AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Crime News: ಅಕ್ರಮ ಸಂಬಂಧ ತಂದ ಕಂಟಕ; ಹೆಂಡತಿಯ ಪ್ರಿಯಕರನ ಗುಪ್ತಾಂಗಕ್ಕೆ ಶೂಟ್ ಮಾಡಿದ ಗಂಡ!

ಕೇರಳದ ಚೆಂಗನೂರ್ ಜಿಲ್ಲೆಯ ಮುಂಡಂಕಾವು ಬಳಿ ಈ ಘಟನೆ ನಡೆದಿದ್ದು, ತನ್ನ ಹೆಂಡತಿ ಬೇರೊಬ್ಬನೊಂದಿಗೆ ಸರಸ ಸಲ್ಲಾಪ ಆಡುತ್ತಿರುವ ವಿಷಯ ತಿಳಿದು ಕೋಪಗೊಂಡ ಗಂಡ ಆತನ ಮರ್ಮಾಂಗಕ್ಕೆ ಶೂಟ್ ಮಾಡಿದ್ದಾನೆ.

Crime News: ಅಕ್ರಮ ಸಂಬಂಧ ತಂದ ಕಂಟಕ; ಹೆಂಡತಿಯ ಪ್ರಿಯಕರನ ಗುಪ್ತಾಂಗಕ್ಕೆ ಶೂಟ್ ಮಾಡಿದ ಗಂಡ!
ಸಾಂದರ್ಭಿಕ ಚಿತ್ರ
TV9 Web
| Edited By: |

Updated on: Jul 27, 2021 | 7:34 PM

Share

ನವದೆಹಲಿ: ಅನೈತಿಕ ಸಂಬಂಧದಿಂದಾಗಿ ಅದೆಷ್ಟೋ ಕುಟುಂಬಗಳು ಬೀದಿಗೆ ಬಂದಿರುವ ಉದಾಹರಣೆಗಳು ಸಾಕಷ್ಟಿವೆ. ಗಂಡನ ಅಕ್ರಮ ಸಂಬಂಧದಿಂದ (Extra Marital Affair) ಬೇಸತ್ತು ಆತ್ಮಹತ್ಯೆ ಮಾಡಿಕೊಂಡ ಹೆಂಡತಿಯರಿದ್ದಾರೆ, ಗಂಡನನ್ನೇ ಕೊಲೆ ಮಾಡಿದವರೂ ಇದ್ದಾರೆ. ಹಾಗೇ, ಹೆಂಡತಿಯ ಅಕ್ರಮ ಸಂಬಂಧಕ್ಕೆ (Illegal Relationship) ರೋಸಿಹೋಗಿ ಕೊಲೆಗಾರರಾದ ಗಂಡಂದಿರೂ ಇದ್ದಾರೆ. ಆದರೆ, ಇದು ಸ್ವಲ್ಪ ಬೇರೆ ರೀತಿಯ ಕತೆ. ತನ್ನ ಹೆಂಡತಿಗೆ ಬೇರೊಬ್ಬ ಪುರುಷನ ಜೊತೆ ಅಕ್ರಮ ಸಂಬಂಧವಿದೆ ಎಂದು ಗೊತ್ತಾದ ಕೂಡಲೇ ಕೆಂಡಾಮಂಡಲನಾದ ಗಂಡ ತನ್ನ ಹೆಂಡತಿಯ ಪ್ರೇಮಿಯ ಗುಪ್ತಾಂಗಕ್ಕೆ (Genitals) ಶೂಟ್ ಮಾಡಿದ್ದಾನೆ!

ಕೇರಳ ರಾಜ್ಯದ ಚೆಂಗನೂರ್ ಜಿಲ್ಲೆಯ ಮುಂಡಂಕಾವು ಬಳಿ ಈ ಘಟನೆ ನಡೆದಿದ್ದು, ತನ್ನ ಹೆಂಡತಿ ಬೇರೊಬ್ಬನೊಂದಿಗೆ ಸರಸ ಸಲ್ಲಾಪ ಆಡುತ್ತಿರುವ ವಿಷಯ ತಿಳಿದು ಗಂಡ ಕೋಪಗೊಂಡಿದ್ದಾನೆ. ಕೊಟ್ಟಾಯಂನಲ್ಲಿ ವಾಸವಾಗಿದ್ದ 45 ವರ್ಷದ ವ್ಯಕ್ತಿಯ ಹೆಂಡತಿ ಮುಂಡಂಕಾವು ಎಂಬ ಊರಿನಲ್ಲಿದ್ದಳು. ಉದ್ಯೋಗದ ನಿಮಿತ್ತ ಗಂಡ ಬೇರೆ ಊರಿನಲ್ಲಿ ಇದ್ದುದರಿಂದ ತನ್ನೂರಿನಲ್ಲೇ ವಾಸವಾಗಿದ್ದ 45 ವರ್ಷದ ವ್ಯಕ್ತಿಯ ಜೊತೆ ಆಕೆ ಅಕ್ರಮ ಸಂಬಂಧ ಹೊಂದಿದ್ದಳು. ಹೆಂಡತಿಯ ಮೇಲೆ ಭಾರೀ ನಂಬಿಕೆ ಇಟ್ಟುಕೊಂಡಿದ್ದ ಗಂಡನಿಗೆ ಈ ಯಾವ ವಿಷಯವೂ ಗೊತ್ತಿರಲಿಲ್ಲ.

ಕ್ರಮೇಣ ಆ ಮಹಿಳೆಯ ಮನೆಗೆ ಬೇರೊಬ್ಬ ವ್ಯಕ್ತಿ ಬಂದು ರಾತ್ರಿಯೆಲ್ಲ ಉಳಿದುಕೊಳ್ಳುವ ವಿಷಯ ಇಡೀ ಊರಿಗೆ ತಿಳಿದಿತ್ತು. ಇಡೀ ಊರಿಗೆ ಗೊತ್ತಾದ ವಿಷಯ ಆಕೆಯ ಗಂಡನ ಕಿವಿಗೆ ತಲುಪಲು ಹೆಚ್ಚು ಸಮಯ ಬೇಕಾಗಲಿಲ್ಲ. ಇದು ಗೊತ್ತಾದ ಕೂಡಲೇ ಊರಿಗೆ ಬಂದು ಹೆಂಡತಿಯ ಮೇಲೆ ಕೂಗಾಡಿದ ಆತ ಆಕೆಗೆ ಡೈವೋರ್ಸ್​ ಕೊಡುವುದಾಗಿ ಹೆದರಿಸಿದ್ದ. ಆದರೆ, ಅದನ್ನೇ ಕಾಯುತ್ತಿದ್ದ ಆಕೆ ವಿಚ್ಛೇದನ ನೀಡಲು ರೆಡಿಯಾಗಿದ್ದಳು. ಆದರೆ, ತನಗೆ ಹೆಂಡತಿ ಮಾಡಿದ ಮೋಸದಿಂದ ಕೋಪಗೊಂಡಿದ್ದ ಆತ ಹೆಂಡತಿಯ ಮೇಲೆ ಹಲ್ಲೆ ನಡೆಸಲು ಏರ್ ಪಿಸ್ತೂಲ್ ತೆಗೆದುಕೊಂಡು ಮನೆಗೆ ಹೋಗಿದ್ದ.

ಆ ವೇಳೆ ಮನೆಯಲ್ಲಿ ತನ್ನ ಪ್ರೇಮಿಯೊಂದಿಗೆ ಇದ್ದ ಹೆಂಡತಿಯನ್ನು ಕಂಡು ಕೋಪಗೊಂಡ ಗಂಡ ಆಕೆಯ ಪ್ರಿಯಕರನ ಮರ್ಮಾಂಗಕ್ಕೆ ಶೂಟ್ ಮಾಡಿದ್ದಾನೆ. ಇದರಿಂದ ಆತನ ಗುಪ್ತಾಂಗಕ್ಕೆ ತೀವ್ರ ಗಾಯಗಳಾಗಿದ್ದು, ತಕ್ಷಣ ಆಸ್ಪತ್ರೆಗೆ ಸೇರಿಸಲಾಗಿದೆ. ವೈದ್ಯರು ಈ ವಿಷಯವನ್ನು ಪೊಲೀಸರಿಗೆ ತಿಳಿಸಿದ್ದರಿಂದ ವಿಚಾರಣೆ ನಡೆಸಿದಾಗ ಅಕ್ರಮ ಸಂಬಂಧದ ವಿಷಯ ಬಯಲಾಗಿದೆ. ಆದರೆ, ಇಬ್ಬರ ಕಡೆಯವರೂ ಪೊಲೀಸ್ ಠಾಣೆಯಲ್ಲಿ ಇನ್ನೂ ಯಾವುದೇ ದೂರು ದಾಖಲಿಸಿಲ್ಲ.

ಇದನ್ನೂ ಓದಿ: Crime News: 26 ವರ್ಷದ ಹಿಂದಿನ ಕೊಲೆ ಆರೋಪ ಸಾಬೀತು; ಬಿಜೆಪಿ ನಾಯಕನಿಗೆ ಜೀವಾವಧಿ ಶಿಕ್ಷೆ

Crime News: ಬಾಯ್​ಫ್ರೆಂಡ್ ಜೊತೆ ಸೇರಿ ಗಂಡನನ್ನೇ ಕೊಂದು, ಸುಟ್ಟುಹಾಕಿದ ಹೆಂಡತಿ; 10 ವರ್ಷಗಳ ಬಳಿಕ ಸೆರೆ ಸಿಕ್ಕ ಹಂತಕಿ

(Crime News: Kerala Man Injures Wife’s Lover by Shooting at his Private Parts Over Sexual Affair)

ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್