ಲೈಂಗಿಕ ಕ್ರಿಯೆ ನಡೆಸಲು ನಿರಾಕರಿಸಿದ ಪತ್ನಿಯ ತಲೆಗೆ ಗುಂಡಿಕ್ಕಿದ ಪತಿ; ಬಳಿಕ ಮೂವರು ಪುಟಾಣಿ ಮಕ್ಕಳನ್ನು ನಾಲೆಗೆ ಎಸೆದು ಕೊಲೆ

ಲೈಂಗಿಕ ಕ್ರಿಯೆ ನಡೆಸಲು ನಿರಾಕರಿಸಿದ ಪತ್ನಿಯ ತಲೆಗೆ ಗುಂಡಿಕ್ಕಿದ ಪತಿ; ಬಳಿಕ ಮೂವರು ಪುಟಾಣಿ ಮಕ್ಕಳನ್ನು ನಾಲೆಗೆ ಎಸೆದು ಕೊಲೆ
ಸಾಂಕೇತಿಕ ಚಿತ್ರ

ಕಳೆದ 15 ದಿನಗಳಿಂದ ಪತ್ನಿ ಮತ್ತು ಪತಿಯ ನಡುವೆ ಲೈಂಗಿಕ ವಿಚಾರಕ್ಕೆ ಸಂಬಂಧಿಸಿದಂತೆ ಮನಸ್ತಾಪ ಉಂಟಾಗಿದ್ದು, ಲೈಂಗಿಕ ಕ್ರಿಯೆ ನಡೆಸದಿದ್ದರೆ ಜೀವ ತೆಗೆಯುವುದಾಗಿ ಬೆದರಿಕೆ ಹಾಕಿದ್ದಾನೆ. ಅಷ್ಟಾದ ನಂತರವೂ ಪತ್ನಿ ಡೋಲಿ ಜಗ್ಗದಿದ್ದಾಗ ಕುಪಿತನಾದ ಪಪ್ಪುಕುಮಾರ್ ತಲೆಗೆ ಗುಂಡಿಟ್ಟು ಹತ್ಯೆ ಮಾಡಿದ್ದಾನೆ.

Skanda

|

May 27, 2021 | 2:47 PM

ಲಕ್ನೋ: ಉತ್ತರಪ್ರದೇಶ ರಾಜ್ಯದ ಮುಝಾಫರ್​ ನಗರದ ಬಳಿ ನಡೆದ ದುರ್ಘಟನೆಯಲ್ಲಿ ಲೈಂಗಿಕ ಕ್ರಿಯೆಗೆ ಸಮ್ಮತಿ ನೀಡದ ಹೆಂಡತಿಗೆ ಪತಿ ಗುಂಡಿಕ್ಕಿ ಕೊಂದಿದ್ದಾನೆ. ಕಳೆದ ಹದಿನೈದು ದಿನಗಳಿಂದ ಪತ್ನಿ ತನ್ನೊಟ್ಟಿಗೆ ದೈಹಿಕವಾಗಿ ಸೇರುತ್ತಿರಲಿಲ್ಲ ಎಂಬ ಸಿಟ್ಟಿಗೆ ಪಪ್ಪುಕುಮಾರ್​ ಎಂಬಾತ ಈ ಕೃತ್ಯ ನಡೆಸಿದ್ದು, ಹೆಂಡತಿಗೆ ಗುಂಡಿಕ್ಕಿದ ಬಳಿಕ ತನ್ನ ಮೂವರು ಪುಟ್ಟ ಮಕ್ಕಳನ್ನು ಗಂಗಾ ನಾಲೆಗೆ ಎಸೆದಿದ್ದಾನೆ. ಈ ಬಗ್ಗೆ ಪುರ್ಕಜಿ ಠಾಣೆಯ ಪೊಲೀಸರು ಮಾಹಿತಿ ನೀಡಿದ್ದು, ನಾಲೆಗೆ ಎಸೆಯಲಾದ ಮೂವರು ಮಕ್ಕಳು ಇದುವರೆಗೆ ಪತ್ತೆಯಾಗಿಲ್ಲ ಎನ್ನುವುದನ್ನೂ ತಿಳಿಸಿದ್ದಾರೆ.

ಗುಂಡೇಟಿಗೆ ಬಲಿಯಾದ ಮೃತ ದುರ್ದೈವಿಯನ್ನು ಡೋಲಿ (35 ವರ್ಷ) ಎಂದು ಗುರುತಿಸಲಾಗಿದ್ದು, ನಾಲೆಗೆ ಎಸೆಯಲ್ಪಟ್ಟ ಮೂವರು ಮಕ್ಕಳು ಸಾನಿಯಾ (5 ವರ್ಷ), ವಂಶ್ (3 ವರ್ಷ) ಹಾಗೂ ಆರ್ಷಿತಾ (18 ತಿಂಗಳು) ಎಂದು ತಿಳಿದುಬಂದಿದೆ. ಮಂಗಳವಾರ (ಮೇ 24) ಸಂಜೆ ಲೈಂಗಿಕ ಕ್ರಿಯೆಗಾಗಿ ಹೆಂಡತಿ ಒಪ್ಪದಿದ್ದಾಗ ತಲೆಗೆ ಗುಂಡಿಕ್ಕಿದ ಪಪ್ಪು ಕುಮಾರ್, ಹೆಂಡತಿಯನ್ನು ಕೊಂದ ತಕ್ಷಣವೇ ಮಕ್ಕಳನ್ನು ನಾಲೆಯ ನೀರಿಗೆ ಎಸೆದಿರುವುದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ.

ಘಟನೆಯ ಬಳಿಕ ತಲೆಮರೆಸಿಕೊಂಡಿದ್ದ ಆರೋಪಿ ಪಪ್ಪು ಕುಮಾರ್ ನಿನ್ನೆ (ಮೇ 25) ಮುಂಜಾನೆಯ ವೇಳೆಗೆ ಪೊಲೀಸರ ಬಲೆಗೆ ಬಿದ್ದಿದ್ದು, ಇದುವರೆಗೆ ಮೂವರು ಮಕ್ಕಳ ಶವ ಪತ್ತೆಯಾಗಿಲ್ಲ. ಆರೋಪಿ ಹೇಳುತ್ತಿರುವಂತೆ ಕಳೆದ 15 ದಿನಗಳಿಂದ ಪತ್ನಿ ಮತ್ತು ಆತನ ನಡುವೆ ಲೈಂಗಿಕ ವಿಚಾರಕ್ಕೆ ಸಂಬಂಧಿಸಿದಂತೆ ಮನಸ್ತಾಪ ಉಂಟಾಗಿದ್ದು, ಲೈಂಗಿಕ ಕ್ರಿಯೆ ನಡೆಸದಿದ್ದರೆ ಜೀವ ತೆಗೆಯುವುದಾಗಿ ಬೆದರಿಕೆ ಹಾಕಿದ್ದಾನೆ. ಅಷ್ಟಾದ ನಂತರವೂ ಪತ್ನಿ ಡೋಲಿ ಜಗ್ಗದಿದ್ದಾಗ ಕುಪಿತನಾದ ಪಪ್ಪುಕುಮಾರ್ ತಲೆಗೆ ಗುಂಡಿಟ್ಟು ಹತ್ಯೆ ಮಾಡಿದ್ದಾನೆ. ಆದರೆ, ಹೆಂಡತಿಯನ್ನು ಕೊಲೆಗೈದ ನಂತರ ಮಕ್ಕಳ ಬಗ್ಗೆ ಚಿಂತೆ ಶುರುವಾದ ಕಾರಣ ಅವರನ್ನೂ ಕೊಲ್ಲಲು ನಿರ್ಧರಿಸಿ ನಾಲೆಗೆ ಎಸೆದಿದ್ದಾನೆ.

ಕೆಲ ಮೂಲಗಳ ಪ್ರಕಾರ ಮೃತ ಮಹಿಳೆಯು ಸುಮಾರು ಹತ್ತು ವರ್ಷಗಳ ಹಿಂದೆ ಪಪ್ಪು ಕುಮಾರ್ ಸಹೋದರನನ್ನು ವಿವಾಹವಾಗಿದ್ದು, ಆತ ಮೃತಪಟ್ಟ ಬಳಿಕ ಪಪ್ಪು ಕುಮಾರನನ್ನು ವರಿಸಿದ್ದಾರೆ.

ಇದನ್ನೂ ಓದಿ: ಪತಿಗೆ ಕೆಲಸ ನೀಡಿ ಎಂದಿದ್ದಕ್ಕೆ ಗ್ರಾಮ ಪಂಚಾಯತಿ ಸದಸ್ಯೆ ಗಂಡನಿಂದ ಲೈಂಗಿಕ ಕಿರುಕುಳ; ಮಹಿಳೆಯಿಂದ ದೂರು ದಾಖಲು 

Husband Kills Wife: ಬಾಯಿಗೆ ಬಟ್ಟೆ ಇಟ್ಟು ಪತ್ನಿ ಕೊಲೆ ಮಾಡಿದ ಪತಿರಾಯ ಅರೆಸ್ಟ್

Follow us on

Related Stories

Most Read Stories

Click on your DTH Provider to Add TV9 Kannada