AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Crime News: ಸಮೋಸಕ್ಕೆ ಎರಡೂವರೆ ರೂ. ಏರಿಕೆ; ಮನನೊಂದು ಬೆಂಕಿ ಹಚ್ಚಿಕೊಂಡು ಯುವಕ ಆತ್ಮಹತ್ಯೆ!

ಸಮೋಸಕ್ಕೆ ಎರಡೂವರೆ ರೂ. ಜಾಸ್ತಿ ಮಾಡಿದ್ದಕ್ಕೆ ಬೇಕರಿಯವನ ಜೊತೆ ಜಗಳವಾಡಿದ ಯುವಕನ ವಿರುದ್ಧ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿತ್ತು. ಇದರಿಂದ ನೊಂದ ಯುವಕ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

Crime News: ಸಮೋಸಕ್ಕೆ ಎರಡೂವರೆ ರೂ. ಏರಿಕೆ; ಮನನೊಂದು ಬೆಂಕಿ ಹಚ್ಚಿಕೊಂಡು ಯುವಕ ಆತ್ಮಹತ್ಯೆ!
ಸಮೋಸಾ
TV9 Web
| Edited By: |

Updated on: Jul 27, 2021 | 9:24 PM

Share

ಇಂದೋರ್: ಸಮೋಸ ತಿನ್ನಲು ಬೇಕರಿಗೆ ಹೋಗಿದ್ದ ಆ ಯುವಕನಿಗೆ ಆ ದಿನ ತನ್ನ ಜೀವನದ ಮರೆಯಲಾಗದ ದಿನವಾಗುತ್ತದೆ ಎಂಬುದು ಗೊತ್ತಿರಲಿಲ್ಲ. ಜುಲೈ 22ರಂದು ತನ್ನ ಗೆಳೆಯನೊಂದಿಗೆ ಸಮೋಸ ತಿನ್ನಲು ಮನೆಯ ಬಳಿಯಿದ್ದ ಬೇಕರಿಗೆ ಹೋಗಿದ್ದ ಯುವಕ ಎರಡು ಸಮೋಸ ಖರೀದಿಸಿದ್ದ. ಅದಕ್ಕೆ ಬೇಕರಿಯವನು 20 ರೂ. ಕೊಡಿ ಎಂದು ಕೇಳಿದ. ಆದರೆ, ಇದಕ್ಕೂ ಮೊದಲು ಒಂದು ಸಮೋಸಕ್ಕೆ 7.50 ರೂ. ಇತ್ತಲ್ಲ. ಎರಡೇ ದಿನದಲ್ಲಿ ಹೇಗೆ ಎರಡೂವರೆ ರೂ. ಜಾಸ್ತಿ ಮಾಡಿದಿರಿ ಎಂದು ವಾದ ಮಾಡಿದ.

ಲಾಕ್​ಡೌನ್ ಆದಮೇಲೆ ಎಲ್ಲದರ ಬೆಲೆಯೂ ಜಾಸ್ತಿ ಆಗಿದೆ, ಬೇಕಾದರೆ 20 ರೂ. ಕೊಡಿ. ಇಲ್ಲವಾದರೆ ಹೋಗಿ ಎಂದು ಬೇಕರಿಯವನು ಗಲಾಟೆ ಮಾಡಿದ. ಇದೇ ವಿಷಯಕ್ಕೆ ಇಬ್ಬರ ನಡುವೆಯೂ ಗಲಾಟೆಯಾಗಿ ಪೊಲೀಸ್ ಠಾಣೆಯವರೆಗೂ ಹೋಗಿತ್ತು. ಪೊಲೀಸ್ ಠಾಣೆಯಲ್ಲಿ ಆ ಯುವಕನ ವಿರುದ್ಧ ಬೇಕರಿಯ ಮಾಲೀಕ ಕೇಸ್ ದಾಖಲಿಸಿದ್ದ. ಈ ಘಟನೆ ಮಧ್ಯಪ್ರದೇಶದ ಬಂದಾ ಗ್ರಾಮದಲ್ಲಿ ನಡೆದಿದೆ. ಗಲಾಟೆ ನಡೆದ ಹಿನ್ನೆಲೆಯಲ್ಲಿ ಈ ಪ್ರಕರಣವನ್ನು ದಾಖಲಿಸಿಕೊಂಡ ಪೊಲೀಸರು ವಿಚಾರಣೆ ನಡೆಸಿದ್ದಾರೆ. ಈ ವೇಳೆ ಯುವಕನಿಗೆ ಪೊಲೀಸರು ಥಳಿಸಿದ್ದಾರೆ ಎನ್ನಲಾಗಿದೆ. ಇದರಿಂದ ಮನನೊಂದ ಯುವಕ ಅದಾದ 2 ದಿನದ ನಂತರ ಮೈಮೇಲೆ ಪೆಟ್ರೋಲ್ ಸುರಿದುಕೊಂಡು, ಬೆಂಕಿ ಹಚ್ಚಿಕೊಂಡಿದ್ದಾನೆ.

ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ ಯುವಕನನ್ನು ತಕ್ಷಣ ಮನೆಯವರು ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ, ಮೈಮೇಲೆ ಸಾಕಷ್ಟು ಸುಟ್ಟ ಗಾಯಗಳಾಗಿದ್ದರಿಂದ ಚಿಕಿತ್ಸೆ ಫಲಕಾರಿಯಾಗದೆ ಯುವಕ ಸಾವನ್ನಪ್ಪಿದ್ದಾನೆ. ಈ ಘಟನೆಯ ಬಳಿಕ ಸ್ಥಳೀಯರು ಬೇಕರಿ ಮಾಲೀಕನ ವಿರುದ್ಧ ಆಕ್ರೋಶ ಹೊರಹಾಕಿದ್ದು, ಆ ಬೇಕರಿಯವನೇ ಯುವಕನ ಮೇಲೆ ಪೆಟ್ರೋಲ್ ಸುರಿದು, ಬೆಂಕಿ ಹಚ್ಚಿ ಕೊಲೆ ಮಾಡಿದ್ದಾನೆ ಎಂದು ಆರೋಪಿಸಿದ್ದಾರೆ. ಎರಡು ಸಮೋಸದಿಂದಾಗಿ ಒಂದು ಜೀವವೇ ಹೋಗಿದೆ.

ಇದನ್ನೂ ಓದಿ: Crime News: ಅಕ್ರಮ ಸಂಬಂಧ ತಂದ ಕಂಟಕ; ಹೆಂಡತಿಯ ಪ್ರಿಯಕರನ ಗುಪ್ತಾಂಗಕ್ಕೆ ಶೂಟ್ ಮಾಡಿದ ಗಂಡ!

Bengaluru Crime: ಸಲಿಂಗಿಗಳ ಡೇಟಿಂಗ್ ಆ್ಯಪ್​ನಿಂದ ಬಯಲಾಯ್ತು ಗಂಡನ ರಹಸ್ಯ; ಶಾಕ್ ಆದ ಹೆಂಡತಿ ಮಾಡಿದ್ದೇನು?

(Crime News: Madhya Pradesh Man Dies by Suicide After Fighting with Shopkeeper over Samosa Price Hike)

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ