ಚಿಕ್ಕಮಗಳೂರು: ಕೊಪ್ಪದಲ್ಲಿ ಮಿತಿಮೀರಿದ ದನಗಳ್ಳರ ಹಾವಳಿ; ಸಿಸಿಟಿವಿಯಲ್ಲಿ ಸೆರೆಯಾಯ್ತು ಕಳ್ಳರ ಆಟಾಟೋಪ

ಕೊಪ್ಪ ಪಟ್ಟಣದ ಹುಲ್ಮಕ್ಕಿ ಸ್ವದೇಶಿ ಭಂಡಾರ ಅಂಗಡಿ ಮುಂಭಾಗದಿಂದ ದನ ಕಳ್ಳತನ ಆಗಿದ್ದು, ಕೊಪ್ಪ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಮಲಗಿದ್ದ ದನಗಳನ್ನು ಕಾರಿಗೆ ತುಂಬಿಸಿಕೊಂಡು ಕಳ್ಳರು ಪರಾರಿಯಾಗಿದ್ದಾರೆ. ಸ್ವದೇಶಿ ಭಂಡಾರದ ಎದುರು ಎರಡು ದನಗಳು ಮಲಗಿದ್ದು, ಅವುಗಳಿಗೆ ಹೊಂಚು ಹಾಕಿದ ಕಳ್ಳರು ತಿನ್ನಲು ಆಹಾರ ನೀಡಿ ಕದ್ದೊಯ್ದಿದ್ದಾರೆ.

ಚಿಕ್ಕಮಗಳೂರು: ಕೊಪ್ಪದಲ್ಲಿ ಮಿತಿಮೀರಿದ ದನಗಳ್ಳರ ಹಾವಳಿ; ಸಿಸಿಟಿವಿಯಲ್ಲಿ ಸೆರೆಯಾಯ್ತು ಕಳ್ಳರ ಆಟಾಟೋಪ
ದನಗಳ್ಳರ ಕೈಚಳಕ
Follow us
TV9 Web
| Updated By: Skanda

Updated on: Jul 31, 2021 | 7:04 AM

ಚಿಕ್ಕಮಗಳೂರು: ಅಂಗಡಿ ಮುಂಭಾಗದಲ್ಲಿ ಮಲಗಿದ್ದ ದನಗಳನ್ನು ಕದ್ದ ಕಳ್ಳರು ಅವುಗಳನ್ನು ಕಾರಿಗೆ ತುಂಬಿಸಿಕೊಂಡು ಹೋದ ಘಟನೆ ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ಪಟ್ಟಣ ವ್ಯಾಪ್ತಿಯಲ್ಲಿ ನಡೆದಿದೆ. ಜಿಲ್ಲೆಯಲ್ಲಿ ಇತ್ತೀಚೆಗೆ ದನಗಳ್ಳರ ಹಾವಳಿ ಹೆಚ್ಚಾಗುತ್ತಿದ್ದು, ರಸ್ತೆ ಪಕ್ಕದಲ್ಲಿ ಮಲಗಿದ ದನಗಳನ್ನು, ಮನೆಯ ಸಮೀಪ ಕಟ್ಟಿದ ದನಗಳನ್ನೂ ಬಿಡದೇ ಕದ್ದೊಯ್ಯುತ್ತಿದ್ದಾರೆ. ಇದರಿಂದಾಗಿ ಗೋ ಸಾಕಾಣಿಕೆದಾರರಿಗೆ ಜಾನುವಾರುಗಳನ್ನು ಕಾಪಾಡಿಕೊಳ್ಳುವುದೇ ದೊಡ್ಡ ಸವಾಲಾಗಿದ್ದು, ಕೊಪ್ಪ ಪಟ್ಟಣದಲ್ಲೇ ಮರುಕಳಿಸಿರುವ ಈ ಘಟನೆ ಮತ್ತೆ ಆಕ್ರೋಶಕ್ಕೆ ಕಾರಣವಾಗಿದೆ.

ಕೊಪ್ಪ ಪಟ್ಟಣದ ಹುಲ್ಮಕ್ಕಿ ಸ್ವದೇಶಿ ಭಂಡಾರ ಅಂಗಡಿ ಮುಂಭಾಗದಿಂದ ದನ ಕಳ್ಳತನ ಆಗಿದ್ದು, ಕೊಪ್ಪ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಮಲಗಿದ್ದ ದನಗಳನ್ನು ಕಾರಿಗೆ ತುಂಬಿಸಿಕೊಂಡು ಕಳ್ಳರು ಪರಾರಿಯಾಗಿದ್ದಾರೆ. ಸ್ವದೇಶಿ ಭಂಡಾರದ ಎದುರು ಎರಡು ದನಗಳು ಮಲಗಿದ್ದು, ಅವುಗಳಿಗೆ ಹೊಂಚು ಹಾಕಿದ ಕಳ್ಳರು ತಿನ್ನಲು ಆಹಾರ ನೀಡಿ ಕದ್ದೊಯ್ದಿದ್ದಾರೆ. ಕಾರಿನಿಂದ ಇಳಿದು ಬಂದ ಒಬ್ಬಾತ ಮೊದಲು ದನಗಳಿಗೆ ತಿನ್ನಲ್ಲು ಕೊಟ್ಟು, ಅದನ್ನು ಬಿಗಿದು ಹಿಡಿದುಕೊಂಡರೆ, ಇನ್ನೊಬ್ಬಾತ ಹಗ್ಗ ಹಿಡಿದು ಓಡಿ ಬಂದಿದ್ದಾನೆ. ನಳಿಕ ಇಬ್ಬರೂ ಸೇರಿ ಅದನ್ನು ಬಂಧಿಸುವಷ್ಟರಲ್ಲಿ ಕಾರಿನಲ್ಲಿದ್ದಾತ ಕಾರನ್ನು ಹತ್ತಿರಕ್ಕೆ ಚಲಾಯಿಸಿಕೊಂಡು ಬಂದಿದ್ದಾನೆ.

ಈ ಘಟನೆಯ ಸಂಪೂರ್ಣ ದೃಶ್ಯಾವಳಿಗಳು ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ದನಗಳ್ಳರು ಎಲ್ಲೆಡೆ ಉಪಯೋಗಿಸುವ ತಂತ್ರವನ್ನೇ ಇವರೂ ಅನುಸರಿಸಿದ್ದಾರೆ. ಬಿಳಿ ಬಣ್ಣದ ಸ್ವಿಫ್ಟ್​ ಕಾರಿನಲ್ಲಿ ಬಂದ ಖದೀಮರು ದನಗಳನ್ನು ಕದ್ದೊಯ್ದಿದ್ದು, ಇಕ್ಕಟ್ಟಾದ ಕಾರಿಗೆ ಅವುಗಳನ್ನು ಹಿಂಸಿಸಿ ತುಂಬುವುದು ಕರುಳು ಹಿಂಡುವಂತಿದೆ.

ಮಲೆನಾಡು ಭಾಗದಲ್ಲಿ ಇತ್ತೀಚಿನ ವರ್ಷಗಳಲ್ಲಿ ಕಾರಿನಲ್ಲಿ ಬಂದು ದನ ಕದಿಯುವ ಪ್ರಕರಣಗಳು ಸಾಮಾನ್ಯ ಎಂಬಂತಾಗಿದ್ದು, ಪದೇಪದೇ ಇಂತಹ ಘಟನೆಗಳು ಮರುಕಳಿಸುತ್ತಲೇ ಇವೆ. ಕಳೆದ ಬಾರಿ ಹೀಗೆಯೇ ಕಾರಿಗೆ ದನ ತುಂಬಿಕೊಂಡು ಹೋಗುತ್ತಿದ್ದ ವೇಳೆ ಕಾರು ಪಲಟ್ಇ ಹೊಡೆದ ಘಟನೆ ದಕ್ಷಿಣ ಕನ್ನಡದಲ್ಲಿ ವರದಿಯಾಗಿತ್ತು.

ಮಿತಿಮೀರುತ್ತಿರುವ ದನಗಳ್ಳರ ಹಾವಳಿಗೆ ಕಡಿವಾಣ ಹಾಕಲೇಬೇಕೆಂದು ಗೋ ಪ್ರಿಯರು ಎಷ್ಟೇ ಒತ್ತಾಯಿಸಿದರೂ ಅದು ಸಾಧ್ಯವಾಗುತ್ತಿಲ್ಲ. ರಾತ್ರಿ ವೇಳೆ ಜನ ಸಂಚಾರ ಇಲ್ಲದ ಪ್ರದೇಶಗಳಲ್ಲಿ ಮಲಗಿದ ಜಾನುವಾರುಗಳಿಗೇ ಹೊಂಚು ಹಾಕುವ ಕಳ್ಳರು ಅವುಗಳನ್ನು ಚಾಣಾಕ್ಷತನದಿಂದ ಕದ್ದೊಯ್ಯುತ್ತಿದ್ದು, ಅವರನ್ನು ನಿಯಂತ್ರಿಸುವುದೇ ದೊಡ್ಡ ಸವಾಲಾಗಿದೆ.

ಇದನ್ನೂ ಓದಿ: ಶಿರಸಿ: ಐಷಾರಾಮಿ ವಾಹನಗಳಲ್ಲಿ ದನಗಳನ್ನು ಕಳುವು ಮಾಡುತ್ತಿದ್ದ ಅಂತರ್​ಜಿಲ್ಲಾ ಕಳ್ಳರ ಬಂಧನ 

ಹಸುಗಳ ಕಳ್ಳ ಸಾಗಾಣಿಕೆ ಶಂಕೆ: ರಾಜಸ್ಥಾನದಲ್ಲಿ ಗುಂಪು ಹಲ್ಲೆಗೆ ವ್ಯಕ್ತಿ ಬಲಿ

(Cow theft in Koppa Chikkamagaluru District caught on camera)

ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ
ಒಂದು ಆರೋಪವನ್ನೂ ಸಾಬೀತು ಮಾಡೋದು ಸರ್ಕಾರಕ್ಕೆ ಸಾಧ್ಯವಾಗಿಲ್ಲ: ಪ್ರತಾಪ್
ಒಂದು ಆರೋಪವನ್ನೂ ಸಾಬೀತು ಮಾಡೋದು ಸರ್ಕಾರಕ್ಕೆ ಸಾಧ್ಯವಾಗಿಲ್ಲ: ಪ್ರತಾಪ್
ಆರ್ಚರಿ ಚಾಂಪಿಯನ್‌ ಶಿಪ್‌ನಲ್ಲಿ ರಾಜ್ಯದ ಕ್ರೀಡಾಪಟುಗಳಿಂದ ಚಿನ್ನದ ಪದಕ ಬೇಟೆ
ಆರ್ಚರಿ ಚಾಂಪಿಯನ್‌ ಶಿಪ್‌ನಲ್ಲಿ ರಾಜ್ಯದ ಕ್ರೀಡಾಪಟುಗಳಿಂದ ಚಿನ್ನದ ಪದಕ ಬೇಟೆ
ನಮ್ಮನ್ನು ಒಂಟಿಯಾಗಿ ಬಿಡ್ರಪ್ಪ ಅಂತ ಶಿವಕುಮಾರ್ ಹೇಳಿದ್ದು ಯಾಕೆ?
ನಮ್ಮನ್ನು ಒಂಟಿಯಾಗಿ ಬಿಡ್ರಪ್ಪ ಅಂತ ಶಿವಕುಮಾರ್ ಹೇಳಿದ್ದು ಯಾಕೆ?
ಕೆಪಿಸಿಸಿ ಅಧ್ಯಕ್ಷನ ಸ್ಥಾನಕ್ಕೆ ನಾನು ಆಕಾಂಕ್ಷಿಯಲ್ಲ: ಡಿಕೆ ಸುರೇಶ್
ಕೆಪಿಸಿಸಿ ಅಧ್ಯಕ್ಷನ ಸ್ಥಾನಕ್ಕೆ ನಾನು ಆಕಾಂಕ್ಷಿಯಲ್ಲ: ಡಿಕೆ ಸುರೇಶ್
ಮೈಸೂರಲ್ಲಿ ಬಸ್ ಸಂಚಾರ ಸಂಪೂರ್ಣವಾಗಿ ಸ್ಥಗಿತ, ಪರದಾಡುತ್ತಿರುವ ಜನ
ಮೈಸೂರಲ್ಲಿ ಬಸ್ ಸಂಚಾರ ಸಂಪೂರ್ಣವಾಗಿ ಸ್ಥಗಿತ, ಪರದಾಡುತ್ತಿರುವ ಜನ