AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Crime News: ಆನ್​ಲೈನ್​ ಗೇಮ್​ನಲ್ಲಿ 40,000 ರೂ. ಕಳೆದುಕೊಂಡ 13 ವರ್ಷದ ಬಾಲಕ; ಅಮ್ಮ ಬೈದಿದ್ದಕ್ಕೆ ಬೇಸರಗೊಂಡು ಆತ್ಮಹತ್ಯೆ

Shocking News: ಮಧ್ಯಪ್ರದೇಶದ 6ನೇ ತರಗತಿಯ ಬಾಲಕನೊಬ್ಬ ಆನ್​ಲೈನ್ ಗೇಮ್​ನಲ್ಲಿ 40,000 ರೂ. ಹಣವನ್ನು ಕಳೆದುಕೊಂಡಿದ್ದಾನೆ. ಬಳಿಕ ಅಮ್ಮ ಬೈದರೆಂದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

Crime News: ಆನ್​ಲೈನ್​ ಗೇಮ್​ನಲ್ಲಿ 40,000 ರೂ. ಕಳೆದುಕೊಂಡ 13 ವರ್ಷದ ಬಾಲಕ; ಅಮ್ಮ ಬೈದಿದ್ದಕ್ಕೆ ಬೇಸರಗೊಂಡು ಆತ್ಮಹತ್ಯೆ
ಫ್ರೀ ಫೈರ್ ಆನ್​ಲೈನ್ ಗೇಮ್
TV9 Web
| Edited By: |

Updated on: Jul 31, 2021 | 4:50 PM

Share

ನವದೆಹಲಿ: ಆನ್​ಲೈನ್ ಕ್ಲಾಸ್​ಗಳು ಶುರುವಾದ ಬಳಿಕ ಮಕ್ಕಳ ಕೈಗೆ ಮೊಬೈಲ್ ಸಿಗಲು ಅಧಿಕೃತ ಕಾರಣವೊಂದು ಸಿಕ್ಕಂತಾಗಿದೆ. ಮೊಬೈಲ್ ಹಿಡಿದು ದಿನವಿಡೀ ಆನ್​ಲೈನ್ ಗೇಮ್ ಆಡುತ್ತಿದ್ದ 6ನೇ ತರಗತಿಯ ಬಾಲಕನೊಬ್ಬ ಆನ್​ಲೈನ್ ಗೇಮ್​ನಲ್ಲಿ 40,000 ರೂ. ಹಣವನ್ನು ಕಳೆದುಕೊಂಡಿದ್ದಾನೆ. ಒಂದೇ ದಿನ ಈ ರೀತಿ ಸಾವಿರಾರು ರೂ. ಹಾಳು ಮಾಡಿದ್ದಕ್ಕೆ ಆತನ ತಾಯಿ ಆ ಬಾಲಕನಿಗೆ ಬೈದಿದ್ದಾಳೆ. ಇದರಿಂದ ಬೇಸರಗೊಂಡ ಆ ಬಾಲಕ ಸೂಸೈಡ್ ನೋಡ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

’13 ವರ್ಷದ ಆ ಬಾಲಕನ ಜೇಬಿನಲ್ಲಿ ಪೊಲೀಸರಿಗೆ ಸೂಸೈಡ್ ನೋಟ್ ಸಿಕ್ಕಿದೆ. ಫ್ರೀ ಫೈರ್ ಎಂಬ ಆನ್​ಲೈನ್​ನಲ್ಲಿ ನಾನು 40,000 ರೂ. ಕಳೆದಿದ್ದೇನೆ. ದಯವಿಟ್ಟು ನನ್ನನ್ನು ಕ್ಷಮಿಸಿ’ ಎಂದು ಆ ಬಾಲಕ ಬರೆದಿಟ್ಟಿರುವ ಘಟನೆ ಮಧ್ಯಪ್ರದೇಶದ ಚತರ್ಪುರ ಜಿಲ್ಲೆಯಲ್ಲಿ ನಡೆದಿದೆ. ಅಪ್ಪ, ಅಮ್ಮ, ತಂಗಿಯ ಜೊತೆ ವಾಸವಾಗಿದ್ದ ಬಾಲಕ ತನ್ನ ತಾಯಿ ಮತ್ತು ತಂದೆಯ ಮೊಬೈಲ್​ನಲ್ಲಿ ಸದಾ ಗೇಮ್ ಆಡುತ್ತಿದ್ದ. ನಿನ್ನೆ ಆತನ ತಾಯಿ ಆಫೀಸಿಗೆ ಹೋಗಿದ್ದಾಗ ಆಕೆಯ ಮೊಬೈಲ್​ಗೆ ಆಕೆಯ ಖಾತೆಯಿಂದ 40,000 ರೂ. ಕಟ್ ಆಗಿರುವುದಾಗಿ ಮೆಸೇಜ್ ಬಂದಿತ್ತು. ಇದರಿಂದ ಗಾಬರಿಯಾದ ಆಕೆ ತನ್ನ ಗಂಡ, ಮಕ್ಕಳ ಬಳಿ ಈ ಬಗ್ಗೆ ವಿಚಾರಿಸಿದ್ದಳು.

ಮಗನ ಬಳಿ ಫೋನ್ ಮಾಡಿ ವಿಚಾರಿಸಿದಾಗ ಆತನೇ ಆಕೆಯ ಯುಪಿಐ (UPI)ನಿಂದ ಹಣ ಡ್ರಾ ಮಾಡಿದ್ದಾಗಿ ತಿಳಿಸಿದ್ದಾನೆ. ಕಾರಣ ಕೇಳಿದಾಗ ಫ್ರೀ ಫೈರ್ ಎಂಬ ರಾಯಲ್ ಆನ್​ಲೈನ್ ಗೇಮ್​ನಲ್ಲಿ ಅಕೌಂಟ್ ಡೀಟೇಲ್ಸ್ ಹಾಕಲು ಕೇಳಿತು. ಆಗ ನಾನು ನಿನ್ನ ಯುಇಐ ನಂಬರ್ ಹಾಕಿದ್ದೆ ಎಂದು ಒಪ್ಪಿಕೊಂಡಿದ್ದಾನೆ. ಇದರಿಂದ ಕೋಪಗೊಂಡ ಆಕೆ ಆನ್​ಲೈನ್ ಗೇಮ್​ಗಾಗಿ 40 ಸಾವಿರ ರೂ. ಖರ್ಚು ಮಾಡಿದ್ದಕ್ಕಾಗಿ ಬೈದಿದ್ದಾರೆ.

ಅಮ್ಮ ಬೈದಿದ್ದರಿಂದ ಮತ್ತು 40 ಸಾವಿರ ರೂ. ಹಣ ಕಳೆದುಕೊಂಡಿದ್ದರಿಂದ ಬೇಸರಗೊಂಡ ಬಾಲಕ ಸೂಸೈಡ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ನಿನ್ನೆ ಸಂಜೆ ಆತನ ಅಪ್ಪ-ಅಮ್ಮ ಆಫೀಸಿನಿಂದ ಮನೆಗೆ ಬರುವಾಗ ಆತ ನೇಣು ಬಿಗಿದುಕೊಂಡು ಸಾವನ್ನಪ್ಪಿದ್ದ.

ಇದನ್ನೂ ಓದಿ: Crime News: ಮನೆಯಿಂದ ಓಡಿಹೋಗಿ ಮದುವೆಯಾಗಿದ್ದಕ್ಕೆ ಅಣ್ಣಂದಿರಿಂದಲೇ ತಂಗಿಯ ಬರ್ಬರ ಹತ್ಯೆ

Crime News: ಸಮೋಸಕ್ಕೆ ಎರಡೂವರೆ ರೂ. ಏರಿಕೆ; ಮನನೊಂದು ಬೆಂಕಿ ಹಚ್ಚಿಕೊಂಡು ಯುವಕ ಆತ್ಮಹತ್ಯೆ!

(13-year-old dies by suicide after losing Rs 40000 on online game in Madhya Pradesh Shocking News)

ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೇಡ್ತಿ-ವರದಾ ಯೋಜನೆ ವಿರೋಧಿಸುತ್ತಿರುವುದೇಕೆ? ಸ್ವಾಮೀಜಿ ಶಾಕಿಂಗ್​ ಹೇಳಿಕೆ
ಬೇಡ್ತಿ-ವರದಾ ಯೋಜನೆ ವಿರೋಧಿಸುತ್ತಿರುವುದೇಕೆ? ಸ್ವಾಮೀಜಿ ಶಾಕಿಂಗ್​ ಹೇಳಿಕೆ
ವರದಾ-ಬೇಡ್ತಿ ನದಿ ಪ್ರಾಜೆಕ್ಟ್: ಕಾಗೇರಿ-ವೈದ್ಯ ಮಧ್ಯೆ ಟಾಕ್ ವಾರ್
ವರದಾ-ಬೇಡ್ತಿ ನದಿ ಪ್ರಾಜೆಕ್ಟ್: ಕಾಗೇರಿ-ವೈದ್ಯ ಮಧ್ಯೆ ಟಾಕ್ ವಾರ್
ಬೆಂಗಳೂರಿನಲ್ಲಿ ‘ಜನ ನಾಯಗನ್’ ಸ್ವಾಗತಕ್ಕೆ ಹೀಗೆ ಮಾಡಿದ್ದರು ತಯಾರಿ
ಬೆಂಗಳೂರಿನಲ್ಲಿ ‘ಜನ ನಾಯಗನ್’ ಸ್ವಾಗತಕ್ಕೆ ಹೀಗೆ ಮಾಡಿದ್ದರು ತಯಾರಿ
ಸಿಎಂ ಕ್ಷೇತ್ರದಲ್ಲೇ ಹೀಗ್ ಮಾಡಿದ್ರೆ ಹೇಗೆ? ಅಧಿಕಾರಿಗೆ ಯತೀಂದ್ರ ಕ್ಲಾಸ್!
ಸಿಎಂ ಕ್ಷೇತ್ರದಲ್ಲೇ ಹೀಗ್ ಮಾಡಿದ್ರೆ ಹೇಗೆ? ಅಧಿಕಾರಿಗೆ ಯತೀಂದ್ರ ಕ್ಲಾಸ್!
ವರದಾ-ಬೇಡ್ತಿ ನದಿ ಜೋಡಣೆ ವಿರೋಧಿಸಿ ಬೃಹತ್ ಪ್ರತಿಭಟನೆ: ಸ್ವಾಮೀಜಿ ಎಚ್ಚರಿಕೆ
ವರದಾ-ಬೇಡ್ತಿ ನದಿ ಜೋಡಣೆ ವಿರೋಧಿಸಿ ಬೃಹತ್ ಪ್ರತಿಭಟನೆ: ಸ್ವಾಮೀಜಿ ಎಚ್ಚರಿಕೆ
ಕೆಲಸಕ್ಕೆ ಕನ್ನಡಿಗರು ಬೇಡ್ವಂತೆ:ಕನ್ನಡಿಗರನ್ನು ಕೆರಳಿಸಿದ ಬೆಂಗಳೂರಿನ ಕಂಪನಿ
ಕೆಲಸಕ್ಕೆ ಕನ್ನಡಿಗರು ಬೇಡ್ವಂತೆ:ಕನ್ನಡಿಗರನ್ನು ಕೆರಳಿಸಿದ ಬೆಂಗಳೂರಿನ ಕಂಪನಿ
ಶ್ರೀರಾಮುಲು ದೊಡ್ಡ ಪಾಳೇಗಾರನಾ? ಬಂದವ್ನೆ ಹೊಡಿರೋ: ರೆಡ್ಡಿ ವಿಡಿಯೋ ರಿಲೀಸ್‌
ಶ್ರೀರಾಮುಲು ದೊಡ್ಡ ಪಾಳೇಗಾರನಾ? ಬಂದವ್ನೆ ಹೊಡಿರೋ: ರೆಡ್ಡಿ ವಿಡಿಯೋ ರಿಲೀಸ್‌
ಅವನ ಬಿಟ್ಟು ಇವನು, ಇವನ ಬಿಟ್ಟು ಅವನು: ಏನಿದು ಕಳ್ಳಾಟ?
ಅವನ ಬಿಟ್ಟು ಇವನು, ಇವನ ಬಿಟ್ಟು ಅವನು: ಏನಿದು ಕಳ್ಳಾಟ?
ಬೆಂಗಳೂರಿನ ಸುಜಾತಾ ಅಂಡರ್‌ಪಾಸ್‌ನಲ್ಲಿ ಅವೈಜ್ಞಾನಿಕ ರಸ್ತೆ ಕಾಮಗಾರಿ
ಬೆಂಗಳೂರಿನ ಸುಜಾತಾ ಅಂಡರ್‌ಪಾಸ್‌ನಲ್ಲಿ ಅವೈಜ್ಞಾನಿಕ ರಸ್ತೆ ಕಾಮಗಾರಿ