ಪತಿಗೆ ಕೆಲಸ ನೀಡಿ ಎಂದಿದ್ದಕ್ಕೆ ಗ್ರಾಮ ಪಂಚಾಯತಿ ಸದಸ್ಯೆ ಗಂಡನಿಂದ ಲೈಂಗಿಕ ಕಿರುಕುಳ; ಮಹಿಳೆಯಿಂದ ದೂರು ದಾಖಲು

ಗದಗ ತಾಲೂಕಿನ ಹುಯಿಲಗೋಳ ಗ್ರಾಮ ಪಂಚಾಯತಿ ಸದಸ್ಯೆ ನೀಲವ್ವ ಎಂಬುವರ ಪತಿ ರಮೇಶ ಕಡಿಯವರ ಮಹಿಳೆಗೆ ಕಿರುಕುಳ ನೀಡಿದ ವ್ಯಕ್ತಿ. ನೀಲವ್ವ ಹೆಸರಿಗೆ ಮೇಂಬರ್ ಅಷ್ಟೇ. ಅಲ್ಲಿ ನಡೆಯುವುದು ಗಂಡ ರಮೇಶ್ ದರ್ಬಾರ್. ಸದ್ಯ ನೊಂದ ಮಹಿಳೆ ಗದಗ ಗ್ರಾಮೀಣ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ

ಪತಿಗೆ ಕೆಲಸ ನೀಡಿ ಎಂದಿದ್ದಕ್ಕೆ ಗ್ರಾಮ ಪಂಚಾಯತಿ ಸದಸ್ಯೆ ಗಂಡನಿಂದ ಲೈಂಗಿಕ ಕಿರುಕುಳ; ಮಹಿಳೆಯಿಂದ ದೂರು ದಾಖಲು
ರಮೇಶ ಕಡಿಯವರ
Follow us
preethi shettigar
|

Updated on:May 21, 2021 | 3:47 PM

ಗದಗ: ಗ್ರಾಮ ಪಂಚಾಯತಿಯಲ್ಲಿ ಕೆಲಸದಲ್ಲಿದ್ದ ಗಂಡನನ್ನು ಕೆಲಸದಿಂದ ತೆಗೆಯಬೇಡಿ ಎಂದು ಕೇಳಿಕೊಂಡ ಪತ್ನಿಗೆ ಲೈಂಗಿಕ ಕಿರುಕುಳ ನೀಡಿದ ಘಟನೆ ಗದಗ ಜಿಲ್ಲೆಯ ಹುಯಿಲಗೋಳ ಗ್ರಾಮದಲ್ಲಿ ನಡೆದಿದೆ. ಗ್ರಾಮ ಪಂಚಾಯತಿಯಲ್ಲಿ ಪಂಪ್​ ಆಪರೇಟರ್ ಆಗಿದ್ದ ವ್ಯಕ್ತಿಗೆ ಕಳೆದ ಹಲವು ದಿನಗಳಿಂದ ಆರೋಗ್ಯ ಸರಿ ಇರಲಿಲ್ಲ. ಹೀಗಾಗಿ ಎರಡು ತಿಂಗಳು ರಜೆ ಹಾಕಿದ್ದರು. ಆದರೆ ಇದನ್ನೇ ನೆಪ ಮಾಡಿಕೊಂಡ ಗ್ರಾಮ ಪಂಚಾಯತಿಯವರು ಆತನನ್ನು ಕೆಲಸದಿಂದ ತೆಗೆದಿದ್ದಾರೆ. ಹೀಗಾಗಿ ಪಂಪ್​ ಆಪರೇಟರ್ ಪತ್ನಿ ತನ್ನ ಗಂಡನನ್ನು ಮತ್ತೆ ಕೆಲಸಕ್ಕೆ ತೆಗೆದುಕೊಳ್ಳುವಂತೆ ಕೇಳಿಕೊಂಡಿದ್ದಾರೆ. ಆದರೆ ಸಹಾಯ ಕೇಳಿದ ಮಹಿಳೆಯೊಂದಿಗೆ ಅಸಭ್ಯವಾಗಿ ನಡೆದುಕೊಂಡಿದ್ದಾರೆ.

ಗದಗ ತಾಲೂಕಿನ ಹುಯಿಲಗೋಳ ಗ್ರಾಮ ಪಂಚಾಯತಿ ಸದಸ್ಯೆ ನೀಲವ್ವ ಎಂಬುವರ ಪತಿ ರಮೇಶ ಕಡಿಯವರ ಮಹಿಳೆಗೆ ಕಿರುಕುಳ ನೀಡಿದ ವ್ಯಕ್ತಿ. ನೀಲವ್ವ ಹೆಸರಿಗೆ ಮೇಂಬರ್ ಅಷ್ಟೇ. ಅಲ್ಲಿ ನಡೆಯುವುದು ಗಂಡ ರಮೇಶ್ ದರ್ಬಾರ್. ಸದ್ಯ ಈ ರಮೇಶನ ವಿರುದ್ಧ ಪಂಪ್ ಆಪರೇಟರ್ ಹೆಂಡತಿಯನ್ನ ಮಂಚಕ್ಕೆ ಕರೆದ ಆರೋಪ ಕೇಳಿ ಬಂದಿದ್ದು, ನೊಂದ ಮಹಿಳೆ ಗದಗ ಗ್ರಾಮೀಣ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಕಿರುಕುಳಕ್ಕೆ ಒಳಗಾದ ರೇಣುಕಾ ಅವರ ಗಂಡ ಹನಮಂತಪ್ಪ ಗಂಗಪ್ಪನವರ್ ಕಳೆದ 18 ವರ್ಷದಿಂದ ಪಂಚಾಯತಿಯಲ್ಲಿ ಪಂಪ್ ಆಪರೇಟರ್ ಕೆಲಸ ಮಾಡುತ್ತಿದ್ದಾರೆ. ಎರಡು ತಿಂಗಳು ಹಿಂದೆ ಕೈ ಫ್ರ್ಯಾಕ್ಚರ್ ಆಯ್ತು ಎಂದು ರಜೆ ಮಾಡಿದ್ದರು. ಹೀಗಾಗಿ ಕೆಲಸಕ್ಕೆ ಬರಲಿಲ್ಲ ಎಂದು ನೆಪವೊಡ್ಡಿ ಮೇಂಬರ್ ಮೇಡಂ ಮತ್ತು ಅವರ ಗಂಡ ರಮೇಶ ಕೆಲಸಕ್ಕೆ ಬರಬೇಡ ಎಂದಿದ್ದಾರೆ. ಮನೆಯ ಪರಿಸ್ಥಿತಿಯೂ ಬಿಗಡಾಯಿಸ್ತಿತ್ತು, ಹೀಗಾಗಿ ಹನಮಂತಪ್ಪ ಹೆಂಡತಿ ರೇಣುಕಾ, ಪಂಚಾಯತಿ ಸದಸ್ಯರ ಬಳಿ ಕೆಲಸಕ್ಕೆ ಸೇರಿಸುವಂತೆ ಬೇಡಿಕೊಂಡಿದ್ದಾಳೆ‌. ರಮೇಶನಿಗೂ ಫೋನ್ ಮೂಲಕ ಸಹಾಯ ಕೇಳಿದ್ದಾರೆ. ರೇಣುಕಾ ಅಸಹಾಯಕತೆಯನ್ನ ಬಂಡವಾಳ ಮಾಡಿಕೊಂಡ ರಮೇಶ, ಆಕೆಗೆ ಲೈಂಗಿಕ ಕಿರುಕುಳ ನೀಡಿದ್ದಾನೆ. ಹೀಗಾಗಿ ನೊಂದ ಕುಟುಂಬ ರಮೇಶನ ವಿರುದ್ಧ ಗದಗ ಗ್ರಾಮೀಣ ಪೊಲೀಸ್​ ಠಾಣೆಯಲ್ಲಿ ದೂರು ದಾಖಲು ಮಾಡಿದೆ.

ಗಂಡನನ್ನು ಕೆಲಸಕ್ಕೆ ಸೇರಿಸಿ ಅಂದರೆ ಲೈಂಗಿಕ ಕಿರುಕುಳ ನೀಡಿದ್ದಾನೆ. ಈ ಕುರಿತು ಗದಗ ಗ್ರಾಮೀಣ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ. ಅಸಹಾಯಕತೆಯನ್ನು ಬಂಡವಾಳ ಮಾಡಿಕೊಳ್ಳಲು ಹೊರಟ ಇಂತವರ ವಿರುದ್ಧ ಸದ್ಯ ಕಾನೂನುಕ್ರಮ ತೆಗೆದುಕೊಳ್ಳಬೇಕಾಗಿದೆ.

ಇದನ್ನೂ ಓದಿ:

ಸಹೋದ್ಯೋಗಿಯ 14ವರ್ಷದ ಪುತ್ರಿ ಮೇಲೆ ಲೈಂಗಿಕ ದೌರ್ಜನ್ಯ; ಐಪಿಎಸ್​ ಅಧಿಕಾರಿ ವಿರುದ್ಧ ಚಾರ್ಜ್​ಶೀಟ್​

ಮೈಸೂರಿನ 9 ವರ್ಷದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣ; ಅಪರಾಧಿಗೆ 20 ವರ್ಷ ಕಠಿಣ ಶಿಕ್ಷೆ, 50 ಸಾವಿರ ದಂಡ

Published On - 3:44 pm, Fri, 21 May 21

ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ