ಟೋಯಿಂಗ್ ಸಿಬ್ಬಂದಿ ಮೇಲೆ ಹಲ್ಲೆ ಪ್ರಕರಣ; ಯಲಹಂಕ ನ್ಯೂಟೌನ್ ಪೊಲೀಸರಿಂದ ಆರೋಪಿಗಳಿಬ್ಬರ ಸೆರೆ
ಟೋಯಿಂಗ್ ಸಿಬ್ಬಂದಿ ಮೇಲೆ ಮನಸೋಇಚ್ಛೆ ಹಲ್ಲೆ ಮಾಡಿದ್ದ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಹಲವರು ಆ ವಿಡಿಯೋವನ್ನು ಹಂಚಿಕೊಂಡಿದ್ದರು. ಈ ಬಗ್ಗೆ ಯಲಹಂಕ ನ್ಯೂಟೌನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಇದೀಗ ಹಲ್ಲೆ ಮಾಡಿದ್ದ ಇಬ್ಬರನ್ನು ಬಂಧಿಸಲಾಗಿದೆ.
ಬೆಂಗಳೂರು: ಬೆಂಗಳೂರಿನಲ್ಲಿ ಟೋಯಿಂಗ್ ಸಿಬ್ಬಂದಿ ಮೇಲೆ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿ ಯಲಹಂಕ ನ್ಯೂಟೌನ್ ಪೊಲೀಸರು ಆರೋಪಿಗಳಿಬ್ಬರನ್ನು ಸೆರೆಹಿಡಿದಿದ್ದಾರೆ. ಬೈಕ್ ಸವಾರರಾದ ವಿಜಯ್, ರಾಜಶೇಖರ್ ಎಂಬವರನ್ನು ಬಂಧಿಸಿದ್ದಾರೆ. ಜುಲೈ 28ರಂದು ಯಲಹಂಕ ಬಸ್ ನಿಲ್ದಾಣದ ಬಳಿ ಟೋಯಿಂಗ್ ಸಿಬ್ಬಂದಿ ಮೇಲೆ ದ್ವಿಚಕ್ರ ವಾಹನ ಸವಾರರು ಹಲ್ಲೆ ಮಾಡಿದ್ದರು. ಸಂಚಾರಿ ನಿಯಮ ಉಲ್ಲಂಘಿಸಿದ್ದಕ್ಕೆ ಬೈಕ್ನ್ನು ಟೋಯಿಂಗ್ ಸಿಬ್ಬಂದಿಗಳು ಕೊಂಡೊಯ್ಯಲು ಹೊರಟಿದ್ದರು. ಆಗ ಟೋಯಿಂಗ್ ವಾಹನದ ಮೇಲೇರಿ ಬೈಕ್ ಸವಾರರು ಹೆಲ್ಮೆಟ್ನಿಂದ ಹಲ್ಲೆ ಮಾಡಿದ್ದರು.
ಟೋಯಿಂಗ್ ಸಿಬ್ಬಂದಿ ಮೇಲೆ ಮನಸೋಇಚ್ಛೆ ಹಲ್ಲೆ ಮಾಡಿದ್ದ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಹಲವರು ಆ ವಿಡಿಯೋವನ್ನು ಹಂಚಿಕೊಂಡಿದ್ದರು. ಈ ಬಗ್ಗೆ ಯಲಹಂಕ ನ್ಯೂಟೌನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಇದೀಗ ಹಲ್ಲೆ ಮಾಡಿದ್ದ ಇಬ್ಬರನ್ನು ಬಂಧಿಸಲಾಗಿದೆ.
ವಾಹನ ಚೆಕ್ಕಿಂಗ್ ವೇಳೆ ಅಪಘಾತ ವಾಹನ ಚೆಕ್ಕಿಂಗ್ ವೇಳೆ ಅಪಘಾತ ಸಂಭವಿಸಿ, ಟ್ರಾಫಿಕ್ ಪೊಲೀಸ್ ಸಿಬ್ಬಂದಿ ಕಾಲಿನ ಮೂಳೆ ಕಟ್ ಆಗಿದ್ದ ಘಟನೆಯೂ ಕೆಲವು ದಿನಗಳ ಹಿಂದೆ ಘಟಿಸಿತ್ತು. ಚಾಮರಾಜಪೇಟೆ ಮುಖ್ಯರಸ್ತೆ ಬಳಿ ಚೆಕ್ಕಿಂಗ್ ಮಾಡುವಾಗ ಈ ಘಟನೆ ನಡೆದಿತ್ತು. ಬಸವನಗುಡಿ ಟ್ರಾಫಿಕ್ ಠಾಣೆಯ ಕಾನ್ಸ್‌ಟೇಬಲ್ ಯಲ್ಲಾಲಿಂಗ್ ಬಿಸ್ನಾಳ್ ಅವರ ಕಾಲಿನ ಮೂಳೆ ತುಂಡಾಗಿತ್ತು. ಬೈಕ್ ಸವಾರರು ತ್ರಿಬಲ್ ರೈಡ್ ಬರುತ್ತಿದ್ದ ವೇಳೆ, ವಾಹನದ ಫೋಟೊ ಕ್ಲಿಕ್ ಮಾಡಲು ಮುಂದಾಗಿದ್ದ ಟ್ರಾಫಿಕ್ ಪೊಲೀಸ್ ಸಿಬ್ಬಂದಿ ಬಳಿ ಬೈಕ್ ಬಂದಿದ್ದು, ಇದರಿಂದಾಗಿ ಸ್ವಲ್ಪ ಹಿಂದಕ್ಕೆ ಸರಿದಿದ್ದರು.
ಈ ವೇಳೆ ಹಿಂಬದಿಯಿಂದ ಬರುತ್ತಿದ್ದ ಮತ್ತೊಂದು ಟೂ ವೀಲರ್ ರಭಸವಾಗಿ ಬಿಸ್ನಾಳ್ ಅವರಿಗೆ ಗುದ್ದಿದೆ. ಈ ಪರಿಣಾಮ ಬಿಸ್ನಾಳ್ ಅವರ ಬಲಗಾಲಿನ ಮೂಳೆ ಕಟ್ ಆಗಿತ್ತು. ಬಳಿಕ, ಟ್ರಾಫಿಕ್ ಪೊಲೀಸ್ ಸಿಬ್ಬಂದಿ ಬಿಸ್ನಾಳ್ ಅವರನ್ನು ಹಾಸ್ಮಟ್ ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ನೀಡಲಾಗಿತ್ತು.
ಇದನ್ನೂ ಓದಿ: ಡಿಸಿ ಆದೇಶ ಉಲ್ಲಂಘಿಸಿ ಲಾರಿಗಳ ಓಡಾಟ; ಚಾರ್ಮಾಡಿ ಘಾಟ್ ಬಳಿ ಬೆಳಗ್ಗೆಯಿಂದಲೇ ಟ್ರಾಫಿಕ್ ಜಾಮ್
Viral Story: ಟ್ರಾಫಿಕ್ ಪೊಲೀಸ್ ಮನೆಯಲ್ಲಿ ಚಿನ್ನದ ಟಾಯ್ಲೆಟ್
(Bike Riders who Assaulted Toying Employees in Bengaluru got Arrested)