AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸೀರೆಯುಟ್ಟು ಸೊಂಟ ಬಳುಕಿಸುವ ಈ ನಟಿಯ ಒಂದೊಂದು ಫೋಟೋಕ್ಕೂ ಸಾವಿರಾರು ಅಭಿಮಾನಿಗಳು

ನಟಿ ಶ್ರದ್ಧಾ ದಾಸ್ ಸೀರೆ ತೊಟ್ಟು ತೆಗೆಸಿಕೊಂಡಿರುವ ಫೋಟೋಗಳು ಸಿಕ್ಕಾಪಟ್ಟೆ ವೈರಲ್ ಆಗಿವೆ. ಅವರ ಒಂದೊಂದು ಫೋಟೋ ಕೂಡಾ ಸಾವಿರಾರು ಅಭಿಮಾನಿಗಳನ್ನು ಗಿಟ್ಟಿಸಿಕೊಂಡಿದೆ.

ಸೀರೆಯುಟ್ಟು ಸೊಂಟ ಬಳುಕಿಸುವ ಈ ನಟಿಯ ಒಂದೊಂದು ಫೋಟೋಕ್ಕೂ ಸಾವಿರಾರು ಅಭಿಮಾನಿಗಳು
ನಟಿ ಶ್ರದ್ಧಾ ದಾಸ್
TV9 Web
| Updated By: Skanda|

Updated on: Aug 08, 2021 | 1:37 PM

Share

ಸೀರೆ ಸಾಂಪ್ರದಾಯಿಕ ಉಡುಪು ಎಂದು ಗುರುತಿಸಿಕೊಂಡಿದ್ದರೂ ಅದೀಗ ಆಧುನಿಕತೆಗೆ ತಕ್ಕಂತೆ ಸಾಕಷ್ಟು ಬದಲಾವಣೆಗಳಿಗೆ ಒಳಗಾಗಿ ಟ್ರೆಂಡ್ (Trending)​ ಸೆಟ್ಟರ್ ಆಗಿ ಬದಲಾಗಿದೆ. ಈಗ ಸೀರೆ ಉಡುವುದರಲ್ಲೂ ತರಹೇವಾರಿ ವಿಧಗಳಿದ್ದು, ಪಾಶ್ಚಿಮಾತ್ಯ ಉಡುಪಗಳಿಗೆ ಸೆಡ್ಡು ಹೊಡೆಯುವಂತೆ ಮನಸೆಳೆಯುತ್ತಿವೆ. ವಿದೇಶಿ ಮಹಿಳೆಯರೂ ಭಾರತದ ಸೀರೆಗೆ (Saree) ಮನಸೋಲುತ್ತಿದ್ದು, ನೀರೆಯರ ಸೀರೆಗೆ ಭಾರೀ ಡಿಮ್ಯಾಂಡ್ ಇದೆ. ಸಾಮಾಜಿಕ ಜಾಲತಾಣಗಳಲ್ಲೂ ಸೀರೆ ಉಟ್ಟು ಫೋಟೋ ಹಂಚಿಕೊಳ್ಳುವ ಹೆಣ್ಣು ಮಕ್ಕಳಿಗೆ ಅಭಿಮಾನಿಗಳು ಹೆಚ್ಚೆಂದರೆ ತಪ್ಪಾಗಲಿಕ್ಕಿಲ್ಲ. ಸಾಧಾರಣವಾಗಿ ನಟಿಮಣಿಯರು ಆಧುನಿಕ ಶೈಲಿಯ ಉಡುಪುಗಳನ್ನು ತೊಟ್ಟು ಕಾಣಿಸಿಕೊಳ್ಳುವುದೇ ಹೆಚ್ಚು. ಇಂಥಾ ಸಂದರ್ಭದಲ್ಲಿ ಇಲ್ಲೊಬ್ಬರು ನಟಿ ಸೀರೆ ತೊಟ್ಟು ತೆಗೆಸಿಕೊಂಡಿರುವ ಫೋಟೋಗಳು ಸಿಕ್ಕಾಪಟ್ಟೆ ವೈರಲ್ (Viral) ಆಗಿವೆ. ಅವರ ಒಂದೊಂದು ಫೋಟೋ ಕೂಡಾ ಸಾವಿರಾರು ಅಭಿಮಾನಿಗಳನ್ನು ಗಿಟ್ಟಿಸಿಕೊಂಡಿದೆ.

ತೆಲುಗಿನಲ್ಲಿ ಸಿಕ್ಕಾಪಟ್ಟೆ ಅಭಿಮಾನಿಗಳನ್ನು ಹೊಂದಿರುವ ನಟಿ ಶ್ರದ್ಧಾ ದಾಸ್ ದಕ್ಷಿಣ ಭಾರತದ ಸಿನಿಮಾಗಳಿಗೆ ಮಾತ್ರ ಸೀಮಿತವಾಗದೆ ಬಾಲಿವುಡ್​ಗೂ ಕಾಲಿಟ್ಟು ಸೈ ಎನ್ನಿಸಿಕೊಂಡವರು. ದಿಲ್ ತೋ ಬಚಾ ಹೈ ಜಿ, ಲಾಹೋರ್, ಜಿದ್, ಗ್ರೇಟ್ ಗ್ರ್ಯಾಂಡ್ ಮಸ್ತಿ, ಏಕ್​ ಮಿನಿ ಕಥಾ, ದಿ ರಾಯಲ್ ಬೆಂಗಾಲ್ ಟೈಗರ್, ಮಿರ್ಚಿ ಮಾಲಿನಿ ಸೇರಿದಂತೆ ಹಲವು ಚಿತ್ರಗಳಲ್ಲಿ ಮಿಂಚಿದವರು. ತೆರೆಯ ಮೇಲೆ ಶ್ರದ್ಧಾ ಬಂದರೆ ಅಭಿಮಾನಿಗಳು ಕಣ್ಣು ಮಿಟುಕಿಸದೇ ನೋಡುತ್ತಾರೆ. ಅಷ್ಟರ ಮಟ್ಟಿಗೆ ಅವರು ಎಲ್ಲರನ್ನೂ ಸೆಳೆದಿಟ್ಟುಕೊಳ್ಳುವ ಸುಂದರಿ. ಅವರ ಫೋಟೋಗಳೀಗ ಸಾಮಾಜಿಕ ಜಾಲತಾಣಗಳಲ್ಲಿ ಭರ್ಜರಿಯಾಗಿ ಓಡಾಡುತ್ತಿದ್ದು, ಎಲ್ಲರ ಮೆಚ್ಚುಗೆ ಗಳಿಸಿವೆ.

SHRADDDHA DAS PICS

ಸೀರೆಯಲ್ಲಿ ಕಂಗೊಳಿಸಿದ ನಟಿ ಶ್ರದ್ಧಾ ದಾಸ್

ಅಂದಹಾಗೆ, ಸೀರೆಯಲ್ಲಿ ಕಂಗೊಳಿಸುತ್ತಿರುವ ಶ್ರದ್ಧಾ ದಾಸ್ ತಮ್ಮ ದೇಹ ಸೌಂದರ್ಯ ಕಾಪಾಡಿಕೊಳ್ಳಲು ಏನೆಲ್ಲಾ ಮಾಡುತ್ತಾರೆ ಎನ್ನುವ ಬಗ್ಗೆಯೂ ಇದೇ ಸಂದರ್ಭದಲ್ಲಿ ಒಂದಷ್ಟು ಮಾಹಿತಿಗಳು ಹೊರಬಿದ್ದಿವೆ. ತಿನ್ನುವ ವಿಚಾರದಲ್ಲಿ ಯಾವುದೇ ಮಡಿವಂತಿಕೆ ಇಟ್ಟುಕೊಳ್ಳದ ಶ್ರದ್ಧಾ ಡಯೆಟ್ ಹೆಸರಿನಲ್ಲಿ ನಾಲಿಗೆಗೆ ಮೋಸ ಮಾಡಿಕೊಳ್ಳುವುದಿಲ್ಲವಂತೆ. ಹೀಗಾಗಿ ತನಗೆ ಇಷ್ಟ ಎನ್ನಿಸಿದ್ದೆಲ್ಲವನ್ನೂ ತಿನ್ನುತ್ತಾರಂತೆ.

SHRADDDHA DAS PHOTO

ಶ್ರದ್ಧಾ ದಾಸ್​ ಫೋಟೋಗಳು ಫುಲ್ ವೈರಲ್

ಆದರೆ, ಅವರು ಡ್ಯಾನ್ಸ್ ಪ್ರಿಯರಾಗಿರುವ ಕಾರಣ ಡ್ಯಾನ್ಸ್ ಮತ್ತು ಯೋಗಾ ತಪ್ಪಿಸುವುದಿಲ್ಲವಂತೆ. 40ರಿಂದ 45 ನಿಮಿಷ ನಿರಂತರವಾಗಿ ದೇಹ ದಂಡನೆಯಲ್ಲಿ ತೊಡಗುವ ಅವರು ಅದನ್ನು ದಿನ ಬಿಟ್ಟು ದಿನ ಮಾಡುತ್ತಾರಂತೆ. ಜತೆಗೆ, ಸಮಯ ಪಾಲನೆ ವಿಚಾರದಲ್ಲಿ ಕಟ್ಟುನಿಟ್ಟಾಗಿರುವ ಅವರು ಊಟ, ನಿದ್ರೆ, ವ್ಯಾಯಾಮ ಎಲ್ಲವನ್ನೂ ನಿಗದಿತ ಸಮಯದಲ್ಲಿ ಮಾಡುವುದನ್ನು ರೂಢಿಸಿಕೊಂಡಿದ್ದಾರೆ. ಹೊಟ್ಟೆ ತುಂಬಾ ಊಟ ಮಾಡಿದ ತಕ್ಷಣ ಮಲಗುವ ತಪ್ಪನ್ನೂ ಮಾಡುವುದಿಲ್ಲವಂತೆ. ಇದೀಗ ಅವರ ಫೋಟೋ ವೈರಲ್ ಆಗಿರುವ ಹೊತ್ತಿನಲ್ಲಿ ಈ ವಿಚಾರಗಳೂ ಹರಿದಾಡುತ್ತಿದ್ದು, ಮತ್ತಷ್ಟು ಜನರು ಅವರಿಂದ ಪ್ರೇರೇಪಿತರಾಗುತ್ತಿದ್ದಾರೆ.

ಇದನ್ನೂ ಓದಿ: ಸೀರೆಯುಟ್ಟು ಸಖತ್​ ಆಗಿ ಹಾಡಿಗೆ ಹೆಜ್ಜೆ ಹಾಕಿದ ನಟಿ: ಸಾಮಾಜಿಕ ಜಾಲತಾಣಗಳಲ್ಲಿ ಈಕೆಯದ್ದೇ ಹವಾ 

Viral Video: ಸೀರೆಯುಟ್ಟು ಪ್ರೇಯಸಿಯ ಮನೆಗೆ ಹೋದ ಭೂಪ; ಹಿಗ್ಗಾಮುಗ್ಗಾ ಥಳಿಸಿ ವಾಪಾಸ್ಸು ಕಳಿಸಿದ ಹುಡುಗಿ ಮನೆಯವರು

(Actress Shradddha Das wearing saree photos goes Viral on social media)