Sign In

By signing in or creating an account, you agree with Associated Broadcasting Company's Terms & Conditions and Privacy Policy.

Bengaluru Crime: ಸರಗಳ್ಳತನ, ಬೈಕ್ ಕಳ್ಳತನ, ಡ್ರಗ್ಸ್ ದಂಧೆ; ವಿವಿಧ ಪ್ರಕರಣಗಳಲ್ಲಿ ಆರೋಪಿಗಳ ಬಂಧನ

ನಗರದ ವಿವಿಧೆಡೆ ಪೊಲೀಸರ ಕಾರ್ಯಾಚರಣೆಯಲ್ಲಿ ಹಲವು ಅಪರಾಧ ಕೃತ್ಯಗಳು ಇಂದು ಬಯಲಾಗಿವೆ. ಆರೋಪಿ, ಅಪರಾಧಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಸರಗಳವು, ಬೈಕ್ ಕಳ್ಳತನ, ಲಂಚ ಸ್ವೀಕಾರ, ಡ್ರಗ್ಸ್ ಮಾರಾಟ ಪ್ರಕರಣಗಳು ಬೆಳಕಿಗೆ ಬಂದಿವೆ.

Bengaluru Crime: ಸರಗಳ್ಳತನ, ಬೈಕ್ ಕಳ್ಳತನ, ಡ್ರಗ್ಸ್ ದಂಧೆ; ವಿವಿಧ ಪ್ರಕರಣಗಳಲ್ಲಿ ಆರೋಪಿಗಳ ಬಂಧನ
ಸಾಂದರ್ಭಿಕ ಚಿತ್ರ
Follow us
TV9 Web
| Updated By: ganapathi bhat

Updated on: Jul 30, 2021 | 11:01 PM

ಬೆಂಗಳೂರು: ನಗರದ ವಿವಿಧೆಡೆ ಪೊಲೀಸರ ಕಾರ್ಯಾಚರಣೆಯಲ್ಲಿ ಹಲವು ಅಪರಾಧ ಕೃತ್ಯಗಳು ಇಂದು (ಜುಲೈ 30) ಬಯಲಾಗಿವೆ. ಆರೋಪಿ, ಅಪರಾಧಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಸರಗಳವು, ಬೈಕ್ ಕಳ್ಳತನ, ಲಂಚ ಸ್ವೀಕಾರ, ಡ್ರಗ್ಸ್ ಮಾರಾಟ ಪ್ರಕರಣಗಳು ಬೆಳಕಿಗೆ ಬಂದಿವೆ.

ಸರಗಳವು ಮಾಡುತ್ತಿದ್ದ ಉತ್ತರ ಪ್ರದೇಶದ ಮತ್ತೊಂದು ಗ್ಯಾಂಗ್ ಇಂದು ಪೊಲೀಸರ ವಶವಾಗಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆ ಟೌನ್​ ಠಾಣೆ ಪೊಲೀಸರಿಂದ ಶ್ಯಾಮಿಲಿ ಗ್ಯಾಂಗ್​ನ ಇಬ್ಬರ ಸೆರೆಯಾಗಿದೆ. ಅರ್ಜುನ್ ಕುಮಾರ್, ರಾಕೇಶ್ ಎಂಬವರು ಬಂಧಿತ ಆರೋಪಿಗಳು. ಬಂಧಿತ ಆರೋಪಿಗಳಿಂದ 465 ಗ್ರಾಂ ಚಿನ್ನದ ಸರ ವಶಕ್ಕೆ ಪಡೆಯಲಾಗಿದೆ. ಶ್ಯಾಮಿಲಿ ಗ್ಯಾಂಗ್​ನ 11 ಸರಗಳವು ಪ್ರಕರಣಗಳು ಪತ್ತೆಯಾಗಿದೆ.

ಇವರು ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ 3 ದಿನ ಸರಗಳವು ಮಾಡಿದ್ದರು. ವಿಮಾನದಲ್ಲಿ ಬಂದು ಸರಗಳವು ಮಾಡಿಕೊಂಡು ಮೋಜು ಮಸ್ತಿ ಮಾಡಿದ್ದರು. 2014ರಿಂದ ಸಕ್ರಿಯವಾಗಿರುವ ಯುಪಿಯ ಶ್ಯಾಮಿಲಿ ಗ್ಯಾಂಗ್ ಇದಾಗಿದೆ. ಉತ್ತರ ಪ್ರದೇಶದ ಶ್ಯಾಮಿಲಿ ಎಂಬ ಜಿಲ್ಲೆಯ ಆರೋಪಿಗಳು ಇವರಾಗಿದ್ದಾರೆ. ಕದ್ದ ಮಾಲನ್ನು ಬಳಿಕ ಲೂಧಿಯಾನದಲ್ಲಿ ಮಾರಾಟ ಮಾಡುತಿದ್ದರು ಎಂದು ತಿಳಿದುಬಂದಿದೆ.

6 ಬೈಕ್ ಕಳ್ಳರು; 46 ಬೈಕ್ ವಶಕ್ಕೆ ಬೆಂಗಳೂರು ಉತ್ತರ ತಾಲೂಕಿನ ಮಾದನಾಯಕನಹಳ್ಳಿ ಠಾಣೆ ಪೊಲೀಸರಿಂದ 6 ಬೈಕ್ ಕಳ್ಳರ ಬಂಧನವಾಗಿದೆ. ರವಿಕುಮಾರ್(21), ಮುನಿರಾಜು(20), ಜಗದೀಶ್(21), ಮೋಹನ್ ಕುಮಾರ್‌(22), ಶಿವಶಂಕರ್‌(25) ಬಂಧಿತ ಆರೋಪಿಗಳಾಗಿದ್ದಾರೆ. ಬಂಧಿತರಿಂದ 40 ಲಕ್ಷ ರೂಪಾಯಿ ಮೌಲ್ಯದ 46 ಬೈಕ್‌ಗಳನ್ನು ವಶಕ್ಕೆ ಪಡೆಯಲಾಗಿದೆ.

ಇವರು ಮಾದನಾಯಕನಹಳ್ಳಿ, ತಾವರೆಕೆರೆ, ನೆಲಮಂಗಲ ಗ್ರಾ. ಸೇರಿ 10 ಹೆಚ್ಚು ಠಾಣೆಗಳ ವ್ಯಾಪ್ತಿಯಲ್ಲಿ ಬೈಕ್ ಕಳ್ಳತನ ಮಾಡಿದ್ದರು ಎಂದು ತಿಳಿದುಬಂದಿದೆ. ಕೇಂದ್ರ ವಲಯದ ಐಜಿಪಿ ಚಂದ್ರಶೇಖರ್‌ ನೇತೃತ್ವದಲ್ಲಿ ಕದ್ದ ಬೈಕ್‌ಗಳು ಮಾಲೀಕರ ಸುಪರ್ದಿಗೆ ಒಪ್ಪಿಸಲಾಗಿದೆ.

ದೊಡ್ಡಬಳ್ಳಾಪುರ: ಕುಖ್ಯಾತ ಸರಗಳ್ಳರ ಬಂಧನ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ನಗರದಲ್ಲಿ ಕುಖ್ಯಾತ ಸರಗಳ್ಳರನ್ನು ಬಂಧಿಸಲಾಗಿದೆ. ಸರಗಳ್ಳರಾದ ನವೀನ್ ಹಾಗೂ ಪುನೀತ್ ಬಂಧಿಸಲಾಗಿದ್ದು, ಬಂಧಿತರಿಂದ 6 ಲಕ್ಷ ಮೌಲ್ಯದ ಚಿನ್ನದ ಸರ, ಬೈಕ್‌ ಜಪ್ತಿ ಮಾಡಲಾಗಿದೆ. ದೊಡ್ಡಬಳ್ಳಾಪುರ ನಗರ ಠಾಣೆಯ ಪೊಲೀಸರಿಂದ ಡಿವೈಎಸ್‌ಪಿ ರಂಗಪ್ಪ ನೇತೃತ್ವದಲ್ಲಿ ಅಪರಾಧಿಗಳನ್ನು ಸೆರೆ ಹಿಡಿಯಲಾಗಿದೆ.

ಪದವೀಧರ ಡ್ರಗ್ ಪೆಡ್ಲರ್ ಪೊಲೀಸರ ವಶ ಬೆಂಗಳೂರಿನಲ್ಲಿ ಇಬ್ಬರು ಡ್ರಗ್​ ಪೆಡ್ಲರ್​​ಗಳ ಬಂಧನವಾಗಿದೆ. ಸಿದ್ದಾಪುರ ಪೊಲೀಸರಿಂದ ಕೌಶಿಕ್, ರಂಗನಾಥ್ ಎಂಬವರು ಸೆರೆಯಾಗಿದ್ದಾರೆ. ಎಕ್ಸ್​​ಟಸಿ ಮಾತ್ರೆಗಳು, ಹ್ಯಾಶ್ ಆಯಿಲ್, LSD ಸ್ಟ್ರಿಪ್ಸ್​ ವಶಕ್ಕೆ ಪಡೆಯಲಾಗಿದೆ. ಬಂಧಿತ ಆರೋಪಿ ಕೌಶಿಕ್ ಪದವೀಧರ, ಆತ ಶೋಕಿಗಾಗಿ ಡ್ರಗ್ಸ್ ಮಾರಾಟ ಮಾಡುತ್ತಿದ್ದ ಎಂಬುದು ತಿಳಿದುಬಂದಿದೆ.

ಕರ್ಕಶ ಶಬ್ದ ಉಂಟು ಮಾಡುವ ಹತ್ತು ಸೈಲೆನ್ಸರ್‌ ಜಪ್ತಿ ಆರ್‌ಟಿಒ ಅಧಿಕಾರಿಗಳು, ಪಶ್ಚಿಮ ಸಂಚಾರಿ ಪೊಲೀಸರು ವಿಜಯನಗರದಲ್ಲಿನ ಆಟೋ ಮೊಬೈಲ್ ಶಾಪ್ ಮೇಲೆ ದಾಳಿ ನಡೆಸಿದ್ದಾರೆ. ಕರ್ಕಶ ಶಬ್ದ ಉಂಟು ಮಾಡುವ ಹತ್ತು ಸೈಲೆನ್ಸರ್‌ಗಳನ್ನು ಜಪ್ತಿ ಮಾಡಿದ್ದಾರೆ. ಬೈಕ್‌ಗಳಿಗೆ ಅಳವಡಿಸುತ್ತಿದ್ದ 10 ಡಿಫೆಕ್ಟಿವ್‌ ಸೈಲೆನ್ಸರ್ ಜಪ್ತಿ ಮಾಡಲಾಗಿದೆ.

ಲಂಚ ಸ್ವೀಕರಿಸುವಾಗ ಸಿಕ್ಕಿಬಿದ್ದ ಟ್ಯಾಕ್ಸ್​ ಇನ್ಸ್​ಪೆಕ್ಟರ್​​ ಸಹಾಯಕ ಬೆಂಗಳೂರಿನ ರಾಜರಾಜೇಶ್ವರಿನಗರ ವಾರ್ಡ್​ನ ಬಿಬಿಎಂಪಿ ಟ್ಯಾಕ್ಸ್​ ಇನ್ಸ್​ಪೆಕ್ಟರ್​​ ಸಹಾಯಕ ಎಸಿಬಿ ಬಲೆಗೆ ಬಿದ್ದಿದ್ದಾರೆ. ಸೈಟ್ ಖಾತೆ ಬದಲಾವಣೆಗಾಗಿ 7,000 ರೂಪಾಯಿ ಲಂಚ ಸ್ವೀಕಾರ ಮಾಡುತ್ತಿದ್ದ ವೇಳೆ ಸಂತೋಷ್ ಎಂಬವರು ಸಿಕ್ಕಿಬಿದ್ದಿದ್ದಾರೆ. ಸುಬ್ರಹ್ಮಣ್ಯ ಎಂಬವರಿಂದ ಲಂಚ ಪಡೆವಾಗ ಸಂತೋಷ್ ಬಲೆಗೆ ಬಿದ್ದಿದ್ದಾರೆ. ಎಸಿಬಿ ಡಿವೈಎಸ್​ಪಿ ಎನ್. ಪ್ರತಾಪ್​ ರೆಡ್ಡಿ ನೇತೃತ್ವದಲ್ಲಿ ಕಾರ್ಯಾಚರಣೆ ವೇಳೆ ಟ್ಯಾಕ್ಸ್​ ಇನ್ಸ್​ಪೆಕ್ಟರ್ ಬಾಬು ಸಹಾಯಕನಾಗಿರುವ ಸಂತೋಷ್ ಸಿಕ್ಕಿಬಿದ್ದಿದ್ದಾರೆ. ಟ್ಯಾಕ್ಸ್​ ಇನ್ಸ್​ಪೆಕ್ಟರ್ ಬಾಬು ಎಸಿಬಿ ದಾಳಿ ವೇಳೆ ನಾಪತ್ತೆಯಾಗಿದ್ದಾರೆ.

ಶಿವಮೊಗ್ಗ: ಜೂಜು ಅಡ್ಡೆ ಮೇಲೆ ದಾಳಿ; 3,21,270 ರೂಪಾಯಿ ವಶಕ್ಕೆ ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಗಡಿಕಟ್ಟೆ ಗ್ರಾಮದಲ್ಲಿ ಇಸ್ಪೀಟ್ ಅಡ್ಡೆ ಮೇಲೆ ಪೊಲೀಸರು ದಾಳಿ ನಡೆಸಿ, 8 ಜನರನ್ನು ಬಂಧಿಸಿದ್ದಾರೆ. ಬಂಧಿತರಿಂದ ಮೂರು ಲಕ್ಷ ಇಪ್ಪತ್ತೊಂದು ಸಾವಿರದ ಇನ್ನೂರ ಎಪ್ಪತ್ತು (3,21,270 ₹) ರೂಪಾಯಿ ವಶಕ್ಕೆ ಪಡೆಯಲಾಗಿದೆ. ಸಾಗರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: Mangaluru: ನಿಶ್ಚಿತಾರ್ಥ ಆಗಬೇಕಿದ್ದ ಯುವಕನ ಕೊಲೆ ಪ್ರಕರಣ; 6 ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಿದ ಕೋರ್ಟ್

ಪೊಲೀಸರು ಅಪರಾಧಿಗಳನ್ನು ಹೀಗೂ ಕರೆದೊಯ್ಯುತ್ತಾರಾ?

(Chain Theft Bike Theft different Crime cases many arrested in Bengaluru)

ಭಾರತದ ಲೇಸರ್ ವೆಪನ್ ಸಿಸ್ಟಂ ಪ್ರಯೋಗದ ವಿಡಿಯೋ
ಭಾರತದ ಲೇಸರ್ ವೆಪನ್ ಸಿಸ್ಟಂ ಪ್ರಯೋಗದ ವಿಡಿಯೋ
ಕುಮಾರಸ್ವಾಮಿ ಮನೆಗೆ ಲೇಟಾಗಿ ಹೋಗಿದ್ದರೆ ಅವರೇ ಅದಕ್ಕೆ ಜಬಾಬ್ದಾರರು: ಸಚಿವ
ಕುಮಾರಸ್ವಾಮಿ ಮನೆಗೆ ಲೇಟಾಗಿ ಹೋಗಿದ್ದರೆ ಅವರೇ ಅದಕ್ಕೆ ಜಬಾಬ್ದಾರರು: ಸಚಿವ
ಪಬ್ಲಿಕ್​ನಲ್ಲಿ ಮುಸ್ಲಿಂ ಮಹಿಳೆಯ ಹಿಜಾಬ್ ಕಳಚಿದ ಪುರುಷರು
ಪಬ್ಲಿಕ್​ನಲ್ಲಿ ಮುಸ್ಲಿಂ ಮಹಿಳೆಯ ಹಿಜಾಬ್ ಕಳಚಿದ ಪುರುಷರು
ಭಯಾನಕ ವಿಡಿಯೋ: ಜೀಪ್ ರ‍್ಯಾಲಿ ನಡೆಯುವ ವೇಳೆ‌ ಕಾಡಾನೆ ಡೆಡ್ಲಿ ಅಟ್ಯಾಕ್
ಭಯಾನಕ ವಿಡಿಯೋ: ಜೀಪ್ ರ‍್ಯಾಲಿ ನಡೆಯುವ ವೇಳೆ‌ ಕಾಡಾನೆ ಡೆಡ್ಲಿ ಅಟ್ಯಾಕ್
4 ವರ್ಷದ ಪ್ರೀತಿಗೆ ಸಾಕ್ಷಿಯಾದ ಅಂಬೇಡ್ಕರ್ ಜಯಂತಿ: ಪ್ರತಿಮೆ ಎದುರೇ ವಿವಾಹ
4 ವರ್ಷದ ಪ್ರೀತಿಗೆ ಸಾಕ್ಷಿಯಾದ ಅಂಬೇಡ್ಕರ್ ಜಯಂತಿ: ಪ್ರತಿಮೆ ಎದುರೇ ವಿವಾಹ
ಜಾತಿಗಣತಿ ವರದಿ ಬಗ್ಗೆ ಕೇಳಿದರೆ ಸಿಡಿಮಿಡಿಗೊಳ್ಳುವ ಸಿಎಂ ಸಿದ್ದರಾಮಯ್ಯ
ಜಾತಿಗಣತಿ ವರದಿ ಬಗ್ಗೆ ಕೇಳಿದರೆ ಸಿಡಿಮಿಡಿಗೊಳ್ಳುವ ಸಿಎಂ ಸಿದ್ದರಾಮಯ್ಯ
ತಾಯಿಯನ್ನು ಬೇಗ ಕಳೆದುಕೊಂಡ ನಮಗೆ ಅಮ್ಮನ ಕೊರತೆ ಕಾಡದಂತೆ ಬೆಳೆಸಿದರು:ಜ್ಯೋತಿ
ತಾಯಿಯನ್ನು ಬೇಗ ಕಳೆದುಕೊಂಡ ನಮಗೆ ಅಮ್ಮನ ಕೊರತೆ ಕಾಡದಂತೆ ಬೆಳೆಸಿದರು:ಜ್ಯೋತಿ
ಮೋಸದಾಟದ ಡೌಟ್... ಹಾರ್ದಿಕ್ ಪಾಂಡ್ಯ ಬ್ಯಾಟ್ ಪರಿಶೀಲಿಸಿದ ಅಂಪೈರ್
ಮೋಸದಾಟದ ಡೌಟ್... ಹಾರ್ದಿಕ್ ಪಾಂಡ್ಯ ಬ್ಯಾಟ್ ಪರಿಶೀಲಿಸಿದ ಅಂಪೈರ್
ಪ್ರತಿಭಟನೆ ಹೆಸರಲ್ಲಿ ಕುಟುಂಬವೊಂದರ ವೈಭವೀಕರಣ ನಡೆಯಬಾರದು: ಯತ್ನಾಳ್
ಪ್ರತಿಭಟನೆ ಹೆಸರಲ್ಲಿ ಕುಟುಂಬವೊಂದರ ವೈಭವೀಕರಣ ನಡೆಯಬಾರದು: ಯತ್ನಾಳ್
ಫಿಲ್ ಸಾಲ್ಟ್​ನ ಔಟ್ ಮಾಡಿದ ಬೌಲರ್​ನ ಅಭಿನಂದಿಸಿದ ವಿರಾಟ್ ಕೊಹ್ಲಿ
ಫಿಲ್ ಸಾಲ್ಟ್​ನ ಔಟ್ ಮಾಡಿದ ಬೌಲರ್​ನ ಅಭಿನಂದಿಸಿದ ವಿರಾಟ್ ಕೊಹ್ಲಿ