ಇಬ್ಬರು ಕುಖ್ಯಾತ ಬೈಕ್ ಕಳ್ಳರ ಬಂಧನ; 10 ಲಕ್ಷ ರೂ. ಬೆಲೆಬಾಳುವ ಬೈಕ್‌ಗಳನ್ನು ವಶಕ್ಕೆ ಪಡೆದ ಪೊಲೀಸರು
ಕಾಟನ್‌ಪೇಟೆ ಪೊಲೀಸರು ಅಬ್ದುಲ್ ರಹಮಾನ್ ಮತ್ತು ಶಹಾಬುದ್ದೀನ್ರನ್ನು ಬಂಧಿಸಿದ್ದಾರೆ. ಆರೋಪಿಗಳ ಬಂಧನದಿಂದಾಗಿ ಸಿಟಿ ಮಾರ್ಕೆಟ್, ಹೈಗ್ರೌಂಡ್ಸ್ ಠಾಣೆ ವ್ಯಾಪ್ತಿಯಲ್ಲಿ ಬೈಕ್ ಕಳ್ಳತನ ಮಾಡಿದ್ದ ಪ್ರಕರಣ ಬೆಳಕಿಗೆ ಬಂದಿದೆ.
ಬೆಂಗಳೂರು: ಪೊಲೀಸರ ಕಾರ್ಯಾಚರಣೆ ವೇಳೆ ಇಬ್ಬರು ಬೈಕ್ ಕಳ್ಳರನ್ನು ಬಂಧಿಸಿದ್ದಾರೆ. ಬಂಧಿತರಿಂದ 10 ಲಕ್ಷ ಬೆಲೆಬಾಳುವ 5 ದ್ವಿಚಕ್ರ ವಾಹನ ವಶಕ್ಕೆ ಪಡೆಯಲಾಗಿದೆ. ಕಾಟನ್‌ಪೇಟೆ ಪೊಲೀಸರು ಅಬ್ದುಲ್ ರಹಮಾನ್ ಮತ್ತು ಶಹಾಬುದ್ದೀನ್ರನ್ನು ಬಂಧಿಸಿದ್ದಾರೆ. ಆರೋಪಿಗಳ ಬಂಧನದಿಂದಾಗಿ ಸಿಟಿ ಮಾರ್ಕೆಟ್, ಹೈಗ್ರೌಂಡ್ಸ್ ಠಾಣೆ ವ್ಯಾಪ್ತಿಯಲ್ಲಿ ಬೈಕ್ ಕಳ್ಳತನ ಮಾಡಿದ್ದ ಪ್ರಕರಣ ಬೆಳಕಿಗೆ ಬಂದಿದೆ. ಸದ್ಯ ಆರೋಪಿಗಳನ್ನು ಬಂಧಿಸಿ ಕಾಟನ್‌ಪೇಟೆ ಪೊಲೀಸರು ಜೈಲಿಗೆ ಕಳುಹಿಸಲಾಗಿದೆ.
ಸಂಬಂಧಿಕರ ಮನೆಯಲ್ಲಿ ಚಿನ್ನಾಭರಣ ಕದ್ದಿದ್ದ ಇಬ್ಬರ ಬಂಧನ ಸಂಬಂಧಿಕರ ಮನೆಯಲ್ಲಿ ಚಿನ್ನಾಭರಣ ಕದ್ದಿದ್ದ ಇಬ್ಬರು ಆರೋಪಿಗಳನ್ನು ಬೆಂಗಳೂರಿನ ಜ್ಞಾನಭಾರತಿ ಠಾಣೆ ಪೊಲೀಸರು ಬಂಧಿಸಿದ್ದಾರೆ. ಶ್ವೇತಾ ಮತ್ತು ನಾಗರಾಜ್ ಬಂಧಿತ ಆರೋಪಿಗಳು. ಮಾರ್ಚ್ 18 ರಂದು ಮಲ್ಲತಹಳ್ಳಿ ನಿವಾಸಿಯಾಗಿರುವ ರಮ್ಯಾ ಎಂಬುವವರ ಮನೆಗೆ ಶ್ವೇತಾ ಮತ್ತು ನಾಗರಾಜ ದಂಪತಿ ಬಂದಿದ್ದರು.
ಈ ವೇಳೆ ಮದುವೆಗಾಗಿ ಖರೀದಿಸಿದ ಬಟ್ಟೆ ನೋಡಲು ರೂಮ್ ಒಳಗೆ ಬಂದಿದ್ದಾಗ, ಬೀರುವಿನಲ್ಲಿದ್ದ ಚಿನ್ನಾಭರಣದ ಮೇಲೆ ಕಣ್ಣು ಹಾಕಿದ್ದ ಜೋಡಿ, ಒಂದು ಮಾಂಗಲ್ಯ ಸರ, ಜುಮುಕಿ, 2 ಚಿನ್ನದ ಚೈನು, ಬ್ರಾಸ್ ಲೆಟ್ ಕದ್ದು ಪರಾರಿಯಾಗಿದ್ದರು. ರಮ್ಯಾ ನೀಡಿದ ದೂರಿನ ಆಧಾರದ ಮೇಲೆ ಇಬ್ಬರು ಆರೋಪಿಗಳನ್ನು ಸದ್ಯ ಪೊಲೀಸರು ಬಂಧಿಸಿದ್ದಾರೆ.
ಬೈಕ್ ಕಳ್ಳರ ಬಂಧನ ಅನುಮಾನಾಸ್ಪದ ರೀತಿಯಲ್ಲಿ ಓಡಾಡುತ್ತಿದ್ದ ಹಿನ್ನೆಲೆ, ಸಂಜಯನಗರ ಪೊಲೀಸರು, ಇಬ್ಬರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ತನಿಖೆ ವೇಳೆ ಕಳ್ಳತನ ಬೆಳಕಿಗೆ ಬಂದಿದ್ದು, ಸದ್ಯ ಬಂಧಿತ ಆರೋಪಿಗಳಿಂದ ಪೊಲೀಸರು 6.22 ಲಕ್ಷ ಬೆಲೆ ಬಾಳುವ105 ಗ್ರಾಂ ಚಿನ್ನಾಭರಣ, 2 ದ್ವಿಚಕ್ರ ವಾಹನ ಮತ್ತು ಹಣ ವಶಕ್ಕೆ ಪಡೆದಿದ್ದಾರೆ. ಹಗಲು ಮತ್ತು ರಾತ್ರಿ ಕಳ್ಳತನ ಮಾಡುತ್ತಿದ್ದ ಇಬ್ಬರು ಸದ್ಯ ಪೊಲೀಸರ ಅತಿಥಿಯಾಗಿದ್ದಾರೆ.
ಒಬ್ಬ ಆರೋಪಿ ಡ್ರೈಫ್ರೂಟ್ಸ್ ಅಂಗಡಿಯಲ್ಲಿ ಹಣ ಮತ್ತು ದ್ವಿಚಕ್ರ ವಾಹನ ಕಳವು ಮಾಡಿಕೊಂಡು ಪರಾರಿಯಾಗಿದ್ದ. ಮತ್ತೊಬ್ಬ ಆರೋಪಿ ಆಸ್ಪತ್ರೆ ಮುಂಭಾಗದಲ್ಲಿ ನಿಲ್ಲಿಸಿದ್ದ ದ್ವಿಚಕ್ರ ವಾಹನ ಕದ್ದಿದ್ದ. ಇಬ್ಬರ ವಿರುದ್ಧ ಸಂಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪೊಲೀಸರು ಗಸ್ತಿನಲ್ಲಿರಬೇಕಾದರೆ ಅನುಮಾನಸ್ಪದ ರೀತಿಯಲ್ಲಿ ಸುತ್ತಾಡುತ್ತಿದ್ದರಿಂದ ಇಬ್ಬರನ್ನು ವಶಕ್ಕೆ ಪಡೆಯಲಾಗಿದೆ.
ಇದನ್ನೂ ಓದಿ: ಚಾಮರಾಜಪೇಟೆ ಮಗು ಕಳ್ಳತನ ಪ್ರಕರಣ; ಡಿಎನ್ಎ ಟೆಸ್ಟ್ ಮೂಲಕ ಮಗುವಿನ ಪೋಷಕರನ್ನು ಪತ್ತೆ ಹಚ್ಚಿದ ಖಾಕಿ
ರೌಡಿಶೀಟರ್ ಬಬ್ಲಿ ಹತ್ಯೆ: ಬೈಕ್ ಮೇಲೆ ಮಚ್ಚು ಎತ್ತಿ ಹಿಡಿದು ಸಂಭ್ರಮಿಸಿದ್ದ ಹಂತಕ ಪಡೆ