2011 Cricket World Cup: ನೆನಪಾಗುವುದು ಕೇವಲ ಧೋನಿ ಸಿಕ್ಸರ್, ರವಿಶಾಸ್ತ್ರಿ ಕಾಮೆಂಟರಿ.. ಮೂಲೆ ಗುಂಪಾಗಿದ್ದು ಮಾತ್ರ ಆ ಆಪತ್ಬಾಂಧವ!

ಗಂಭೀರ್ ಪೆವಿಲಿಯನ್‌ಗೆ ಹಿಂದಿರುಗುತ್ತಿದ್ದಾಗ ಅವರ ಮುಖದಲ್ಲಿ ಅಸಮಾದಾನ ಎದ್ದು ಕಾಣುತ್ತಿತ್ತು. ಅವರು ಎಷ್ಟು ದೊಡ್ಡ ಶತಕವನ್ನು ಕಳೆದುಕೊಂಡಿದ್ದಾರೆಂದು ಅವರಿಗೆ ತಿಳಿದಿತ್ತು

2011 Cricket World Cup: ನೆನಪಾಗುವುದು ಕೇವಲ ಧೋನಿ ಸಿಕ್ಸರ್, ರವಿಶಾಸ್ತ್ರಿ ಕಾಮೆಂಟರಿ.. ಮೂಲೆ ಗುಂಪಾಗಿದ್ದು ಮಾತ್ರ ಆ ಆಪತ್ಬಾಂಧವ!
ಗೌತಮ್ ಗಂಭೀರ್
Follow us
ಪೃಥ್ವಿಶಂಕರ
|

Updated on: Apr 02, 2021 | 4:56 PM

ಈ ಚರ್ಚೆ ಬಹಳ ವರ್ಷದಿಂದ ನಡೆಯುತ್ತಿದೆ. ಕಳೆದ ವರ್ಷ ಈ ಚರ್ಚೆ ಉತ್ತುಂಗದಲ್ಲಿತ್ತು. ಈ ಬಾರಿ ಕೂಡ ಇಂಗ್ಲಿಷ್ ಪತ್ರಿಕೆ ಈ ಚರ್ಚೆಯನ್ನು ನವೀಕರಿಸಿದೆ. ಯಾವುದು ಆ ಚರ್ಚೆ? ಚರ್ಚೆ ಹುಟ್ಟಿದ್ದಾದರು ಏಕೆ? ಅದಕ್ಕೆ ಇಲ್ಲಿದೆ ಉತ್ತರ. ಅಷ್ಟಕ್ಕೂ ನಡೆದಿದ್ದೆನೆಂದರೆ, ಆಂಗ್ಲ ಪತ್ರಿಕೆಯೊಂದು ಧೋನಿ ಅವರ ಸಿಕ್ಸರ್‌ಗಳಿಗೆ ಧನ್ಯವಾದಗಳು 2011 ರ ವಿಶ್ವಕಪ್ ಅನ್ನು ಭಾರತ ಗೆದ್ದಿದೆ ಎಂದು ಬರೆದಿತ್ತು. ಹಾಗಾಗಿ ಆಂಗ್ಲ ಪತ್ರಿಕೆಯ ಈ ವಾಕ್ಯ ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು. ಆದರಿಂದ ಇದರ ಬಗ್ಗೆ ಗೌತಮ್ ಗಂಭೀರ್ ಧ್ವನಿ ಎತ್ತಿದ್ದರು. ಫೈನಲ್‌ನಲ್ಲಿ ಧೋನಿ ಅವರ ಸಿಕ್ಸರ್​ನಿಂದ ಮಾತ್ರವಲ್ಲದೆ​ ಭಾರತೀಯ ತಂಡದ ಆಟಗಾರರು ಒಟ್ಟಿಗೆ ವಿಶ್ವಕಪ್ ಗೆದ್ದಿದ್ದಾರೆ ಎಂದು ಅವರು ಹಲವು ಬಾರಿ ಹೇಳಿದ್ದಾರೆ. ದೊಡ್ಡ ಕ್ರಿಕೆಟ್ ವೆಬ್‌ಸೈಟ್ ಮಾಡಿದ ಟ್ವೀಟ್‌ನಿಂದ ಈ ವಿವಾದ ಪ್ರಾರಂಭವಾಯಿತು. ಈ ಟ್ವೀಟ್‌ನಲ್ಲಿ ಧೋನಿ ಅವರ ಸಿಕ್ಸರ್‌ನ ಫೋಟೋ ಹಾಕುವ ಮೂಲಕ ಕೋಟ್ಯಂತರ ಭಾರತೀಯರಿಗೆ ಸಂಭ್ರಮಿಸಲು ಅವಕಾಶ ನೀಡಿದ ಶಾಟ್ ಎಂದು ಬರೆಯಲಾಗಿತ್ತು. ಈ ಟ್ವೀಟ್‌ ಬಗ್ಗೆ ತಮ್ಮ ಆಕ್ಷೇಪಣೆ ಸಲ್ಲಿಸಿದ ಗೌತಮ್ ಗಂಭೀರ್, ಇಡೀ ವಿಶ್ವಕಪ್ ಅನ್ನು ಭಾರತ ಗೆದ್ದಿದೆ ಎಂದು ಮರು ಟ್ವೀಟ್​ ಮಾಡಿದರು. ಇಡೀ ಭಾರತೀಯ ತಂಡ ಮತ್ತು ತಂಡದ ಸಹಾಯಕ ಸಿಬ್ಬಂದಿ ಗೆದ್ದರು ಎಂದು ಬರೆದುಕೊಂಡಿದ್ದಾರೆ.

ಇದಾದ ಸ್ವಲ್ಪ ಸಮಯದ ನಂತರ, ಅದೇ ವೆಬ್‌ಸೈಟ್‌ನಲ್ಲಿ ಮತ್ತೊಂದು ಟ್ವೀಟ್ ಮಾಡಲಾಗಿದೆ. ಇದರಲ್ಲಿ ಶ್ರೀಲಂಕಾದ ಮಹೇಲ ಜಯವರ್ಧನೆ ಮತ್ತು ಗೌತಮ್ ಗಂಭೀರ್ ಅವರ ಇನ್ನಿಂಗ್ಸ್ ಬಗ್ಗೆಯೂ ಉಲ್ಲೇಖವಿದೆ. 2011 ರ ವಿಶ್ವಕಪ್‌ನಲ್ಲಿ ಗೌತಮ್ ಗಂಭೀರ್ 275 ರನ್ಗಳನ್ನು ಬೆನ್ನಟ್ಟುವಲ್ಲಿ ಭಾರತಕ್ಕಾಗಿ ಅತಿ ಹೆಚ್ಚು 97 ರನ್ ಗಳಿಸಿದ್ದಾರೆ ಎಂಬುದನ್ನು ನಾನು ನಿಮಗೆ ನೆನಪಿಸುತ್ತೇನೆ ಎಂದು ಬರೆದುಕೊಂಡಿದೆ. ಆದರೆ ಧೋನಿ ಅವರ 91 ರನ್‌ಗಳ ಇನ್ನಿಂಗ್ಸ್ ಎಲ್ಲದಕ್ಕಿಂತು ಮುಖ್ಯವಾದದ್ದು ಎಂದಿದೆ. ಪಂದ್ಯಶ್ರೇಷ್ಠನಾಗಿ ಧೋನಿ ಆಯ್ಕೆಯಾದರು. 2011 ರ ವಿಶ್ವಕಪ್ ನಂತರ ಗಂಭೀರ್, ನನಗೆ ಶತಕವನ್ನು ಕಳೆದುಕೊಂಡಿರುವ ಬಗ್ಗೆ ಯಾವುದೇ ನೋವಿಲ್ಲ. ಏಕೆಂದರೆ ತಂಡದ ಗೆಲುವು ಮುಖ್ಯವಾಗಿತ್ತೆ ಹೊರತು ಒಂದು ಶತಕವಲ್ಲ ಎಂದು ಗಂಭೀರ್​ ಹೇಳಿಕೊಂಡಿದ್ದಾರೆ.

ಕಷ್ಟದಲ್ಲಿದ್ದ ತಂಡವನ್ನ ಬಚಾವ್​ ಮಾಡಿದ್ದ ಗಂಭೀರ್ ದಿನಾಂಕ 2 ಏಪ್ರಿಲ್ 2011. ಶ್ರೀಲಂಕಾ ವಿರುದ್ಧದ ಅಂತಿಮ ಪಂದ್ಯದಲ್ಲಿ ಟೀಮ್ ಇಂಡಿಯಾ ಗೆಲ್ಲಲು 275 ರನ್ ಗಳಿಸಬೇಕಿತ್ತು. ಈ ಗುರಿಯನ್ನು ಬೆನ್ನಟ್ಟಿದ ಸೆಹ್ವಾಗ್ ಮೊದಲ ಓವರ್‌ನಲ್ಲಿಯೇ ಔಟ್ ಆಗಿದ್ದರು. ಏಳನೇ ಓವರ್‌ನಲ್ಲಿ ಸಚಿನ್ ತೆಂಡೂಲ್ಕರ್ ಕೂಡ ಔಟಾದಾಗ ತೊಂದರೆ ಮತ್ತಷ್ಟು ಹೆಚ್ಚಾಯಿತು. ಆ ಹೊತ್ತಿಗೆ ಸ್ಕೋರ್‌ಬೋರ್ಡ್‌ನಲ್ಲಿ ಕೇವಲ 31 ರನ್ ಗಳಿಸಲಾಗಿತ್ತು. ಅಂತಹ ಕಠಿಣ ಪರಿಸ್ಥಿತಿಯಿಂದ ತಂಡವನ್ನು ಹೊರತಂದ ಗಂಭೀರ್ ಗೆಲುವಿನ ಆಸೆಯನ್ನು ಹೆಚ್ಚಿಸಿದರು. ಇಷ್ಟು ದೊಡ್ಡ ಪಂದ್ಯದಲ್ಲಿ ಗಂಭೀರ್ ತಮ್ಮ ಶತಕವನ್ನು ತಪ್ಪಿಸಿಕೊಂಡರು, ಅದೂ ಕೇವಲ ಮೂರು ರನ್‌ಗಳಿಂದ. ಗೌತಮ್ ಗಂಭೀರ್ ಅವರನ್ನು ಥಿಸರಾ ಪೆರೆರಾ ಔಟ್ ಮಾಡಿದರು. ಗಂಭೀರ್ ಪೆವಿಲಿಯನ್‌ಗೆ ಹಿಂದಿರುಗುತ್ತಿದ್ದಾಗ ಅವರ ಮುಖದಲ್ಲಿ ಅಸಮಾದಾನ ಎದ್ದು ಕಾಣುತ್ತಿತ್ತು. ಅವರು ಎಷ್ಟು ದೊಡ್ಡ ಶತಕವನ್ನು ಕಳೆದುಕೊಂಡಿದ್ದಾರೆಂದು ಅವರಿಗೆ ತಿಳಿದಿತ್ತು. ಆ ಮೂರು ರನ್ಗಳು ಅವರಿಗೆ ಭಾರತೀಯ ಕ್ರಿಕೆಟ್ ಇತಿಹಾಸದಲ್ಲಿ ದೊಡ್ಡ ಸ್ಥಾನವನ್ನು ನೀಡಬಹುದಿತ್ತು.

97 ರನ್ ಗಳಿಸಿದ ಗಂಭೀರ್ 42 ನೇ ಓವರ್‌ನಲ್ಲಿ ಔಟಾದರು. ಆ ಸಮಯದಲ್ಲಿ, ಸುಮಾರು 50 ರನ್ಗಳು ಗೆಲುವಿಗೆ ಬೇಕಾಗಿದ್ದವು. ಇದರ ನಂತರ ನಾಯಕ ಮಹೇಂದ್ರ ಸಿಂಗ್ ಧೋನಿ ಗುರಿ ತಲುಪುವ ಕೆಲಸವನ್ನು ಪೂರ್ಣಗೊಳಿಸಿದರು. ವಿಜಯದ ನಂತರ 91 ರನ್ ಗಳಿಸಿದ ಧೋನಿ ಪಂದ್ಯಶ್ರೇಷ್ಠರಾಗಿ ಆಯ್ಕೆಯಾದರು. ಕೆಲವು ತಿಂಗಳುಗಳ ನಂತರ, ಫೈನಲ್‌ನಲ್ಲಿ ಗೌತಮ್ ಗಂಭೀರ್ ಎಂತಹ ಇನ್ನಿಂಗ್ಸ್ ಕಟ್ಟಿದರು ಎಂಬುದನ್ನು ಜನರು ಮರೆತಿದ್ದಾರೆ. ಯಾವ ಕಷ್ಟದ ಪರಿಸ್ಥಿತಿಯಲ್ಲಿ ಅವರು ಸ್ಕೋರ್ ಮಾಡಿದರು ಎಂಬುದು ಈಗ ಮರೆತು ಹೋಗಿದೆ. ಆದರೆ ಭಾರತೀಯ ಕ್ರಿಕೆಟ್ ಅಭಿಮಾನಿಗಳ ಹೃದಯ ಮತ್ತು ಮನಸ್ಸಿನಲ್ಲಿ ತಾಜಾವಾಗಿರುವುದೆಂದರೆ, ಅದು ಧೋನಿಯ ಕಡೆ ಸಿಕ್ಸರ್ ಹಾಗೂ ರವಿಶಾಸ್ತ್ರಿ ಅವರ ಕಾಮೆಂಟ್ರಿ.

ನಿರ್ಣಾಯಕ ಪಂದ್ಯಗಳಲ್ಲಿ ಗಂಭೀರ್ ಸಾಧನೆ ಅಪಾರ.. 2007 ರಲ್ಲೂ ಇದೇ ಸಂಭವಿಸಿತ್ತು. ಟೀಮ್ ಇಂಡಿಯಾ ಟಿ 20 ಚಾಂಪಿಯನ್ ಆದಾಗ. ಆಗಲೂ ಫೈನಲ್‌ನಲ್ಲಿ ಗೌತಮ್ ಗಂಭೀರ್ ಅವರ ಪ್ರದರ್ಶನ ಅದ್ಭುತವಾಗಿತ್ತು. ಆದರೆ ಅವರ ಕೊಡುಗೆಯನ್ನು ಕಡೆಗಣಿಸಲಾಗಿದೆ. ಪಾಕಿಸ್ತಾನ ವಿರುದ್ಧದ ಆ ಪಂದ್ಯದಲ್ಲಿ ಗೌತಮ್ ಗಂಭೀರ್ 54 ಎಸೆತಗಳಲ್ಲಿ 75 ರನ್ ಗಳಿಸಿ ನಿರ್ಣಾಯಕ ಇನ್ನಿಂಗ್ಸ್ ಆಡಿದರು. ತಂಡದ ಒಟ್ಟು ಸ್ಕೋರ್ 157 ರನ್ಗಳಲ್ಲಿ ಅವರ ಸ್ಕೋರ್​ ಅರ್ಧದಷ್ಟಿತ್ತು. ಇದರ ಹೊರತಾಗಿಯೂ, ಇರ್ಫಾನ್ ಪಠಾಣ್ ಪಂದ್ಯಶ್ರೇಷ್ಠ ಪ್ರಶಸ್ತಿಯನ್ನು ಪಡೆದರು. ಆ ಪಂದ್ಯದಲ್ಲಿ 4 ಓವರ್‌ಗಳಲ್ಲಿ 16 ರನ್‌ಗಳಿಗೆ 3 ವಿಕೆಟ್‌ಗಳನ್ನು ಪಡೆದವರು. ನಿಸ್ಸಂಶಯವಾಗಿ ಅವರ ಕೊಡುಗೆ ಕೂಡ ದೊಡ್ಡದಾಗಿದೆ ಆದರೆ ಗಂಭೀರ್ ಅವರ 75 ರನ್ಗಳು ಬಹುಶಃ ಹೆಚ್ಚು ಮೌಲ್ಯಯುತವಾಗಿವೆ. ಪಂದ್ಯದಲ್ಲಿ ‘ಇಂಪ್ಯಾಕ್ಟ್’ ಮಾಡುವ ದೃಷ್ಟಿಯಿಂದ ನೋಡಿದರೆ, ಗೌತಮ್ ಗಂಭೀರ್ ಅವರ ಕೊಡುಗೆ ಅಪಾರ.

ಐಪಿಎಲ್‌ನ ಆರಂಭಿಕ ವರ್ಷದಲ್ಲಿ ಸೌರವ್ ಗಂಗೂಲಿ ನಾಯಕತ್ವಕ್ಕೆ ಸಂಬಂಧಿಸಿದಂತೆ ವಿವಾದಗಳು ಇದ್ದವು. 2012 ರಲ್ಲಿ ಕೋಲ್ಕತಾ ತಂಡ ಮೊದಲ ಬಾರಿಗೆ ಚಾಂಪಿಯನ್ ಆದಾಗ, ಅದರ ನಾಯಕ ಗೌತಮ್ ಗಂಭೀರ್. ಗೌತಮ್‌ಗೆ ನಾಯಕತ್ವವನ್ನು ಹಸ್ತಾಂತರಿಸುವ ತಂತ್ರವು ಎಲ್ಲಾ ದೊಡ್ಡ ಹೆಸರುಗಳ ಹಕ್ಕುಗಳನ್ನು ಕಡೆಗಣಿಸಿತು. ಇದರ ನಂತರ, 2014 ರಲ್ಲಿ, ಗೌತಮ್ ನಾಯಕತ್ವದಲ್ಲಿ ಕೋಲ್ಕತಾ ಪ್ರಶಸ್ತಿಯನ್ನು ಗೆದ್ದುಕೊಂಡಿತು. ಆದರೆ ಈ ಗೆಲುವು ಯಾವುದೇ ಒಬ್ಬ ಆಟಗಾರನ ಜಯವಲ್ಲ, ಇಡೀ ತಂಡದ ಗೆಲುವು ಎಂದು ಗಂಭೀರ್ ಯಾವಾಗಲೂ ಹೇಳುತ್ತಿರುತ್ತಾರೆ.

ಇದನ್ನೂ ಓದಿ:2011 Cricket World Cup: ಭಾರತ ವಿಶ್ವಕಪ್​ ಗೆದ್ದು ಇಂದಿಗೆ 10 ವರ್ಷ.. ಒಬ್ಬ ಕ್ಯಾನ್ಸರ್​ ಪೀಡಿತ, ಒಬ್ಬ ಶತಕ ವಂಚಿತ, ಒಬ್ಬ ಸಮರ್ಥ ನಾಯಕನ ಆಟವನ್ನು ನಾವ್ಯಾರು ಮರೆಯುವಂತಿಲ್ಲ!

ಮ್ಯಾಕ್ಸ್ 25 ದಿನ ಪೂರೈಸಿದ್ದಕ್ಕೆ ಅಭಿಮಾನಿಗಳಿಗೆ ಸುದೀಪ್ ಸ್ಪೆಷಲ್ ವಿಡಿಯೋ
ಮ್ಯಾಕ್ಸ್ 25 ದಿನ ಪೂರೈಸಿದ್ದಕ್ಕೆ ಅಭಿಮಾನಿಗಳಿಗೆ ಸುದೀಪ್ ಸ್ಪೆಷಲ್ ವಿಡಿಯೋ
ಪ್ರಯಾಗ್​ರಾಜ್ ಕುಂಭಮೇಳದ ಹಲವು ಟೆಂಟ್​ಗಳಲ್ಲಿ ಅಗ್ನಿ ಜ್ವಾಲೆ ನರ್ತನ
ಪ್ರಯಾಗ್​ರಾಜ್ ಕುಂಭಮೇಳದ ಹಲವು ಟೆಂಟ್​ಗಳಲ್ಲಿ ಅಗ್ನಿ ಜ್ವಾಲೆ ನರ್ತನ
ನಂಜನಗೂಡು ನಂಜುಂಡೇಶ್ವರನ ಆಶೀರ್ವಾದ ಪಡೆದ ಡಾಲಿ ಧನಂಜಯ್
ನಂಜನಗೂಡು ನಂಜುಂಡೇಶ್ವರನ ಆಶೀರ್ವಾದ ಪಡೆದ ಡಾಲಿ ಧನಂಜಯ್
ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ