Sign In

By signing in or creating an account, you agree with Associated Broadcasting Company's Terms & Conditions and Privacy Policy.

ಜೀವನವನ್ನೇ ಬದಲಿಸಿದ್ದ ಪ್ರೀತಿಯ ನಾಯಿಗೆ ವಿಶೇಷವಾದ ಅಂತ್ಯಕ್ರಿಯೆ; ಬ್ಯಾಂಡ್​ ಸೆಟ್​ ವಾದ್ಯದೊಂದಿಗೆ ಮೆರವಣಿಗೆ

ಈ ನಾಯಿಯ ಮೃತದೇಹದೊಂದಿಗೆ ಬರೀ ನರೇಶ್ ಸಾಹ್ ಮಾತ್ರವಲ್ಲ, ಹಳ್ಳಿಯ ಬಹುತೇಕ ಜನರು ಹೆಜ್ಜೆ ಹಾಕಿ, ಕೊನೇ ಗೌರವ ಸಲ್ಲಿಸಿದ್ದಾರೆ.

ಜೀವನವನ್ನೇ ಬದಲಿಸಿದ್ದ ಪ್ರೀತಿಯ ನಾಯಿಗೆ ವಿಶೇಷವಾದ ಅಂತ್ಯಕ್ರಿಯೆ; ಬ್ಯಾಂಡ್​ ಸೆಟ್​ ವಾದ್ಯದೊಂದಿಗೆ ಮೆರವಣಿಗೆ
ಮೃತ ಶ್ವಾನ
Follow us
Lakshmi Hegde
|

Updated on:May 19, 2021 | 6:35 PM

ಸಮಷ್ಟಿಪುರ (ಬಿಹಾರ): ನಾಯಿ ಮನುಷ್ಯನ ಉತ್ತಮ ಸ್ನೇಹಿತ. ಸಾಕಿದ ನಾಯಿಯನ್ನು ಕಳೆದುಕೊಂಡಾಗ ಆಗುವ ದುಃಖ, ಅದನ್ನು ಅನುಭವಿಸಿದವರಿಗೇ ಗೊತ್ತು. ಹಾಗೆ ಇಲ್ಲೊಬ್ಬ ಶ್ವಾನಪ್ರಿಯ ತನ್ನ ಮುದ್ದಿನ ನಾಯಿ ಸತ್ತಾಗ, ಅದಕ್ಕೆ ವಿಶೇಷವಾಗಿ ಅಂತ್ಯಕ್ರಿಯೆ ಮಾಡಿ, ಗೌರವ ಸಲ್ಲಿಸಿದ್ದಾರೆ. ಬಿಹಾರದ ಸಮಷ್ಟಿಪುರದ ವಿದ್ಯಾಪತಿ ನಗರದಲ್ಲಿ ಹೀಗೊಂದು ಘಟನೆ ನಡೆದಿದೆ. ನರೇಶ್ ಸಾಹ್​ ಎಂಬುವರೊಬ್ಬರು ಒಂದು ನಾಯಿಯನ್ನು ಸಾಕಿ, ಅದಕ್ಕೆ ಟೋನಿ ಎಂದು ಹೆಸರಿಟ್ಟಿದ್ದರು. ಈ ಟೋನಿಯೆಂದರೆ ಅದರ ಮಾಲೀಕ ನರೇಶ್ ಅವರಿಗೆ ತುಂಬ ಪ್ರೀತಿ. ಅವರಿಗಷ್ಟೇ ಅಲ್ಲ, ಅಲ್ಲಿನ ಸುತ್ತಮುತ್ತ ಎಲ್ಲರಿಗೂ ಟೋನಿಯೆಂದರೆ ಬಹಳ ಇಷ್ಟವಾಗಿತ್ತು. ಯಾಕೆಂದರೆ ಈ ಟೋನಿ ಇಡೀ ಹಳ್ಳಿಯ ಕಾವಲುಗಾರನಂತೆ ಇತ್ತು. ಪ್ರತಿಯೊಬ್ಬರನ್ನೂ ರಕ್ಷಣೆ ಮಾಡುತ್ತಿತ್ತು.

ಇಷ್ಟು ಪ್ರೀತಿಸುತ್ತಿದ್ದ ಟೋನಿಯನ್ನು ಮಂಗಳವಾರ ನರೇಶ್​ ಸಾಹ್​ ಕಳೆದುಕೊಂಡಿದ್ದಾರೆ. ಬಿಟ್ಟುಹೋದ ಪ್ರೀತಿಯ ಶ್ವಾನಕ್ಕೆ ಹೇಗೆಂದರೆ ಹಾಗೆ ಅಂತ್ಯಕ್ರಿಯೆ ಮಾಡದೆ ತುಂಬ ಗೌರವಯುತವಾಗಿ ಮಾಡಿದ್ದಾರೆ. ಒಂದು ತಳ್ಳುಗಾಡಿಯ ಮೇಲೆ ಅದರ ಮೃತದೇಹವನ್ನು ಇಟ್ಟು, ಹೂವೆಲ್ಲ ಹಾಕಿ ಮೆರವಣಿಗೆ ನಡೆಸಿದ್ದಾರೆ. ಅಲ್ಲದೆ, ಬ್ಯಾಂಡ್​ ಕೂಡ ಬಾರಿಸಲಾಗಿದೆ. ಈ ನಾಯಿಯ ಮೃತದೇಹದೊಂದಿಗೆ ಬರೀ ನರೇಶ್ ಸಾಹ್ ಮಾತ್ರವಲ್ಲ, ಹಳ್ಳಿಯ ಬಹುತೇಕ ಜನರು ಹೆಜ್ಜೆ ಹಾಕಿ, ಕೊನೇ ಗೌರವ ಸಲ್ಲಿಸಿದ್ದಾರೆ. ಹಾಗೇ, ಈ ನಾಯಿಗಾಗಿ ತೇರಿ ಮೆಹೆರ್​​ಬನಿಯಾನ್​ ಎಂಬ ಹಾಡನ್ನೂ ಅರ್ಪಿಸಲಾಗಿದೆ.

ಈ ಬಗ್ಗೆ ಮಾಧ್ಯಮವೊಂದಕ್ಕೆ ಪ್ರತಿಕ್ರಿಯೆ ನೀಡಿದ ನರೇಶ್​, ಈ ನಾಯಿಯನ್ನು 12 ವರ್ಷದ ಹಿಂದೆ ಸೋನ್​ಪುರದಿಂದ ತಂದಿದ್ದೆ. ಅಂದಿನಿಂದಲೂ ಇದೆಂದರೆ ನನಗೆ ತುಂಬ ಇಷ್ಟವಾಗಿತ್ತು. ನನ್ನ ಕುಟುಂಬದ ಒಬ್ಬ ಸದಸ್ಯನೇ ಆಗಿದ್ದ. ನನ್ನ ಪಾಲಿನ ಅದೃಷ್ಟವೂ ಆಗಿದ್ದ. ಟೋನಿಯನ್ನು ತಂದ ಬಳಿಕ ನನ್ನ ಜೀವನವೇ ಬದಲಾಗಿತ್ತು ಎಂದು ಹೇಳಿದ್ದಾರೆ. ಹಾಗಾಗಿ ಟೋನಿ ಸತ್ತಾಗ ತುಂಬ ದುಃಖವಾದರೂ ಅವನಿಗೆ ವಿಶೇಷ ಗೌರವ ಸಲ್ಲಿಸಿದೆ. ಹೂವಿನ ಹಾರವನ್ನೆಲ್ಲ ಹಾಕಿ, ಸಂಗೀತದೊಂದಿಗೆ ಮೆರವಣಿಗೆ ಮಾಡಿ, ಬಯಾ ನದಿ ದಡದ ಮೇಲೆ ಹಿಂದು ಸಂಪ್ರದಾಯದಂತೆ ಅಂತ್ಯಕ್ರಿಯೆ ನೆರವೇರಿಸಲಾಯಿತು ಎಂದು ನರೇಶ್ ಹೇಳಿದ್ದಾರೆ.

ಇದನ್ನೂ ಓದಿ: ಭಾರತದ ಶೀಮಂತ ಕ್ರಿಕೆಟಿಗ ಯಾರು ಗೊತ್ತಾ? ಕೊಹ್ಲಿ, ಧೋನಿ, ಸಚಿನ್ ಎಂದುಕೊಂಡರೆ ಅದು ನಿಮ್ಮ ತಪ್ಪು ಕಲ್ಪನೆ

ನನ್ನ ಸ್ಲೆಜಿಂಗ್ ಹೇಡೆನ್​ರನ್ನು ಎಷ್ಟು ಘಾಸಿಗೊಳಿಸಿತೆಂದರೆ ಅವರು 3 ವರ್ಷ ನನ್ನೊಂದಿಗೆ ಮಾತಾಡಲಿಲ್ಲ: ರಾಬಿನ್ ಉತ್ತಪ್ಪ

(Man holds funeral procession for pet dog In Bihar)

Published On - 6:34 pm, Wed, 19 May 21