ತೌಕ್ತೆ ಚಂಡಮಾರುತದಿಂದ ತೀವ್ರ ಹಾನಿಗೊಳಗಾದ ಗುಜರಾತ್​​ಗೆ 1000 ಕೋಟಿ ರೂ.ತಕ್ಷಣದ ಪರಿಹಾರ ಘೋಷಿಸಿದ ಪ್ರಧಾನಿ ಮೋದಿ

ಗುಜರಾತ್​ ಮತ್ತು ದಿಯುವಿನಲ್ಲಿ ತೌಕ್ತೆ ಚಂಡಮಾರುತ ಉಂಟು ಮಾಡಿದ ಹಾನಿಯನ್ನು ವೈಮಾನಿಕ ಸಮೀಕ್ಷೆ ಮೂಲಕ ಅವಲೋಕಿಸಿದ್ದೇನೆ. ಚಂಡಮಾರುತದಿಂದ ಹಾನಿಗೊಳಗಾದ ಎಲ್ಲ ರಾಜ್ಯಗಳ ಆಡಳಿತಗಳೊಂದಿಗೂ ಕೇಂದ್ರ ಸರ್ಕಾರ ಸಂಪರ್ಕದಲ್ಲಿದೆ ಎಂದು ಪ್ರಧಾನಿ ಮೋದಿ ಟ್ವೀಟ್ ಮಾಡಿದ್ದಾರೆ.

ತೌಕ್ತೆ ಚಂಡಮಾರುತದಿಂದ ತೀವ್ರ ಹಾನಿಗೊಳಗಾದ ಗುಜರಾತ್​​ಗೆ 1000 ಕೋಟಿ ರೂ.ತಕ್ಷಣದ ಪರಿಹಾರ ಘೋಷಿಸಿದ ಪ್ರಧಾನಿ ಮೋದಿ
ವೈಮಾನಿಕ ಸಮೀಕ್ಷೆ ನಡೆಸಿದ ಪ್ರಧಾನಿ ನರೇಂದ್ರ ಮೋದಿ
Follow us
Lakshmi Hegde
|

Updated on:May 19, 2021 | 7:44 PM

ದೆಹಲಿ: ತೌಕ್ತೆ ಚಂಡಮಾರುತದಿಂದ ತೀವ್ರ ಹಾನಿಗೀಡಾದ ಗುಜರಾತ್​ಗೆ ತಕ್ಷಣದ ಪರಿಹಾರವಾಗಿ 1000 ಕೋಟಿ ರೂಪಾಯಿ ಬಿಡುಗಡೆ ಮಾಡುವುದಾಗಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಘೋಷಿಸಿದ್ದಾರೆ. ಇಂದು ಗುಜರಾತ್​ಗೆ ಭೇಟಿ ನೀಡಿದ ಪ್ರಧಾನಿ ಮೋದಿಯವರು, ಚಂಡಮಾರುತದಿಂದ ಉಂಟಾದ ಹಾನಿಯ ವೈಮಾನಿಕ ಸಮೀಕ್ಷೆ ನಡೆಸಿದರು. ಅಲ್ಲಿನ ಪರಿಸ್ಥಿತಿಯನ್ನು ಅವಲೋಕಿಸಿದ ಬೆನ್ನಲ್ಲೇ ತಕ್ಷಣದ ಪರಿಹಾರ ಘೋಷಣೆ ಮಾಡಿದ್ದಾರೆ.

ಗುಜರಾತ್​ನ ಗಿರ್​ಸೋಮನಾಥ್​, ಅಮ್ರೇಲಿ, ಭಾವನಗರ ಜಿಲ್ಲೆಗಳು ಮತ್ತು ದಿಯುವಿನಲ್ಲಿ ಇಂದು ಪ್ರಧಾನಿ ಮೋದಿಯವರು ವೈಮಾನಿಕ ಸಮೀಕ್ಷೆ ನಡೆಸಿದ್ದಾರೆ. ಚಂಡಮಾರುತದಿಂದಾದ ಅವಘಡದಿಂದ ಪ್ರಾಣಕಳೆದುಕೊಂಡವರ ಪ್ರತಿ ಕುಟುಂಬಕ್ಕೆ ತಲಾ 2 ಲಕ್ಷ ರೂ. ಮತ್ತು ಗಾಯಗೊಂಡವರಿಗೆ ತಲಾ 50,000 ರೂ.ನೀಡುವುದಾಗಿ ಪಿಎಂ ಮೋದಿ ತಿಳಿಸಿದ್ದಾರೆ.

ವೈಮಾನಿಕ ಸಮೀಕ್ಷೆ ಬಳಿಕ ಟ್ವೀಟ್ ಮಾಡಿದ ಪ್ರಧಾನಿ ಮೋದಿ, ಗುಜರಾತ್​ ಮತ್ತು ದಿಯುವಿನಲ್ಲಿ ತೌಕ್ತೆ ಚಂಡಮಾರುತ ಉಂಟು ಮಾಡಿದ ಹಾನಿಯನ್ನು ವೈಮಾನಿಕ ಸಮೀಕ್ಷೆ ಮೂಲಕ ಅವಲೋಕಿಸಿದ್ದೇನೆ. ಚಂಡಮಾರುತದಿಂದ ಹಾನಿಗೊಳಗಾದ ಎಲ್ಲ ರಾಜ್ಯಗಳ ಆಡಳಿತಗಳೊಂದಿಗೂ ಕೇಂದ್ರ ಸರ್ಕಾರ ಸಂಪರ್ಕದಲ್ಲಿದೆ. ಅಗತ್ಯ ಸಹಕಾರ ನೀಡಲಾಗುವುದು ಎಂದು ಹೇಳಿದ್ದಾರೆ.

ವೈಮಾನಿಕ ಸಮೀಕ್ಷೆಯ ನಂತರ ಅಹ್ಮದಾಬಾದ್​​ನಲ್ಲಿ ಪರಿಶೀಲನಾ ಸಭೆಯನ್ನೂ ನಡೆಸಿದ್ದಾರೆ. ಇನ್ನು ವೈಮಾನಿಕ ಸಮೀಕ್ಷೆ ವೇಳೆ ಪ್ರಧಾನಿಯವರೊಂದಿಗೆ ಗುಜರಾತ್ ಮುಖ್ಯಮಂತ್ರಿ ವಿಜಯ್​ ರೂಪಾಣಿ ಸೇರಿ ಸರ್ಕಾರದ ಉನ್ನತ ಮಟ್ಟದ ಅಧಿಕಾರಿಗಳು ಇದ್ದರು. ಚಂಡಮಾರುತದಿಂದ ತೀವ್ರ ಹಾನಿಗೊಳಗಾಗಿರುವ ಉಳಿದ ರಾಜ್ಯಗಳಿಗೂ ತಕ್ಷಣದ ಪರಿಹಾರ ಘೋಷಣೆ ಮಾಡುವುದಾಗಿ ಕೇಂದ್ರ ಸರ್ಕಾರ ತಿಳಿಸಿದೆ.

22 ಮಂದಿ ಸಾವು ಇನ್ನು ತೌಕ್ತೆ ಚಂಡಮಾರುತದ ಅಬ್ಬರಕ್ಕೆ P305 ಬಾರ್ಜ್​ನಲ್ಲಿ 22 ಜನ ಮೃತಪಟ್ಟಿದ್ದಾರೆ. ಇನ್ನೂ 65 ಮಂದಿ ನಾಪತ್ತೆಯಾಗಿದ್ದು, ಅವರಿಗಾಗಿ ಶೋಧ ಕಾರ್ಯ ನಡೆಯುತ್ತಿದೆ ಎಂದು ಭಾರತೀಯ ನೌಕಾಪಡೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: WTC Final:ಟೀಂ ಇಂಡಿಯಾ ಟೆಸ್ಟ್ ಚಾಂಪಿಯನ್ ಆಗಲ್ಲ! ಭಾರತವೆಂದರೆ ಉರಿದು ಬೀಳುವ ಮೈಕಲ್ ವಾನ್ ಹೇಳಿಕೆ

Cyclone Yaas ಮೇ 25ರ ವೇಳೆಗೆ ರೂಪುಗೊಳ್ಳಲಿರುವ ಯಾಸ್ ಚಂಡಮಾರುತ ಪಶ್ಚಿಮ ಬಂಗಾಳ, ಒಡಿಶಾದತ್ತ ಸಾಗುವ ಸಾಧ್ಯತೆ: ಭಾರತೀಯ ಹವಾಮಾನ ಇಲಾಖೆ

1,000 Crore assistance announced by Prime Minister Narendra modi for immediate relief to Cyclone Tauktae Hit Gujarat

Published On - 7:14 pm, Wed, 19 May 21