Bengaluru Crime: ಸಲಿಂಗಿಗಳ ಡೇಟಿಂಗ್ ಆ್ಯಪ್​ನಿಂದ ಬಯಲಾಯ್ತು ಗಂಡನ ರಹಸ್ಯ; ಶಾಕ್ ಆದ ಹೆಂಡತಿ ಮಾಡಿದ್ದೇನು?

Dating Apps: ಮದುವೆಯಾಗಿ 3 ವರ್ಷಗಳ ನಂತರ ಈ ಬಾರಿಯ ಲಾಕ್​ಡೌನ್ ವೇಳೆ ತನ್ನ ಗಂಡ ಸಲಿಂಗಿ ಎಂಬುದು ಹೆಂಡತಿಗೆ ಗೊತ್ತಾಯಿತು. ಇದರಿಂದ ಶಾಕ್ ಆದ ಬೆಂಗಳೂರಿನ ಮಹಿಳೆ ಏನು ಮಾಡಿದಳು ಗೊತ್ತಾ?

Bengaluru Crime: ಸಲಿಂಗಿಗಳ ಡೇಟಿಂಗ್ ಆ್ಯಪ್​ನಿಂದ ಬಯಲಾಯ್ತು ಗಂಡನ ರಹಸ್ಯ; ಶಾಕ್ ಆದ ಹೆಂಡತಿ ಮಾಡಿದ್ದೇನು?
ಸಾಂದರ್ಭಿಕ ಚಿತ್ರ
Follow us
TV9 Web
| Updated By: ಸುಷ್ಮಾ ಚಕ್ರೆ

Updated on: Jul 27, 2021 | 5:42 PM

ಬೆಂಗಳೂರು: ಒಳ್ಳೆ ಉದ್ಯೋಗದಲ್ಲಿದ್ದ ಸಾಫ್ಟ್​ವೇರ್ ಇಂಜಿನಿಯರ್ ಜೊತೆ ಮದುವೆಯಾಗಿದ್ದ ಬೆಂಗಳೂರಿನ ಜಯನಗರದಲ್ಲಿ ನೆಲೆಸಿರುವ ಯುವತಿಗೆ ಎಲ್ಲರಂತೆ ತನ್ನ ಗಂಡ ಮತ್ತು ವೈವಾಹಿಕ ಜೀವನದ ಬಗ್ಗೆ ಏನೇನೋ ಕನಸುಗಳಿದ್ದವು. ಆತನಿಗೆ ಇದಕ್ಕೂ ಮೊದಲೇ ಒಂದು ಮದುವೆಯಾಗಿತ್ತು ಎಂಬ ವಿಷಯ ಗೊತ್ತಿದ್ದರೂ ಆಕೆಯ ತಂದೆ-ತಾಯಿ ಆತನೊಂದಿಗೆ ಆಕೆಯ ಮದುವೆ ಮಾಡಿಸಿದ್ದರು. ಹಳೆಯದೆಲ್ಲವನ್ನೂ ಮರೆತು ಹೊಸ ಜೀವನ ಕಟ್ಟಿಕೊಳ್ಳುವ ಯೋಚನೆಯಲ್ಲಿದ್ದ ಆಕೆಗೆ ತನ್ನ ಗಂಡ ಓರ್ವ ಸಲಿಂಗಿ (Gay) ಎಂಬ ರಹಸ್ಯ ಗೊತ್ತಾಗಿತ್ತು. ಈ ಆಘಾತದಿಂದ ಚೇತರಿಸಿಕೊಳ್ಳಲಾಗದೆ ಆತನನ್ನು ದ್ವೇಷಿಸತೊಡಗಿದ ಆಕೆ ಡೈವೋರ್ಸ್​ (Divorce) ಪಡೆಯಲು ಕೋರ್ಟ್ ಮೆಟ್ಟಿಲೇರಿದ್ದಾಳೆ. ಆಕೆಗೆ ತನ್ನ ಗಂಡ ಸಲಿಂಗಿ ಎಂದು ಗೊತ್ತಾಗಿದ್ದು ಕೂಡ ಬಹಳ ಕುತೂಹಲಕಾರಿ ಕತೆ…

2018ರಲ್ಲಿ 31 ವರ್ಷದ ಸಾಫ್ಟ್​ವೇರ್ ಇಂಜಿನಿಯರ್ ಜೊತೆ ಮದುವೆಯಾಗಿದ್ದ 28 ವರ್ಷದ ಯುವತಿ ಆತನೊಂದಿಗೆ ಸಂತೋಷದ ಜೀವನ ನಡೆಸಲು ಕಾತುರಳಾಗಿದ್ದಳು. ಆದರೆ, ಆತ ಮಾತ್ರ ಆಕೆಯೊಂದಿಗೆ ಮಲಗುತ್ತಿರಲಿಲ್ಲ, ಸರಿಯಾಗಿ ಮಾತನಾಡುತ್ತಿರಲಿಲ್ಲ. ಮದುವೆಯಾಗಿ ಎರಡೂವರೆ ವರ್ಷವಾದರೂ ಅವರ ಸಂಸಾರ ಶುರುವಾಗಿರಲಿಲ್ಲ. ಲೈಂಗಿಕ ಕ್ರಿಯೆ ಬಗ್ಗೆ ಗಂಡನಿಗೆ ಆಸಕ್ತಿ ಇಲ್ಲದಿರುವುದನ್ನು ನೋಡಿದ ಹೆಂಡತಿಗೆ ಅನುಮಾನ ಶುರುವಾಗಿತ್ತು. ಆತನಿಗೆ ಲೈಂಗಿಕ ಸಮಸ್ಯೆಯೇನಾದರೂ ಇರಬಹುದೇ? ಎಂಬ ಸಂಶಯ ಮೂಡಿತ್ತು. ಆದರೆ, ಆಕೆ ಕೇಳಿದ ಯಾವ ಪ್ರಶ್ನೆಗೂ ಆತ ಉತ್ತರ ನೀಡುತ್ತಿರಲಿಲ್ಲ. ಒಂದೇ ಮನೆಯಲ್ಲಿದ್ದರೂ ಅಪರಿಚಿತರಂತೆ ಬದುಕುತ್ತಿದ್ದ ಅವರ ಮಧ್ಯೆ ಪ್ರೀತಿ ಚಿಗುರೊಡೆಯಲೇ ಇಲ್ಲ.

ಲಾಕ್​ಡೌನ್ ವೇಳೆ ವರ್ಕ್ ಫ್ರಂ ಹೋಂನಿಂದಾಗಿ ಮನೆಯಲ್ಲಿಯೇ ಇದ್ದ ಗಂಡ ಆಗಲೂ ಹೆಂಡತಿಯೊಂದಿಗೆ ಬೆರೆಯುತ್ತಿರಲಿಲ್ಲ. ಲಾಕ್​ಡೌನ್​ನಲ್ಲಿ ಅದೊಂದು ದಿನ ಅನುಮಾನದಿಂದ ಗಂಡನ ಮೊಬೈಲನ್ನು ಪರಿಶೀಲಿಸಿದ ಆಕೆಗೆ ಅದರಲ್ಲಿ 2 ಸಲಿಂಗಿಗಳ ಡೇಟಿಂಗ್ ಆ್ಯಪ್​ಗಳು (Gay Dating Apps) ಇರುವುದು ಗಮನಕ್ಕೆ ಬಂದಿತು. ಆ ಆ್ಯಪ್ ಓಪನ್ ಮಾಡಿ ನೋಡಿದಾಗ ತನ್ನ ಗಂಡನ ಪ್ರೊಫೈಲ್ ಇರುವುದು ಗೊತ್ತಾಯಿತು. ತನ್ನ ಗಂಡ ಸಲಿಂಗಿಯಾಗಿದ್ದರಿಂದಲೇ ಇಷ್ಟು ವರ್ಷ ತನ್ನಿಂದ ದೂರ ಸರಿಯುತ್ತಿದ್ದ, ಆತನಿಗೆ ಮಹಿಳೆಯ ಬಗ್ಗೆ ಯಾವ ಆಸಕ್ತಿಯೂ ಇಲ್ಲವೆಂಬ ಸತ್ಯ ಆಕೆಗೆ ಗೊತ್ತಾಗಿತ್ತು.

ಸಲಿಂಗಿಯಾದ ಗಂಡನ ಜೊತೆ ಜೀವನ ನಡೆಸಲು ಸಾಧ್ಯವಿಲ್ಲ ಎಂದು ಆ ಯುವತಿ ಮಹಿಳಾ ಸಹಾಯವಾಣಿಗೆ ದೂರು ನೀಡಿದ್ದು, ಬಳಿಕ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಈ ಬಗ್ಗೆ ಆಕೆಯ ಗಂಡನನ್ನು ವಿಚಾರಣೆ ನಡೆಸಿದಾಗ ಆತ ತಾನು ಸಲಿಂಗಿ ಎಂಬುದೆಲ್ಲ ಸುಳ್ಳು ಎಂದು ವಾದಿಸಿದ್ದಾನೆ. ನನ್ನ ಮೊಬೈಲಲ್ಲಿ ಗೇ ಡೇಟಿಂಗ್ ಆ್ಯಪ್ ಇರುವುದು ನಿಜ, ಆದರೆ, ನಾನು ಯಾವುದೇ ಪುರುಷರೊಂದಿಗೆ ಡೇಟಿಂಗ್ ನಡೆಸಿಲ್ಲ ಎಂದು ಆತ ಹೇಳಿದ್ದಾನೆ.

ಇದನ್ನೂ ಓದಿ: Crime News: ಬಾಯ್​ಫ್ರೆಂಡ್ ಜೊತೆ ಸೇರಿ ಗಂಡನನ್ನೇ ಕೊಂದು, ಸುಟ್ಟುಹಾಕಿದ ಹೆಂಡತಿ; 10 ವರ್ಷಗಳ ಬಳಿಕ ಸೆರೆ ಸಿಕ್ಕ ಹಂತಕಿ

ಪರಸ್ಪರ ಪ್ರೀತಿಸಿ, ಹಿಂದೂ ಶಾಸ್ತ್ರದಂತೆ ಮದುವೆಯಾದ ಇಬ್ಬರು ಯುವತಿಯರು; ಸಲಿಂಗಿಗಳ ವಿವಾಹ ನೋಡಿ ಸ್ಥಳೀಯರು ಕಂಗಾಲು

(Bangalore Techie Wife finds husbands profile on gay dating apps in Mobile What Happened Next?)

ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?