ಸಹೋದ್ಯೋಗಿಯ 14ವರ್ಷದ ಪುತ್ರಿ ಮೇಲೆ ಲೈಂಗಿಕ ದೌರ್ಜನ್ಯ; ಐಪಿಎಸ್​ ಅಧಿಕಾರಿ ವಿರುದ್ಧ ಚಾರ್ಜ್​ಶೀಟ್​

ಆರೋಪಿ ಗೌರವ್​ ಉಪಾಧ್ಯಾಯ ಅವರು 2012ನೇ ಬ್ಯಾಚ್​​ನ ಐಪಿಎಸ್​ ಅಧಿಕಾರಿಯಾಗಿದ್ದು, ಮೂಲತಃ ಉತ್ತರಪ್ರದೇಶದವರು. 2019ರ ಡಿಸೆಂಬರ್​​ನಲ್ಲಿ ಕರ್ಬಿ ಅಂಗ್ಲಾಂಗ್​ ಪೊಲೀಸ್​ ಠಾಣೆಯಲ್ಲಿ ಸುಪರಿಂಟೆಂಡೆಂಟ್​ ಆಗಿದ್ದ ಸಂದರ್ಭದಲ್ಲಿ, ತನ್ನ ಸಹೋದ್ಯೋಗಿಯೊಬ್ಬರ ಮಗಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದರು.

ಸಹೋದ್ಯೋಗಿಯ 14ವರ್ಷದ ಪುತ್ರಿ ಮೇಲೆ ಲೈಂಗಿಕ ದೌರ್ಜನ್ಯ; ಐಪಿಎಸ್​ ಅಧಿಕಾರಿ ವಿರುದ್ಧ ಚಾರ್ಜ್​ಶೀಟ್​
ಪ್ರಾತಿನಿಧಿಕ ಚಿತ್ರ
Follow us
Lakshmi Hegde
|

Updated on:May 19, 2021 | 5:49 PM

ಸಹೋದ್ಯೋಗಿಯ 14 ವರ್ಷದ ಪುತ್ರಿಯ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಆರೋಪದಡಿ ಐಪಿಎಸ್ ಅಧಿಕಾರಿಯೊಬ್ಬರ ವಿರುದ್ಧ ಅಸ್ಸಾಂ ಪೊಲೀಸರು ಪ್ರಕರಣ ದಾಖಲಿಸಿ, ಚಾರ್ಜ್​ಶೀಟ್​ ಹಾಕಿದ್ದಾರೆ. ಈ ಐಪಿಎಸ್​ ಅಧಿಕಾರಿಯ ಹೆಸರು ಗೌರವ್​ ಉಪಾಧ್ಯಾಯ ಎಂದಾಗಿದ್ದು, ಇವರ ವಿರುದ್ಧ ಮೊದಲು ಪ್ರಕರಣ ದಾಖಲಿಸಿದ್ದ ಪೊಲೀಸರು ತನಿಖೆ ನಡೆಸಿದ್ದರು. ತನಿಖೆಯಲ್ಲಿ ಇವರ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಚಾರ್ಜ್​ಶೀಟ್ ಸಲ್ಲಿಸಲಾಗಿದೆ ಎಂದು ಅಪರಾಧ ತನಿಖಾ ವಿಭಾಗದ ಉಪಅಧೀಕ್ಷಕ ಪ್ರದೀಪ್​ ಕುಮಾರ್​ ದಾಸ್ ತಿಳಿಸಿದ್ದಾರೆ. ಭಾರತೀಯ ದಂಡಸಂಹಿತೆಯ 354, 354 ಎ ಮತ್ತು ಪೊಸ್ಕೊ ಕಾಯ್ದೆಯಡಿ ಮಾರ್ಚ್​ ತಿಂಗಳಲ್ಲಿಯೇ ಚಾರ್ಜ್​ಶೀಟ್ ಹಾಕಲಾಗಿದ್ದರೂ ಇನ್ನೂ ಅದರ ವಿಚಾರಣೆ ಶುರುವಾಗಿಲ್ಲ.

ಆರೋಪಿ ಗೌರವ್​ ಉಪಾಧ್ಯಾಯ ಅವರು 2012ನೇ ಬ್ಯಾಚ್​​ನ ಐಪಿಎಸ್​ ಅಧಿಕಾರಿಯಾಗಿದ್ದು, ಮೂಲತಃ ಉತ್ತರಪ್ರದೇಶದವರು. 2019ರ ಡಿಸೆಂಬರ್​​ನಲ್ಲಿ ಕರ್ಬಿ ಅಂಗ್ಲಾಂಗ್​ ಪೊಲೀಸ್​ ಠಾಣೆಯಲ್ಲಿ ಸುಪರಿಂಟೆಂಡೆಂಟ್​ ಆಗಿದ್ದ ಸಂದರ್ಭದಲ್ಲಿ, ತನ್ನ ಸಹೋದ್ಯೋಗಿಯೊಬ್ಬರ ಮಗಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದರು. ಈ ಬಾಲಕಿಯ ತಾಯಿ ಹಿರಿಯ ಪೊಲೀಸ್​ ಅಧಿಕಾರಿಯಾಗಿದ್ದಾರೆ. 2019ರ ಡಿಸೆಂಬರ್​​ನಲ್ಲಿ ಇವರು ತಮ್ಮ 14ವರ್ಷದ ಮಗಳು ಮತ್ತು 9ವರ್ಷದ ಮಗನೊಂದಿಗೆ ಗೌರವ್​ ಉಪಾಧ್ಯಾಯ ಮಗನ ಹುಟ್ಟುಹಬ್ಬದ ಪಾರ್ಟಿಗಾಗಿ ಬಂದಿದ್ದರು. ಪಾರ್ಟಿಯೆಲ್ಲ ಮುಗಿದ ಬಳಿಕ ಮಹಿಳಾ ಅಧಿಕಾರಿ ವಾಶ್​ರೂಂಗೆ ಹೋದ ಸಂದರ್ಭದಲ್ಲಿ ಅವರ ಮಗಳ ತುಟಿಯ ಮೇಲೆ ಎರಡು ಬಾರಿ ಚುಂಬಿಸಿದ್ದರು. ಆ ಸಮಯದಲ್ಲಿ ಆಕೆಯ ಸಹೋದರ ಅಲ್ಲೇ ಇದ್ದ. ಅಂದು ಮಧ್ಯರಾತ್ರಿ ಸುಮಾರು 2.30ರಹೊತ್ತಿಗೆ ಉಪಾಧ್ಯಾಯನ ಆ ಮೂವರನ್ನೂ ಅವರು ಬುಕ್​ ಮಾಡಿದ್ದ ಹೋಟೆಲ್​ಗೆ ತಲುಪಿಸಿದ್ದರು. ಹೋಟೆಲ್​ಗೆ ಹೋದ ಬಳಿಕ ಮಹಿಳಾ ಅಧಿಕಾರಿ ಮತ್ತು ಆಕೆಯ ಪುತ್ರ ಬೆಡ್​ರೂಂನಲ್ಲಿ ಇದ್ದಾಗ, ಇವರು ಬಾಲಕಿಯನ್ನು ಅನುಚಿತವಾಗಿ ಸ್ಪರ್ಶಿಸಿದ್ದರು. ಹಾಗೇ ಮತ್ತೊಮ್ಮೆ ಚುಂಬಿಸಲು ಮುಂದಾದಾಗ ತಪ್ಪಿಸಿಕೊಂಡು, ಬೆಡ್​ರೂಂಗೆ ಹೋಗಿ ಬಾಗಿಲು ಹಾಕಿಕೊಂಡಿದ್ದಳು. ನಂತರ ಬಾಲಕಿ ತನ್ನ ತಾಯಿಯ ಬಳಿ ಎಲ್ಲವನ್ನೂ ಹೇಳಿಕೊಂಡಿದ್ದಳು. ಆಗ ಗೌರವ್​ ಉಪಾಧ್ಯಾಯ ಕ್ಷಮೆಯನ್ನೂ ಕೇಳಿದ್ದರು.

ಆದರೆ ಸ್ವತಃ ಪೊಲೀಸ್ ಅಧಿಕಾರಿಯಾಗಿರುವ ಮಹಿಳೆ 2020 ರ ಜನವರಿ 3ರಂದು ಗುವಾಹಟಿಯ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಅದಾದ ಬಳಿಕ ಪ್ರಕರಣದ ತನಿಖೆಗಾಗಿ ಸಿಐಡಿಗೆ ವಹಿಸಲಾಗಿತ್ತು. ಗೌರವ್​ ಉಪಾಧ್ಯಾಯ ಬಾಲಕಿಗೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂಬುದಕ್ಕೆ ಪುರಾವೆ ಸಿಕ್ಕ ಹಿನ್ನೆಲೆಯಲ್ಲಿ ಅಸ್ಸಾಂ ಪೊಲೀಸರು ಚಾರ್ಜ್​ಶೀಟ್ ಸಲ್ಲಿಸಿದ್ದಾರೆ. ಇನ್ನು ಈ ಘಟನೆಯ ಬಳಿಕ ಬಾಲಕಿ ಖಿನ್ನತೆಗೆ ಜಾರಿದ್ದಾಳೆ ಎಂದೂ ಹೇಳಲಾಗಿದೆ.\

ಇದನ್ನೂ ಓದಿ: WhatsApp privacy policy: ವಾಟ್ಸಾಪ್ ಖಾಸಗಿತನ ನೀತಿ ಯುರೋಪ್​ನಲ್ಲೊಂದು ಭಾರತದಲ್ಲೊಂದು ಏಕೆ ಎಂದ ಸರ್ಕಾರ

ಲಾಕ್​ಡೌನ್ ವೇಳೆ ಪೊಲೀಸರಿಂದ ಲಾಠಿಚಾರ್ಜ್ ಆರೋಪ; ಎಲ್ಲಾ ಪೊಲೀಸರ ಮೇಲೆ ವಿಚಾರಣೆ ಸಾಧ್ಯವಿಲ್ಲ: ಹೈಕೋರ್ಟ್

IPS officer charge sheeted for sexually assault In Assam

Published On - 5:47 pm, Wed, 19 May 21

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ