AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Hubli Crime: ಹುಬ್ಬಳ್ಳಿ ಜೈಲಿನಿಂದ ಪರಾರಿಯಾಗಿದ್ದ ಕೈದಿಯ ನಿಗೂಢ ಸಾವು; ರೈಲ್ವೆ ಹಳಿ ಬಳಿ ಶವವಾಗಿ ಪತ್ತೆ

Crime News Today: ಕೊಲೆ ಆರೋಪದಲ್ಲಿ ಜೈಲು ಸೇರಿದ್ದ 28 ವರ್ಷದ ವಿಜಯಾನಂದ ನರೇಗಲ್ ಭಾನುವಾರ ಜೈಲಿನ ಆವರಣವನ್ನು ಸ್ವಚ್ಛಗೊಳಿಸುವಾಗ ಕಸವನ್ನು ಎಸೆಯುವ ನೆಪದಲ್ಲಿ ಹೊರಗೆ ಹೋದವನು ಅಲ್ಲಿಂದ ಪರಾರಿಯಾಗಿದ್ದ.

Hubli Crime: ಹುಬ್ಬಳ್ಳಿ ಜೈಲಿನಿಂದ ಪರಾರಿಯಾಗಿದ್ದ ಕೈದಿಯ ನಿಗೂಢ ಸಾವು; ರೈಲ್ವೆ ಹಳಿ ಬಳಿ ಶವವಾಗಿ ಪತ್ತೆ
ಮೃತ ಕೈದಿ ವಿಜಯಾನಂದ ನರೇಗಲ್
Follow us
TV9 Web
| Updated By: ಸುಷ್ಮಾ ಚಕ್ರೆ

Updated on:Aug 05, 2021 | 12:32 PM

ಹುಬ್ಬಳ್ಳಿ: ಹುಬ್ಬಳ್ಳಿಯ ಉಪ ಜೈಲಿನಿಂದ ಪರಾರಿಯಾಗಿದ್ದ ವಿಚಾರಣಾಧೀನ ಕೈದಿ ಶವವಾಗಿ ಪತ್ತೆಯಾಗಿದ್ದಾನೆ. ಭಾನುವಾರ ಜೈಲಿನಿಂದ ಪರಾರಿಯಾಗಿದ್ದ ವಿಜಯಾನಂದ ನರೇಗಲ್ ಶವ ನಿನ್ನೆ ಅಣ್ಣಿಗೇರಿ ರೈಲ್ವೆ ಹಳಿ ಬಳಿ ಪತ್ತೆಯಾಗಿದೆ. ವಿಜಯಾನಂದನ ಸಾವಿಗೆ ಜೈಲಧಿಕಾರಿಗಳೇ ಕಾರಣ ಎಂದು ಆತನ ಸಂಬಂಧಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕೊಲೆ ಆರೋಪದಲ್ಲಿ ಜೈಲು ಸೇರಿದ್ದ ಆನಂದನಗರ ನಿವಾಸಿ 28 ವರ್ಷದ ವಿಜಯಾನಂದ ನರೇಗಲ್ ಭಾನುವಾರ ಜೈಲಿನ ಆವರಣವನ್ನು ಸ್ವಚ್ಛಗೊಳಿಸುವಾಗ ಕಸವನ್ನು ಎಸೆಯುವ ನೆಪದಲ್ಲಿ ಹೊರಗೆ ಹೋದವನು ಅಲ್ಲಿಂದ ಪರಾರಿಯಾಗಿದ್ದ. ಆತನ ವಿರುದ್ಧ ಕೇಸ್ ದಾಖಲಿಸಿಕೊಂಡಿದ್ದ ಅಶೋಕನಗರದ ಪೊಲೀಸರು ವಿಶೇಷ ತಂಡವನ್ನೂ ರಚಿಸಿದ್ದರು. ಆದರೆ, ಬುಧವಾರ ಆತನ ಶವ ರೈಲಿನ ಹಳಿಯ ಬಳಿ ಪತ್ತೆಯಾಗಿದ್ದು, ರೈಲ್ವೆ ಹಳಿಗೆ ತಲೆ ಕೊಟ್ಟು ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ.

ಆದರೆ, ವಿಜಯಾನಂದನ ಸಂಬಂಧಿಕರು ಈ ಸಾವಿಗೆ ಜೈಲರ್ ಕಾರಣ ಎಂದು ಆರೋಪಿಸಿದ್ದಾರೆ. ಕುರಿಗಳನ್ನು ಕಳ್ಳತನ ಮಾಡುತ್ತಿದ್ದುದನ್ನು ವಿರೋಧಿಸಿದ್ದ ಇಬ್ಬರು ಕುರಿಗಾಹಿಗಳನ್ನು 2014ರಲ್ಲಿ ಕೊಲೆ ಮಾಡಲಾಗಿತ್ತು. ಆ ಪ್ರಕರಣದ ಆರೋಪಿಯಾಗಿದ್ದ ವಿಜಯಾನಂದ 6 ವರ್ಷಗಳಿಂದ ಜೈಲಿನಲ್ಲಿದ್ದ. ಹೈಕೋರ್ಟ್​ಗೆ ಸಲ್ಲಿಸಿದ್ದ ಜಾಮೀನು ಅರ್ಜಿಯೂ ವಜಾ ಆಗಿದ್ದರಿಂದ ಆತ ಜೈಲಿನಿಂದ ಪರಾರಿಯಾಗಲು ನಿರ್ಧರಿಸಿದ್ದ. ಜೈಲಿನಿಂದ ಸಂಬಂಧಿಕರ ಮನೆಗೆ ಹೋಗಿದ್ದ ವಿಜಯಾನಂದ ಅದಾದ 3 ದಿನಗಳ ನಂತರ ಶವವಾಗಿ ಪತ್ತೆಯಾಗಿದ್ದಾನೆ.

ತನ್ನನ್ನು ಹುಬ್ಬಳ್ಳಿಯಿಂದ ಧಾರವಾಡಕ್ಕೆ ಸ್ಥಳಾಂತರ ಮಾಡುವಂತೆ ಆರೋಪಿ ವಿಜಯಾನಂದ ಜೈಲರ್ ಬಳಿ ಒತ್ತಾಯ ಮಾಡಿದ್ದ ಎನ್ನಲಾಗಿದೆ. ಆದರೆ, ಹುಬ್ಬಳ್ಳಿಯ ಜೈಲರ್ ವಿಜಯಾನಂದನ ಸ್ಥಳಾಂತರಕ್ಕೆ ಅವಕಾಶ ನೀಡದ ಹಿನ್ನೆಲೆಯಲ್ಲಿ ಆತ ಪರಾರಿಯಾಗಿದ್ದ. ನನ್ನ ಮಗನ ಸಾವಿಗೆ ಜೈಲಿನ ಅಧಿಕಾರಿಗಳೇ ಕಾರಣ ಎಂದು ವಿಜಯಾನಂದನ ತಾಯಿ ಕಣ್ಣೀರು ಹಾಕಿದ್ದಾರೆ.

ಇದನ್ನೂ ಓದಿ: Crime News: ಪ್ರೀತಿಗಾಗಿ ಗೆಳೆಯನ ತಲೆಯನ್ನೇ ಕತ್ತರಿಸಿದ 17 ವರ್ಷದ ಯುವಕ; ತ್ರಿಕೋನ ಪ್ರೇಮಕತೆಯ ದುರಂತ ಅಂತ್ಯ

Crime News: ಆನ್​ಲೈನ್​ ಗೇಮ್​ನಲ್ಲಿ 40,000 ರೂ. ಕಳೆದುಕೊಂಡ 13 ವರ್ಷದ ಬಾಲಕ; ಅಮ್ಮ ಬೈದಿದ್ದಕ್ಕೆ ಬೇಸರಗೊಂಡು ಆತ್ಮಹತ್ಯೆ

(Hubli Prisoner Mysteriously Found Dead in Railway Track after Escaping from Jail on Sunday)

Published On - 12:30 pm, Thu, 5 August 21