ಶಿರಸಿ: ಐಷಾರಾಮಿ ವಾಹನಗಳಲ್ಲಿ ದನಗಳನ್ನು ಕಳುವು ಮಾಡುತ್ತಿದ್ದ ಅಂತರ್ಜಿಲ್ಲಾ ಕಳ್ಳರ ಬಂಧನ
ರಾತ್ರಿವೇಳೆ ಪಿಪಿಇ ಕಿಟ್ ಧರಿಸಿ ಬಂದು ಆಕಳುಗಳನ್ನು ಕಳ್ಳತನ ಮಾಡುತ್ತಿದ್ದರು ಎಂದು ತಿಳಿದುಬಂದಿದೆ. ಪಿಪಿಇ ಕಿಟ್ ಧರಿಸಿ ಬಂದು ಬೀದಿಯಲ್ಲಿ ನಿಂತಿದ್ದ ದನಗಳನ್ನು ಅಮಾನುಷವಾಗಿ ಐಷಾರಾಮಿ ವಾಹನದಲ್ಲಿ ತುಂಬುತ್ತಿದ್ದರು. ಈ ಘಟನೆಯ ದೃಶ್ಯ ಸಿಸಿಟಿವಿ ಕ್ಯಾಮರಾದಲ್ಲಿ ದಾಖಲಾಗಿತ್ತು. ಸದ್ಯ ಪ್ರಕರಣದ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದು, ಆರೋಪಿಗಳು ಅಂತರ್ಜಿಲ್ಲಾ ಆರೋಪಿಗಳು ಎಂದು ಪೊಲೀಸರು ತಿಳಿಸಿದ್ದಾರೆ.
ಶಿರಸಿ: ಐಷಾರಾಮಿ ವಾಹನದಲ್ಲಿ ದನಗಳ್ಳತನ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಶಿರಸಿ ಪೊಲೀಸರು ಬಂಧಿಸಿದ್ದು, ಮೂವರು ಆರೋಪಿಗಳು ಕಾರ್ಯಾಚರಣೆ ವೇಳೆ ಪರಾರಿಯಾದ ಘಟನೆರ ನಡೆದಿದೆ. ಎಸ್ಪಿ ಶಿವಪ್ರಕಾಶ್ ದೇವರಾಜ್ ಅವರ ಮಾರ್ಗದರ್ಶನದಲ್ಲಿ ಶಿರಸಿ (Sirsi) ಸಿಪಿಐ ರಾಮಚಂದ್ರ ನಾಯಕ, ನ್ಯೂಮಾರ್ಕೆಟ್ ಪಿಎಸ್ಐ ಭೀಮಾಶಂಕರ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿ ಬಂಧಿಸಲಾಗಿದೆ. ಆರೋಪಿಗಳು ಅಂತರ್ಜಿಲ್ಲಾ ದನಗಳ್ಳರಾಗಿದ್ದು, ಹಲವು ಪ್ರಕರಣಗಳಲ್ಲಿ ಆರೋಪಿಗಳಾಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಐಷಾರಾಮಿ ವಾಹನ ಉಪಯೋಗಿಸಿಕೊಂಡು ದನಗಳ ಕಳ್ಳತನ ನಡೆಸುತ್ತಿದ್ದ ಆರೋಪಿಗಳನ್ನು ಬಂಧಿಸಿದ ಪೊಲೀಸರ ಕುರಿತು ಶಿರಸಿಯ ನಾಗರಿಕರು ಶ್ಲಾಘನೆ ವ್ಯಕ್ತಪಡಿಸಿದ್ದಾರೆ.
ರಾತ್ರಿವೇಳೆ ಪಿಪಿಇ ಕಿಟ್ ಧರಿಸಿ ಬಂದು ಆಕಳುಗಳನ್ನು ಕಳ್ಳತನ ಮಾಡುತ್ತಿದ್ದರು ಎಂದು ತಿಳಿದುಬಂದಿದೆ. ಪಿಪಿಇ ಕಿಟ್ ಧರಿಸಿ ಬಂದು ಬೀದಿಯಲ್ಲಿ ನಿಂತಿದ್ದ ದನಗಳನ್ನು ಅಮಾನುಷವಾಗಿ ಐಷಾರಾಮಿ ವಾಹನದಲ್ಲಿ ತುಂಬುತ್ತಿದ್ದರು. ಈ ಘಟನೆಯ ದೃಶ್ಯ ಸಿಸಿಟಿವಿ ಕ್ಯಾಮರಾದಲ್ಲಿ ದಾಖಲಾಗಿತ್ತು. ಸದ್ಯ ಪ್ರಕರಣದ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದು, ಆರೋಪಿಗಳು ಅಂತರ್ಜಿಲ್ಲಾ ಆರೋಪಿಗಳು ಎಂದು ಪೊಲೀಸರು ತಿಳಿಸಿದ್ದಾರೆ.
ಅರಣ್ಯ ಸಿಬ್ಬಂದಿಯಿಂದ ಹಲ್ಲೆ ಆರೋಪ ಉತ್ತರ ಕನ್ನಡ ಜಿಲ್ಲೆಯ ಹಳಿಯಾಳ ತಾಲೂಕಿನ ಭೀಮನಹಳ್ಳಿಯಲ್ಲಿ ಅರಣ್ಯ ನಿವಾಸಿಗಳ ಮೇಲೆ ಅರಣ್ಯ ಇಲಾಖೆ ಸಿಬ್ಬಂದಿ ದೌರ್ಜನ್ಯ ಎಸಗಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಅರಣ್ಯ ಒತ್ತುವರಿ ಭೂಮಿಯಲ್ಲಿದ್ದ ಬೆಳೆಯನ್ನು ಅರಣ್ಯ ಇಲಾಖೆ ಸಿಬ್ಬಂದಿ ನಾಶಪಡಿಸಿ ಮಹಿಳೆಯರೂ ಎನ್ನದೇ ಎಳೆದಾಡಿ ಹಲ್ಲೆ ನಡೆಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಇದನ್ನೂ ಓದಿ:
Uttara Kannada Flood: ಚಿತ್ರನೋಟ: ಸಿಎಂ ಬಸವರಾಜ ಬೊಮ್ಮಾಯಿ ಭೇಟಿ ಕೊಟ್ಟ ಭೂಕುಸಿತಕ್ಕೊಳಗಾದ ಕಳಚೆ ಗ್ರಾಮ ಹೇಗಿದೆ?
(Sirsi Police arrested inter district cattle robbers)