ಪೊಲೀಸರ ವೇಷದಲ್ಲಿ ಬಂದ ಖದೀಮರು ದೋಚಿ ಪರಾರಿಯಾದ್ರು..!
Crime News Kannada: ಬಿಹಾರ ಜೋಗಿಂದರ್ ಪ್ರಸಾದ್ ಕನ್ನಡ ಮತ್ತು ಕೈ ಗಡಿಯಾರಗಳ ವ್ಯಾಪಾರಿ. ತಿಂಗಳಿಗೊಮ್ಮೆ ಉತ್ತರ ಪ್ರದೇಶದ ಕೊತ್ವಾಲಿ ಪ್ರದೇಶದ ಶಹಮರುಫ್ ನಗರಕ್ಕೆ ವಸ್ತುಗಳ ಖರೀದಿಗಾಗಿ ಬರುತ್ತಾರೆ.
ಕಳ್ಳರು ಯಾವಾಗ, ಯಾವ ವೇಷದಲ್ಲಿ ಬರುತ್ತಾರೆ ಎಂಬುದು ಸದ್ಯದ ಮಟ್ಟಿಗೆ ಕಳ್ಳರಿಗೆ ಮಾತ್ರ ಗೊತ್ತಿರುವ ವಿಚಾರ. ಏಕೆಂದರೆ ಇಲ್ಲಿ ಕಳ್ಳರೇ ಪೊಲೀಸರಾಗಿ ದೋಚಿರುವ ಘಟನೆಯೊಂದು ನಡೆದಿದೆ. ಈ ಘಟನೆ ನಡೆದಿದ್ದು ಉತ್ತರ ಪ್ರದೇಶದ ಗೋರಖ್ ಪುರ್ ಜಿಲ್ಲೆಯ ಕೊತ್ವಾಲಿ ಪ್ರದೇಶದಲ್ಲಿ. ಮೋಸ ಹೋಗಿದ್ದು ಬಿಹಾರ ವ್ಯಾಪಾರಿ.
ಹೌದು, ಬಿಹಾರ ಜೋಗಿಂದರ್ ಪ್ರಸಾದ್ ಕನ್ನಡಕ ಮತ್ತು ಕೈ ಗಡಿಯಾರಗಳ ವ್ಯಾಪಾರಿ. ತಿಂಗಳಿಗೊಮ್ಮೆ ಉತ್ತರ ಪ್ರದೇಶದ ಕೊತ್ವಾಲಿ ಪ್ರದೇಶದ ಶಹಮರುಫ್ ನಗರಕ್ಕೆ ವಸ್ತುಗಳ ಖರೀದಿಗಾಗಿ ಬರುತ್ತಾರೆ. ಜುಲೈ 29 ರಂದು ಕೂಡ ಎಂದಿನಂತೆ ಮಗನೊಂದಿಗೆ ಅಂಗಡಿಗೆ ಬೇಕಾದ ವಸ್ತುಗಳ ಖರೀದಿಗಾಗಿ ಆಗಮಿಸಿದ್ದರು.
ಬೆಳಿಗ್ಗೆ 9: 30 ಕ್ಕೆ ಶಹಮರುಫ್ ನಗರಕ್ಕೆ ತಲುಪಿದರೂ, ಅಂಗಡಿಗಳು ಓಪನ್ ಆಗಿರಲಿಲ್ಲ. ಈ ಸಮಯದಲ್ಲಿ ಟೀ ಕುಡಿಯಲೆಂದು ಬೇರೊಂದು ಅಂಗಡಿಗೆ ತೆರಳಿದ್ದಾರೆ. ಈ ಸಂದರ್ಭದಲ್ಲಿ ಅಲ್ಲಿಗೆ ಆಗಮಿಸಿದ ಪೊಲೀಸ್ ವೇಷಧಾರಿ ಕಳ್ಳರು ಜೋಗಿಂದರ್ ಪ್ರಸಾದ್ ಅವರ ಬ್ಯಾಗ್ ಪರಿಶೀಲಿಸಿದ್ದಾರೆ. ಅಷ್ಟೇ ಅಲ್ಲದೆ ಬ್ಯಾಗ್ ಅನ್ನು ವಾಪಾಸ್ ನೀಡಿದ್ದಾರೆ.
ತಕ್ಷಣವೇ ಪೊಲೀಸರು ಅಲ್ಲಿಂದ ತೆರಳಿರುವುದನ್ನು ನೋಡಿದ ಜೋಗಿಂದರ್ ಪ್ರಸಾದ್ ಅವರಿಗೂ ಅನುಮಾನ ಮೂಡಿದೆ. ಬ್ಯಾಗ್ ಒಳಗೆ ಕೈ ಹಾಕಿ ನೋಡಿದರೆ ಅದರಲ್ಲಿದ್ದ 70 ಸಾವಿರ ರೂ. ಮಾಯ. ಹೌದು, ಬ್ಯಾಗ್ ಪರಿಶೀಲನೆ ಹೆಸರಿನಲ್ಲಿ ಖದೀಮರು ಎಪ್ಪತ್ತು ಸಾವಿರ ರೂಪಾಯಿ ದೋಚಿ ಪರಾರಿಯಾಗಿದ್ದರು.
ಒಟ್ಟು ಮೂವರು ಪೊಲೀಸ್ ವೇಷಧಾರಿಗಳು ಬಂದಿದ್ದರು. ಅವರಲ್ಲಿ ಇಬ್ಬರು ಬ್ಯಾಗ್ ಪರಿಶೀಲನೆಗೆ ಕೇಳಿದ್ದರು. ನಾನು ಕೂಡ ಪೊಲೀಸ್ ಚೆಕ್ಕಿಂಗ್ ಆಗಿರಬಹುದೆಂದು ನೀಡಿದ್ದೆ. ಆದರೆ ಆ ಬಳಿಕ ಹಣ ಕದ್ದಿರೋದು ಗೊತ್ತಾಗಿದೆ ಎಂದು ಜೋಗಿಂದರ್ ಪ್ರಸಾದ್ ದೂರು ನೀಡಿದ್ದಾರೆ. ಇಂತಹ ಘಟನೆಗಳು ಪದೇ ಪದೇ ನಡೆಯುತ್ತಿದ್ದು ಪೊಲೀಸರ ಮಾರು ವೇಷದಲ್ಲಿ ಬರುವವರ ಬಗ್ಗೆ ಎಚ್ಚರಿಕೆಯಿಂದ ಇರುವಂತೆ ಶಹಮರುಫ್ ನಗರದ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
ಇದನ್ನೂ ಓದಿ: Jio Offer: 3GB ಡೇಟಾ ಜೊತೆ ಕಡಿಮೆ ಬೆಲೆ ಹೊಸ ರಿಚಾರ್ಜ್ ಪ್ಲ್ಯಾನ್ ಪರಿಚಯಿಸಿದ ಜಿಯೋ
ಇದನ್ನೂ ಓದಿ: ಸೂರ್ಯಕುಮಾರ್ ಯಾದವ್ಗೆ ಅವಕಾಶ ಕೈತಪ್ಪುವ ಆತಂಕ
(70 Thousand Robbed From Shopkeeper During Bag Checking By Becoming Police)
Published On - 10:40 pm, Fri, 30 July 21