ನನ್ನ ಸ್ಲೆಜಿಂಗ್ ಹೇಡೆನ್​ರನ್ನು ಎಷ್ಟು ಘಾಸಿಗೊಳಿಸಿತೆಂದರೆ ಅವರು 3 ವರ್ಷ ನನ್ನೊಂದಿಗೆ ಮಾತಾಡಲಿಲ್ಲ: ರಾಬಿನ್ ಉತ್ತಪ್ಪ

2007 ರ ವಿಶ್ವಕಪ್​ನಲ್ಲಿ ಆಸ್ಟ್ರೇಲಿಯಾದ ಆರಂಭ ಆಟಗಾರ ಮ್ಯಾಥ್ಯೂ ಹೇಡೆನ್ ಮತ್ತು ತಮ್ಮ ನಡುವೆ ಭಾರತೀಯ ಆಟಗಾರರ ನಡುವೆ ನಡೆದ ಸ್ಲೆಜಿಂಗ್ ಕುರಿತು ನಮಗೆ ಗೊತ್ತಿರದ ಹಲವು ವಿಷಯಗಳನ್ನು ಉತ್ತಪ್ಪ ಚರ್ಚಿಸಿದ್ದಾರೆ.

ನನ್ನ ಸ್ಲೆಜಿಂಗ್ ಹೇಡೆನ್​ರನ್ನು ಎಷ್ಟು ಘಾಸಿಗೊಳಿಸಿತೆಂದರೆ ಅವರು 3 ವರ್ಷ ನನ್ನೊಂದಿಗೆ ಮಾತಾಡಲಿಲ್ಲ: ರಾಬಿನ್ ಉತ್ತಪ್ಪ
ಮ್ಯಾಥ್ಯೂ ಹೇಡೆನ್ ಮತ್ತು ರಾಬಿನ್ ಉತ್ತಪ್ಪ
Follow us
ಅರುಣ್​ ಕುಮಾರ್​ ಬೆಳ್ಳಿ
| Updated By: ರಾಜೇಶ್ ದುಗ್ಗುಮನೆ

Updated on: May 19, 2021 | 5:35 PM

ದಶಕಗಳಿಂದ ಸ್ಲೆಜಿಂಗ್ ಕ್ರಿಕೆಟ್​ ಆಟದ ಒಂದು ಭಾಗವಾಗಿದೆ. ಈ ಪರಂಪರೆಯನ್ನು ಆರಂಭಿಸಿದವರು ಪ್ರಾಯಶಃ ಆಸ್ಟ್ರೇಲಿಯನ್ನರೇ ಇರಬೇಕು. ಎದರಾಳಿ ತಂಡದ ಬ್ಯಾಟ್ಸ್​ಮನ್​​ಗಳನ್ನು ಹೀಯಾಳಿಸುವುದು, ಆಣುಕಿಸುವುದು, ಗೇಲಿ ಮಾಡುತ್ತಾ ಅವನ ಏಕಾಗ್ರತೆಗೆ ಭಂಗ ತರುವುದನ್ನು ಮಾಡುವುದರಲ್ಲಿ ಆಸ್ಸೀಗಳು ಸಿದ್ಧಹಸ್ತರು. ಮೊದಲೆಲ್ಲ ಕೇವಲ ಅವರು ಮಾತ್ರ ಇದನ್ನು ಮಾಡುತ್ತಿದ್ದರು. ಆದರೆ ಕ್ರಮೇಣವಾಗಿ ಬೇರೆ ದೇಶದ ಆಟಗಾರರು ಅದರಲ್ಲೂ ಅವರ ಸಾಂಪ್ರದಾಯಿಕ ಎದುರಾಳಿಗಳಾಗಿರುವ ಇಂಗ್ಲೆಂಡ್​ ಆಟಗಾರರು ಆಸ್ಸೀ ಆಟಗಾರರನ್ನು ಸ್ಲೆಜ್ ಮಾಡಲಾರಂಭಿಸಿದರು. ಈಗ ಬಿಡಿ, ಎಲ್ಲ ದೇಶಗಳ ಆಟಗಾರರು ಇದನ್ನು ಮಾಡುತ್ತಿರುತ್ತಾರೆ. ಹಾಗೆ ನೋಡಿದರೆ ಸ್ಲೆಜಿಂಗ್ ಅನ್ನು ಯಾರೂ ಗಂಭಿರವಾಗ ಪರಿಗಣಿಸುವುದಿಲ್ಲ. ಬಹಳಷ್ಟು ಆಟಗಾರರು ಅದನ್ನು ತಮಾಷೆಯಾಗಿ ತೆಗೆದುಕೊಳ್ಳುತ್ತಾರೆ. ಕೆಲವರು, ಸ್ಲೆಜ್ ಮಾಡಿದವನಿಗೆ ಜವಾಬು ನೀಡಿ ತೆಪ್ಪಗಾಗಿಸುತ್ತಾರೆ. ಸ್ಲೆಜಿಂಗ್ ಅತಿರೇಕಕ್ಕೆ ಹೋದಾಗ ಅಂಪೈರ್​ಗಳು ಮಧ್ಯಸ್ಥಿಕೆವಹಿಸಿ ಎರಡೂ ಪಂಗಡಗಳ ಆಟಗಾರರನ್ನು ಸಮಾಧಾನಪಡಿಸುವುದನ್ನು ನಾವು ನೋಡುತ್ತಿರುತ್ತೇವೆ. ಇದೆಲ್ಲ ಈಗ ಮಾಮೂಲು ಅನ್ನವಷ್ಟು ಸಾಮಾನ್ಯವಾಗಿ ಬಿಟ್ಟಿದೆ.

ಓಕೆ, ಸ್ಲೆಜಿಂಗ್ ಸಂಬಂಧಿಸಿದಂತೆ ಭಾರತದ ಮಾಜಿ ಆಟಗಾರ ಕರ್ನಾಟಕದ ರಾಬಿನ್ ಉತ್ತಪ್ಪ ಅವರು ಸ್ಟ್ಯಾಂಡ್-ಅಪ್ ಕಮೇಡಿಯನ್ ಸೊರಭ್ ಅವರ ವೇಕ್ ಅಪ್ ವಿತ್​ ಸೊರಭ್ ಯೂಟ್ಯೂಬ್ ಕಾರ್ಯಕ್ರಮದಲ್ಲಿ, 2007 ರ ಚೊಚ್ಚಲು ಟಿ20 ವಿಶ್ವಕಪ್​ ಟೂರ್ನಿಯ ಸಂದರ್ಭದಲ್ಲಿ ನಡೆದ ಘಟನೆಯ ಬಗ್ಗೆ ಮಾತಾಡಿದ್ದಾರೆ. ನಿಮಗೆ ಗೊತ್ತಿದೆ, ಚುಟುಕು ಆವೃತ್ತಿಯ ಮೊದಲ ವಿಶ್ವಕಪ್​ ಅನ್ನು ಮಹೇಂದ್ರಸಿಂಗ್ ಧೋನಿ ನೇತೃತ್ವದ ಯುವ ಭಾರತೀಯ ತಂಡ ಸೆಮಿಫೈನಲ್​ನಲ್ಲಿ ಆಸ್ಟ್ರೇಲಿಯ ಮತ್ತು ಫೈನಲ್​ನಲ್ಲಿ ತನ್ನ ಬದ್ಧ ಎದುರಾಳಿ ಪಾಕಿಸ್ತಾನವನ್ನು ಸೋಲಿಸಿ ಪ್ರಶಸ್ತಿ ಗೆದ್ದಿತ್ತು.

ಆ ಸಮಯದಲ್ಲಿ ಟಿ20 ಕ್ರಿಕೆಟ್​ ಈಗಿನಷ್ಟು ಜನಪ್ರಿಯವಾಗಿರಲಿಲ್ಲ ಮತ್ತು ಭಾರತದ ತಂಡಕ್ಕೆ 20 ಓವರ್​ಗಳ ಪಂದ್ಯಗಳನ್ನು ಆಡಿದ ಅನುಭವವೂ ಇರಲಿಲ್ಲ. ದಕ್ಷಿಣ ಆಫ್ರಿಕಾದಲ್ಲಿ ನಡೆದ ಆ ಟೂರ್ನಿಯನ್ನು ಭಾರತ ಗೆಲ್ಲಬಹುದೆಂದು ಯಾರೂ ಅಂದುಕೊಂಡಿರಲಿಲ್ಲ. ಆದರೆ, ಆಗಷ್ಟೇ ಟೀಮಿನ ನಾಯಕತ್ವ ವಹಿಸಿಕೊಂಡಿದ್ದ ಧೋನಿಯ ಇನ್ನೋವೇಟಿವ್ ನಾಯಕತ್ವ ಮತ್ತು ಕೆಲ ಆಟಗಾರರು ನೀಡಿದ ಉತ್ಕೃಷ್ಟ ಪ್ರದರ್ಶನಗಳಿಂದ ಭಾರತ ಆಸಾಧ್ಯವೆನಿಸಿದ್ದನ್ನು ಸಾಧಿಸಿತು.

ಸೌರವ್ ಗಂಗೂಲಿ ಟೀಮ್ ಇಂಡಿಯಾದ ನಾಯಕತ್ವ ವಹಿಸಿಕೊಂಡ ನಂತರ ಅಸ್ಟ್ರೇಲಿಯ ವಿರುದ್ಧದ ಪಂದ್ಯಗಳು ಹೆಚ್ಚು ರೋಚಕವಾಗತೊಡಗಿದವು. ದಾದಾ, ಭಿನ್ನ ಧೋರಣೆಯ ನಾಯಕರಾಗಿದ್ದರು. ಆಸ್ಸೀ ಆಟಗಾರರ ಸ್ಲೆಜಿಂಗ್​​​ಗೆ ಕೂಡಲೇ ಜವಾಬು ನೀಡಿ ಎಂದು ತನ್ನ ಆಟಗಾರರಿಗೆ ಹುರಿದುಂಬಿಸಿದರು, ದಾದಾ ನಾಯಕತ್ವದ ಭಾರತ ಮತ್ತು ಆಸ್ಟ್ರೇಲಿಯ ನಡುವಿನ ಟೆಸ್ಟ್ ಪಂದ್ಯಗಳು ಜನಪ್ರಿಯತೆಯಲ್ಲಿ ಌಷಸ್ ಅನ್ನು ಹಿಂದಟ್ಟಿದ್ದು ಸುಳ್ಳಲ್ಲ.

2007 ರ ವಿಶ್ವಕಪ್​ನಲ್ಲಿ ಆಸ್ಟ್ರೇಲಿಯಾದ ಆರಂಭ ಆಟಗಾರ ಮ್ಯಾಥ್ಯೂ ಹೇಡೆನ್ ಮತ್ತು ತಮ್ಮ ನಡುವೆ ಭಾರತೀಯ ಆಟಗಾರರ ನಡುವೆ ನಡೆದ ಸ್ಲೆಜಿಂಗ್ ಕುರಿತು ನಮಗೆ ಗೊತ್ತಿರದ ಹಲವು ವಿಷಯಗಳನ್ನು ಉತ್ತಪ್ಪ ಚರ್ಚಿಸಿದ್ದಾರೆ. ‘ಆಸ್ಟ್ರೇಲಿಯ ವಿರುದ್ಧ ನಡೆದ ಪಂದ್ಯದಲ್ಲಿ ಭಾರೀ ಪ್ರಮಾಣದ ಸ್ಲೆಜಿಂಗ್ ನಡೆಯಿತು, ಆಸ್ಸೀ ಆಟಗಾರರು ನಮ್ಮೆಲ್ಲರ ವಿರುದ್ಧ ಸ್ಲೆಜ್​ ಮಾಡಿದರು. ನಮ್ಮವರಲ್ಲಿ ಕೇವಲ ಜಕ್​ ಭಾಯಿ (ಜಹೀರ್ ಖಾನ್) ಮತ್ತು ಕೆಲವೇ ಆಟಗಾರರು ಮಾತ್ರ ಅವರಿಗೆ ಸರಿಯಾದ ಜವಾಬು ಕೊಟ್ಟರು. ಆದರೆ ಬ್ಯಾಟ್ಸ್​ಮನ್​ಗಳಲ್ಲಿ ಬಹಳಷ್ಟು ಜನ ಅವರನ್ನು ತಡವಿಕೊಳ್ಳುವ ಗೋಜಿಗೆ ಹೋಗಲಿಲ್ಲ,’ ಎಂದು ಉತ್ತಪ್ಪ ಹೇಳಿದರು.

ಆದರೆ ಹೇಡೆನ್ ತನ್ನನ್ನು ಸ್ಲೆಜ್ ಮಾಡಿದಾಗ ತಿರುಗೇಟು ನೀಡಿದೆ, ತಮ್ಮ ಸ್ಲೆಜಿಂಗ್ ಅನ್ನು ಗಂಬೀರವಾಗಿ ತೆತಗೆದುಕೊಂಡ ಅವರು ಮೂರು ವರ್ಷಗಳ ಕಾಲ ತನ್ನೊಂದಿಗೆ ಮಾತಾಡಲಿಲ್ಲ ಅಂತ ಉತ್ತಪ್ಪ ಹೇಳಿದರು. ‘ಆ ಪಂದ್ಯದಲ್ಲಿ ಗೌತಿ (ಗೌತಮ್ ಗಂಭೀರ್) ಆಸ್ಸೀ ಆಟಗಾರರಿಗೆ ಸ್ಲೆಜ್ ಮಾಡತೊಡಗಿದರು. ನಾನು ಌಂಡ್ರೂ ಸೈಮಂಡ್ಸ್, ಮಿಚೆಲ್ ಜಾನ್ಸನ್ ಮತ್ತು ಬ್ರಾಡ್ ಹ್ಯಾಡಿನ್ ಅವರನ್ನು ಸ್ಲೆಜ್ ಮಾಡಿದೆ. ಆದರೆ ನನ್ನ ಮತ್ತು ಹೇಡೆನ್ ಮಧ್ಯೆ ನಡೆದ ಸ್ಲೆಜಿಂಗ್ ತೀವ್ರ ಸ್ವರೂಪದ್ದಾಗಿತ್ತು. ಹಾಗೆ ನೋಡಿದರೆ, ಹೇಡನ್ ಒಬ್ಬ ಆಟಗಾರ ಮತ್ತು ವ್ಯಕ್ತಿಯಾಗಿ ನನ್ನ ಮೇಲೆ ಗಾಢವಾದ ಪ್ರಭಾವ ಬೀರಿದ್ದಾರೆ. ಕ್ರೀಸ್ ಮೆಲೆ ನಡೆಯುತ್ತಾ ಬಂದು ಹೊಡೆತ ಬಾರಿಸುವದನ್ನು ನಾನು ಅವರನ್ನು ನೋಡಿಯೇ ಕಲಿತಿದ್ದು. ನಾನು ಬ್ಯಾಟಿಂಗ್ ಮಾಡುವಾಗ ಹೇಡೋಸ್ ಭಯಂಕರ ಅನ್ನುವಷ್ಟು ಸ್ಲೆಜ್ ಮಾಡಿದರು. ಅದಕ್ಕೆ ಪ್ರತ್ಯುತ್ತರ ನೀಡಲೇಬೇಕೆಂದು ನಿರ್ಧರಿಸಿದ ನಾನು ಅವರು ಬ್ಯಾಟ್​ ಮಾಡಲು ಬಂದಾಗ ಮನಸಾರೆ ಸ್ಲೆಜ್ ಮಾಡಿದೆ,’ ಎಂದು ಉತ್ತಪ್ಪ ಹೇಳಿದರು.

‘ಅವರು ನನಗೆ ಏನನ್ನೋ ಹೇಳಿದರು, ಅದನ್ನು ನಾನು ಇಲ್ಲಿ ಹೇಳಲಾಗದು. ಆದರೆ, ನಾನು ಅಷ್ಟೇ ಖಾರವಾಗಿ ಪ್ರತಿಕ್ರಿಸಿಯಿದೆ. ಅದು ಅವರಿಗೆ ಎಷ್ಟು ನಾಟಿತೆಂದರೆ ಮುಂದಿನ 2-3 ವರ್ಷಗಳ ಕಾಲ ಅವರು ನನ್ನೊಂದಿಗೆ ಮಾತಾಡುವುದನ್ನೇ ಬಿಟ್ಟರು. ಒಂದು ಬಗೆಯ ವೈಷಮ್ಯವನ್ನು ಅವರ ನನ್ನ ಬಗ್ಗೆ ಬೆಳಸಿಕೊಂಡರು. ನಾನು ಹೆಚ್ಚು ತಲೆಕೆಡಿಸಿಕೊಳ್ಳುವ ಗೋಜಿಗೆ ಹೋಗಲಿಲ್ಲ. ಯಾಕೆಂದರೆ, ಆ ಸಂದರ್ಭದಲ್ಲಿ ನಮಗೆ ಗೆಲ್ಲುವುದು ಮುಖ್ಯವಾಗಿತ್ತು. ಅವರು ಬ್ಯಾಟ್​ ಮಾಡುವಾಗ ಕಿರಿಕಿರಿ ಉಂಟು ಮಾಡಿ ಅವರ ಏಕಾಗ್ರತೆಗೆ ಭಂಗ ತರುವ ಉದ್ದೇಶ ನನ್ನದಾಗಿತ್ತು. ಅದನ್ನು ನಾನು ಮಾಡಿದೆ. ನಾವು ಪಂದ್ಯವನ್ನು ಗೆದ್ದೆವು; ಆದರೆ, ನನ್ನ ಮೇಲೆ ಬಹಳ ಪ್ರಭಾವ ಬೀರಿದ ವ್ಯಕ್ತಿಯ ಗೆಳೆತನ ಮುರಿದುಬಿತ್ತು,’ ಎಂದು ಉತ್ತಪ್ಪ ಹೇಳಿದ್ದಾರೆ.

2006 ರಿಂದ 2015ರವರೆಗೆ ಉತ್ತಪ್ಪ, ಭಾರತದ ಪರ 46 ಒಂದು ದಿನದ ಅಂತರರಾಷ್ಟ್ರೀಯ ಮತ್ತು 14 ಟಿ20ಐ ಪಂದ್ಯಗಳನ್ನಾಡಿದರು. ಹೇಡೆನ್ ತನ್ನೊಂದಿಗೆ ಮಾತಾಡುವುದನ್ನು ನಿಲ್ಲಿಸಿದ್ದು ಮನಸ್ಸಿಗೆ ನೋವುಂಟು ಮಾಡಿತು ಎಂದು ಕೊನೆಯಲ್ಲಿ ಉತ್ತಪ್ಪ ಹೇಳಿದರು.

ಇದನ್ನೂ ಓದಿ: 2011 Cricket World Cup: ನೆನಪಾಗುವುದು ಕೇವಲ ಧೋನಿ ಸಿಕ್ಸರ್, ರವಿಶಾಸ್ತ್ರಿ ಕಾಮೆಂಟರಿ.. ಮೂಲೆ ಗುಂಪಾಗಿದ್ದು ಮಾತ್ರ ಆ ಆಪತ್ಬಾಂಧವ!

ರೆಸಾರ್ಟ್​ನಲ್ಲಿ ನಟಿ ಹರಿಪ್ರಿಯಾ ಸೀಮಂತ ಶಾಸ್ತ್ರ; ಆಶೀರ್ವಾದ ಮಾಡಿದ ತಾರಾ
ರೆಸಾರ್ಟ್​ನಲ್ಲಿ ನಟಿ ಹರಿಪ್ರಿಯಾ ಸೀಮಂತ ಶಾಸ್ತ್ರ; ಆಶೀರ್ವಾದ ಮಾಡಿದ ತಾರಾ
ಹೆಚ್​ಎಂಪಿ ವೈರಸ್ ವಿಷಯದಲ್ಲಿ ನಮ್ಮ ಸರ್ಕಾರ ಅಲರ್ಟ್ ಆಗಿದೆ: ಶಿವಕುಮಾರ್
ಹೆಚ್​ಎಂಪಿ ವೈರಸ್ ವಿಷಯದಲ್ಲಿ ನಮ್ಮ ಸರ್ಕಾರ ಅಲರ್ಟ್ ಆಗಿದೆ: ಶಿವಕುಮಾರ್
ತನ್ನ ತಂದೆ ಬಗ್ಗೆ ಮಾತಾಡಿದ ಬಿಜೆಪಿ ನಾಯಕನ ಹೇಳಿಕೆಗೆ ಕಣ್ಣೀರು ಹಾಕಿದ ಅತಿಶಿ
ತನ್ನ ತಂದೆ ಬಗ್ಗೆ ಮಾತಾಡಿದ ಬಿಜೆಪಿ ನಾಯಕನ ಹೇಳಿಕೆಗೆ ಕಣ್ಣೀರು ಹಾಕಿದ ಅತಿಶಿ
ರಾಮಚಂದ್ರಪ್ಪನಿಂದ ಪೀಡಿತ ಮತ್ತೊಬ್ಬ ಮಹಿಳೆ ತನ್ನ ವೇದನೆ ಹೇಳಿಕೊಂಡಿದ್ದಾರೆ
ರಾಮಚಂದ್ರಪ್ಪನಿಂದ ಪೀಡಿತ ಮತ್ತೊಬ್ಬ ಮಹಿಳೆ ತನ್ನ ವೇದನೆ ಹೇಳಿಕೊಂಡಿದ್ದಾರೆ
ಹೆಚ್ಎಂಪಿವಿ 2001ರಿಂದ ಭಾರತದಲ್ಲಿದೆ, ನಿಶ್ಶಕ್ತರು ಇದರ ಟಾರ್ಗೆಟ್: ದಿನೇಶ್
ಹೆಚ್ಎಂಪಿವಿ 2001ರಿಂದ ಭಾರತದಲ್ಲಿದೆ, ನಿಶ್ಶಕ್ತರು ಇದರ ಟಾರ್ಗೆಟ್: ದಿನೇಶ್
ಹೆಚ್ಎಂಪಿ ವೈರಸ್ ಯಾವ ವೇರಿಯಂಟ್ ಅಂತ ನಾನು ಹೇಳಲಾಗಲ್ಲ: ಅಶ್ವಥ್ ನಾರಾಯಣ
ಹೆಚ್ಎಂಪಿ ವೈರಸ್ ಯಾವ ವೇರಿಯಂಟ್ ಅಂತ ನಾನು ಹೇಳಲಾಗಲ್ಲ: ಅಶ್ವಥ್ ನಾರಾಯಣ
ಸಂತೋಷ್ ಲಾಡ್ ತಮ್ಮ ಪಟಾಲಂನೊಂದಿಗೆ ಅಸ್ಪತ್ರೆಗೆ ಬಂದಿದ್ದು ಸರಿಯಲ್ಲ
ಸಂತೋಷ್ ಲಾಡ್ ತಮ್ಮ ಪಟಾಲಂನೊಂದಿಗೆ ಅಸ್ಪತ್ರೆಗೆ ಬಂದಿದ್ದು ಸರಿಯಲ್ಲ
ಎನ್ಕೌಂಟರ್ ನಡೆದ ಬಳಿಕ ಸಾಕಷ್ಟು ಬದಲಾವಣೆ ಆಗಿದೆ: ನಕ್ಸಲ್ ಸುಂದರಿಯ ಸಂಬಂಧಿ
ಎನ್ಕೌಂಟರ್ ನಡೆದ ಬಳಿಕ ಸಾಕಷ್ಟು ಬದಲಾವಣೆ ಆಗಿದೆ: ನಕ್ಸಲ್ ಸುಂದರಿಯ ಸಂಬಂಧಿ
ನಿಯಂತ್ರಣ ಕಳೆದುಕೊಂಡು ರಸ್ತೆಯ ಬದಿಯಲ್ಲಿ ಕುಳಿತ ಐವರ ಮೇಲೆ ಹರಿದ ಕಾರು
ನಿಯಂತ್ರಣ ಕಳೆದುಕೊಂಡು ರಸ್ತೆಯ ಬದಿಯಲ್ಲಿ ಕುಳಿತ ಐವರ ಮೇಲೆ ಹರಿದ ಕಾರು
ಆನೇಕಲ್: ಸಿಲಿಂಡರ್ ಸ್ಫೋಟ ತೀವ್ರತೆಗೆ ಮನೆ ಗೋಡೆ ಕಿಟಕಿ ಛಿದ್ರ, ಇಬ್ಬಗೆ ಗಾಯ
ಆನೇಕಲ್: ಸಿಲಿಂಡರ್ ಸ್ಫೋಟ ತೀವ್ರತೆಗೆ ಮನೆ ಗೋಡೆ ಕಿಟಕಿ ಛಿದ್ರ, ಇಬ್ಬಗೆ ಗಾಯ