Success Story: 3 ಲಕ್ಷ ರೂ.ನಲ್ಲಿ ಶುರುವಾದ ಟೀ ಶಾಪ್​ನ ಆದಾಯವೀಗ ವರ್ಷಕ್ಕೆ 100 ಕೋಟಿ!

Chai Sutta Bar Story | 2016ರಲ್ಲಿ ಆನಂದ ನಾಯಕ್, ಅನುಭವ್, ರಾಹುಲ್ ತಲಾ ಒಂದೊಂದು ಲಕ್ಷ ರೂ. ಹಾಕಿ ಇಂದೋರ್​ನಲ್ಲಿ ಚಾಯ್ ಸುಟ್ಟಾ ಬಾರ್ ಎಂಬ ಟೀ ಶಾಪ್ ಓಪನ್ ಮಾಡಿದರು. ಈಗ ಈ ಟೀ ಸ್ಟಾಲ್ ಆದಾಯ ವರ್ಷಕ್ಕೆ 100 ಕೋಟಿ! ವಿದೇಶದಲ್ಲೂ ಇದರ ಬ್ರಾಂಚ್​​ಗಳಿವೆ.

Follow us
ಸುಷ್ಮಾ ಚಕ್ರೆ
|

Updated on:Aug 07, 2021 | 10:23 PM

ಇಂದೋರ್: ಕೆಲವೊಮ್ಮೆ ನಾವು ತೆಗೆದುಕೊಳ್ಳುವ ಅತ್ಯಂತ ಕೆಟ್ಟ ನಿರ್ಧಾರಗಳೇ ನಮ್ಮ ಜೀವನದ ಅತ್ಯಂತ ಉತ್ತಮ ನಿರ್ಧಾರಗಳಾಗಿ ಬದಲಾಗುವ ಸಾಧ್ಯತೆಗಳಿರುತ್ತವೆ. ನಾವು ಯಾವುದನ್ನು ತುಂಬ ಪ್ಲಾನ್ ಮಾಡಿ ಮಾಡುತ್ತೇವೋ ಅದು ಪ್ಲಾಪ್ ಆದಾಗ ಅದನ್ನು ಸಹಿಸಿಕೊಳ್ಳುವುದು ಕೂಡ ಬಹಳ ಕಷ್ಟ. ಆದರೆ, ನಾವು ಯಾವುದರ ಬಗ್ಗೆ ತೀರಾ ಭರವಸೆಯಿಟ್ಟುಕೊಂಡಿರುವುದಿಲ್ಲವೋ ಅದರಿಂದಲೇ ಜೀವನದ ಅತ್ಯಂತ ಯಶಸ್ಸು ಸಿಕ್ಕಾಗ ಅದಕ್ಕಿಂತ ದೊಡ್ಡ ಸಂತೋಷ ಮತ್ತೊಂದಿರಲಾರದು. ಹಾಗಂತ ಯಾವುದನ್ನೇ ಮಾಡುವ ಮೊದಲು ಸವಾಲುಗಳನ್ನು ಸ್ವೀಕರಿಸಲು ನಾವು ಸಿದ್ಧರಾಗಿರಬೇಕು. ಏನಾದರೂ ಹೊಸದು ಮಾಡುವಾಗ ನಾವು ಅದನ್ನು ಮಾಡಲೇಬೇಕೆಂಬ ನಿರ್ಧಾರ ತೆಗೆದುಕೊಂಡಾಗಲೇ ಆ ಹೊಸ ಪ್ರಯೋಗದಲ್ಲಿ ನಾವು ಶೇ. 50ರಷ್ಟು ಗೆದ್ದಿರುತ್ತೇವೆ. ಹೀಗಾಗಿ, ಪ್ರಯತ್ನಗಳಿಗೆ ಧುಮುಕುವುದು ಬಹಳ ಮುಖ್ಯ. ಇಷ್ಟೆಲ್ಲ ಪೀಠಿಕೆ ಯಾಕೆ ಗೊತ್ತಾ? ಮಧ್ಯಪ್ರದೇಶದ ಮೂವರು ಸ್ನೇಹಿತರು ಮಾಡಿದ ಆ ಒಂದು ‘ತಪ್ಪು’ ನಿರ್ಧಾರದಿಂದ ಈಗ ಅವರು ಒಂದು ವರ್ಷಕ್ಕೆ ಬರೋಬ್ಬರಿ 100 ಕೋಟಿ ಆದಾಯ ಗಳಿಸುತ್ತಿದ್ದಾರೆ!

ನಾವು ಐಎಎಸ್ ಮಾಡಬೇಕು, ಐಪಿಎಸ್ ಮಾಡಬೇಕು ಎಂಬ ಆಸೆ ಯಾರಿಗೆ ತಾನೇ ಇರುವುದಿಲ್ಲ ಹೇಳಿ… ಆದರೆ, ಆ ಮೂವರು ನಾಗರಿಕ ಸೇವೆಗೆ ಸೇರುವ ಅವಕಾಶವನ್ನು ಬಿಟ್ಟು ಟೀ ಸ್ಟಾಲ್ ತೆರೆಯಬೇಕೆಂದು ನಿರ್ಧಾರ ಮಾಡಿದರು. ಇದೆಂಥಾ ಹುಚ್ಚು ನಿರ್ಧಾರ ಎಂದು ಎಲ್ಲರೂ ಹೀಗಳೆದಿದ್ದರು. ಆದರೆ, ಅದಕ್ಕೆಲ್ಲ ಅವರು ತಲೆ ಕೆಡಿಸಿಕೊಳ್ಳಲೇ ಇಲ್ಲ. ಮಧ್ಯಪ್ರದೇಶದ ಇಂದೋರ್​ನಲ್ಲಿ ಟೀ ಸ್ಟಾಲ್ ತೆರೆಯಲು ಸಾಲ ಮಾಡಿ ಮೂವರೂ 3 ಲಕ್ಷ ರೂ. ದುಡ್ಡು ಕೂಡಿಸಿದರು. ನಾವು ಯಾರದೋ ಕೈ ಕೆಳಗೆ ದುಡಿಯುವ ಬದಲು ಸಣ್ಣದಾದರೂ ಪರವಾಗಿಲ್ಲ ಸ್ವಂತದ್ದೊಂದು ಉದ್ಯಮ ಮಾಡಬೇಕು ಎಂಬುದು ಅವರ ಉದ್ದೇಶವಾಗಿತ್ತು.

ಇಂದೋರ್​ನಲ್ಲಿ ಅವರು ಮೂವರೂ ಸ್ನೇಹಿತರು ಸೇರಿ ಚಾಯ್ ಸುಟ್ಟಾ ಬಾರ್ ತೆರೆದರು. ಆಗ 3 ಲಕ್ಷ ರೂ. ಹಾಕಿ ತೆರೆದಿದ್ದ ಟೀ ಸ್ಟಾಲ್​ನಿಂದ ಅವರಿಗೆ ಈಗ ವರ್ಷಕ್ಕೆ 100 ಕೋಟಿ ರೂ. ಆದಾಯ ಬರುತ್ತಿದೆ ಎಂದರೆ ನಿಮಗೆ ಶಾಕ್ ಆಗದಿರಲು ಸಾಧ್ಯವೇ? ಆ ಟೀ ಸ್ಟಾಲ್​ನ 165 ಬ್ರಾಂಚ್​ಗಳು ಈಗ ದೇಶಾದ್ಯಂತ ಹರಡಿಕೊಂಡಿವೆ. ಅಲ್ಲದೆ, ಕೇವಲ ಐದೇ ವರ್ಷದಲ್ಲಿ ದುಬೈ, ಓಮನ್, ಕೆನಡಾ, ಲಂಡನ್ ಸೇರಿದಂತೆ ಹಲವು ದೇಶಗಳಲ್ಲೂ ಇದರ ಬ್ರಾಂಚ್ ಶುರುವಾಗಿದೆ.

ಚಾಯ್ ಸುಟ್ಟಾ ಬಾರ್ ಶಾಪ್​ ಹೆಸರು ಕೇಳಿದರೆ ಇದರಲ್ಲಿ ಸಿಗರೇಟ್ ಸಿಗಬಹುದು ಎಂಬ ಅನುಮಾನ ಮೂಡಬಹುದು. ಆದರೆ, ಇದರಲ್ಲಿ ಕೇವಲ ಚಹಾ ಮಾತ್ರ ಸಿಗುತ್ತದೆ. ಸಿಗರೇಟ್ ಸೇದಲು ಇಲ್ಲಿ ಅವಕಾಶವಿಲ್ಲ. ಸಾಕಷ್ಟು ಫ್ಲೇವರ್​ಗಳಲ್ಲಿ ಇಲ್ಲಿ ಚಹಾ ಸಿಗುತ್ತದೆ. ಈ ಚಹಾಗೆ ಕೇವಲ 10 ರೂ. ಎಂಬುದು ವಿಶೇಷ. ಚಹಾ ಮಾತ್ರವಲ್ಲದೆ ಸ್ಯಾಂಡ್​ವಿಚ್, ಪಾಸ್ತಾ, ಮ್ಯಾಗಿ ಕೂಡ ಸಿಗುತ್ತದೆ.

2016ರಲ್ಲಿ ಆನಂದ ನಾಯಕ್, ಅನುಭವ್, ರಾಹುಲ್ ಎಂಬ ಈ ಮೂವರು ಸ್ನೇಹಿತರು ತಲಾ ಒಂದೊಂದು ಲಕ್ಷ ರೂ. ಹಾಕಿ ಟೀ ಶಾಪ್ ಓಪನ್ ಮಾಡಿದರು. ಅದು ಈಗ ಪ್ರೈವೇಟ್ ಲಿಮಿಟೆಡ್ ಕಂಪನಿಯಾಗಿ ಬದಲಾಗಿದೆ. ವಿದೇಶದಲ್ಲಿ ಕೂಡ ಇದರ ಫ್ರಾಂಚೈಸಿಗಳಿವೆ. 3 ಲಕ್ಷ ರೂ.ನಲ್ಲಿ ಶುರು ಮಾಡಿದ ಈ ಟೀ ಸ್ಟಾಲ್​ನಿಂದ ಈಗ ವರ್ಷಕ್ಕೆ 100 ಕೋಟಿ ರೂ. ಆದಾಯ ಬರುತ್ತಿದೆ. ಹೀಗಾಗಿ, ಯಾವ ಕನಸೂ ಸಣ್ಣದಲ್ಲ ಎಂಬುದನ್ನು ಮರೆಯಬೇಡಿ.

ಇಂದೋರ್​ ಒಂದರಲ್ಲೇ ಈ ಟೀ ಶಾಪ್​ನ 13 ಬ್ರಾಂಚ್​ಗಳಿವೆ. ದೇಶಾದ್ಯಂತ 165 ಔಟ್​ಲೆಟ್​ಗಳಿವೆ. ಇವರು ತಯಾರಿಸುವ ಟೀಯಲ್ಲಿ ಸಾಕಷ್ಟು ವೆರೈಟಿಗಳೂ ಇವೆ. ರೈತರ ಮಕ್ಕಳಾದ ಈ ಮೂವರಿಗೆ ತಾವು ಸ್ವಂತ ಉದ್ಯಮ ಮಾಡಬೇಕೆಂಬ ಕನಸಿತ್ತು. ಅವರಲ್ಲಿ ಅನುಭವ್ ಯುಪಿಎಸ್​ಸಿ ಪರೀಕ್ಷೆಗೆ ಸಿದ್ಧತೆ ನಡೆಸಿದ್ದರು. ಆದರೆ, ಆ ಕನಸನ್ನು ಅರ್ಧಕ್ಕೇ ಬಿಟ್ಟು ಟೀ ಶಾಪ್ ತೆರೆಯಲು ಕೈ ಜೋಡಿಸಿದರು. ಆಗ ಇವರ ಸಾಹಸ ನೋಡಿ ಗೇಲಿ ಮಾಡಿದವರು ಈಗ ಇವರ ಆದಾಯ ನೋಡಿ ಶಾಕ್ ಆಗಿದ್ದಾರೆ.

ಇದನ್ನೂ ಓದಿ: Viral News: 2 ಲಕ್ಷ ರೂ.ಗೆ ಮಾರಾಟವಾಯ್ತು 90 ಪೈಸೆಯ ಚಮಚ! ಹರಾಜಿಗೆ ಹಾಕಿದ್ದ ಮಾಲೀಕನೇ ಶಾಕ್

Viral News | ಬರೋಬ್ಬರಿ 1 ಕೋಟಿಗೆ ಹರಾಜಾಯ್ತು ವಿಸ್ಕಿ ಬಾಟಲ್; ಇದರ ವಿಶೇಷತೆ ಕೇಳಿದರೆ ಕಿಕ್ ಏರುತ್ತೆ!

(Success Story: 3 Indore Friends Started a Tea Stall With Rs 3 Lakh Now They are Earning 100 Crore Profit a Year)

Published On - 10:18 pm, Sat, 7 August 21

ಕ್ಯಾಚ್ ಕೈಚೆಲ್ಲಿದ ಪಂತ್: ಸಿಟ್ಟಿನಲ್ಲಿ ಗುರಾಯಿಸಿದ ಬುಮ್ರಾ
ಕ್ಯಾಚ್ ಕೈಚೆಲ್ಲಿದ ಪಂತ್: ಸಿಟ್ಟಿನಲ್ಲಿ ಗುರಾಯಿಸಿದ ಬುಮ್ರಾ
ಚನ್ನಪಟ್ಟಣ ಉಪ ಚುನಾವಣೆಯಲ್ಲಿ ನಿಖಿಲ್​ಗೆ ಸೋಲಾಗೋದು ಹೆಚ್ಚು ಕಡಿಮೆ ಖಚಿತ
ಚನ್ನಪಟ್ಟಣ ಉಪ ಚುನಾವಣೆಯಲ್ಲಿ ನಿಖಿಲ್​ಗೆ ಸೋಲಾಗೋದು ಹೆಚ್ಚು ಕಡಿಮೆ ಖಚಿತ
ಚನ್ನಪಟ್ಟಣದಲ್ಲಿ ಸಿಪಿ ಯೋಗೇಶ್ವರ್ ವಿಜಯೋತ್ಸವಕ್ಕೆ ಅಭಿಮಾನಿಗಳಿಂದ ಸಿದ್ಧತೆ
ಚನ್ನಪಟ್ಟಣದಲ್ಲಿ ಸಿಪಿ ಯೋಗೇಶ್ವರ್ ವಿಜಯೋತ್ಸವಕ್ಕೆ ಅಭಿಮಾನಿಗಳಿಂದ ಸಿದ್ಧತೆ
ಎರಡು ಕುಟುಂಬಗಳಿಗೆ ಚನ್ನಪಟ್ಟಣ ಚುನಾವಣಾ ಫಲಿತಾಂಶ ಪ್ರತಿಷ್ಠೆಯ ಪ್ರಶ್ನೆ
ಎರಡು ಕುಟುಂಬಗಳಿಗೆ ಚನ್ನಪಟ್ಟಣ ಚುನಾವಣಾ ಫಲಿತಾಂಶ ಪ್ರತಿಷ್ಠೆಯ ಪ್ರಶ್ನೆ
ಪ್ರಧಾನಿ ಮೋದಿ ನಾಯಕತ್ವದ ಎನ್​ಡಿಎ ಮಹಾರಾಷ್ಟ್ರ, ಜಾರ್ಖಂಡ್ ಗೆಲ್ಲಲಿದೆ:ಸಚಿವ
ಪ್ರಧಾನಿ ಮೋದಿ ನಾಯಕತ್ವದ ಎನ್​ಡಿಎ ಮಹಾರಾಷ್ಟ್ರ, ಜಾರ್ಖಂಡ್ ಗೆಲ್ಲಲಿದೆ:ಸಚಿವ
‘ನನಗೂ ಹೊಟ್ಟೆ ಉರಿಯುತ್ತಿದೆ’; ಕಳಪೆ ಪಡೆದ ರಜತ್​ನಿಂದ ಮನೆಯವರಿಗೆ ಕಿರಿಕಿರಿ
‘ನನಗೂ ಹೊಟ್ಟೆ ಉರಿಯುತ್ತಿದೆ’; ಕಳಪೆ ಪಡೆದ ರಜತ್​ನಿಂದ ಮನೆಯವರಿಗೆ ಕಿರಿಕಿರಿ
Daily Devotional: ದೇವಾಲಯದ ಅನ್ನ ಪ್ರಸಾದ ಮಹತ್ವ ತಿಳಿಯಿರಿ
Daily Devotional: ದೇವಾಲಯದ ಅನ್ನ ಪ್ರಸಾದ ಮಹತ್ವ ತಿಳಿಯಿರಿ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
ಸುಸ್ಥಿರ ಅಭಿವೃದ್ಧಿಗೆ ಈ ಸಮಿಟ್ ಒಂದು​ ರೋಡ್​ ಮ್ಯಾಪ್: ಮೋದಿ ಶ್ಲಾಘನೆ
ಸುಸ್ಥಿರ ಅಭಿವೃದ್ಧಿಗೆ ಈ ಸಮಿಟ್ ಒಂದು​ ರೋಡ್​ ಮ್ಯಾಪ್: ಮೋದಿ ಶ್ಲಾಘನೆ
ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ