Shocking News: 1 ಕೋಟಿ ರೂ. ಕೊಡದಿದ್ದರೆ ನಿಮ್ಮ ಮಕ್ಕಳನ್ನು ಕೊಲ್ಲುತ್ತೇನೆ; 11 ವರ್ಷದ ಮಗಳಿಂದಲೇ ಅಪ್ಪನಿಗೆ ಬ್ಲಾಕ್​ಮೇಲ್!

Shocking News: 1 ಕೋಟಿ ರೂ. ಕೊಡದಿದ್ದರೆ ನಿಮ್ಮ ಮಕ್ಕಳನ್ನು ಕೊಲ್ಲುತ್ತೇನೆ; 11 ವರ್ಷದ ಮಗಳಿಂದಲೇ ಅಪ್ಪನಿಗೆ ಬ್ಲಾಕ್​ಮೇಲ್!
ಸೈಬರ್ ಕ್ರೈಂ

Crime News Today: 11 ವರ್ಷದ ಬಾಲಕಿ ತನಗೆ 1 ಕೋಟಿ ರೂ ಹಣ. ಕೊಡದೇ ಇದ್ದರೆ ನಿಮ್ಮ ಮಗ ಮತ್ತು ಮಗಳನ್ನು ಸಾಯಿಸುತ್ತೇನೆ ಎಂದು ಸ್ವಂತ ಅಪ್ಪನಿಗೇ ಬೆದರಿಕೆ ಸಂದೇಶ ಕಳುಹಿಸಿದ್ದಾಳೆ. ಈ ಕತೆ ಕೇಳಿದರೆ ಶಾಕ್ ಆಗೋದು ಗ್ಯಾರಂಟಿ!

TV9kannada Web Team

| Edited By: Sushma Chakre

Jul 31, 2021 | 7:34 PM

ಘಜಿಯಾಬಾದ್: ಇದು ನೀವು ಊಹಿಸಲೂ ಸಾಧ್ಯವಾಗದಂತಹ ಕತೆ. ನಾವು ನೀವೆಲ್ಲ 5ನೇ ಕ್ಲಾಸ್​ನಲ್ಲಿದ್ದಾಗ ಹೇಗಿದ್ದೆವು ಎಂದು ನೆನಪಿಸಿಕೊಳ್ಳಿ. ಶಾಲೆ ಬಿಟ್ಟರೆ ಮನೆ, ಮನೆ ಬಿಟ್ಟರೆ ಶಾಲೆ ಇಷ್ಟೇ ನಮ್ಮ ಪ್ರಪಂಚವಾಗಿತ್ತು. ಆಗೆಲ್ಲ ಮೊಬೈಲ್, ಫೋನ್, ಇಂಟರ್ನೆಟ್​ ಇದ್ಯಾವುದೂ ಮಕ್ಕಳಿಗೆ ಸಿಗುತ್ತಿರಲಿಲ್ಲ. ಊಟ ಬೇಡವೆಂದೋ, ಹೊಸ ಬಟ್ಟೆ ಬೇಕೆಂದೋ, ಬ್ಯಾಗ್​ ಬೇರೆ ಬೇಕೆಂದೋ, ಯಾರೋ ಕ್ಲಾಸ್​ನಲ್ಲಿ ಹೊಡೆದರೆಂದೋ ಅತ್ತೂ ಕರೆದು ರಂಪಾಟವಾಡಿದರೆ ಅದಕ್ಕೂ ನಾವೇ ಹೊಡೆತ ತಿನ್ನಬೇಕಾಗಿತ್ತು. ಆದರೆ, ಇಲ್ಲೊಬ್ಬಳು 11 ವರ್ಷದ ಬಾಲಕಿ ತನಗೆ 1 ಕೋಟಿ ರೂ ಹಣ. ಕೊಡದೇ ಇದ್ದರೆ ನಿಮ್ಮ ಮಗ ಮತ್ತು ಮಗಳನ್ನು ಸಾಯಿಸುತ್ತೇನೆ ಎಂದು ಸ್ವಂತ ಅಪ್ಪನಿಗೇ ಬೆದರಿಕೆ ಸಂದೇಶ ಕಳುಹಿಸಿದ್ದಾಳೆ. ನನ್ನ ಮಕ್ಕಳಿಗೆ ಕಳ್ಳರು ಏನು ಮಾಡಿ ಬಿಡುತ್ತಾರೋ ಎಂಬ ಭಯದಲ್ಲಿ ಆ ಅಪ್ಪ ಎದ್ನೋಬಿದ್ನೋ ಎಂದು ಪೊಲೀಸ್ ಸ್ಟೇಷನ್​ಗೆ ಓಡಿದ್ದಾರೆ.

ಈ ವಿಚಿತ್ರ ಘಟನೆ ನಡೆದಿರುವುದು ಉತ್ತರ ಪ್ರದೇಶದ ಘಜಿಯಾಬಾದ್​ನಲ್ಲಿ. 5ನೇ ಕ್ಲಾಸ್ ಓದುತ್ತಿರುವ ಬಾಲಕಿಯ ತಂದೆ ಇಂಜಿನಿಯರ್ ಆಗಿದ್ದು, ಮನೆಯಲ್ಲಿದ್ದ ಲ್ಯಾಪ್​ಟಾಪ್ ಓಪನ್ ಮಾಡಿದ ಆಕೆ ತನ್ನ ತಂದೆಯ ಮೊಬೈಲನ್ನು ವಾಟ್ಸಾಪ್​ ವೆಬ್​ಗೆ ಕನೆಕ್ಟ್ ಮಾಡಿ ಅವರದೇ ನಂಬರ್​ನಿಂದ ತನ್ನ ತಾಯಿ, ಪಕ್ಕದ ಮನೆಯವರು, ಕೆಲವು ಸಂಬಂಧಿಕರಿಗೂ ಬೆದರಿಕೆ ಸಂದೇಶವನ್ನು ಕಳುಹಿಸಿದ್ದಳು. 1 ಕೋಟಿ ರೂ. ಹಣ ನೀಡದಿದ್ದರೆ ನಿಮ್ಮ ಮಗ ಹಾಗೂ ಮಗಳನ್ನು ಕೊಲೆ ಮಾಡುತ್ತೇವೆ ಎಂದು ಬ್ಲಾಕ್​ಮೇಲ್ ಮಾಡಿದ್ದಳು.

ಆ ವಾಟ್ಸಾಪ್ ಮೆಸೇಜ್ ನೋಡಿ ಬಾಲಕಿಯ ತಂದೆ-ತಾಯಿ ಕಂಗಾಲಾಗಿದ್ದರು. ತಮ್ಮದೇ ನಂಬರ್​ನಿಂದ ಈ ರೀತಿ ಮಾಡಿದ್ದಾರೆಂದರೆ ಯಾರೋ ದೊಡ್ಡ ಹ್ಯಾಕರ್ ಇರಬಹುದು. ನಮ್ಮ ಮನೆಯಲ್ಲಿ ನಡೆಯುತ್ತಿರುವ ಘಟನೆಯನ್ನು ಆತ ನೋಡುತ್ತಿರಬಹುದು ಎಂದು ಇಂಜಿನಿಯರ್​ಗೆ ಆತಂಕ ಶುರುವಾಗಿತ್ತು. ಕೊನೆಗೆ ಸಂಬಂಧಿಕರ ಒತ್ತಾಯದ ಮೇರೆಗೆ ಪೊಲೀಸ್ ಠಾಣೆಗೆ ಹೋಗಿ ನಡೆದ ಘಟನೆಯನ್ನು ವಿವರಿಸಿದ್ದರು.

ಈ ಬಗ್ಗೆ ಕೇಸ್ ದಾಖಲಿಸಿಕೊಂಡ ಪೊಲೀಸರು ಆ ಕಳ್ಳರಿಗಾಗಿ ಹುಡುಕಾಟ ನಡೆಸಿದ್ದರು. ಆ ವೇಳೆ ಆ ಇಂಜಿನಿಯರ್ ಮನೆಯ ಲ್ಯಾಪ್​ಟ್ಯಾಪ್​ನಿಂದಲೇ ಈ ಸಂದೇಶ ಕಳುಹಿಸಲಾಗಿದೆ ಎಂಬುದು ಗೊತ್ತಾಗಿತ್ತು. ಈ ಬಗ್ಗೆ ಮನೆಯವರನ್ನೆಲ್ಲ ವಿಚಾರಣೆ ನಡೆಸುವಾಗ ಆ ಬಾಲಕಿ ತನ್ನ ತಪ್ಪನ್ನು ಒಪ್ಪಿಕೊಂಡಿದ್ದಳು. ನನ್ನ ಅಪ್ಪ-ಅಮ್ಮ ದಿನವೂ ನನಗೆ ಬೈಯುತ್ತಿದ್ದರು. ನನಗೆ ಆನ್​ಲೈನ್ ಕ್ಲಾಸ್​ ವೇಳೆ ಬಿಟ್ಟರೆ ಬೇರೆ ಹೊತ್ತಿನಲ್ಲಿ ಮೊಬೈಲ್ ಕೊಡುತ್ತಿರಲಿಲ್ಲ. ಇದರಿಂದ ಕೋಪ ಬಂದು ಅವರಿಗೆ ಪಾಠ ಕಲಿಸಬೇಕೆಂದು 1 ಕೋಟಿ ರೂ. ಕೊಡಬೇಕು ಎಂದು ಬ್ಲಾಕ್​ಮೇಲ್ ಮಾಡಿದೆ ಎಂದು ಹೇಳಿದ್ದಾಳೆ.

ತಮ್ಮ ಮಗಳು ಇಷ್ಟೆಲ್ಲ ಕ್ರಿಮಿನಲ್ ಆಗಿ ಯೋಚನೆ ಮಾಡುತ್ತಾಳೆಂಬ ವಿಷಯ ತಿಳಿದ ತಂದೆ-ತಾಯಿಗೆ ಶಾಕ್ ಆಗಿದೆ. ಆ ಬಾಲಕಿಯ ಮಾತು ಕೇಳಿ ಪೊಲೀಸರೂ ಶಾಕ್ ಆಗಿದ್ದಾರೆ. ಆ ಬಾಲಕಿಯನ್ನು ಕೌನ್ಸಿಲಿಂಗ್​ ಮಾಡಿಸುವಂತೆ ಪೋಷಕರಿಗೆ ತಿಳಿಸಲಾಗಿದೆ.

ಇದನ್ನೂ ಓದಿ: Shocking News: ಮನುಷ್ಯರ ಮೂತ್ರದಿಂದ ತಯಾರಾದ ಬಿಯರ್​ಗೆ ಭಾರೀ ಬೇಡಿಕೆ; ಏನಿದು ವಿಚಿತ್ರ ಸುದ್ದಿ?

Viral News: ಬ್ರೈನ್ ಟ್ಯೂಮರ್ ಸರ್ಜರಿ ವೇಳೆ ಹನುಮಾನ್ ಚಾಲೀಸಾ ಪಠಿಸಿದ ಮಹಿಳೆ; ಆಮೇಲೆ ನಡೆದಿದ್ದು ಅಚ್ಚರಿ!

(11 Year Old Daughter asked Father for Extortion of 1 Crore Blackmailed him after he Refused to give Mobile)

Follow us on

Related Stories

Most Read Stories

Click on your DTH Provider to Add TV9 Kannada