AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Singapore Strain: ದೆಹಲಿ ಸಿಎಂ ಹೇಳಿಕೆಗೆ ಸಿಂಗಾಪುರ್ ಆಕ್ಷೇಪ; ಅರವಿಂದ ಕೇಜ್ರಿವಾಲ್ ಭಾರತದ ಪರ ಮಾತಾಡಿಲ್ಲ ಎಂದ ಕೇಂದ್ರ ಸರ್ಕಾರ

Arvind Kejriwal: ದೆಹಲಿ ಸಿಎಂ ಭಾರತ ಪರವಾಗಿ ಮಾತನಾಡಿಲ್ಲ ಎಂದು ಒತ್ತಿ ಹೇಳಿದ ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜೈಶಂಕರ್ ಅರಿವು ಇರುವವರ ಬೇಜವಾಬ್ದಾರಿ ಕಾಮೆಂಟ್‌ಗಳು ದೀರ್ಘಕಾಲದ ಸಹಭಾಗಿತ್ವವನ್ನು ಹಾನಿಗೊಳಿಸುತ್ತವೆ ಎಂದಿದ್ದಾರೆ.

Singapore Strain: ದೆಹಲಿ ಸಿಎಂ ಹೇಳಿಕೆಗೆ ಸಿಂಗಾಪುರ್ ಆಕ್ಷೇಪ; ಅರವಿಂದ ಕೇಜ್ರಿವಾಲ್ ಭಾರತದ ಪರ ಮಾತಾಡಿಲ್ಲ ಎಂದ ಕೇಂದ್ರ ಸರ್ಕಾರ
ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್
ರಶ್ಮಿ ಕಲ್ಲಕಟ್ಟ
ರಶ್ಮಿ ಕಲ್ಲಕಟ್ಟ|

Updated on:May 19, 2021 | 4:49 PM

Share

ದೆಹಲಿ: ಸಿಂಗಾಪುರ್​ನಲ್ಲಿ ಕಂಡುಬರುವ ಕೊರೊನಾವೈರಸ್‌ನ ರೂಪಾಂತರಿಯು ದೇಶದಲ್ಲಿ ಮೂರನೇ ಅಲೆಗೆ ಕಾರಣವಾಗಬಹುದು ಎಂಬ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಹೇಳಿಕೆಯನ್ನು ಸಿಂಗಾಪುರ್ ಸರ್ಕಾರ ನಿರಾಕರಿಸಿದ ಒಂದು ದಿನದ ನಂತರ, ಕೇಂದ್ರವು ಬುಧವಾರ ದೆಹಲಿ ಮುಖ್ಯಮಂತ್ರಿಗೆ ಕೊವಿಡ್ ರೂಪಾಂತರಿಗಳ ಬಗ್ಗೆ ಅಥವಾ ನಾಗರಿಕ ವಿಮಾನಯಾನ ನೀತಿ ಬಗ್ಗೆ ಮಾತನಾಡುವಂತಿಲ್ಲ ಎಂದು ಹೇಳಿದೆ. ದೆಹಲಿ ಸಿಎಂ ಭಾರತ ಪರವಾಗಿ ಮಾತನಾಡಿಲ್ಲ ಎಂದು ಒತ್ತಿ ಹೇಳಿದ ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್ ಅರಿವು ಇರುವವರ ಬೇಜವಾಬ್ದಾರಿ ಕಾಮೆಂಟ್‌ಗಳು ದೀರ್ಘಕಾಲದ ಸಹಭಾಗಿತ್ವವನ್ನು ಹಾನಿಗೊಳಿಸುತ್ತವೆ ಎಂದಿದ್ದಾರೆ. ಮಂಗಳವಾರ ಕೇಜ್ರಿವಾಲ್ ಸಿಂಗಾಪುರದಲ್ಲಿ ಕಂಡುಬರುವ ಕೊರೊವೈರಸ್​ನ ಒಂದು ರೂಪಾಂತರವು ದೇಶದ ಮೂರನೇ ಅಲೆ ಉಂಟುಮಾಡಬಹುದು ಎಂದು ಹೇಳಿದ್ದರು ಮತ್ತು ಸಿಂಗಾಪುರ್​ನೊಂದಿಗೆ ವಿಮಾನ ಸೇವೆಗಳನ್ನು ತಕ್ಷಣವೇ ನಿಲ್ಲಿಸುವಂತೆ ಕೇಂದ್ರಕ್ಕೆ ಮನವಿ ಮಾಡಿದ್ದರು.

ಇದನ್ನು ಮಂಗಳವಾರ ರಾತ್ರಿ ಸಿಂಗಾಪುರ್​ ಆರೋಗ್ಯ ಸಚಿವಾಲಯ ನಿರಾಕರಿಸಿದೆ. ವರದಿಗಳಲ್ಲಿ ಕಂಡುಬರುವ ಪ್ರತಿಪಾದನೆಗಳಲ್ಲಿ ಯಾವುದೇ ಸತ್ಯವಿಲ್ಲ. ಸಿಂಗಾಪುರ್ ರೂಪಾಂತರಿ ಇಲ್ಲ. ಇತ್ತೀಚಿನ ವಾರಗಳಲ್ಲಿ ಅನೇಕ ಕೊವಿಡ್ ಪ್ರಕರಣಗಳಲ್ಲಿ ಪ್ರಚಲಿತದಲ್ಲಿರುವ ತಳಿ B.1.617.2 ರೂಪಾಂತರವಾಗಿದೆ, ಇದು ಭಾರತದಲ್ಲಿ ಹುಟ್ಟಿಕೊಂಡಿತು. ಫೈಲೋಜೆನೆಟಿಕ್ ಪರೀಕ್ಷೆಯು ಈ ಬಿ .1.617.2 ರೂಪಾಂತರಿಯು ಸಿಂಗಾಪುರ್ ನ ಹಲವಾರು ಕ್ಲಸ್ಟರ್‌ಗಳೊಂದಿಗೆ ಸಂಯೋಜಿಸಿದೆ ಎಂದು ತೋರಿಸಿದೆ ಎಂದು ಸಿಂಗಾಪುರ್ ಸಚಿವಾಲಯ ಟ್ವೀಟ್ ಮಾಡಿದೆ.

ಬುಧವಾರ ವಿದೇಶಾಂಗ ಸಚಿವಾಲಯದ ಅಧಿಕೃತ ವಕ್ತಾರ ಅರಿಂದಮ್ ಬಾಗ್ಚಿ, ಸಿಂಗಾಪುರ್ ರೂಪಾಂತರಿ ಕುರಿತು ದೆಹಲಿ ಸಿಎಂ ಅವರ ಟ್ವೀಟ್‌ಗೆ ತೀವ್ರ ಆಕ್ಷೇಪಣೆ ವ್ಯಕ್ತಪಡಿಸಲು ಸಿಂಗಾಪುರ್ ಸರ್ಕಾರ ಇಂದು ನಮ್ಮ ಹೈಕಮಿಷನರ್‌ಗೆ ಕರೆ ಮಾಡಿದೆ. ಕೋವಿಡ್ ರೂಪಾಂತರಿಗಳು ಅಥವಾ ನಾಗರಿಕ ವಿಮಾನಯಾನ ನೀತಿಯ ಬಗ್ಗೆ ಹೇಳಲು ದೆಹಲಿ ಸಿಎಂಗೆ ಯಾವುದೇ ಅಧಿಕಾರವಿಲ್ಲ ಎಂದು ಹೈಕಮಿಷನರ್ ಸ್ಪಷ್ಟಪಡಿಸಿದ್ದಾರೆ.

ಕೆಲವು ನಿಮಿಷಗಳ ನಂತರ ಪ್ರತಿಕ್ರಿಯಿಸಿದ ಜೈಶಂಕರ್ ಕೋವಿಡ್ -19 ವಿರುದ್ಧದ ಹೋರಾಟದಲ್ಲಿ ಸಿಂಗಾಪುರ್ ಮತ್ತು ಭಾರತವು ದೃಢವಾದ ಪಾಲುದಾರರಾಗಿದ್ದೇವೆ. ಲಾಜಿಸ್ಟಿಕ್ಸ್ ಹಬ್ ಮತ್ತು ಆಮ್ಲಜನಕ ಪೂರೈಕೆದಾರರಾಗಿ ಸಿಂಗಾಪುರದ ಪಾತ್ರವನ್ನು ಶ್ಲಾಘಿಸುತ್ತೇವೆ. ನಮಗೆ ಸಹಾಯ ಮಾಡಲು ಮಿಲಿಟರಿ ವಿಮಾನವನ್ನು ನಿಯೋಜಿಸಿರುವುದು ನಮ್ಮ ಅಸಾಧಾರಣ ಸಂಬಂಧವನ್ನು ತೋರಿಸುತ್ತದೆ ಎಂದಿದ್ದಾರೆ.

ಆದಾಗ್ಯೂ ಚೆನ್ನಾಗಿ ತಿಳುವಳಿಕೆ ಇರುವವರ ಬೇಜವಾಬ್ದಾರಿ ಹೇಳಿಕೆಗಳು ದೀರ್ಘಕಾಲದ ಸಹಭಾಗಿತ್ವವನ್ನು ಹಾನಿಗೊಳಿಸುತ್ತವೆ. ಆದ್ದರಿಂದ, ನಾನು ಸ್ಪಷ್ಟಪಡಿಸುತ್ತೇನೆ- ದೆಹಲಿ ಸಿಎಂ ಭಾರತದ ಪರ ಮಾತನಾಡಿಲ್ಲ ಎಂದು ಹೇಳಿದ್ದಾರೆ.

ಕೇಂದ್ರದ ಟೀಕೆಗಳಿಗೆ ಪ್ರತಿಕ್ರಿಯಿಸಿದ ದೆಹಲಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಬಿಜೆಪಿ ಕೀಳು ಮಟ್ಟದ ರಾಜಕೀಯ ಮಾಡುತ್ತಿದೆ ಎಂದು ಆರೋಪಿಸಿದರು. “ಸಿಂಗಾಪುರ್ ನಲ್ಲಿ ಕೇಂದ್ರವು ತನ್ನ ಇಮೇಜ್ ಬಗ್ಗೆ ಮಾತ್ರ ಚಿಂತಿಸುತ್ತಿದೆ .ಕೊವಿಡ್ ಒತ್ತಡದಿಂದ ಬಳಲುತ್ತಿರುವ ಮಕ್ಕಳ ಬಗ್ಗೆ ಅಲ್ಲ. ಇದು ಕೊವಿಡ್ ಲಂಡನ್ ರೂಪಾಂತರಿ ಬಗ್ಗೆ ಎಚ್ಚರಿಕೆಗಳನ್ನು ಪರಿಗಣಿಸಲಿಲ್ಲ. ಇದರಿಂದ ಅನೇಕರು ತಮ್ಮ ಕುಟುಂಬ ಸದಸ್ಯರನ್ನು ಕಳೆದುಕೊಂಡರು ಎಂದು ಸಿಸೋಡಿಯಾ ಟ್ವೀಟ್ ಮಾಡಿದ್ದಾರೆ.

ಏತನ್ಮಧ್ಯೆ, ರಾಷ್ಟ್ರ ರಾಜಧಾನಿಯಲ್ಲಿ ಕೋವಿಡ್ -19 ಸಕಾರಾತ್ಮಕ ದರವು ಶೇಕಡಾ 6.89 ಕ್ಕೆ ಇಳಿದಿದೆ. ಸೋಮವಾರ, ಸಕಾರಾತ್ಮಕತೆ ಪ್ರಮಾಣವು ಶೇ 8.42% ಆಗಿತ್ತು. ನಗರದಲ್ಲಿ ಸೋಮವಾರ ಪರೀಕ್ಷೆಗಳ ಸಂಖ್ಯೆ 53,756 ರಿಂದ ಮಂಗಳವಾರ 65,004 ಕ್ಕೆ ಏರಿದೆ. ಸಾವುಗಳ ಸಂಖ್ಯೆ ಸೋಮವಾರ 340 ರಿಂದ 265 ಕ್ಕೆ ಇಳಿದಿದೆ. ಕಳೆದ 24 ಗಂಟೆಗಳಲ್ಲಿ, 4,482 ಹೊಸ ಪ್ರಕರಣಗಳು ದಾಖಲಾಗಿದ್ದು, ಸೋಮವಾರ ವರದಿಯಾದ ಪ್ರಕರಣಕ್ಕಿಂತ 4,524 ಕ್ಕಿಂತ ಕಡಿಮೆಯಾಗಿದೆ. ನಗರದಾದ್ಯಂತ ಕೊವಿಡ್ ರೋಗಿಗಳಿಗಾಗಿ ಕಾಯ್ದಿರಿಸಲಾಗಿರುವ 24,305 ಹಾಸಿಗೆಗಳಲ್ಲಿ ಪ್ರಸ್ತುತ 9,906 ಹಾಸಿಗೆಗಳು ಖಾಲಿ ಇವೆ.

ಇದನ್ನೂ ಓದಿ: ದೆಹಲಿಯಲ್ಲಿ ಕೊವಿಡ್ ಪ್ರಕರಣಗಳು ಇಳಿಕೆಯಾಗುತ್ತಿದ್ದಂತೆ ಆಸ್ಪತ್ರೆಯಲ್ಲಿ ಕಾಣಿಸುತ್ತಿವೆ ಖಾಲಿ ಬೆಡ್

ಸಿಂಗಾಪುರದಲ್ಲಿ ಪತ್ತೆಯಾದ ಕೊರೊನಾ ವೈರಾಣು ಭಾರತದಲ್ಲಿ ಮೂರನೇ ಅಲೆಗೆ ಕಾರಣವಾಗಬಹುದು: ಅರವಿಂದ್ ಕೇಜ್ರಿವಾಲ್

Published On - 4:40 pm, Wed, 19 May 21

Follow Us
ರಶ್ಮಿ ಕಲ್ಲಕಟ್ಟ
ರಶ್ಮಿ ಕಲ್ಲಕಟ್ಟ

ಊರು ಕಾಸರಗೋಡು. ಓದಿದ್ದು ಇಂಜಿನಿಯರಿಂಗ್, ಪಬ್ಲಿಕ್ ಅಡ್ಮಿನಿಸ್ಟ್ರೇಷನ್ ಮತ್ತು ಇಂಗ್ಲಿಷ್ ಸ್ನಾತಕೋತ್ತರ ಪದವಿ. ಕನ್ನಡಪ್ರಭ, ಪ್ರಜಾವಾಣಿ ಡಿಜಿಟಲ್ ಮತ್ತು ಪ್ರಿಂಟ್ ವಿಭಾಗದಲ್ಲಿ ಕೆಲಸದ ಅನುಭವ. ಬ್ಲಾಗರ್, ಸಾಹಿತ್ಯ ಪ್ರೇಮಿ. ಇಲ್ಲಿವರೆಗೆ 2 ಪುಸ್ತಕಗಳು ಪ್ರಕಟವಾಗಿವೆ. ಕಲೆ,ಸಾಹಿತ್ಯ,ತಂತ್ರಜ್ಞಾನ,ಸಂದರ್ಶನ, ಫ್ಯಾಕ್ಟ್ ಚೆಕಿಂಗ್ ಆಸಕ್ತಿಕರ ವಿಷಯಗಳು. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷ ಅನುಭವ

ಸೌಜನ್ಯ ಕೇಸ್​​ ತನಿಖೆಗೆ SIT ಚಾಲನೆ: ಮೊದಲ ಸಭೆ, ಇನ್​ ಸೈಡ್​ ಮಾಹಿತಿ
ಸೌಜನ್ಯ ಕೇಸ್​​ ತನಿಖೆಗೆ SIT ಚಾಲನೆ: ಮೊದಲ ಸಭೆ, ಇನ್​ ಸೈಡ್​ ಮಾಹಿತಿ
ದಸರಾದಲ್ಲಿ ಭಾಗವಹಿಸಲು ಕನ್ನಡ ಚಿತ್ರರಂಗಕ್ಕೆ ಸಿಎಂ ವಿಶೇಷ ಆಹ್ವಾನ
ದಸರಾದಲ್ಲಿ ಭಾಗವಹಿಸಲು ಕನ್ನಡ ಚಿತ್ರರಂಗಕ್ಕೆ ಸಿಎಂ ವಿಶೇಷ ಆಹ್ವಾನ
ಸ್ಮಿತ್ ದೀರ್ಘಾಯುಷ್ಯಕ್ಕಾಗಿ ಸೋಮನಾಥ ದೇವಸ್ಥಾನದಲ್ಲಿ ಮಹಾಮೃತ್ಯುಂಜಯ ಜಪ
ಸ್ಮಿತ್ ದೀರ್ಘಾಯುಷ್ಯಕ್ಕಾಗಿ ಸೋಮನಾಥ ದೇವಸ್ಥಾನದಲ್ಲಿ ಮಹಾಮೃತ್ಯುಂಜಯ ಜಪ
ವಿಶೇಷಚೇತನರ ಪ್ರತಿಭಟನೆ: ಮಳೆಯಲ್ಲೇ ಸಮಸ್ಯೆ ಆಲಿಸಿದ ಆರ್​ ಅಶೋಕ್​​
ವಿಶೇಷಚೇತನರ ಪ್ರತಿಭಟನೆ: ಮಳೆಯಲ್ಲೇ ಸಮಸ್ಯೆ ಆಲಿಸಿದ ಆರ್​ ಅಶೋಕ್​​
ಸ್ಮಿತ್ ಮಚ್ಛಾರ್ ಚೇತರಿಕೆಗೆ ಕಾಶಿ ವಿಶ್ವನಾಥ ದೇವಸ್ಥಾನದಲ್ಲಿ ವಿಶೇಷ ಪೂಜೆ
ಸ್ಮಿತ್ ಮಚ್ಛಾರ್ ಚೇತರಿಕೆಗೆ ಕಾಶಿ ವಿಶ್ವನಾಥ ದೇವಸ್ಥಾನದಲ್ಲಿ ವಿಶೇಷ ಪೂಜೆ
ಸೆಷನ್ಸ್ ಕೋರ್ಟ್‌ಗೆ ಮರು ಅರ್ಜಿ ಸಲ್ಲಿಸಲು ಪ್ರಿಯಾಂಕ್, ನಲಪಾಡ್‌ಗೆ ಸೂಚನೆ
ಸೆಷನ್ಸ್ ಕೋರ್ಟ್‌ಗೆ ಮರು ಅರ್ಜಿ ಸಲ್ಲಿಸಲು ಪ್ರಿಯಾಂಕ್, ನಲಪಾಡ್‌ಗೆ ಸೂಚನೆ
ಯೋಗೇಶ್​​ ಗೌಡ ಕೊಲೆ ಕೇಸ್​​: ವಿನಯ್​​ ಕುಲಕರ್ಣಿಗೆ 'ಸುಪ್ರೀಂ' ಸಂಕಷ್ಟ?
ಯೋಗೇಶ್​​ ಗೌಡ ಕೊಲೆ ಕೇಸ್​​: ವಿನಯ್​​ ಕುಲಕರ್ಣಿಗೆ 'ಸುಪ್ರೀಂ' ಸಂಕಷ್ಟ?
ಪ್ರಶಾಂತ್, ಗಗನ್ ತಮಾಷೆ ಮಾತಿಗೆ ಬಿದ್ದು ಬಿದ್ದು ನಕ್ಕ ಸೋನಿಕಾ ಗೌಡ
ಪ್ರಶಾಂತ್, ಗಗನ್ ತಮಾಷೆ ಮಾತಿಗೆ ಬಿದ್ದು ಬಿದ್ದು ನಕ್ಕ ಸೋನಿಕಾ ಗೌಡ
ಬೋಗಸ್ ಫಾರ್ಮ್ ನೀಡಿ ಮತದಾರರ ಹೆಸರು ಡಿಲೀಟ್ ಆರೋಪ:  25 ಜನರ ವಿರುದ್ಧ FIR
ಬೋಗಸ್ ಫಾರ್ಮ್ ನೀಡಿ ಮತದಾರರ ಹೆಸರು ಡಿಲೀಟ್ ಆರೋಪ:  25 ಜನರ ವಿರುದ್ಧ FIR
ಉತ್ತರಾಖಂಡದಲ್ಲಿ ಭಾರೀ ಭೂಕುಸಿತ; ಗುಡ್ಡ ಕುಸಿಯುವ ಭಯಾನಕ ವಿಡಿಯೋ ವೈರಲ್
ಉತ್ತರಾಖಂಡದಲ್ಲಿ ಭಾರೀ ಭೂಕುಸಿತ; ಗುಡ್ಡ ಕುಸಿಯುವ ಭಯಾನಕ ವಿಡಿಯೋ ವೈರಲ್