Viral Photo: ಕಾರಿನ ಕಿಟಕಿಯಿಂದ ಎಕೆ-47 ತೋರಿಸಿದ ಯುವತಿ; ಆಮೇಲೆ ಆಗಿದ್ದೇನು?

Viral Photo: ಕಾರಿನ ಕಿಟಕಿಯಿಂದ ಎಕೆ-47 ತೋರಿಸಿದ ಯುವತಿ; ಆಮೇಲೆ ಆಗಿದ್ದೇನು?
ಎಕೆ-47 ಹಿಡಿದು ಕುಳಿತಿರುವ ಯುವತಿ

ಅಮೆರಿಕದಲ್ಲಿ ಗುಂಡಿನ ದಾಳಿಯ ಪ್ರಕರಣಗಳು ಹೆಚ್ಚಾಗುತ್ತಿರುವ ಬೆನ್ನಲ್ಲೇ ಈ ರೀತಿ ಎಕೆ-47 ಹಿಡಿದು ಕುಳಿತಿರುವ ಯುವತಿಯ ಫೋಟೋವನ್ನು ಪೊಲೀಸರು ಬಿಡುಗಡೆ ಮಾಡಿರುವುದು ಆತಂಕಕ್ಕೂ ಕಾರಣವಾಗಿದೆ.

TV9kannada Web Team

| Edited By: Sushma Chakre

Aug 07, 2021 | 6:10 PM

ಅಮೆರಿಕದ ಸ್ಯಾನ್​ಫ್ರಾನ್ಸಿಸ್ಕೋದ ಪೊಲೀಸರು ತಮ್ಮ ಅಧಿಕೃತ ಟ್ವಿಟ್ಟರ್ ಖಾತೆಯನ್ನು ಫೋಟೋವೊಂದನ್ನು ಶೇರ್ ಮಾಡಿದ್ದು, ಆ ಫೋಟೋದಲ್ಲಿ ಚಲಿಸುವ ಕಾರಿನ ಕಿಟಕಿಯಲ್ಲಿ ಯುವತಿಯೊಬ್ಬಳು ಎಕೆ-47 ಹಿಡಿದು ಹೊರಗೆ ಇಣುಕುತ್ತಿರುವ ದೃಶ್ಯ ಸೆರೆಯಾಗಿದೆ. ಎಕೆ-47 ಹಿಡಿದ ಯುವತಿ ಫೋಟೋ ವೈರಲ್ ಆಗಿದ್ದು, ಆ ಕಾರನ್ನು ಪೊಲೀಸರು ಸೀಜ್ ಮಾಡಿದ್ದಾರೆ.

ಈ ಪ್ರಕರಣವನ್ನು ವಿಚಾರಣೆ ನಡೆಸಲಾಗುತ್ತಿದೆ. ಎಸ್​ಎಫ್​ಪಿಡಿ ಸಿಬ್ಬಂದಿ ಆ ಯುವತಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಹಾಗೇ, ಆ ಕಾರನ್ನು ಕೂಡ ಸೀಜ್ ಮಾಡಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ಟ್ವಿಟ್ಟರ್​ನಲ್ಲಿ ಮಾಹಿತಿ ನೀಡಿದ್ದಾರೆ.

ಯುವತಿಯೊಬ್ಬಳು ಎಕೆ-47 ಹಿಡಿದು ಕಿಟಕಿಯಿಂದ ಹೊರಗೆ ತೋರಿಸುತ್ತಿರುವ ಫೋಟೋಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಆಕೆ ಯಾವ ಉದ್ದೇಶಕ್ಕಾಗಿ ಈ ರೀತಿ ಮಾಡಿದಳು ಎಂಬ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ.

ಅಮೆರಿಕದಲ್ಲಿ ಗುಂಡಿನ ದಾಳಿಯ ಪ್ರಕರಣಗಳು ಹೆಚ್ಚಾಗುತ್ತಿರುವ ಬೆನ್ನಲ್ಲೇ ಈ ರೀತಿ ಎಕೆ-47 ಹಿಡಿದು ಕುಳಿತಿರುವ ಯುವತಿಯ ಫೋಟೋವನ್ನು ಪೊಲೀಸರು ಬಿಡುಗಡೆ ಮಾಡಿರುವುದು ಆತಂಕಕ್ಕೂ ಕಾರಣವಾಗಿದೆ.

ಸ್ಯಾನ್​ಫ್ರಾನ್ಸಿಸ್ಕೋ ಒಂದರಲ್ಲೇ 2021ರ ಜನವರಿಯಿಂದ ಜೂನ್​ವರೆಗೆ 119 ಶೂಟೌಟ್ ಪ್ರಕರಣಗಳು ದಾಖಲಾಗಿವೆ. ಕಳೆದ ವರ್ಷ ಈ ಅವಧಿಯಲ್ಲಿ 58 ಶೂಟೌಟ್ ಪ್ರಕರಣಗಳು ದಾಖಲಾಗಿದ್ದವು.

ಇದನ್ನೂ ಓದಿ: Viral Video: ಬೈಕ್ ಸವಾರನ ಜೊತೆ ಬಾಲಿವುಡ್ ಹಾಡಿಗೆ ಸಖತ್ತಾಗಿ ಸ್ಟೆಪ್ ಹಾಕಿದ ಪೊಲೀಸ್; ವೈರಲ್ ವಿಡಿಯೋ ಇಲ್ಲಿದೆ

Shocking News: ಪೊಲೀಸರಂತೆ ಬಸ್ ನಿಲ್ಲಿಸಿ 1.2 ಕೋಟಿ ರೂ. ಕದ್ದೊಯ್ದ ಕಳ್ಳರು; ಸಿನಿಮಾ ಸ್ಟೈಲ್​ನಲ್ಲಿ ದರೋಡೆ!

(Shocking News United States Woman Leans Out of Moving Car Holding AK-47 in Viral Photo)

Follow us on

Related Stories

Most Read Stories

Click on your DTH Provider to Add TV9 Kannada