AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Video: ಅಗಲಿದ ಪತ್ನಿಯ ಫೋಟೋ ಆಟೋದಲ್ಲಿಟ್ಟು ದಿನನಿತ್ಯ ಪೂಜಿಸುವ ಬೆಂಗಳೂರಿನ ಆಟೋ ಚಾಲಕ

ಹೆಣ್ಣಿಗೆ ಜೀವಕ್ಕಿಂತ ಹೆಚ್ಚು ಪ್ರೀತಿಸುವ ಗಂಡ ಸಿಕ್ಕರೆ ಅದಕ್ಕಿಂತ ಅದೃಷ್ಟ ಬೇರೆ ಏನು ಇಲ್ಲ. ಇಲ್ಲೊಬ್ಬ ಆಟೋಚಾಲಕನದ್ದು ಅಂತಹದ್ದೇ ಪ್ರೀತಿ. ಮಡದಿ ಅಗಲಿ 8 ವರ್ಷವಾದ್ರೂ ತಾನು ಆಟೋ ಓಡಿಸುವಾಗ ಆಕೆಯನ್ನು ನೆನಪಿಸಿಕೊಳ್ಳುತ್ತಾನೆ. ಆಟೋ ಚಾಲಕನೊಬ್ಬ ತನ್ನ ಮಡದಿಯ ಮೇಲಿನ ಪ್ರೀತಿಯನ್ನು ವ್ಯಕ್ತಪಡಿಸಿದ ರೀತಿ ನೆಟ್ಟಿಗರ ಹೃದಯ ಗೆದ್ದಿದೆ. ಈ ಕುರಿತಾದ ಸ್ಟೋರಿ ಇಲ್ಲಿದೆ.

Video: ಅಗಲಿದ ಪತ್ನಿಯ ಫೋಟೋ ಆಟೋದಲ್ಲಿಟ್ಟು ದಿನನಿತ್ಯ ಪೂಜಿಸುವ ಬೆಂಗಳೂರಿನ ಆಟೋ ಚಾಲಕ
ವೈರಲ್‌ ವಿಡಿಯೋImage Credit source: Instagram
ಸಾಯಿನಂದಾ
|

Updated on:Jul 13, 2026 | 11:02 AM

Share

ಬೆಂಗಳೂರು, ಜುಲೈ 13: ಪ್ರೀತಿಯೇ ಹಾಗೆ, ಸುಂದರವಾದ ಭಾವನೆ. ಒಬ್ಬೊಬ್ಬರು ತಮ್ಮ ಪ್ರೀತಿಯನ್ನು ವ್ಯಕ್ತಪಡಿಸುವ ರೀತಿ ವಿಭಿನ್ನವಾಗಿರುತ್ತದೆ. ಕೆಲವರು ತಮ್ಮ ಸಂಗಾತಿಗೆ ಕಾರು, ಒಡವೆ ಹೀಗೆ ದುಬಾರಿ ಬೆಲೆಯ ಗಿಫ್ಟ್ ಗಳನ್ನು ಕೊಡುತ್ತಾರೆ. ಆದರೆ ಬೆಂಗಳೂರಿನ (Bengaluru) ಆಟೋಚಾಲಕನು ಅಗಲಿದ ಮಡದಿಯನ್ನು ಮನಸ್ಸಿನಲ್ಲಿಟ್ಟು ಆರಾಧಿಸುತ್ತಿದ್ದೇನೆ. ಮಡದಿಯ ಫೋಟೋವನ್ನು ತನ್ನ ಆಟೋದಲ್ಲಿಟ್ಟು ಪೂಜಿಸುತ್ತಿದ್ದಾನೆ. ಈ ಹೃದಯಸ್ಪರ್ಶಿ ಕ್ಷಣದ ವಿಡಿಯೋ ನೆಟ್ಟಿಗರ ಗಮನ ಸೆಳೆದಿದೆ.

ಆಶೀಶ್ (asishmatthew) ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಈ ವಿಡಿಯೋ ಹಂಚಿಕೊಳ್ಳಲಾಗಿದೆ. ಆಟೋ ಚಾಲಕನೊಬ್ಬ ತನ್ನ ಆಟೋದಲ್ಲಿ ಅಗಲಿದ ಮಡದಿ ಫೋಟೋ ಇಟ್ಟುಕೊಂಡಿದ್ದು, ಹೂವು ಇಟ್ಟು ದಿನ ನಿತ್ಯ  ಪೂಜೆ ಮಾಡುತ್ತಿರುವುದನ್ನು ಕಾಣಬಹುದು. ಆಶಿಶ್ ಬೆಂಗಳೂರಿನ ಈ  ಆಟೋಚಾಲಕನನ್ನು ಮಾತನಾಡಿಸಿದ್ದಾನೆ. ಇದೇ ವೇಳೆ ಆಟೋ ಚಾಲಕ ನನ್ನ ಮಡದಿ, ನಮ್ಮನ್ನೆಲ್ಲಾ ಅಗಲಿ 8 ವರ್ಷ ಆಯ್ತು. ನನಗೆ ಮಗ, ಸೊಸೆ ಆರು ಜನ ಮೊಮ್ಮಕ್ಕಳು ಹಾಗೂ ನನ್ನ ಜತೆಗೆ ದೊಡ್ಡ ಕುಟುಂಬವೇ ಇದೆ. ಆದರೆ ನನ್ನ ಹೆಂಡ್ತಿನಾ ಮರೆಯೋಕೆ ಆಗಲ್ಲ ಎಂದಿದ್ದಾನೆ.

ನನ್ನ ಮಗ ಮನೆಯಲ್ಲಿರು, ಕೆಲಸ ಮಾಡ್ಬೇಡ ಎಂದು ಹೇಳ್ತಾನೆ. ಆದರೆ ಮನೆಯಲ್ಲಿದ್ರೆ ನಂಗೆ ಟೆನ್ಶನ್ ಜಾಸ್ತಿ ಆಗ್ತದೆ. ಹೊರಗಡೆ ಬಂದ್ರೆ ಹೊಸ ಜನರ ಜತೆಗೆ ಮಾತಾಡ್ತಾ ಇದ್ರೆ ಮೈಂಡ್ ಫ್ರೀ ಆಗುತ್ತೆ ಎಂದು ಹೇಳಿರುವುದನ್ನು ಕಾಣಬಹುದು.

ವೈರಲ್ ವಿಡಿಯೋ ಇಲ್ಲಿದೆ

ಇದನ್ನೂ ಓದಿ: ‘ಬೆಂಗಳೂರು ಭಾರತದ ಯುರೋಪ್ ಇದ್ದಂತೆ! ಸಿಲಿಕಾನ್ ಸಿಟಿಗೆ ಫಿದಾ ಆದ ಯುವತಿಯ ವಿಡಿಯೋ ವೈರಲ್

ಈ ವಿಡಿಯೋ 2.7 ಮಿಲಿಯನ್ ಗೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ, ಖುಷಿನೂ ಆಯ್ತು, ಬೇಜಾರ್ ಕೂಡ ಆಯ್ತು ಎಂದಿದ್ದಾರೆ. ಇನ್ನೊಬ್ಬರು, ಪರಿಶುದ್ಧ ಪ್ರೀತಿ ಎಷ್ಟು ಚಂದ ಎಂದು ಹೇಳಿದ್ದಾರೆ. ಮತ್ತೊಬ್ಬರು, ಸಾವು ಅವಳನ್ನು ಅವನಿಂದ ದೂರ ಮಾಡಿರಬಹುದು.. ಆದರೆ ಪ್ರೀತಿ ಮಾತ್ರ ಸದಾ ಜೀವಂತ ಎಂದು ಕಾಮೆಂಟ್ ಮಾಡಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 11:00 am, Mon, 13 July 26

Follow Us
ಸಾಯಿನಂದಾ
ಸಾಯಿನಂದಾ

ಮೂಲತಃ ಉಡುಪಿಯವರು. ಪ್ರತಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದಾರೆ. ಪ್ರತಿಷ್ಠಿತ ಕಾಲೇಜುಗಳಲ್ಲಿ ಉಪನ್ಯಾಸಕಿಯಾಗಿ ಕೆಲಸ ಮಾಡಿದ ಅನುಭವ ಇದೆ. ಪ್ರಾರಂಭದಿಂದಲೂ ಬರವಣಿಗೆಯಲ್ಲಿ ಒಲವು ಹೆಚ್ಚಿರುವ ಇವರು ಕರ್ನಾಟಕ ಟೈಮ್ ವೆಬ್ ಸೈಟ್ ನಲ್ಲಿ ಕೆಲಸ ಮಾಡಿದ ಅನುಭವವಿದೆ. ಬಿಡುವು ಸಿಕ್ಕಾಗಲೆಲ್ಲಾ ಸಿನಿಮಾ ನೋಡುವುದು ಹಾಗೂ ಓದುವುದು ಇವರ ಹವ್ಯಾಸ

Read More
ಬಾಗಲಕೋಟೆ ಜೋಡೆತ್ತುಗಳ ಕಮಾಲ್‌.. 10 ಗಂಟೆಗಳಲ್ಲಿ 20 ಎಕರೆ ಬಿತ್ತನೆ!
ಬಾಗಲಕೋಟೆ ಜೋಡೆತ್ತುಗಳ ಕಮಾಲ್‌.. 10 ಗಂಟೆಗಳಲ್ಲಿ 20 ಎಕರೆ ಬಿತ್ತನೆ!
ಮಹಿಳೆಯ ಸಾಲು ಸಾಲು ಕಷ್ಟ ಕೇಳಿ ಕಣ್ಣೀರಿಟ್ಟ ಸಂಸದ ಶ್ರೇಯಸ್ ಪಟೇಲ್
ಮಹಿಳೆಯ ಸಾಲು ಸಾಲು ಕಷ್ಟ ಕೇಳಿ ಕಣ್ಣೀರಿಟ್ಟ ಸಂಸದ ಶ್ರೇಯಸ್ ಪಟೇಲ್
ಇಂಡಸ್ಟ್ರಿಗೆ ಅಪ್ಪ ಆಗಿ ಬಿಟ್ಟಿದ್ದಾರಂಂತೆ ರಂಗಾಯಣ ರಘು: ವಿಡಿಯೋ ನೋಡಿ
ಇಂಡಸ್ಟ್ರಿಗೆ ಅಪ್ಪ ಆಗಿ ಬಿಟ್ಟಿದ್ದಾರಂಂತೆ ರಂಗಾಯಣ ರಘು: ವಿಡಿಯೋ ನೋಡಿ
ಹೆಣ್ಮಕ್ಕಳು ಬೇಕು ಸರ್.. ಸಿಎಂ ಮುಂದೆ ಅಳಲು ತೋಡಿಕೊಂಡ ಯುವಕ
ಹೆಣ್ಮಕ್ಕಳು ಬೇಕು ಸರ್.. ಸಿಎಂ ಮುಂದೆ ಅಳಲು ತೋಡಿಕೊಂಡ ಯುವಕ
ನಟಿಸೋದು ಇಷ್ಟ, ಡ್ಯಾನ್ಸ್ ಮಾಡೋದು ಕಷ್ಟ: ಹಿರಿಯ ನಟ ಅನಂತ್ ನಾಗ್
ನಟಿಸೋದು ಇಷ್ಟ, ಡ್ಯಾನ್ಸ್ ಮಾಡೋದು ಕಷ್ಟ: ಹಿರಿಯ ನಟ ಅನಂತ್ ನಾಗ್
ಬೆಂಗಳೂರು ನಗರಾಭಿವೃದ್ಧಿ ಸಚಿವರಾಗಿದ್ದ ದಿನಗಳ ನೆನಪಿಸಿಕೊಂಡ ಅನಂತ್
ಬೆಂಗಳೂರು ನಗರಾಭಿವೃದ್ಧಿ ಸಚಿವರಾಗಿದ್ದ ದಿನಗಳ ನೆನಪಿಸಿಕೊಂಡ ಅನಂತ್
‘ದಾದಾ ಸಾಹೇಬ್ ಫಾಲ್ಕೆ’ ಘೋಷಣೆಯಾದ ದಿನ ಮಾಡಿದ್ದೇನು? ಅನಂತ್ ನಾಗ್ ಉತ್ತರ
‘ದಾದಾ ಸಾಹೇಬ್ ಫಾಲ್ಕೆ’ ಘೋಷಣೆಯಾದ ದಿನ ಮಾಡಿದ್ದೇನು? ಅನಂತ್ ನಾಗ್ ಉತ್ತರ
ರಂಗಭೂಮಿ ಹಾಗೂ ಬದುಕಿನ ಪಯಣ ಬಿಚ್ಚಿಟ್ಟ ಅನಂತ್ ನಾಗ್
ರಂಗಭೂಮಿ ಹಾಗೂ ಬದುಕಿನ ಪಯಣ ಬಿಚ್ಚಿಟ್ಟ ಅನಂತ್ ನಾಗ್
ಬದಲಾಗುತ್ತಿರುವ ಇಂದಿನ ರಾಜಕೀಯ ವ್ಯವಸ್ಥೆ ಬಗ್ಗೆ ಅನಂತ್ ನಾಗ್ ನೇರ ಮಾತು
ಬದಲಾಗುತ್ತಿರುವ ಇಂದಿನ ರಾಜಕೀಯ ವ್ಯವಸ್ಥೆ ಬಗ್ಗೆ ಅನಂತ್ ನಾಗ್ ನೇರ ಮಾತು
ಸಿಗಂದೂರು ರಸ್ತೆಯಲ್ಲಿ ನಿಗೂಢ ಪೂಜೆ, ಮಾಟಮಂತ್ರದಿಂದ ಬೆಚ್ಚಿಬಿದ್ದ ಜನ
ಸಿಗಂದೂರು ರಸ್ತೆಯಲ್ಲಿ ನಿಗೂಢ ಪೂಜೆ, ಮಾಟಮಂತ್ರದಿಂದ ಬೆಚ್ಚಿಬಿದ್ದ ಜನ