Sign In

By signing in or creating an account, you agree with Associated Broadcasting Company's Terms & Conditions and Privacy Policy.

Shocking News: ಪೊಲೀಸರಂತೆ ಬಸ್ ನಿಲ್ಲಿಸಿ 1.2 ಕೋಟಿ ರೂ. ಕದ್ದೊಯ್ದ ಕಳ್ಳರು; ಸಿನಿಮಾ ಸ್ಟೈಲ್​ನಲ್ಲಿ ದರೋಡೆ!

Crime News Today: ನಡುರಸ್ತೆಯಲ್ಲಿ ಬಸ್​ ನಿಲ್ಲಿಸಿದ ಪೊಲೀಸರಿಗೆ ತಮ್ಮ ಬಳಿಯಿದ್ದ 1.2 ಕೋಟಿ ಹಣವನ್ನು ನೀಡಿದ ಕೊರಿಯರ್ ಸಿಬ್ಬಂದಿ ಬಳಿಕ ಕಂಗಾಲಾಗಿದ್ದಾರೆ. ಅಸಲಿಗೆ ಆ ಹಣವನ್ನು ತೆಗೆದುಕೊಂಡು ಹೋಗಿದ್ದು ಪೊಲೀಸರೇ ಅಲ್ಲ! ಈ ಕತೆ ಯಾವ ಸಿನಿಮಾ ಕತೆಗೂ ಕಡಿಮೆಯಿಲ್ಲ.

Shocking News: ಪೊಲೀಸರಂತೆ ಬಸ್ ನಿಲ್ಲಿಸಿ 1.2 ಕೋಟಿ ರೂ. ಕದ್ದೊಯ್ದ ಕಳ್ಳರು; ಸಿನಿಮಾ ಸ್ಟೈಲ್​ನಲ್ಲಿ ದರೋಡೆ!
ಸಾಂದರ್ಭಿಕ ಚಿತ್ರ
Follow us
TV9 Web
| Updated By: ಸುಷ್ಮಾ ಚಕ್ರೆ

Updated on:Aug 05, 2021 | 4:25 PM

ಪುಣೆ: ‘ಕಳ್ಳತನಕ್ಕೆ ನೂರಾರು ಮಾರ್ಗಗಳು’ ಎಂಬಂತೆ ನಾವು ಊಹಿಸಲೂ ಸಾಧ್ಯವಿಲ್ಲದ ರೀತಿ ಇತ್ತೀಚೆಗೆ ದರೋಡೆಯ ಪ್ರಕರಣಗಳು ನಡೆಯುತ್ತಿವೆ. ಮಹಾರಾಷ್ಟ್ರದ ಪುಣೆ ಜಿಲ್ಲೆಯ ಪತಾಸ್ (Pune District Patas) ಎಂಬಲ್ಲಿ ಪೊಲೀಸರು ನಡುರಸ್ತೆಯಲ್ಲಿ ಸರ್ಕಾರಿ ಬಸ್​ ಅನ್ನು ಅಡ್ಡಹಾಕಿದ್ದರು. ಏನಿರಬಹುದು ಎಂದು ಚಾಲಕ ಬಸ್ ನಿಲ್ಲಿಸುತ್ತಿದ್ದಂತೆ ಬಸ್​ ಏರಿದ ನಾಲ್ಕೈದು ಪೊಲೀಸರು ಆ ಬಸ್​ನಲ್ಲಿದ್ದ ಕೊರಿಯರ್ ಸೇವೆಯ ಸಿಬ್ಬಂದಿಯ ಬಳಿಯಿದ್ದ 1.2 ಕೋಟಿ ರೂ. ಹಣವನ್ನು ಹೊತ್ತೊಯ್ದಿದ್ದಾರೆ. ಬೇಲಿಯೇ ಎದ್ದು ಹೊಲ ಮೇಯ್ದಂತೆ ಪೊಲೀಸರೇ ಹೀಗೆ ಲೂಟಿ ಮಾಡಿದರೆ ಏನಪ್ಪಾ ನಮ್ಮ ಕತೆ?! ಎಂದು ಶಾಕ್​ನಲ್ಲಿದ್ದ ಬಸ್​ನವರಿಗೆ ಅವರು ಪೊಲೀಸರಲ್ಲ ದರೋಡೆಕೋರರು (Robbery) ಎಂಬುದು ತಿಳಿಯಲು ನಿಜವಾದ ಪೊಲೀಸರೇ ಬರಬೇಕಾಯಿತು! ಸಿನಿಮೀಯ ರೀತಿಯಲ್ಲಿ ನಡೆದ ಈ ಘಟನೆ ಕೇಳಿದ ಅಸಲಿ ಪೊಲೀಸರು ಕೂಡ ದರೋಡೆಕೋರರ ಬುದ್ಧಿವಂತಿಕೆಗೆ ಶಾಕ್ ಆಗಿದ್ದಾರೆ.

ಪುಣೆಯ ಸರ್ಕಾರಿ ಬಸ್​ನಲ್ಲಿ ಕೊರಿಯರ್ ಸಿಬ್ಬಂದಿ ಕೋಟ್ಯಂತರ ರೂ. ಹಣವನ್ನು ತೆಗೆದುಕೊಂಡು ಹೋಗುತ್ತಿದ್ದಾರೆ ಎಂಬ ಮಾಹಿತಿ ಸಿಗುತ್ತಿದ್ದಂತೆ ಆ ಹಣವನ್ನು ಲೂಟಿ ಮಾಡಲು ದರೋಡೆಕೋರರು ಪ್ಲಾನ್ ಮಾಡಿದ್ದರು. ಅದರಂತೆ ಪೊಲೀಸರ ಡ್ರೆಸ್ ಧರಿಸಿ, ಕಾಡಿನ ಬಳಿ ರಸ್ತೆಯಲ್ಲಿ ಬಸ್​ ಅಡ್ಡಗಟ್ಟಿದ ಅವರು ಸೀದಾ ಬಸ್​ ಏರಿ ಆ ಹಣವನ್ನು ತೆಗೆದುಕೊಂಡು ಪರಾರಿಯಾಗಿದ್ದಾರೆ. ಅವರು ದರೋಡೆಕೋರರಿರಬಹುದು ಎಂಬ ಸುಳಿವೂ ಇಲ್ಲದ ಬಸ್ ಚಾಲಕ ಯಾವುದೋ ಕೇಸ್​ಗಾಗಿ ಪೊಲೀಸರು ಬಸ್ ಅಡ್ಡಹಾಕಿರಬಹುದು ಎಂದು ಬಸ್​ ನಿಲ್ಲಿಸಿದ್ದ. ಕೊರಿಯರ್ ಕಂಪನಿಯ ನಾಲ್ವರು ಸಿಬ್ಬಂದಿಗಳು ನಿಲಂಗದಿಂದ ಬಿವಾಂಡಿಗೆ ಬಸ್​ನಲ್ಲಿ ಪ್ರಯಾಣ ಮಾಡುತ್ತಿದ್ದರು.

ಬೇರೆ ಊರಿಗೆ  ಕೊರಿಯರ್ ಇದ್ದುದರಿಂದ ಅವರೆಲ್ಲರೂ ಒಟ್ಟಾಗಿ ಬಸ್​ನಲ್ಲೇ ಪ್ರಯಾಣ ಮಾಡುತ್ತಿದ್ದರು. ಮಧ್ಯಾಹ್ನ 1.15ರ ವೇಳೆಗೆ ಪೊಲೀಸ್ ಡ್ರೆಸ್​ನಲ್ಲಿದ್ದ ದರೋಡೆಕೋರರು ಪತಾಸ್ ಬಳಿ ಕಾಡಿನ ರಸ್ತೆಯಲ್ಲಿ ಬಸ್ ಅಡ್ಡಗಟ್ಟಿದ್ದರು. ನೋಡನೋಡುತ್ತಿದ್ದಂತೆ ಬಸ್ ಏರಿದ ನಾಲ್ಕೈದು ಜನರು ನಿಮ್ಮಲ್ಲಿ ಕೊರಿಯರ್ ಸರ್ವಿಸ್​ನವರು ಯಾರು? ಎಂದು ಕೇಳಿದ್ದರು. ಪೊಲೀಸರು ಕೇಳುತ್ತಿದ್ದಾರಲ್ಲ ಎಂಬ ಭಯದಿಂದಲೇ ಆ ನಾಲ್ವರು ಸೀಟಿನಿಂದ ಎದ್ದು ನಿಂತಿದ್ದರು. ಯಾವುದೇ ಕೇಸಿನ ಕುರಿತು ನಮ್ಮನ್ನು ವಿಚಾರಣೆ ಮಾಡಬಹುದು ಎಂದು ಆ ನಾಲ್ವರು ಸಿಬ್ಬಂದಿ ಭಯಗೊಂಡಿದ್ದರು. ಆದರೆ, ಅಲ್ಲಿ ಆಗಿದ್ದೇ ಬೇರೆ. ಯಾರ ಕೈಯಲ್ಲಿ ಹಣವಿದೆ ಎಂಬುದನ್ನು ಸುಲಭವಾಗಿ ಕಂಡುಹಿಡಿದ ದರೋಡೆಕೋರರು ಸಿನಿಮೀಯ ಶೈಲಿಯಲ್ಲಿ ಆ ಹಣವನ್ನು ಕಸಿದುಕೊಂಡು ತಮ್ಮ ವಾಹನದಲ್ಲಿ ಪರಾರಿಯಾಗಿದ್ದಾರೆ.

ಈ ಘಟನೆಯ ಬಗ್ಗೆ ಕೊರಿಯರ್ ಕಂಪನಿಯ ಉದ್ಯೋಗಿಗಳು ಪೊಲೀಸರಿಗೆ ದೂರು ನೀಡಿದ್ದಾರೆ. ಅವರು ನೀಡಿದ ಮಾಹಿತಿಯ ಆಧಾರದಲ್ಲಿ ಆರೋಪಿಗಳ ರೇಖಾಚಿತ್ರ ಬಿಡಿಸಲಾಗಿದೆ. ಖತರ್ನಾಕ್ ಕಳ್ಳರನ್ನು ಬಂಧಿಸಲು ಪೊಲೀಸರ ತಂಡವೂ ರಚನೆಯಾಗಿದೆ.

ಇದನ್ನೂ ಓದಿ: Shocking News: 1 ಕೋಟಿ ರೂ. ಕೊಡದಿದ್ದರೆ ನಿಮ್ಮ ಮಕ್ಕಳನ್ನು ಕೊಲ್ಲುತ್ತೇನೆ; 11 ವರ್ಷದ ಮಗಳಿಂದಲೇ ಅಪ್ಪನಿಗೆ ಬ್ಲಾಕ್​ಮೇಲ್!

Crime News: ಅಕ್ರಮ ಸಂಬಂಧ ತಂದ ಕಂಟಕ; ಹೆಂಡತಿಯ ಪ್ರಿಯಕರನ ಗುಪ್ತಾಂಗಕ್ಕೆ ಶೂಟ್ ಮಾಡಿದ ಗಂಡ!

(Shocking Crime: Robbers Posing as Police stopped bus and Loot Rs 1.2 crore from courier service staff in Pune)

Published On - 4:19 pm, Thu, 5 August 21

ನಿಖಿಲ್ ಪಟ್ಟಾಭಿಷೇಕದ ಮಾತು ಸಭೆಯಲ್ಲಿ ಚರ್ಚೆಯಾಗಲಿದೆಯೇ?
ನಿಖಿಲ್ ಪಟ್ಟಾಭಿಷೇಕದ ಮಾತು ಸಭೆಯಲ್ಲಿ ಚರ್ಚೆಯಾಗಲಿದೆಯೇ?
ದುಡ್ಡು ಕೌಂಟ್ ಮಾಡಲು ನೋಟು ಎಣಿಸುವ ಮಶೀನ್ ತರಿಸಿದ ಅಧಿಕಾರಿಗಳು
ದುಡ್ಡು ಕೌಂಟ್ ಮಾಡಲು ನೋಟು ಎಣಿಸುವ ಮಶೀನ್ ತರಿಸಿದ ಅಧಿಕಾರಿಗಳು
ಶ್ರೀಲಂಕಾದಲ್ಲಿರುವ ತಮಿಳು ಮೀನುಗಾರರ ಬಿಡುಗಡೆಗೆ ಪ್ರಧಾನಿ ಮೋದಿ ಒತ್ತಾಯ
ಶ್ರೀಲಂಕಾದಲ್ಲಿರುವ ತಮಿಳು ಮೀನುಗಾರರ ಬಿಡುಗಡೆಗೆ ಪ್ರಧಾನಿ ಮೋದಿ ಒತ್ತಾಯ
ಯತ್ನಾಳ್ ಆದಷ್ಟು ಬೇಗ ಪಕ್ಷಕ್ಕೆ ವಾಪಸ್ಸಾಗುವ ನಿರೀಕ್ಷೆ ಇದೆ: ಸುಧಾಕರ್
ಯತ್ನಾಳ್ ಆದಷ್ಟು ಬೇಗ ಪಕ್ಷಕ್ಕೆ ವಾಪಸ್ಸಾಗುವ ನಿರೀಕ್ಷೆ ಇದೆ: ಸುಧಾಕರ್
ಸಪ್ತಗಿರಿ ವಿಶ್ವವಿದ್ಯಾಲಯ ಉತ್ತಮ ಗುಣಮಟ್ಟದ ಶಿಕ್ಷಣ ಒದಗಿಸುತ್ತಿದೆ: ಉಮೇಶ್
ಸಪ್ತಗಿರಿ ವಿಶ್ವವಿದ್ಯಾಲಯ ಉತ್ತಮ ಗುಣಮಟ್ಟದ ಶಿಕ್ಷಣ ಒದಗಿಸುತ್ತಿದೆ: ಉಮೇಶ್
ಛತ್ತೀಸ್‌ಗಢದ ದಾಂತೇಶ್ವರಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ಅಮಿತ್ ಶಾ
ಛತ್ತೀಸ್‌ಗಢದ ದಾಂತೇಶ್ವರಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ಅಮಿತ್ ಶಾ
ಹಾಲ್​ ಟಿಕೆಟ್​​ನೊಂದಿಗೆ ಮಾದರಿ ಒಎಂಆರ್ ಶೀಟ್ ಕೂಡ ಡೌನ್ಲೋಡ್: ಪ್ರಸನ್ನ
ಹಾಲ್​ ಟಿಕೆಟ್​​ನೊಂದಿಗೆ ಮಾದರಿ ಒಎಂಆರ್ ಶೀಟ್ ಕೂಡ ಡೌನ್ಲೋಡ್: ಪ್ರಸನ್ನ
ಪುಟ್ಟ ಬಾಲಕನ ದೈವ ನರ್ತನ: ಮೈ ಜುಮ್ಮೆನಿಸುವ ವಿಡಿಯೋ ನೋಡಿ
ಪುಟ್ಟ ಬಾಲಕನ ದೈವ ನರ್ತನ: ಮೈ ಜುಮ್ಮೆನಿಸುವ ವಿಡಿಯೋ ನೋಡಿ
CET ಪರೀಕ್ಷೆ ಬಗ್ಗೆ ಭಯ ಬೇಡ; ತಜ್ಞರು ನೀಡಿರುವ ಟಿಪ್ಸ್​​ ಇಲ್ಲಿದೆ
CET ಪರೀಕ್ಷೆ ಬಗ್ಗೆ ಭಯ ಬೇಡ; ತಜ್ಞರು ನೀಡಿರುವ ಟಿಪ್ಸ್​​ ಇಲ್ಲಿದೆ
ಒಂದು ಕಾಲದ ಜೋಡೆತ್ತುಗಳು, ಈಗ ಬದ್ಧ ವೈರಿಗಳು!
ಒಂದು ಕಾಲದ ಜೋಡೆತ್ತುಗಳು, ಈಗ ಬದ್ಧ ವೈರಿಗಳು!