Viral Video: ಮಾಸ್ಕ್ ಹಾಕದ ಮಹಿಳೆಯನ್ನು ರಸ್ತೆಯಲ್ಲಿ, ಕೂದಲು ಹಿಡಿದು ಎಳೆದಾಡಿ ಒದ್ದ ಪೊಲೀಸರು..
ಮಹಿಳೆ ಮತ್ತು ಆಕೆಯ ಮಗಳು ಕಿರಾಣಿ ಅಂಗಡಿಗೆ ಹೊರಟಿದ್ದರು. ಮಹಿಳೆ ಮಾಸ್ಕ್ ಧರಿಸದೆ ಇರುವುದನ್ನು ನೋಡಿದ ಪೊಲೀಸರು ಹೀಗೆ ಥಳಿಸಿದ್ದಾರೆ ಎಂದು ವರದಿಯಾಗಿದೆ.
ಭೋಪಾಲ್: ಮಧ್ಯರಸ್ತೆಯಲ್ಲಿ ಮಹಿಳೆಯೊಬ್ಬರಿಗೆ ಪೊಲೀಸರು ಒದ್ದು, ಎಳೆದಾಡಿ, ಹೊಡೆದ ವಿಡಿಯೋವೊಂದು ಇದೀಗ ಸಿಕ್ಕಾಪಟೆ ವೈರಲ್ ಆಗುತ್ತಿದೆ. ಕೊವಿಡ್ 19 ಸೋಂಕು ವ್ಯಾಪಕವಾಗಿ ಹರಡುತ್ತಿದ್ದರೂ ಈ ಮಹಿಳೆ ಮಾಸ್ಕ್ ಹಾಕದೆ ಸಾರ್ವಜನಿಕ ಸ್ಥಳಕ್ಕೆ ಬಂದಿದ್ದಾರೆಂದು ಪೊಲೀಸರು ಈಕೆಗೆ ಇಷ್ಟು ಹಿಂಸೆ ನೀಡಿದ್ದಾರೆಂದು ವರದಿಯಾಗಿದೆ. ವಿಡಿಯೋ ನೋಡಿದವರೆಲ್ಲ ಪೊಲೀಸರು ಇಷ್ಟು ಕ್ರೌರ್ಯ ತೋರಿಸುವ ಅಗತ್ಯ ಇರುವುದಿಲ್ಲ ಎಂದು ಹೇಳಿದ್ದಾರೆ.
ಈ ಮಹಿಳೆ ಮತ್ತು ಆಕೆಯ ಮಗಳು ಕಿರಾಣಿ ಅಂಗಡಿಗೆ ಹೊರಟಿದ್ದರು. ಮಹಿಳೆ ಮಾಸ್ಕ್ ಧರಿಸದೆ ಇರುವುದನ್ನು ನೋಡಿದ ಪೊಲೀಸರು ಹೀಗೆ ಥಳಿಸಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾಗಿ ರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ. ಅಲ್ಲಿಯೇ ಇದ್ದ ಕೆಲವರು ದೃಶ್ಯವನ್ನು ಸೆರೆಹಿಡಿದಿದ್ದಾರೆ. ಇಬ್ಬರು ಪೊಲೀಸ್ ಸಿಬ್ಬಂದಿ ಮಹಿಳೆಗೆ ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಆಕೆ ಎರಡೆರಡು ಬಾರಿ ರಸ್ತೆಯ ಮೇಲೆ ಬಿದ್ದು, ಏಳಲು ತುಂಬ ಕಷ್ಟಪಡುತ್ತಿರುವುದು ವಿಡಿಯೋದಲ್ಲಿ ಸೆರೆಯಾಗಿದೆ.
ಹಾಗೇ ಆಕೆಯ ಕೂದಲನ್ನೂ ಹಿಡಿದು ಎಳೆದು ಪೊಲೀಸ್ ಜೀಪು ಹತ್ತಿಸಲೂ ಪ್ರಯತ್ನಿಸುತ್ತಾರೆ. ಈ ವೇಳೆ ಆಕೆಯ ಮಗಳು ಮಧ್ಯಪ್ರವೇಶಿಸಿ ತಾಯಿಯನ್ನು ಹಿಡಿದು ಎಳೆಯುತ್ತಾಳೆ. ಘಟನೆ ನಡೆದಿದ್ದು ಮಧ್ಯಪ್ರದೇಶದ ಸಾಗರ ಜಿಲ್ಲೆಯಲ್ಲಿ ಎಂದು ವರದಿಯಾಗಿದೆ. ಹೀಗೆ ನಡುರಸ್ತೆಯಲ್ಲಿ ಪೊಲೀಸರು ಸಾರ್ವಜನಿಕರಿಗೆ ಥಳಿಸುವುದು, ಹೊಡೆಯುವ ವಿಡಿಯೋ ವೈರಲ್ ಆಗುತ್ತಿರುವುದು ಇದೇ ಮೊದಲಲ್ಲ. ಈ ಹಿಂದೆಯೂ ಬೇರೆಬೇರೆ ಕೆಲವು ರಾಜ್ಯಗಳಲ್ಲಿ ನಡೆದ ಇಂಥದ್ದೇ ಘಟನೆಗಳು ವರದಿಯಾಗಿವೆ. ಅದಕ್ಕೆ ಸಂಬಂಧಪಟ್ಟ ವಿಡಿಯೋಗಳೂ ವೈರಲ್ ಆಗಿ, ಅಸಮಾಧಾನ ಹುಟ್ಟುಹಾಕಿವೆ.
सागर में एक महिला की पिटाई का वीडियो वायरल हो रहा है, महिला अपनी बेटी के साथ बाहर निकली थी, मास्क नहीं पहना था बेटी ने भी मुंह पर सिर्फ स्कॉर्फ बांध रखा था। इस बीच पुलिस ने चेकिंग के दौरान गांधी चौक के पास उसे पकड़ लिया @ndtvindia @ndtv @manishndtv @alok_pandey @GargiRawat pic.twitter.com/rKwichtrpd
— Anurag Dwary (@Anurag_Dwary) May 19, 2021
ಇದನ್ನೂ ಓದಿ: Kichcha Sudeep: ಹಿರಿಯ ಕಲಾವಿದರ ಸಹಾಯಕ್ಕೆ ನಿಂತ ಸುದೀಪ್; ಅಗತ್ಯ ವಸ್ತುಗಳ ಜತೆ ಪತ್ರ ತಲುಪಿಸಿದ ಕಿಚ್ಚ