ಪ್ರೈವೇಟ್ ಡಿಟೆಕ್ಟೀವ್ ಸೋಗಿನಲ್ಲಿ ದ್ವಿಚಕ್ರ ವಾಹನಗಳ ಕಳವು: ನೆಲಮಂಗಲ ಪೊಲೀಸರ ಕಾರ್ಯಚರಣೆ ವೇಳೆ ರಹಸ್ಯ ಬಯಲು, ಆರೋಪಿಗಳ ಬಂಧನ

TV9 Digital Desk

| Edited By: ಸಾಧು ಶ್ರೀನಾಥ್​

Updated on:Jul 31, 2021 | 10:08 AM

ರವಿಕುಮಾರ್ ದರೋಡೆ ಪ್ರಕರಣದಲ್ಲಿ ಸ್ನೇಹಿತ ಜಗದೀಶ್ ಮುನಿರಾಜು, ಸೇರಿದಂತೆ ಮೋಹನ್‌ ಕುಮಾರ್ ಪರಿಚಯವಾಗಿದ್ದು, ರಾತ್ರಿಯ ವೇಳೆ ಬೈಕ್ ಕಳವು ಮಾಡಿರುವುದಾಗಿ ತಿಳಿದುಬಂದಿದೆ ಎಂದು ಪೊಲೀಸ್ ಮಹಾನಿರ್ದೇಶಕ ಎಂ.ಚಂದ್ರಶೇಖರ್ ಹೇಳಿದ್ದಾರೆ.

ಪ್ರೈವೇಟ್ ಡಿಟೆಕ್ಟೀವ್ ಸೋಗಿನಲ್ಲಿ ದ್ವಿಚಕ್ರ ವಾಹನಗಳ ಕಳವು: ನೆಲಮಂಗಲ ಪೊಲೀಸರ ಕಾರ್ಯಚರಣೆ ವೇಳೆ ರಹಸ್ಯ ಬಯಲು, ಆರೋಪಿಗಳ ಬಂಧನ
ಬೈಕ್​ಗಳನ್ನು ಪರಿಶೀಲನೆ ಮಾಡುತ್ತಿರುವ ಪೊಲೀಸರು
Follow us


ಬೆಂಗಳೂರು: ಪ್ರೈವೇಟ್ ಡಿಟೆಕ್ವಿವ್ ಸೋಗಿನಲ್ಲಿ ದ್ವಿಚಕ್ರ ವಾಹನ ಕಳವು ಮಾಡಿದ್ದ ಕುಖ್ಯಾತ 5 ಮಂದಿ ಆರೋಪಿಗಳನ್ನು ಮಾದನಾಯಕನಹಳ್ಳಿ ಪೊಲೀಸರು ಬಂಧಿಸಿದ್ದಾರೆ. ಬಂಧಿತರಿಂದ 40 ಲಕ್ಷ ಮೌಲ್ಯದ 46 ವಿವಿಧ ಬಗ್ಗೆಯ ದ್ವಿಚಕ್ರ ವಾಹನ ಮತ್ತು ಇನ್ನಿತರ ಆಯುಧಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಕೇಂದ್ರವಲಯ ಪೊಲೀಸ್ ಮಹಾನಿರ್ದೇಶಕ ಎಂ.ಚಂದ್ರಶೇಖರ್ ತಿಳಿಸಿದ್ದಾರೆ.

ಬೆಂಗಳೂರು ಉತ್ತರ ತಾಲೂಕು ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಿಂದ ಆಯೋಜಿಸಿದ್ದ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಪೊಲೀಸ್ ಮಹಾನಿರ್ದೇಶಕ ಎಂ.ಚಂದ್ರಶೇಖರ್, ಬೆಂಗಳೂರು ದಕ್ಷಿಣ ತಾಲೂಕು ಯಶವಂತಪುರ ಹೋಬಳಿ ಹೊನಗನಹಳ್ಳಿ ಗ್ರಾಮದ ನಿವಾಸಿ ರವಿಕುಮಾರ್(21), ಕೆಂಪೌಡನಗರ ನಿವಾಸಿ ಮುನಿರಾಜು(20), ಮಂಡ್ಯ ಜಿಲ್ಲೆ ನಾಗಮಂಗಲ ತಾಲೂಕು ಭೀಮನಹಳ್ಳಿ ಗ್ರಾಮದ ನಿವಾಸಿ ಜಗದೀಶ್(21), ತುಮಕೂರು ಜಿಲ್ಲೆ ಕುಣಿಗಳ್ ತಾಲೂಕು ಬೆಟ್ಟಹಳ್ಳಿ ಗ್ರಾಮದ ನಿವಾಸಿ ಮೋಹನ್‌ಕುಮಾರ್(22), ಹೊಸಹಳ್ಳಿ ಗ್ರಾಮದ ನಿವಾಸಿ ಶಿವಶಂಕರ್(25) ಸೇರಿ ದ್ವಿಚಕ್ರ ವಾಹನ ಕಳ್ಳತನ ಪ್ರಕರಣದಲ್ಲಿ ಒಟ್ಟು 5 ಮಂದಿಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ತಿಳಿಸಿದ್ದಾರೆ.

ಪ್ರೈವೆಟ್ ದಿಟೃಕ್ಟೀವ್ ವಶಕ್ಕೆ
ಶಿವಶಂಕರ್ ಬೆಂಗಳೂರಿನ ಡಿಕೆನ್‌ಸನ್ ರಸ್ತೆಯಲ್ಲಿನ ವೀನಸ್ ಡಿಟೆಕ್ವಿವ್ ಸರ್ವೀಸ್ ಏಜೆನ್ಸಿಯಲ್ಲಿ ಕೆಲಸ ಮಾಡುತ್ತಿದ್ದು, ಶಿವಶಂಕರ್ ಸಹದ್ಯೋಗಿ ಲಿಖಿತ್‌ನ ಮೂಲಕ ರವಿಕುಮಾರ್ ಎಂಬಾತ ಪರಿಚಯವಾಗಿದ್ದಾನೆ. ಶಿವಶಂಕರ್ ಡಿಟೆಕ್ವಿವ್ ಕೆಲಸ ಮಾಡಲು ನಂಬರ್ ಪ್ಲೇಟ್‌ಗಳಿಲ್ಲದ ವಿವಿಧ ಬಗ್ಗೆಯ ದ್ವಿಚಕ್ರ ವಾಹನ ಬೇಕಿರುವುದಾಗಿ ತಿಳಿಸಿರುತ್ತಾನೆ. ಶಿವಶಂಕರ್‌ಗೆ ಬೇಕಾದ ಬೈಕ್‌ಗಳನ್ನು ಪೊಟೋ ತಗೆದು ಲೊಕೇಷನ್ ಸಮೇತ ರವಿಕುಮಾರ್‌ಗೆ ಕಳಿಸಿದ್ದಾನೆ. ನಂತರ ರವಿಕುಮಾರ್ ದರೋಡೆ ಪ್ರಕರಣದಲ್ಲಿ ಸ್ನೇಹಿತ ಜಗದೀಶ್ ಮುನಿರಾಜು, ಸೇರಿದಂತೆ ಮೋಹನ್‌ ಕುಮಾರ್ ಪರಿಚಯವಾಗಿದ್ದು, ರಾತ್ರಿಯ ವೇಳೆ ಬೈಕ್ ಕಳವು ಮಾಡಿರುವುದಾಗಿ ತಿಳಿದುಬಂದಿದೆ ಎಂದು ಪೊಲೀಸ್ ಮಹಾನಿರ್ದೇಶಕ ಎಂ.ಚಂದ್ರಶೇಖರ್ ಹೇಳಿದ್ದಾರೆ.

ಆಂಬುಲೆನ್ಸ್ ಖರೀದಿ ಹಾಗೂ ಐಷರಾಮಿ ಜೀವನಕ್ಕಾಗಿ ಕಳವು
ಆರೋಪಿ ರವಿಕುಮಾರ್ ಹಾಗೂ ಜಗದೀಶ್ 2020 ರಲ್ಲಿ ದರೋಡೆ ಪ್ರಕರಣದಲ್ಲಿ ಜೈಲ್ಲು ಶಿಕ್ಷೆಯನ್ನು ಅನುಭವಿಸಿದರು. ನಂತರ ಜೈಲಿನಿಂದ ಹೊರಬಂದು ತರಕಾರಿ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ರವಿಕುಮಾರ್ ಸಾಕಷ್ಟು ದಿನದಿಂದ ಆಂಬುಲೆನ್ಸ್ ವಾಹನ ಖರೀದಿ ಮಾಡುವ ಉದ್ದೇಶದಿಂದ ಸ್ನೇಹಿತರನ್ನು ಒಗ್ಗೂಡಿಸಿಕೊಂಡು ದ್ವಿಚಕ್ರ ವಾಹನ ಕಳವು ಮಾಡಲು ಕೈಹಾಕಿದ. ಕದ್ದ ವಾಹನಗಳನ್ನು ಶಿವಕುಮಾರ್ ಮತ್ತು ಗ್ಯಾರೇಜ್ ಮಾಲೀಕ ಮೋಹನ್ಗೆ ನೀಡುತ್ತಿದರು. ಅವರು ನೀಡಿದ್ದ ಹಣದಿಂದ ಮೋಜು ಮಸ್ತಿ ಮಾಡುವ ಅಭ್ಯಾಸ ಹೊಂದಿದ್ದು ತಮ್ಮ ದುಶ್ಚಟಗಳಿಗಾಗಿ ಕಳ್ಳತನ ಮಾರ್ಗವನ್ನು ಅನುಸರಿಸಿದ್ದು, ವಿಚಾರಣೆ ವೇಳೆ ಬೆಳಕಿಗೆ ಬಂದಿದೆ ಎಂದು ಪೊಲೀಸ್ ಮಹಾನಿರ್ದೇಶಕ ಎಂ.ಚಂದ್ರಶೇಖರ್ ತಿಳಿಸಿದ್ದಾರೆ.

ಆರ್ಡರ್ ತೆಗೆದುಕೊಂಡು ಕಳ್ಳತನ
ರಾಜ್ಯದ ಮೂಲೆ ಮೂಲೆಗಳಲ್ಲಿ ಗ್ರಾಹಕರನ್ನು ಆಕರ್ಷಿಸುತ್ತಿದ್ದ ಆರೋಪಿ ಮೋಹನ್, ನಮ್ಮ ಬಳಿ ಲಾಕ್‌ಡೌನ್ ವೇಳೆ ಫೈನಾನ್ಸ್ನಲ್ಲಿ ಸೀಜ್ ಆದ ಸಾಕಷ್ಟು ಐಶಾರಾಮಿ ಬೈಕ್‌ಗಳಿವೆ ನಿಮಗೆ ಬೇಕಾದರೆ ನಾವು ಬೈಕ್ ಕೊಡಿಸುವೆವು ಡಾಕ್ಯುಮೆಂಟ್ಸ್ ಕೆಲ ದಿನಗಳ‌ ನಂತರ ಕೊಡುತ್ತೇವೆ ಎಂದು ನಂಬಿಸಿ ಐಷಾರಾಮಿ ಬೈಕ್‌ಗಳಿಗೆ ಆರ್ಡರ್ ತೆಗೆದುಕೊಳ್ಳುತ್ತಿದ್ದರು. ಆರ್ಡರ್ ತೆಗೆದುಕೊಂಡ ಮೋಹನ್ ಕುಮಾರ್, ರವಿಕುಮಾರ್‌ಗೆ ಬೈಕ್‌ ಕದ್ದು ಕೊಡಲು ಹೇಳುತ್ತಾರೆ. ಆರ್ಡರ್ ತೆಗೆದುಕೊಂಡ ಆರೋಪಿಗಳ ಐಶಾರಾಮಿ ಬೈಕ್‌ಗಳನ್ನು ಕದ್ದು ಮೋಹನ್‌ ಕುಮಾರ್ ಮೂಲಕ ಮಾರಾಟ ಮಾಡಿಸುತ್ತಾರೆ ಎಂದು ಗೊತ್ತಾಗಿದೆ ಎಂದು ಪೊಲೀಸ್ ಮಹಾನಿರ್ದೇಶಕ ಎಂ.ಚಂದ್ರಶೇಖರ್ ಹೇಳಿದ್ದಾರೆ.

ಸುಳಿವು ನೀಡಿದ ಸಿಸಿಟಿವಿ ಮತ್ತು ಮೊಬೈಲ್
ದ್ವಿಚಕ್ರ ಕಳ್ಳತನ ನಡೆದ ಸುತ್ತಮುತ್ತಲ ಮನೆ, ಕಾರ್ಖಾನೆ ಸೇರಿದಂತೆ ವಿವಿಧ ಅಂಗಡಿಗಳ ಸುಮಾರು 50 ಕ್ಕೂ ಹೆಚ್ಚು ಸಿಸಿಟಿವಿ ಕ್ಯಾಮರಗಳಿಂದ ದೃಶ್ಯವನ್ನು ಸಂಗ್ರಹಿಸಿದ್ದ ಪೊಲೀಸ್ ಅಧಿಕಾರಿಗಳ ತಂಡ ಮೊಬೈಲ್ ನೆಟ್‌ವರ್ಕ್ ಅನ್ನು ಅಧಾರವಾಗಿ ಇಟ್ಟುಕೊಂಡು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಬ್ಯಾಂಕ್, ಸರ್ಕಾರಿ ಕಚೇರಿ ಟಾರ್ಗೆಟ್
ಆರೋಪಿಗಳನ್ನು ಹಿಡಿದು ವಿಚಾರಣೆ ನಡೆಸಿದ ವೇಳೆ ಬ್ಯಾಂಕ್, ಅಂಗಡಿ, ಸರ್ಕಾರಿ ಕಚೇರಿ ಸೇರಿದಂತೆ ಮನೆಯ ಮುಂದೆ ನಿಲ್ಲಿದ್ದ ವಾಹನಗಳನ್ನು ಗುರಿಯಾಗಿಸಿಕೊಂಡು ಕಳೆದ 2 ವರ್ಷಗಳಿಂದಲೂ ದ್ವಿಚಕ್ರ ವಾಹನ ಕಳ್ಳತನ ಮಾಡುತ್ತಿದ್ದರು ಎಂಬುದು ಬೆಳಕಿಗೆ ಬಂದಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ 10 ವಾಹನ ಕಳವು, ರಾಮನಗರ ಜಿಲ್ಲೆಯಲ್ಲಿ 5 ಸೇರಿದಂತೆ ಬೆಂಗಳೂರು ನಗರದಲ್ಲಿ 2 ದ್ವಿಚಕ್ರ ವಾಹನಗಳ ಕಳವು ಪ್ರಕರಣಗಳು ಪತ್ತೆಯಾಗಿದೆ.

ಆರೋಪಿಗಳ ಪತ್ತೆಗೆ ವಿಶೇಷ ತಂಡ
ಜಿಲ್ಲಾ ಪೊಲೀಸ್ ವರಿಷ್ಠಾಧೀಕಾರಿ ಡಾ.ಕೆ.ಕೋನವಂಶಿಕೃಷ್ಣ, ಅಪರ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಿಗಣೇಶ್ ಹಾಗೂ ಡಿವೈಎಸ್‌ಪಿ ಜಗದೀಶ್ ಮಾರ್ಗದರ್ಶನದಲ್ಲಿ ಇನ್ಸ್​ಪೆಕ್ಟರ್​ ಬಿ.ಎಸ್.ಮಂಜುನಾಥ್ ನೇತೃತ್ವದಲ್ಲಿ ಎಸ್‌ಐ ದಾಳೇಗೌಡ ಮುಖ್ಯ ಪೇದೆ ನಾರಾಯಣಸ್ವಾಮಿ, ಮಲ್ಲಗೊಂಡಿ, ಪರ್ವೀಜ್ ಪಾಷ, ಗಂಗಾಧರ್, ಇಮ್ರಾನ್‌ಖಾನ್, ಸಿಬ್ಬಂದಿ ಲಕ್ಷ್ಮಣ್, ರವಿಕುಮಾರ್ ಒಳಗೊಂಡಂತೆ ವಿಶೇಷ ತಂಡ ರಚಿಸಿಕೊಂಡು ಅರೋಪಿಗಳನ್ನು ಪತ್ತೆ ಹಚ್ಚಿದ್ದಾರೆ. ಪೊಲೀಸ್ ಇಲಾಖೆ ಕೇಂದ್ರ ವಲಯ ಐಜಿಪಿ ಎಂ.ಚಂದ್ರಶೇಖರ್ ಅವರು ಪೊಲೀಸ್​ ಸಿಬ್ಬಂದಿಗೆ ತಲಾ 50 ಸಾವಿರ ರೂ. ನಗದು ಬಹುಮಾನ ನೀಡಿ ಶ್ಲಾಘಿಸಿದ್ದಾರೆ.

police

ಕೇಂದ್ರ ವಲಯ ಐಜಿಪಿ ಚಂದ್ರಶೇಖರ್ ಅವರು ಪೊಲೀಸ್​ ಸಿಬ್ಬಂದಿಗೆ ತಲಾ 50 ಸಾವಿರ ರೂ. ನಗದು ಬಹುಮಾನ ನೀಡಿ ಶ್ಲಾಘಿಸಿದರು

 

ಇದನ್ನೂ ಓದಿ:
Bengaluru Crime: ಸರಗಳ್ಳತನ, ಬೈಕ್ ಕಳ್ಳತನ, ಡ್ರಗ್ಸ್ ದಂಧೆ; ವಿವಿಧ ಪ್ರಕರಣಗಳಲ್ಲಿ ಆರೋಪಿಗಳ ಬಂಧನ

ಚಿಕ್ಕಮಗಳೂರು: ಕೊಪ್ಪದಲ್ಲಿ ಮಿತಿಮೀರಿದ ದನಗಳ್ಳರ ಹಾವಳಿ; ಸಿಸಿಟಿವಿಯಲ್ಲಿ ಸೆರೆಯಾಯ್ತು ಕಳ್ಳರ ಆಟಾಟೋಪ

ತಾಜಾ ಸುದ್ದಿ

Related Stories

Click on your DTH Provider to Add TV9 Kannada