ಮದುವೆಗೆ ಒಪ್ಪದೆ ಅತ್ಯಾಚಾರಿ ಪರಾರಿ; ಪೊಲೀಸ್ ಠಾಣೆಯಲ್ಲೇ ಮಗುವಿಗೆ ಜನ್ಮ ಕೊಟ್ಟ 14 ವರ್ಷದ ಬಾಲಕಿ!
Crime News Today: ನಂಬಿಸಿ ಮೋಸ ಮಾಡಿದ ಯುವಕನ ವಿರುದ್ಧ ಅತ್ಯಾಚಾರದ ಕೇಸ್ ದಾಖಲಿಸಲು ಪೊಲೀಸ್ ಠಾಣೆಗೆ ಬಂದಿದ್ದ 14 ವರ್ಷದ ಬಾಲಕಿ ಮಹಿಳಾ ಪೊಲೀಸ್ ಕಾನ್ಸ್ಟೇಬಲ್ ಸಹಾಯದಿಂದ ಪೊಲೀಸ್ ಸ್ಟೇಷನ್ನಲ್ಲೇ ಮಗುವಿಗೆ ಜನ್ಮ ನೀಡಿದ್ದಾಳೆ.
ಬಣ್ಣ ಬಣ್ಣದ ಮಾತುಗಳನ್ನಾಡಿ 8ನೇ ತರಗತಿಯಲ್ಲಿ ಓದುತ್ತಿದ್ದ 14 ವರ್ಷದ ಬಾಲಕಿಯನ್ನು ಪ್ರೀತಿಸುವುದಾಗಿ ನಂಬಿಸಿದ್ದ ಯುವಕ ಆಕೆಯನ್ನು ಕರೆದುಕೊಂಡು ಊರೆಲ್ಲಾ ಸುತ್ತಾಡಿದ್ದ. ಎಳೆಯ ಆಗಷ್ಟೇ ಯೌವನಕ್ಕೆ ಕಾಲಿಟ್ಟಿದ್ದ ಆ ಬಾಲಕಿ ಆತನ ಮಾತಿಗೆ ಮರುಳಾಗಿದ್ದಳು. 9 ತಿಂಗಳ ಹಿಂದೆ ಆ ಬಾಲಕಿಯನ್ನು ನಿರ್ಜವಾದ ಪ್ರದೇಶಕ್ಕೆ ಕರೆದುಕೊಂಡು ಹೋಗಿ ಅತ್ಯಾಚಾರ ಮಾಡಿದ್ದ. ನಂತರ ಎರಡೂ ಮನೆಯವರು ಮಾತುಕತೆ ನಡೆಸಿ, ಆಕೆಯನ್ನು ಆತನಿಗೇ ಕೊಟ್ಟು ಮದುವೆ ಮಾಡುವುದಾಗಿ ಒಪ್ಪಿಸಿದ್ದರು. ಆದರೆ, ಈಗ ಆಕೆಗೆ 9 ತಿಂಗಳು ತುಂಬಿದ ನಂತರ ನಾನು ನಿನ್ನನ್ನು ಮದುವೆಯಾಗುದಿಲ್ಲ ಎಂದು ತಿರುಗಿಬಿದ್ದಿದ್ದ. ನಂಬಿಸಿ ಮೋಸ ಮಾಡಿದ ಯುವಕನ ವಿರುದ್ಧ ಅತ್ಯಾಚಾರದ ಕೇಸ್ ದಾಖಲಿಸಲು ಪೊಲೀಸ್ ಠಾಣೆಗೆ ಬಂದಿದ್ದ ಬಾಲಕಿಗೆ ಅಲ್ಲೇ ಹೆರಿಗೆ ನೋವು ಕಾಣಿಸಿಕೊಂಡಿದೆ. ಅಲ್ಲಿದ್ದ ಹಿರಿಯ ಮಹಿಳಾ ಪೊಲೀಸ್ ಕಾನ್ಸ್ಟೇಬಲ್ ಸಹಾಯದಿಂದ ಆ ಬಾಲಕಿ ಪೊಲೀಸ್ ಠಾಣೆಯಲ್ಲೇ ಮಗುವಿಗೆ ಜನ್ಮ ನೀಡಿದ್ದಾಳೆ.
ಮಧ್ಯ ಪ್ರದೇಶದ ಚಿಂದಾವರ ಬಳಿಯ ಕುಂದೀಪುರ ಪೊಲೀಸ್ ಠಾಣೆಯಲ್ಲಿ ಈ ಘಟನೆ ನಡೆದಿದೆ. ತನ್ನ ಮೇಲೆ ಅತ್ಯಾಚಾರವೆಸಗಿ, ಮದುವೆಯಾಗುವುದಾಗಿ ಭರವಸೆ ನೀಡಿ ನಂತರ ಕೈ ಕೊಟ್ಟಿದ್ದ ಯುವಕನ ವಿರುದ್ಧ ದೂರು ನೀಡಲು ಬಂದ ಬಾಲಕಿಗೆ ಪೊಲೀಸ್ ಠಾಣೆಯಲ್ಲೇ ಹೆರಿಗೆಯಾಗಿದೆ. ನಂತರ ತಾಯಿ-ಮಗುವನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
21 ವರ್ಷದ ಆಕಾಶ್ ಯುವ್ನಾತಿ ಎಂಬ ಯುವಕ 14 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ನಡೆಸಿದ್ದ. ಈ ವಿಷಯವನ್ನು ಯಾರಿಗೂ ಹೇಳಬಾರದು ಎಂದು ಆಕೆಗೆ ಹೆದರಿಸಿದ್ದ. ಕಳೆದ ವರ್ಷ 2-3 ಬಾರಿ ಆಕೆಯನ್ನು ತನ್ನ ಕಾಮತೃಷೆಗೆ ಬಳಸಿಕೊಂಡಿದ್ದ. ಬಳಿಕ ಆಕೆ ಗರ್ಭಿಣಿ ಎಂಬುದು ಗೊತ್ತಾಗಿತ್ತು. ಈ ವಿಷಯ ಗೊತ್ತಾದ ಕೂಡಲೆ ಮಾಲಕಿಯ ಮನೆಯವರು ರಂಪಾಟ ಮಾಡಿದ್ದರು. ಇದಕ್ಕೆ ಕಾರಣನಾದ ಆಕಾಶ್ ಮತ್ತು ಆತನ ಮನೆಯವರನ್ನು ಕರೆಸಿ ನಡೆದ ವಿಷಯವನ್ನು ಹೇಳಿದ್ದರು. ಮಗನ ಈ ವರ್ತನೆಗೆ ಬೇಸರಗೊಂಡಿದ್ದ ಆಕಾಶ್ನ ಮನೆಯವರು ನಿಮ್ಮ ಮಗಳನ್ನೇ ನಮ್ಮ ಮನೆಯ ಸೊಸೆಯಾಗಿ ಮಾಡಿಕೊಳ್ಳುತ್ತೇವೆ. ದಯವಿಟ್ಟು ಪೊಲೀಸರಿಗೆ ದೂರು ನೀಡಬೇಡಿ. ಆಕೆಯ ಹೊಟ್ಟೆಯಲ್ಲಿರುವ ಮಗುವನ್ನೂ ತೆಗೆಸಬೇಡಿ ಎಂದು ಹೇಳಿದ್ದರು.
ಅವರ ಮಾತನ್ನು ನಂಬಿ ಆ ಬಾಲಕಿ 9 ತಿಂಗಳು ಆ ಮಗುವನ್ನು ಗರ್ಭದಲ್ಲಿ ಹೊತ್ತಿದ್ದಳು. ಮಗು ಹುಟ್ಟುವುದರೊಳಗೆ ಮದುವೆಯಾಗಲೇಬೇಕು ಎಂದು ಆ ಬಾಲಕಿಯ ಮನೆಯವರು ಹಠ ಹಿಡಿದಿದ್ದರು. ಇದಕ್ಕೆ ಒಪ್ಪದ ಆಕಾಶ್ ನಾನು ಈಕೆಯನ್ನು ಮದುವೆಯಾಗುವುದಿಲ್ಲ ಎಂದು ಉಲ್ಟಾ ಹೊಡೆದಿದ್ದ. ಇದರಿಂದ ಆಘಾತಗೊಂಡ ಆ ಬಾಲಕಿ ಆತನ ವಿರುದ್ಧ ಪೊಲೀಸರಿಗೆ ದೂರು ನೀಡಲು ತನ್ನ ತಂದೆಯೊಡನೆ ಆಟೋದಲ್ಲಿ ಪೊಲೀಸ್ ಠಾಣೆಗೆ ಬಂದಿದ್ದಳು.
9 ತಿಂಗಳು ತುಂಬಿದ್ದ ಬಾಲಕಿ ತನ್ನ ಮೇಲೆ 9 ತಿಂಗಳ ಹಿಂದೆ ಅತ್ಯಾಚಾರ ನಡೆದಿದೆ ಎಂದು ಪೊಲೀಸರಿಗೆ ದೂರು ನೀಡಲು ಸ್ಟೇಷನ್ಗೆ ಹೋದಾಗ ಅಲ್ಲಿಯೇ ಹೆರಿಗೆ ನೋವು ಕಾಣಿಸಿಕೊಂಡಿತ್ತು. ಹಳ್ಳಿಯಲ್ಲಿರುವ ಪೊಲೀಸ್ ಠಾಣೆಯಿಂದ ಆಕೆಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲು ಯಾವುದೇ ವ್ಯವಸ್ಥೆ ಇಲ್ಲದ ಕಾರಣ ಆ ಠಾಣೆಯಲ್ಲಿದ್ದ ಮಹಿಳಾ ಕಾನ್ಸ್ಟೇಬಲ್ ಆ ಬಾಲಕಿಗೆ ಹೆರಿಗೆ ಮಾಡಿಸಿದ್ದಾರೆ. ಆ ಬಾಲಕಿಗೆ ಗಂಡು ಮಗು ಹುಟ್ಟಿದ್ದು, ಇಬ್ಬರನ್ನೂ ಆಸ್ಪತ್ರೆಗೆ ದಾಖಲಿಸಲಾಗಿದೆ.
ಆ ಬಾಲಕಿ ತನ್ನ ವಿರುದ್ಧ ಪೊಲೀಸರಿಗೆ ದೂರು ನೀಡುವ ವಿಷಯ ತಿಳಿದ ಆಕಾಶ್ ಊರಿನಿಂದ ಓಡಿಹೋಗಿದ್ದಾನೆ. ಆತನ ಮೊಬೈಲ್ ಟವರ್ ಮೂಲಕ ಆತನನ್ನು ಪತ್ತೆಹಚ್ಚಿರುವ ಪೊಲೀಸರು ಆಕಾಶ್ನನ್ನು ಬಂಧಿಸಿದ್ದಾರೆ.
ಇದನ್ನೂ ಓದಿ: Crime News: ಅಕ್ರಮ ಸಂಬಂಧ ತಂದ ಕಂಟಕ; ಹೆಂಡತಿಯ ಪ್ರಿಯಕರನ ಗುಪ್ತಾಂಗಕ್ಕೆ ಶೂಟ್ ಮಾಡಿದ ಗಂಡ!
Murder: ದಾವಣಗೆರೆ; ಅಕ್ರಮ ಸಂಬಂಧ ಮುಚ್ಚಿಡಲು ಪ್ರಿಯಕರನ ಜೊತೆ ಸೇರಿ ಹೆಂಡತಿಯಿಂದಲೇ ಗಂಡನ ಕೊಲೆ
(Crime News 14 Year Old Rape Victim pregnant give birth to child at police station in Madhya Pradesh)