Cyclone Yaas ಮೇ 25ರ ವೇಳೆಗೆ ರೂಪುಗೊಳ್ಳಲಿರುವ ಯಾಸ್ ಚಂಡಮಾರುತ ಪಶ್ಚಿಮ ಬಂಗಾಳ, ಒಡಿಶಾದತ್ತ ಸಾಗುವ ಸಾಧ್ಯತೆ: ಭಾರತೀಯ ಹವಾಮಾನ ಇಲಾಖೆ

ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳ ಮೇಲೆ ಪ್ರತ್ಯೇಕವಾದ ಸ್ಥಳಗಳಲ್ಲಿ ಭಾರೀ ಮಳೆಯೊಂದಿಗೆ ಹೆಚ್ಚಿನ ಸ್ಥಳಗಳಲ್ಲಿ ಸ್ವಲ್ಪ ಮತ್ತು ಮಧ್ಯಮ ಮಳೆಯು ಮೇ 22 ಮತ್ತು 23 ರಂದು ಸಂಭವಿಸುವ ಸಾಧ್ಯತೆಯಿದೆ.

Cyclone Yaas ಮೇ 25ರ ವೇಳೆಗೆ ರೂಪುಗೊಳ್ಳಲಿರುವ ಯಾಸ್ ಚಂಡಮಾರುತ ಪಶ್ಚಿಮ ಬಂಗಾಳ, ಒಡಿಶಾದತ್ತ ಸಾಗುವ ಸಾಧ್ಯತೆ: ಭಾರತೀಯ ಹವಾಮಾನ ಇಲಾಖೆ
ಪ್ರಾತಿನಿಧಿಕ ಚಿತ್ರ
Follow us
ರಶ್ಮಿ ಕಲ್ಲಕಟ್ಟ
|

Updated on:May 19, 2021 | 6:31 PM

ದೆಹಲಿ: ಯಾಸ್ ಚಂಡಮಾರುತವು ಮೇ 25 ರ ಸುಮಾರಿಗೆ ಬಂಗಾಳಕೊಲ್ಲಿಯಲ್ಲಿ ರೂಪುಗೊಳ್ಳುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ತಿಳಿಸಿದೆ. ನಂತರ, ಇದು ಮೇ 26 ರಂದು ಸಂಜೆ ವಾಯುವ್ಯ ದಿಕ್ಕಿಗೆ ತೆರಳಿ ಪಶ್ಚಿಮ ಬಂಗಾಳ ಮತ್ತು ಪಕ್ಕದ ಒಡಿಶಾ ತೀರವನ್ನು ತಲುಪುವ ಸಾಧ್ಯತೆಯಿದೆ. ಹವಾಮಾನ ಮತ್ತು ಸಾಗರದ ಪರಿಸ್ಥಿತಿಗಳು, ಸಂವಹನಕ್ಕೆ ಅನುಕೂಲಕರ ವಾತಾವರಣ, ಮತ್ತು ಸಮುದ್ರದ ಮೇಲ್ಮೈ ತಾಪಮಾನಗಳು ಮೇ 22 ರ ಸುಮಾರಿಗೆ ಅಂಡಮಾನ್ ಸಮುದ್ರ ಮತ್ತು ಪೂರ್ವ-ಮಧ್ಯ ಮತ್ತು ಆಗ್ನೇಯ ಬಂಗಾಳಕೊಲ್ಲಿಯ ಪಕ್ಕದ ಪ್ರದೇಶಗಳ ಮೇಲೆ ನಿರಂತರ ಮೋಡ ಕವಿದ ವಾತಾವರಣಕ್ಕೆ ಕಾರಣವಾಗಲಿದೆ. ಉತ್ತರ ಅಂಡಮಾನ್ ಸಮುದ್ರ ಮತ್ತು ಪಕ್ಕದ ಪೂರ್ವ-ಮಧ್ಯ ಬಂಗಾಳಕೊಲ್ಲಿಯಲ್ಲಿಯಲ್ಲಿ ಕಡಿಮೆ ಒತ್ತಡದ ಪ್ರದೇಶವು ರೂಪುಗೊಳ್ಳಲಿದೆ. ನಂತರದ 72 ಗಂಟೆಗಳಲ್ಲಿ ಇದು ಕ್ರಮೇಣ ಚಂಡಮಾರುತವು ತೀವ್ರಗೊಳ್ಳುವ ಸಾಧ್ಯತೆಯಿದೆ ಮತ್ತು ವಾಯುವ್ಯ ದಿಕ್ಕಿಗೆ ತೆರಳಿ ಮೇ 26 ರ ಸಂಜೆ ಪಶ್ಚಿಮ ಬಂಗಾಳ-ಒಡಿಶಾ ತೀರವನ್ನು ತಲುಪುತ್ತದೆ. ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳ ಮೇಲೆ ಪ್ರತ್ಯೇಕವಾದ ಸ್ಥಳಗಳಲ್ಲಿ ಭಾರೀ ಮಳೆಯೊಂದಿಗೆ ಹೆಚ್ಚಿನ ಸ್ಥಳಗಳಲ್ಲಿ ಸ್ವಲ್ಪ ಮತ್ತು ಮಧ್ಯಮ ಮಳೆಯು ಮೇ 22 ಮತ್ತು 23 ರಂದು ಸಂಭವಿಸುವ ಸಾಧ್ಯತೆಯಿದೆ. ಹೆಚ್ಚಿನ ಸ್ಥಳಗಳಲ್ಲಿ ಕಡಿಮೆ ಮತ್ತು ಮಧ್ಯಮ ಮಳೆಯಾಗಲಿದ್ದು ಮೇ 25 ರಿಂದ ಸಂಜೆ ಮಳೆ ಪ್ರಾರಂಭವಾಗುವ ಸಾಧ್ಯತೆ ಇದೆ. ಒಡಿಶಾ – ಪಶ್ಚಿಮ ಬಂಗಾಳ, ಪಕ್ಕದ ಅಸ್ಸಾಂ ಮತ್ತು ಮೇಘಾಲಯದ ಮೇಲೆ ಹೆಚ್ಚಿನ ಮಳೆಯಾಗಲಿದೆ.

ಮೇ 23 ರಂದು ಅಂಡಮಾನ್ ಸಮುದ್ರ ಮತ್ತು ಪಕ್ಕದ ಪೂರ್ವದ ಬಂಗಾಳಕೊಲ್ಲಿಯಲ್ಲಿ 45-55 ಕಿ.ಮೀ ವೇಗದಲ್ಲಿ ಗಾಳಿಯ ವೇಗವು ಮೇಲುಗೈ ಸಾಧಿಸುವ ಸಾಧ್ಯತೆಯಿದೆ. ಇದು ಮೇ 23 ರಿಂದ 50-60 ಕಿ.ಮೀ ವೇಗದಿಂದ ಗಂಟೆಗೆ 70 ಕಿ.ಮೀ ವೇಗದಲ್ಲಿ ಹೆಚ್ಚುವ ಸಾಧ್ಯತೆಯಿದೆ. ಮೇ 24 ಮತ್ತು 26 ರ ಅವಧಿಯಲ್ಲಿ ಮಧ್ಯ ಬಂಗಾಳಕೊಲ್ಲಿಯ ಪ್ರಮುಖ ಭಾಗಗಳಲ್ಲಿ ಮತ್ತು ಉತ್ತರ ಬಂಗಾಳಕೊಲ್ಲಿಗೆ ಮತ್ತು ಮೇ 25 ರಿಂದ 27 ರವರೆಗೆ ಒಡಿಶಾ – ಪಶ್ಚಿಮ ಬಂಗಾಳ-ಬಾಂಗ್ಲಾದೇಶದ ತೀರಗಳಲ್ಲಿ ಮತ್ತು ಹೊರಗಡೆ ಗಾಳಿಯ ವೇಗ ತೀವ್ರವಾಗಲಿದೆ.

ಮೇ 21 ರಿಂದ ಆಗ್ನೇಯ ಬಂಗಾಳ ಕೊಲ್ಲಿ ಮತ್ತು ದಕ್ಷಿಣ ಅಂಡಮಾನ್ ಸಮುದ್ರದ ಮೇಲೆ ಸಮುದ್ರದ ಸ್ಥಿತಿ ಒರಟಾಗಿರುತ್ತದೆ. ಮೇ 23 ರಂದು ಅಂಡಮಾನ್ ಸಮುದ್ರ ಮತ್ತು ಅದರ ಪಕ್ಕದ ಪೂರ್ವ ಮಧ್ಯದ ಕೊಲ್ಲಿಯ ಮೇಲೆ ಸಮುದ್ರದ ಪರಿಸ್ಥಿತಿಗಳು ಒರಟಾಗಿರುತ್ತವೆ.

ಏತನ್ಮಧ್ಯೆ, ಕೋಲ್ಕತ್ತಾದ ಪ್ರಾದೇಶಿಕ ಹವಾಮಾನ ಕೇಂದ್ರವು ಅಂತಹ ಯಾವುದೇ ಎಚ್ಚರಿಕೆ ನೀಡಿಲ್ಲ ಎಂದು ಹೇಳಿದರು. ಪ್ರಸ್ತುತ  ಕೇಂದ್ರ  ಬಿಡುಗಡೆ ಮಾಡಿದ ಪ್ರಕಟಣೆಯಲ್ಲಿ, “ಈಗಿನಂತೆ, ಮೇ 23 ರ ಸುಮಾರಿಗೆ ಪೂರ್ವ ಮಧ್ಯ ಬಂಗಾಳ ಕೊಲ್ಲಿ ಮತ್ತು ಅದರ ಪಕ್ಕದ ಪ್ರದೇಶದ ಮೇಲೆ ಕಡಿಮೆ ಒತ್ತಡ ರಚನೆಯಾಗುವ ಬಗ್ಗೆ ನಾವು ಹೇಳಿಕೆ ನೀಡಿದ್ದೇವೆ. ಇದರ ಅಭಿವೃದ್ಧಿಯನ್ನು ನಾವು ಸೂಕ್ಷ್ಮವಾಗಿ ಗಮನಿಸುತ್ತಿದ್ದೇವೆ ಎಂದಿದೆ.

ಮಾನ್ಸೂನ್ ಪೂರ್ವದ ಏಪ್ರಿಲ್-ಮೇ ಸಾಮಾನ್ಯವಾಗಿ ಪೂರ್ವ ಮತ್ತು ಪಶ್ಚಿಮ ಕರಾವಳಿಯಲ್ಲಿ ಚಂಡಮಾರುತಗಳ  ರೂಪುಗೊಳ್ಳುವಿಕೆಗೆ  ಸಾಕ್ಷಿಯಾಗುತ್ತದೆ. ಮೇ 2020 ರಲ್ಲಿ ಎರಡು ಚಂಡಮಾರುತಗಳು ಅಪ್ಪಳಿಸಿದ್ದವು.- ಸೂಪರ್ ಸೈಕ್ಲೋನಿಕ್ ಚಂಡಮಾರುತ ಆಂಫಾನ್ ಮತ್ತು  ಚಂಡಮಾರುತ ನಿಸರ್ಗಾ – ಇದು ಕ್ರಮವಾಗಿ ಪೂರ್ವ ಮತ್ತು ಪಶ್ಚಿಮ ಕರಾವಳಿಯನ್ನು ಅಪ್ಪಳಿಸಿತು.

ಇದನ್ನೂ ಓದಿ: Cyclone Yaas: ತೌಕ್ತೆ ಬೆನ್ನಲ್ಲೇ ಮತ್ತೊಂದು ಚಂಡಮಾರುತ; ಮೇ 23ರ ಸುಮಾರಿಗೆ ಏಳಲಿದೆ ಯಾಸ್

Cyclone Tauktae in Karnataka: ತೌಕ್ತೆ ಚಂಡಮಾರುತದಿಂದ ರಾಜ್ಯಕ್ಕೆ ಆದ ಹಾನಿಯೆಷ್ಟು? ಇಲ್ಲಿದೆ ವಿವರ

(Cyclone Yaas is likely to form over Bay of Bengal around May 25 likely to move northwestwards and reach West Bengal and Odisha on May 26)

Published On - 6:29 pm, Wed, 19 May 21

ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್