WhatsApp privacy policy: ವಾಟ್ಸಾಪ್ ಖಾಸಗಿತನ ನೀತಿ ಯುರೋಪ್​ನಲ್ಲೊಂದು ಭಾರತದಲ್ಲೊಂದು ಏಕೆ ಎಂದ ಸರ್ಕಾರ

ವಾಟ್ಸಾಪ್​ ಕಂಪೆನಿಗೆ ಪತ್ರ ಬರೆದಿರುವ ಕೇಂದ್ರ ಸರ್ಕಾರವು ಖಾಸಗಿತನ ನೀತಿಯನ್ನು ಭಾರತದಲ್ಲಿ ಜಾರಿ ಮಾಡುವುದು ಸಾಧ್ಯವಿಲ್ಲ ಎಂದು ಮತ್ತೊಮ್ಮೆ ಹೇಳಿದೆ.

WhatsApp privacy policy: ವಾಟ್ಸಾಪ್ ಖಾಸಗಿತನ ನೀತಿ ಯುರೋಪ್​ನಲ್ಲೊಂದು ಭಾರತದಲ್ಲೊಂದು ಏಕೆ ಎಂದ ಸರ್ಕಾರ
ವಾಟ್ಸ್​ಆ್ಯಪ್ ಪ್ರಾತಿನಿಧಿಕ ಚಿತ್ರ
Follow us
Srinivas Mata
|

Updated on: May 19, 2021 | 5:34 PM

ನವದೆಹಲಿ: ಫೇಸ್​ಬುಕ್ ಇಂಕ್ ಮಾಲೀಕತ್ವದ ವಾಟ್ಸಾಪ್​ಗೆ ಕೇಂದ್ರ ಸರ್ಕಾರವು ಮತ್ತೊಮ್ಮೆ ನಿರ್ದೇಶನ ನೀಡಿದ್ದು, ಮೇ 15, 2021ರಿಂದ ಜಾರಿಗೆ ಬಂದಿರುವ ಹೊಸ ಖಾಸಗಿ ನೀತಿಯನ್ನು ಹಿಂಪಡೆಯುವಂತೆ ತಿಳಿಸಿದೆ. ಎಲೆಕ್ಟ್ರಾನಿಕ್ಸ್ ಮತ್ತು ಐಟಿ ಸಚಿವಾಲಯದಿಂದ ವಿಶ್ವದ ಅತಿ ದೊಡ್ಡ ಮೆಸೇಜಿಂಗ್ ಆ್ಯಪ್​ಗೆ ಎರಡನೇ ಪತ್ರವನ್ನು ಬರೆಯಲಾಗಿದೆ. ಒಂದು ವಾರದೊಳಗೆ ಇದಕ್ಕೆ ಉತ್ತರವನ್ನು ನೀಡುವಂತೆ ಕೂಡ ತಿಳಿಸಲಾಗಿದೆ. ಒಂದು ವೇಳೆ ಸಮಾಧಾನಕರವಾದ ಉತ್ತರ ಬಾರದಿದ್ದಲ್ಲಿ ಕಾನೂನುಬದ್ಧವಾದ ಕ್ರಮವನ್ನು ತೆಗೆದುಕೊಳ್ಳಲಾಗುವುದು ಎಂದು ತಿಳಿಸಲಾಗಿದೆ ಎಂಬುದಾಗಿ ಮೂಲಗಳು ತಿಳಿಸಿವೆ. “ಭಾರತದ ಕಾನೂನು ಅಡಿಯಲ್ಲಿ ಇರುವ ವಿವಿಧ ಆಯ್ಕೆಗಳನ್ನು ಭಾರತ ಸರ್ಕಾರವು ಗಮನಿಸುತ್ತಿದೆ,” ಎಂದು ಹೇಳಲಾಗಿದೆ. ವಾಟ್ಸಾಪ್​ನಿಂದ ಹೊಸ ಖಾಸಗಿತನದ ನೀತಿಯಲ್ಲಿ ತಾರತಮ್ಯ ಮಾಡಲಾಗುತ್ತಿದೆ. ಯುರೋಪ್​ನಲ್ಲಿ ಅದನ್ನು ಒಪ್ಪದಿರುವುದಕ್ಕೂ ಬಳಕೆದಾರರಿಗೆ ಅವಕಾಶ ಇದೆ. ಆದರೆ ಭಾರತೀಯ ಬಳಕೆದಾರರಿಗೆ ಆ ಅವಕಾಶ ಇಲ್ಲ ಎಂಬುದನ್ನು ಪತ್ರದಲ್ಲಿ ತಿಳಿಸಲಾಗಿದೆ.

ಯಾರು ಖಾಸಗಿತನ ನಿಯಮ ಒಪ್ಪುವುದಿಲ್ಲವೋ ಅವರ ಖಾತೆಯನ್ನು ತಕ್ಷಣಕ್ಕೆ ಡಿಲೀಟ್ ಮಾಡುವುದಿಲ್ಲ. ಆದರೆ ಕ್ರಮೇಣ ವಾಟ್ಸಾಪ್​ ಫೀಚರ್​ಗಳ ಬಳಕೆ ಮಾಡುವುದನ್ನು ಮಿತಿಗೊಳಿಸುತ್ತಾ ಸಾಗುತ್ತದೆ. ಪತ್ರದಲ್ಲಿ ತಿಳಿಸಿರುವಂತೆ, ನಿಮಗೆ ಗೊತ್ತಿದೆ, ಭಾರತೀಯ ನಾಗರಿಕರು ದೈನಂದಿನ ಜೀವನದಲ್ಲಿ ಸಂವಹನಕ್ಕೆ ವಾಟ್ಸಾಪ್ ಮೇಲೆ ಅವಲಂಬಿಸಿದ್ದಾರೆ. ಇದು ಸಮಸ್ಯೆ ಮಾತ್ರ ಅಲ್ಲ, ಜತೆಗೆ ಬೇಜವಾಬ್ದಾರಿ ಕೂಡ ಹೌದು. ಈಗಿನ ಅವಕಾಶ ಬಳಸಿಕೊಂಡು ವಾಟ್ಸಾಪ್​ ನ್ಯಾಯಸಮ್ಮತ ಅಲ್ಲದ ನಿಯಮ ಮತ್ತು ನಿಬಂಧನೆಗಳನ್ನು ಭಾರತೀಯರ ಮೇಲೆ ಹೇರಲಾಗುತ್ತಿದೆ. ಅದರಲ್ಲೂ ಭಾರತೀಯರು ಮತ್ತು ಯುರೋಪ್ ಬಳಕೆದಾರರ ಮಧ್ಯೆ ತಾರತಮ್ಯ ಮಾಡಲಾಗುತ್ತಿದೆ ಎನ್ನಲಾಗಿದೆ.

ಖಾಸಗಿತನದ ನೀತಿಯನ್ನು ಒಪ್ಪಿಕೊಳ್ಳುವುದಕ್ಕೆ ಕಾಲಾವಕಾಶ ಮುಂದೂಡುವುದರಿಂದ ಏನೂ ಪ್ರಯೋಜನ ಇಲ್ಲ. ಅದರಿಂದ ಭಾರತದ ಬಳಕೆದಾರರ ಡೇಟಾ ಭದ್ರತೆ ಮತ್ತು ಆಯ್ಕೆಯನ್ನು, ಮಾಹಿತಿ ನೀತಿಯ ಮೌಲ್ಯವನ್ನು ಗೌರವಿಸಿದಂತೆ ಆಗುವುದಿಲ್ಲ ಎಂದು ಸಚಿವಾಲಯದ ಸಂವಹನದಲ್ಲಿ ಹೇಳಲಾಗಿದೆ. ಅಂದಹಾಗೆ ಸಚಿವಾಲಯವು ಇದೇ ನಿಲವನ್ನು ದೆಹಲಿ ಹೈಕೋರ್ಟ್​ನಲ್ಲಿ ಸಹ ತೆಗೆದುಕೊಂಡಿತ್ತು. ಅಂದಹಾಗೆ ಈ ವಿಚಾರ ನ್ಯಾಯಾಂಗ ವ್ಯಾಪ್ತಿಯಲ್ಲಿದೆ ಎಂದು ಮೂಲಗಳು ತಿಳಿಸಿದೆ.

ಭಾರತೀಯ ನಾಗರಿಕರ ಹಕ್ಕು ಮತ್ತು ಹಿತಾಸಕ್ತಿಯನ್ನು ರಕ್ಷಿಸುವುದು ಸಾರ್ವಭೌಮ ದೇಶವೊಂದರ ಜವಾಬ್ದಾರಿ. ವಾಟ್ಸಾಪ್ ತನ್ನ ಹೊಸ ಖಾಸಗಿ ನೀತಿಯ ಮೂಲಕ ಹೇಗೆ ನಿಯಮಗಳನ್ನು ಮೀರುತ್ತಿದೆ ಎಂಬ ಬಗ್ಗೆ ಗಮನವನ್ನು ಸೆಳೆಯಲಾಗಿದೆ. ಅಂದ ಹಾಗೆ ಈ ಪತ್ರವನ್ನು ಮೇ 18, 2021ರಂದು ಬರೆಯಲಾಗಿದೆ.

ಇದನ್ನೂ ಓದಿ: WhatsApp Privacy Policy: ವಾಟ್ಸಾಪ್ ಖಾಸಗಿತನ ನೀತಿ 2021 ಒಪ್ಪಿಕೊಳ್ಳಲು ಮೇ 15 ಕೊನೆ ದಿನ; ಸಮ್ಮತಿಸದವರ ಖಾತೆ ಏನಾಗುತ್ತೆ?

(Indian government (Electronic and IT ministry) writes letter to WhatsApp company to withdraw new privacy policy)

ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್