AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ವಿಡಿಯೋ ಮಾಡ್ತಾ ಮಾಡ್ತಾ ಈಜುಕೊಳಕ್ಕೆ ಬಿದ್ದ ಕ್ಯಾಮರಾ ಮ್ಯಾನ್​​; ವಧು – ವರ ಕಂಗಾಲು! ವಿಡಿಯೋ ವೈರಲ್​

ವಿಡಿಯೋ ನೋಡಿದ ನೆಟ್ಟಿಗರಲ್ಲಿ ಕೆಲವರು ನಗುತ್ತಿದ್ದರೆ ಇನ್ನು ಕೆಲವರು ಹೀಗಾಗಬಾರದಿತ್ತು! ಎಂಬ ಪ್ರತಿಕ್ರಿಯೆ ನೀಡುತ್ತಿದ್ದಾರೆ. ಹಾಗಿದ್ದಲ್ಲಿ ಅಂತಹ ಘಟನೆ ಏನಾಗಿರಬಹುದು? ಎಂಬ ಕುತೂಹಲ ಮೂಡಿರಬೇಕಲ್ವೇ? ವಿಡಿಯೋ ಇದೆ ನೀವೂ ನೋಡಿ.

Viral Video: ವಿಡಿಯೋ ಮಾಡ್ತಾ ಮಾಡ್ತಾ ಈಜುಕೊಳಕ್ಕೆ ಬಿದ್ದ ಕ್ಯಾಮರಾ ಮ್ಯಾನ್​​; ವಧು - ವರ ಕಂಗಾಲು! ವಿಡಿಯೋ ವೈರಲ್​
ಮದುವೆ ಸಮಾರಂಭದಲ್ಲಿ ಒಂದು ಕ್ಷಣ ವಧು ವರ ಕಂಗಾಲು!
TV9 Web
| Edited By: |

Updated on:Aug 08, 2021 | 9:53 AM

Share

ಸಾಮಾಜಿಕ ಜಾತಾಣದಲ್ಲಿ ಅದೆಷ್ಟೋ ವಿಡಿಯೋಗಳು ಹರಿದಾಡುತ್ತಿರುತ್ತವೆ. ಕೆಲವು ವಿಡಿಯೋಗಳು ಹೊಟ್ಟೆ ಹುಣ್ಣಾಗುವಷ್ಟು ನಗುತರಿಸುತ್ತವೆ. ಇನ್ನು ಕೆಲವರು ಸ್ಪೂರ್ತಿ ತುಂಬುವ ವಿಡಿಯೋಗಳಾಗಿರುತ್ತವೆ. ಇತ್ತೀಚೆಗೆ ಸೆರೆಯಾದ ಮತ್ತೊಂದು ತಮಾಷೆಯ ವಿಡಿಯೋ ಫುಲ್ ವೈರಲ್ ಆಗಿದೆ. ವಿಡಿಯೋ ನೋಡಿದ ನೆಟ್ಟಿಗರಲ್ಲಿ ಕೆಲವರು ನಗುತ್ತಿದ್ದರೆ ಇನ್ನು ಕೆಲವರು ಹೀಗಾಗಬಾರದಿತ್ತು! ಎಂಬ ಪ್ರತಿಕ್ರಿಯೆ ನೀಡುತ್ತಿದ್ದಾರೆ. ಹಾಗಿದ್ದಲ್ಲಿ ಅಂತಹ ಘಟನೆ ಏನಾಗಿರಬಹುದು? ಎಂಬ ಕುತೂಹಲ ಮೂಡಿರಬೇಕಲ್ವೇ? ವಿಡಿಯೋ ಇದೆ ನೀವೂ ನೋಡಿ.

ಮದುವೆ ಮನೆಯಲ್ಲಿ ಮನೆ ತುಂಬ ಅತಿಥಿಗಳು, ಹೊಸ ಉಡುಪು ಜತೆಗೆ ಫೋಟೋಗ್ರಫಿ ಇದ್ದೇ ಇರುತ್ತದೆ. ಈ ಛಾಯಾಚಿತ್ರಗ್ರಾಹಕ ಕೆಲಸದಲ್ಲಿ ಎಷ್ಟು ತಲ್ಲೀನನಾಗಿದ್ದಾನೆ ಎಂಬುದಕ್ಕೆ ಈ ವಿಡಿಯೋವೇ ಸಾಕ್ಷಿ. ವಧು ವರರೇ ಒಂದು ಕ್ಷಣ ಕಂಗಾಲಾಗುವಂತಹ ಘಟನೆ ನಡೆದಿದೆ. ವಿಡಿಯೋ ನೋಡಿ ನೀವೂ ನಗುತ್ತೀರಾ!

ವಧು ವರ ನಡೆದು ಬರುವಾಗ ವಿಡಿಯೋ ಮಾಡಲೆಂದು ಛಾಯಾಚಿತ್ರಗ್ರಾಹಕ ಹಿಂಬದಿಯಿಂದ ನಡೆದು ಸಾಗುತ್ತಿರುತ್ತಾನೆ. ಆದರೆ ಹಿಂದೆ ಸ್ವಿಮ್ಮಿಂಗ್​ಫೂಲ್​ ಇರುವುದು ಆತನಿಗೆ ಗಮನವೇ ಇಲ್ಲ. ವಿಡಿಯೋ ಮಾಡ್ತಾ ಮಾಡ್ತಾ ಈಜುಕೊಳದಲ್ಲಿ ಬಿದ್ದು ಬಿಟ್ಟಿದ್ದಾನೆ.

ಘಟನೆ ನೋಡ್ತಾ ನೊಡ್ತಾ ಒಂದು ಕ್ಷಣ ವಧು- ವರ ಕಂಗಾಲಾಗಿದ್ದಾರೆ. ಸುತ್ತಲೂ ನಿಂತಿದ್ದ ಅತಿಥಿಗಳು ಧಂಗಾಗಿದ್ದಾರೆ. ಪಕ್ಕದಲ್ಲೇ ಇದ್ದ ಮತ್ತೋರ್ವ ಛಾಯಾಚಿತ್ರಗ್ರಾಹಕ ಕೊಳಕ್ಕೆ ಬಿದ್ದ ಕ್ಯಾಮರಾ ಮ್ಯಾನ್ಅನ್ನು ಮೇಲಕ್ಕೆತ್ತಿದ್ದಾರೆ. ನೀರಲ್ಲಿ ಬಿದ್ದ ತಕ್ಷಣ ಕ್ಯಾಮರಾ ಸುರಕ್ಷಿತವಾಗಿದೆಯೇ ಎಂದು ಒಮ್ಮೆ ನೋಡುತ್ತಾನೆ. ಕೆಲವು ಬಾರಿ ಕೆಲಸದಲ್ಲಿ ಮುಳುಗಿದ್ದಾಗ ಈಥರಹದ ಘಟನೆಗಳು ನಡೆಯುತ್ತವೆ. ಕೆಲವು ತಮಾಷೆಯಾಗಿರುವ ಘಟನೆಗಳು ಜೀವನಪೂರ್ತಿ ನೆನಪುಳಿಯುವಂತದ್ದಾಗಿರುತ್ತದೆ.

ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು … ಓಹ್ ನೋ … ಎಂಬ ಶೀರ್ಷಿಕೆಯೊಂದಿಗೆ ವಿಡಿಯೋ ಹಂಚಿಕೊಳ್ಳಲಾಗಿದೆ. ದೃಶ್ಯಕ್ಕೆ ಮ್ಯೂಸಿಕ್ ಹೊಂದಿಸಿ ಇನ್ಸ್ಟಾಗ್ರಾಂನಲ್ಲಿ ಹರಿಬಿಡಲಾಗಿದೆ.

ಇದನ್ನೂ ಓದಿ:

Viral Video: ಬೈಕ್ ಸವಾರನ ಜೊತೆ ಬಾಲಿವುಡ್ ಹಾಡಿಗೆ ಸಖತ್ತಾಗಿ ಸ್ಟೆಪ್ ಹಾಕಿದ ಪೊಲೀಸ್; ವೈರಲ್ ವಿಡಿಯೋ ಇಲ್ಲಿದೆ

Viral Video: ಕಾಮನಬಿಲ್ಲು ಬಣ್ಣದ ಹೆಬ್ಬಾವನ್ನು ಎಂದಾದರೂ ನೋಡಿದ್ದೀರಾ?

(Camera man fall in swimming pool in wedding video goes viral)

Published On - 9:50 am, Sun, 8 August 21

ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್
ಮಾಡದ ತಪ್ಪಿಗೆ ಸುಟ್ಟು ಕರಕಲಾದ ಸೀಬರ್ಡ್ ಬಸ್ಸಿನ ಕೊನೆಯ ದೃಶ್ಯ
ಮಾಡದ ತಪ್ಪಿಗೆ ಸುಟ್ಟು ಕರಕಲಾದ ಸೀಬರ್ಡ್ ಬಸ್ಸಿನ ಕೊನೆಯ ದೃಶ್ಯ