ಮಜವಾಗಿರುತ್ತೆ! ಚೆನ್ನೈ ತಂಡಕ್ಕೆ ರೈನಾ ಬಿಕರಿಯಾದಾಗ ಧೋನಿ ಹೇಳಿದ ಮಾತು ಬಹಿರಂಗ
ನನ್ನನ್ನು ಹರಾಜಿನಲ್ಲಿ ಖರೀದಿಸಿದ ಕೂಡಲೇ ಮಹೇಂದ್ರ ಸಿಂಗ್ ಧೋನಿ, ಸುರೇಶ್ ರೈನಾ ಅವರಿಗೆ ಮಜವಾಗಿರುತ್ತೆ ಎಂದು ಪ್ರತಿಕ್ರಿಯೆಯನ್ನು ನೀಡಿದ್ದರು
ಭಾರತದ ಮಾಜಿ ಕ್ರಿಕೆಟ್ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ ಮತ್ತು ಸುರೇಶ್ ರೈನಾ ಒಂದೇ ದಿನ ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತರಾದವರು, ಅಂದರೆ ಆಗಸ್ಟ್ 15, 2020. ಈ ಜೋಡಿ ಕ್ರಿಕೆಟ್ ಮೈದಾನದಲ್ಲಿ ಮತ್ತು ಅದರ ಹೊರಗಡೆ ಸಾಕಷ್ಟು ಜನಪ್ರಿಯವಾಗಿದೆ. ಧೋನಿಯನ್ನು ತನ್ನ ಆದರ್ಶವೆಂದು ರೈನಾ ಯಾವಾಗಲೂ ಹೇಳುತ್ತಿರುತ್ತಾರೆ. ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲೂ ಅವರಿಬ್ಬರೂ ಬಹಳ ಕಾಲ ಒಟ್ಟಿಗೆ ಇದ್ದಾರೆ. ಆದರೆ ಈಗ 13 ವರ್ಷದ ಎಡಗೈ ಬ್ಯಾಟ್ಸ್‌ಮನ್ ಸುರೇಶ್ ರೈನಾ ಐಪಿಎಲ್ ಲೀಗ್‌ನ ಮೊದಲ ಆವೃತ್ತಿಯ ಹರಾಜಿನಲ್ಲಿ ಚೆನ್ನೈ ಸೇರಿದಾಗ ಧೋನಿ ಹೇಳಿದ ಮಾತನ್ನು ಈಗ ಬಹಿರಂಗಗೊಳಿಸಿದ್ದಾರೆ.
ಐಪಿಎಲ್‌ನ ಮೊದಲ ಆವೃತ್ತಿಯಿಂದ ಸುರೇಶ್ ರೈನಾ ಮಹೇಂದ್ರ ಸಿಂಗ್ ಧೋನಿ ನೇತೃತ್ವದ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಭಾಗವಾಗಿದ್ದಾರೆ ಎಂಬುದು ಹೆಚ್ಚಿನ ಅಭಿಮಾನಿಗಳಿಗೆ ತಿಳಿದಿರುತ್ತದೆ. ಐಪಿಎಲ್‌ನ 200 ಪಂದ್ಯಗಳಲ್ಲಿ ರೈನಾ 5491 ರನ್ ಗಳಿಸಿದ್ದಾರೆ ಮತ್ತು ಲೀಗ್‌ನ ಅತಿ ಹೆಚ್ಚು ಸ್ಕೋರಿಂಗ್ ಮಾಡಿದ ಕ್ರಿಕೆಟಿಗರ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದ್ದಾರೆ. 2008ರಲ್ಲಿ ಐಪಿಎಲ್ ಉದ್ಘಾಟನಾ ಆವೃತ್ತಿಯ ಮೆಗಾ ಹರಾಜಿನಲ್ಲಿ 55 ಲಕ್ಷ ಮೂಲ ಬೆಲೆಯನ್ನು ಹೊಂದಿದ್ದ ಸುರೇಶ್ ರೈನಾ ಅವರನ್ನು ಚೆನ್ನೈ ಸೂಪರ್ ಕಿಂಗ್ಸ್ 2.6 ಕೋಟಿಗೆ ಖರೀದಿಸಿತು.
ಐಪಿಎಲ್ ನನ್ನ ಮತ್ತು ಮಹಿ ಭಾಯ್ ಸಂಬಂಧವನ್ನು ಬಲಪಡಿಸಿದೆ ಐಪಿಎಲ್ ಹರಾಜಿನ ಬಗ್ಗೆ ಸುರೇಶ್ ರೈನಾ ಬಿಲೀವ್ ಪುಸ್ತಕದಲ್ಲಿ ತಿಳಿಸಿದ್ದಾರೆ. ದೇಶದ ಇತರ ಕ್ರಿಕೆಟಿಗರಂತೆ ನಾನು ಕೂಡ ಯಾವ ತಂಡವನ್ನು ಆಡುತ್ತೇನೆ ಎಂದು ಕುತೂಹಲದಿಂದ ಕಾಯುತ್ತಿದ್ದೆ. ಚೆನ್ನೈ ಸೂಪರ್‌ಕಿಂಗ್ಸ್ ನನ್ನನ್ನು ಖರೀದಿಸಿದಾಗ ನನಗೆ ತುಂಬಾ ಸಂತೋಷವಾಯಿತು. ಇದರರ್ಥ ಮಹೀ ಭಾಯ್ ಮತ್ತು ನಾನು ಒಂದೇ ತಂಡದಿಂದ ಆಡುತ್ತೇವೆ. ನನ್ನನ್ನು ಹರಾಜಿನಲ್ಲಿ ಖರೀದಿಸಿದ ಕೂಡಲೇ ಮಹೇಂದ್ರ ಸಿಂಗ್ ಧೋನಿ, ಸುರೇಶ್ ರೈನಾ ಅವರಿಗೆ ಮಜವಾಗಿರುತ್ತೆ ಎಂದು ಪ್ರತಿಕ್ರಿಯೆಯನ್ನು ನೀಡಿದ್ದರು ಎಂದು ರೈನಾ ಅಂದು ನಡೆದಿದ್ದ ಘಟನೆಯನ್ನು ವಿವರಿಸಿದ್ದಾರೆ.
ನಂತರ ಚೆನ್ನೈ ತಂಡದಲ್ಲಿ ಮ್ಯಾಥ್ಯೂ ಹೇಡನ್, ಮುತ್ತಯ್ಯ ಮುರಳೀಧರನ್ ಮತ್ತು ಸ್ಟೀಫನ್ ಫ್ಲೆಮಿಂಗ್‌ರಂತಹ ಆಟಗಾರರು ಇದ್ದರು ಮತ್ತು ನಾನು ಈ ತಂಡದಲ್ಲಿದ್ದೇನೆ ಎಂದು ಭಾವಿಸಿ ನನಗೆ ಸಂತೋಷವಾಯಿತು. ಐಪಿಎಲ್ ನನ್ನ ಮತ್ತು ಮಹಿ ಭಾಯ್ ನಡುವಿನ ಸಂಬಂಧವನ್ನು ಮತ್ತಷ್ಟು ಬಲಪಡಿಸಿತು. ಐಪಿಎಲ್‌ನಲ್ಲಿ ರೈನಾ 39 ಅರ್ಧಶತಕಗಳನ್ನು ಹೊಂದಿದ್ದಾರೆ.
ಧೋನಿ ಜೊತೆ ಆಟವಾಡುತ್ತೇನೆಂಬುದು ಖುಷಿಯ ವಿಷಯ ಎಲ್ಲ ಆಟಗಾರರ ರೀತಿ ನನಗೂ ಯಾವ ತಂಡ ನನ್ನನ್ನು ಖರೀದಿಸಲಿದೆ ಎಂಬ ಕುತೂಹಲ ಇತ್ತು. ಕೊನೆಗೆ ಚೆನ್ನೈ ಸೂಪರ್ ಕಿಂಗ್ಸ್ ತಂಡ ನನ್ನನ್ನು ಖರೀದಿಸಿದಾಗ ತುಂಬಾ ಖುಷಿಯಾಯಿತು, ಅದರಲ್ಲಿಯೂ ಮಹೇಂದ್ರ ಸಿಂಗ್ ಧೋನಿ ಅವರ ಜೊತೆ ಆಟವಾಡುತ್ತೇನೆಂಬುದು ಮತ್ತೊಂದು ಖುಷಿಯ ವಿಷಯವಾಗಿತ್ತು’ ಎಂದು ಸುರೇಶ್ ರೈನಾ ಹೇಳಿಕೊಂಡಿದ್ದಾರೆ. ಹೌದು ರೈನಾ ಚೆನ್ನೈ ತಂಡಕ್ಕೆ ಆಯ್ಕೆಯಾದ ನಂತರ ಮಹೇಂದ್ರ ಸಿಂಗ್ ಧೋನಿ ಅವರು ಈ ರೀತಿಯ ಪ್ರತಿಕ್ರಿಯೆಯನ್ನು ನೀಡಿದ್ದರು ಎಂದು ಸುರೇಶ್ ರೈನಾ ಅವರು ಹೇಳಿಕೊಂಡಿದ್ದಾರೆ.
ಇದನ್ನೂ ಓದಿ:ಕ್ರಿಕೆಟಿಗ ಸುರೇಶ್ ರೈನಾಗೆ 10 ನಿಮಿಷದಲ್ಲಿ ಆಕ್ಸಿಜನ್ ಕೊಡಿಸಿದ ನಟ ಸೋನು ಸೂದ್!