Viral News: ತಾಳಿ ಕಟ್ಟುವ ಹೊತ್ತಲ್ಲಿ ಮದುವೆ ಬೇಡವೆಂದ ವಧು; ಕಾರಣ ಕೇಳಿದ್ರೆ ಶಾಕ್ ಆಗ್ತೀರ

Wedding Stories | ಮೀರತ್​ನಲ್ಲಿ ಮದುವೆ ಮಂಟಪದಲ್ಲಿ ಕುಳಿತಿದ್ದ ವಧುವಿಗೆ ವರ ಇನ್ನೇನು ತಾಳಿ ಕಟ್ಟಬೇಕು ಎನ್ನುವಷ್ಟರಲ್ಲಿ ಆಕೆ ನನಗೆ ಈ ಮದುವೆ ಇಷ್ಟವಿಲ್ಲ ಎಂದು ಎಲ್ಲರಿಗೂ ಶಾಕ್ ಕೊಟ್ಟಿದ್ದಾಳೆ.

Viral News: ತಾಳಿ ಕಟ್ಟುವ ಹೊತ್ತಲ್ಲಿ ಮದುವೆ ಬೇಡವೆಂದ ವಧು; ಕಾರಣ ಕೇಳಿದ್ರೆ ಶಾಕ್ ಆಗ್ತೀರ
ಪ್ರಾತಿನಿಧಿಕ
Follow us
TV9 Web
| Updated By: ಸುಷ್ಮಾ ಚಕ್ರೆ

Updated on: Aug 08, 2021 | 4:51 PM

ಭಾರತದ ಒಂದೊಂದು ಭಾಗದಲ್ಲಿ ಒಂದೊಂದು ರೀತಿಯ ಮದುವೆ ಸಂಪ್ರದಾಯಗಳಿರುತ್ತವೆ. ಈಗಂತೂ ಮದುವೆಯಲ್ಲಿ ಶಾಸ್ತ್ರಗಳಿಗಿಂತ ಸಂಭ್ರಮದ ಅಂಶಗಳೇ ಹೆಚ್ಚಾಗುತ್ತಿವೆ. ಮದುವೆಯಲ್ಲಿ ನಡೆಯುವ ಹೈಡ್ರಾಮಾಗಳ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಲೇ ಇರುತ್ತದೆ. ಕೆಲವು ಮದುವೆಗಳಲ್ಲಿ ನಡೆಯುವ ಘಟನೆಗಳಂತೂ ಯಾವ ಸಿನಿಮಾ ಕತೆಗೂ ಕಡಿಮೆ ಇರುವುದಿಲ್ಲ. ವಧು-ವರರು ಇದರ ಹೀರೋ-ಹೀರೋಯಿನ್ ಆದರೆ ಬಂಧುಬಳಗದವರೆಲ್ಲ ಸೇರಿ ಸಸ್ಪೆನ್ಸ್​, ಕಾಮಿಡಿ, ಎಮೋಷನಲ್ ಎಲ್ಲ ರೀತಿಯ ಅಂಶಗಳೂ ಮದುವೆಗಳಲ್ಲಿರುತ್ತವೆ.

ಮದುವೆ ಮಂಟಪದಿಂದ ಮದುಮಗ ಓಡಿ ಹೋದ, ಮದುಮಗಳು ಪರಾರಿಯಾದ ಎಷ್ಟೋ ಘಟನೆಗಳು ನಿಜ ಜೀವನದಲ್ಲೂ ನಡೆದ ವಿಡಿಯೋಗಳನ್ನು ನೀವು ನೋಡಿರಬಹುದು. ಆದರೆ, ಮೀರತ್​ನಲ್ಲಿ ಮದುವೆ ಮಂಟಪದಲ್ಲಿ ಕುಳಿತಿದ್ದ ವಧುವಿಗೆ ವರ ಇನ್ನೇನು ತಾಳಿ ಕಟ್ಟಬೇಕು ಎನ್ನುವಷ್ಟರಲ್ಲಿ ಆಕೆ ನನಗೆ ಈ ಮದುವೆ ಇಷ್ಟವಿಲ್ಲ ಎಂದು ಎಲ್ಲರಿಗೂ ಶಾಕ್ ಕೊಟ್ಟಿದ್ದಾಳೆ. ಹಾಗಾದರೆ ಆಕೆ ಯಾರನ್ನಾದರೂ ಪ್ರೀತಿಸಿರಬಹುದಾ? ಎಂಬ ಅನುಮಾನ ಮೂಡುವುದು ಸಹಜ. ಆದರೆ, ಆಕೆ ಹೀಗೆ ಏಕಾಏಕಿ ಮದುವೆ ಕ್ಯಾನ್ಸಲ್ ಮಾಡಲು ಕಾರಣ ಆಕೆಯ ಚಿಕ್ಕಪ್ಪ. ಅಚ್ಚರಿಯಾದರೂ ಇದು ನಿಜ.

ಮೀರತ್​ನ 22 ವರ್ಷದ ವಧು ಪಕ್ಕದ ಊರಿನ ಹುಡುಗನೊಂದಿಗೆ ಮದುವೆ ಮಾಡಿಕೊಳ್ಳಬೇಕಿತ್ತು. ಆ ಮದುವೆಗಾಗಿ ಎಲ್ಲ ತಯಾರಿಯೂ ನಡೆದಿತ್ತು. ಮದುವೆಯ ಖುಷಿಗಾಗಿ ಹುಡುಗ ಮತ್ತು ಹುಡುಗಿಯ ಕಡೆಯವರೆಲ್ಲರೂ ಎಂಜಾಯ್ ಮಾಡುತ್ತಿದ್ದರು. ಈ ವೇಳೆ ವರನ ಕಡೆಯವರು ಮದುವೆ ಹಾಲ್​ ಬಳಿ ಗಾಳಿಯಲ್ಲಿ ಗುಂಡು ಹಾರಿಸಿ ಎಂಜಾಯ್ ಮಾಡುತ್ತಿದ್ದಾಗ ವಧುವಿನ ಚಿಕ್ಕಪ್ಪನಿಗೆ ಗಾಯವಾಗಿತ್ತು. ಬಳಿಕ ಇದೇ ವಿಷಯಕ್ಕೆ  ವಧುವಿನ ಚಿಕ್ಕಪ್ಪ ಹಾಗೂ ವರನ ಮನೆಯವರ ನಡುವೆ ಜಗಳ ನಡೆದಿತ್ತು. ಇದರಿಂದ ಬೇಸರಗೊಂಡಿದ್ದ ವಧು ಕೊನೆ ಕ್ಷಣದಲ್ಲಿ ಈ ಮದುವೆಯೇ ಬೇಡ ಎಂದು ನಿರ್ಧಾರ ಮಾಡಿದ್ದಾಳೆ.

ನನ್ನ ಕಣ್ಣೆದುರಲ್ಲೇ ನನ್ನ ಮನೆಯವರ ಜೊತೆ ಈ ರೀತಿ ಗಲಾಟೆ ಮಾಡುವ ಹುಡುಗನ ಮನೆಯವರು ನಾನು ಅವರ ಮನೆಯಲ್ಲಿ ಒಂಟಿಯಾಗಿದ್ದಾಗ ನನ್ನ ಜೊತೆ ಯಾವ ರೀತಿ ವರ್ತಿಸಬಹುದು ಎಂದು ನನಗೆ ಭಯವಾಗುತ್ತಿದೆ. ಹಾಗಾಗಿ, ಮುಂದಾಗುವ ಅಪಾಯಕ್ಕಿಂತಲೂ ಈಗಲೇ ಮದುವೆ ನಿಲ್ಲಿಸುವುದು ಒಳ್ಳೆಯದು ಎಂದು ಆಕೆ ಖಡಾಖಂಡಿತವಾಗಿ ಈ ಮದುವೆ ಬೇಡವೇ ಬೇಡ ಎಂದು ಹೇಳಿದ್ದಾಳೆ.

ವಧು ಈ ಮದುವೆ ಬೇಡವೆಂದು ಘೋಷಿಸಿದ ಕೂಡಲೇ ವರನ ಕಡೆಯವರ ಕಾರನ್ನು ಆಕೆಯ ಕುಟುಂಬಸ್ಥರು ಒಡೆದು ಹಾಕಿದ್ದಾರೆ. ಕಲ್ಲು, ಕೋಲುಗಳಿಂದ ವರನ ಮನೆಯವರ ಕಾರಿಗೆ ಹೊಡೆದು ಗಲಾಟೆಯೆಬ್ಬಿಸಿದ್ದಾರೆ. ವರನ ಮನೆಯವರಿಗೂ ಥಳಿಸಿದ್ದಾರೆ. ಕೊನೆಗೆ ಪೊಲೀಸರು ಬಂದು ಜಗಳ ಬಿಡಿಸಿದ್ದಾರೆ.

ಇದನ್ನೂ ಓದಿ: Success Story: 3 ಲಕ್ಷ ರೂ.ನಲ್ಲಿ ಶುರುವಾದ ಟೀ ಶಾಪ್​ನ ಆದಾಯವೀಗ ವರ್ಷಕ್ಕೆ 100 ಕೋಟಿ!

Viral News: ಬ್ರೈನ್ ಟ್ಯೂಮರ್ ಸರ್ಜರಿ ವೇಳೆ ಹನುಮಾನ್ ಚಾಲೀಸಾ ಪಠಿಸಿದ ಮಹಿಳೆ; ಆಮೇಲೆ ನಡೆದಿದ್ದು ಅಚ್ಚರಿ!

(Viral News: Bride cancels wedding in Marriage Day after her uncle gets hurt in celebratory firing by groom Family)

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ