬಿದ್ದ ಕೂಡಲೆ ಆಟೋ ಕೂಡ ಕೊಂಚ ದೂರ ಹೋಗಿ ಮಗುಚಿಬಿದ್ದಿದೆ. ಆ ಆಟೋದಿಂದ ಬೇರೆ ಯಾರಿಗೂ ತೊಂದರೆಯಾಗಿಲ್ಲ. ಸುದರ್ಶನ್ ಅವರ ತಲೆಗೆ ಗಾಯಗಳಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕಾಪಿಕ್ಕಾಡ್​ ಸುತ್ತಮುತ್ತಲೂ ರಸ್ತೆ ಬದಿಯಲ್ಲಿ ಹಲಸಿನ ಮರಗಳು ಸಾಮಾನ್ಯ. ಆದರೆ, ಅದರಿಂದ ಈ ರೀತಿಯ ಅವಘಡ ಸಂಭವಿಸಿದ್ದು ಇದೇ ಮೊದಲು.

ಇದನ್ನೂ ಓದಿ: Viral News: ಎಟಿಎಂ ದರೋಡೆ ಮಾಡಲು ಹೋಗಿ ಮಷಿನ್ ಹಿಂದೆ ಸಿಕ್ಕಿಕೊಂಡ ಕಳ್ಳ; ಆಮೇಲೇನಾಯ್ತು?

Viral News: ತಾಳಿ ಕಟ್ಟುವ ಹೊತ್ತಲ್ಲಿ ಮದುವೆ ಬೇಡವೆಂದ ವಧು; ಕಾರಣ ಕೇಳಿದ್ರೆ ಶಾಕ್ ಆಗ್ತೀರ

(Viral News: Kerala Auto Driver Injured in Accident After Jackfruit Hits Him On Head from Tree)

Follow Us
ಇನ್ನೇನು ವಿಶೇಷ ಚೇತನರಿಗೆ ಹಸ್ತಾಂತರಿಸಬೇಕಿದ್ದ ವಾಹನಗಳು ಸುಟ್ಟು ಭಸ್ಮ
ಇನ್ನೇನು ವಿಶೇಷ ಚೇತನರಿಗೆ ಹಸ್ತಾಂತರಿಸಬೇಕಿದ್ದ ವಾಹನಗಳು ಸುಟ್ಟು ಭಸ್ಮ
ಬಂಗಾಳದ ಮತಗಟ್ಟೆಗೆ ಕಾಡಾನೆ ಎಂಟ್ರಿ; ಕಂಗಾಲಾದ ಮತದಾರರು
ಬಂಗಾಳದ ಮತಗಟ್ಟೆಗೆ ಕಾಡಾನೆ ಎಂಟ್ರಿ; ಕಂಗಾಲಾದ ಮತದಾರರು
ಟಿಎಂಸಿಯ ಗೂಂಡಾಗಿರಿ ಅಂತ್ಯವಾಗುವ ಸಮಯ ಬಂದಿದೆ; ಬಂಗಾಳದಲ್ಲಿ ಅಮಿತ್ ಶಾ
ಟಿಎಂಸಿಯ ಗೂಂಡಾಗಿರಿ ಅಂತ್ಯವಾಗುವ ಸಮಯ ಬಂದಿದೆ; ಬಂಗಾಳದಲ್ಲಿ ಅಮಿತ್ ಶಾ
ದೆಹಲಿಯಲ್ಲಿ ಡಿಕೆಶಿ ಸ್ಫೋಟಕ ಹೇಳಿಕೆ, ರಾಜ್ಯ ರಾಜಕಾರಣದಲ್ಲಿ ಸಂಚಲನ
ದೆಹಲಿಯಲ್ಲಿ ಡಿಕೆಶಿ ಸ್ಫೋಟಕ ಹೇಳಿಕೆ, ರಾಜ್ಯ ರಾಜಕಾರಣದಲ್ಲಿ ಸಂಚಲನ
ಬಂಗಾಳದ ಹೌರಾದಲ್ಲಿ ಪ್ರಧಾನಿ ಮೋದಿ ಬೃಹತ್ ರೋಡ್ ಶೋ
ಬಂಗಾಳದ ಹೌರಾದಲ್ಲಿ ಪ್ರಧಾನಿ ಮೋದಿ ಬೃಹತ್ ರೋಡ್ ಶೋ
ಬೆಂಗಳೂರಿನಲ್ಲಿ ಭಾರೀ ಅಗ್ನಿ ದುರಂತ, 10ಕಿ.ಮೀ ವರೆಗೂ ಗೋಚರಿಸಿದ ದಟ್ಟ ಹೊಗೆ
ಬೆಂಗಳೂರಿನಲ್ಲಿ ಭಾರೀ ಅಗ್ನಿ ದುರಂತ, 10ಕಿ.ಮೀ ವರೆಗೂ ಗೋಚರಿಸಿದ ದಟ್ಟ ಹೊಗೆ
ತಂದೆ ಸಾವಿನ ನಡುವೆ ಪರೀಕ್ಷೆ ಬರೆದಿದ್ದ ವಿದ್ಯಾರ್ಥಿ SSLC ಪಾಸ್​​
ತಂದೆ ಸಾವಿನ ನಡುವೆ ಪರೀಕ್ಷೆ ಬರೆದಿದ್ದ ವಿದ್ಯಾರ್ಥಿ SSLC ಪಾಸ್​​
ಬಂಗಾಳದಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಅಟ್ಟಾಡಿಸಿಕೊಂಡು ಹೋಗಿ ಹಲ್ಲೆ
ಬಂಗಾಳದಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಅಟ್ಟಾಡಿಸಿಕೊಂಡು ಹೋಗಿ ಹಲ್ಲೆ
ಶುರುವಾಯ್ತು ಸಲ್ಮಾನ್ ಖಾನ್-ನಯನತಾರಾ ಸಿನಿಮಾ: ವಿಡಿಯೋ
ಶುರುವಾಯ್ತು ಸಲ್ಮಾನ್ ಖಾನ್-ನಯನತಾರಾ ಸಿನಿಮಾ: ವಿಡಿಯೋ
ಮದುವೆ ಮಂಟಪದಿಂದ ಮತಗಟ್ಟೆಗೆ; ತಿರುನಲ್ವೇಲಿಯಲ್ಲಿ ನವವಿವಾಹಿತರ ಮತದಾನ
ಮದುವೆ ಮಂಟಪದಿಂದ ಮತಗಟ್ಟೆಗೆ; ತಿರುನಲ್ವೇಲಿಯಲ್ಲಿ ನವವಿವಾಹಿತರ ಮತದಾನ