ಸಿಂಗಾಪೂರದಲ್ಲಿ 25 ವರ್ಷದಲ್ಲೇ ಅತಿ ದೊಡ್ಡ ಪ್ರಮಾಣದ ಮಾದಕವಸ್ತುಗಳು ವಶಕ್ಕೆ

ಸಿಂಗಾಪೂರದಲ್ಲಿ 25 ವರ್ಷದಲ್ಲೇ ಅತಿ ದೊಡ್ಡ ಪ್ರಮಾಣದ ಗಾಂಜಾವನ್ನು ವಶಕ್ಕೆ ಪಡೆಯಲಾಗಿದೆ. ಆ ದೇಶದಲ್ಲಿ 500 ಗ್ರಾಂ ಮತ್ತು ಅದಕ್ಕಿಂತ ಮೇಲ್ಪಟ್ಟ ಪ್ರಮಾಣದ ಗಾಂಜಾ ಸಾಗಣೆ ಮಾಡಿದರೆ ಗರಿಷ್ಠ ಪ್ರಮಾಣದ ಶಿಕ್ಷೆಯಾಗಿ ಮರಣದಂಡನೆಯನ್ನೂ ಸಹ ವಿಧಿಸಬಹುದು.

ಸಿಂಗಾಪೂರದಲ್ಲಿ 25 ವರ್ಷದಲ್ಲೇ ಅತಿ ದೊಡ್ಡ ಪ್ರಮಾಣದ ಮಾದಕವಸ್ತುಗಳು ವಶಕ್ಕೆ
ಗಾಂಜಾ (ಸಂಗ್ರಹ ಚಿತ್ರ)
Follow us
Srinivas Mata
|

Updated on: Apr 19, 2021 | 3:34 PM

ಸಿಂಗಾಪೂರದ ಮಾದಕವಸ್ತು ವಿರೋಧಿ ದಳವು ಸೋಮವಾರದಂದು ನೀಡಿದ ಹೇಳಿಕೆ ಪ್ರಕಾರ, ಕಳೆದ ವಾರ ಭಾರೀ ಕಾರ್ಯಾಚರಣೆಯನ್ನು ನಡೆಸಿ, ಕಳೆದ 25 ವರ್ಷದಲ್ಲೇ ಅತಿ ದೊಡ್ಡ ಪ್ರಮಾಣದ ಮಾದಕವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಅಂದಹಾಗೆ ಮಾದಕವಸ್ತು ಕಳ್ಳಸಾಗಣೆಗೆ ಸಂಬಂಧಿಸಿದಂತೆ ಸಿಂಗಾಪೂರದಲ್ಲಿ ಕಠಿಣ ಕಾನೂನುಗಳು ಇದ್ದು, ಗರಿಷ್ಠ ಪ್ರಮಾಣ ಅಂದರೆ, ಮರಣದಂಡನೆ ಶಿಕ್ಷೆಯನ್ನೂ ವಿಧಿಸಬಹುದಾಗಿದೆ. ಕೇಂದ್ರೀಯ ಮಾದಕವಸ್ತು ದಳವು 23.7 ಕೇಜಿ ಗಾಂಜಾ ಮತ್ತು 16.5 ಕೇಜಿ ಹೆರಾಯಿನ್ ವಶಪಡಿಸಿಕೊಂಡಿದೆ. ಅದರ ಜತೆಗೆ ಕ್ರಿಸ್ಟಲ್ ಮೆಟಂಫೆಟಮೈನ್ ಮತ್ತು ಎಕಸ್ಟಸಿ ಮಾತ್ರೆಗಳನ್ನೂ ವಶಪಡಿಸಿಕೊಳ್ಳಲಾಗಿದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.

1996ರ ನಂತರದಲ್ಲಿ ಇಷ್ಟು ದೊಡ್ಡ ಪ್ರಮಾಣದಲ್ಲಿ ಗಾಂಜಾ ಮತ್ತು 2001ರ ನಂತರ ಈ ಪ್ರಮಾಣದ ಹೆರಾಯಿನ್ ವಶಕ್ಕೆ ಪಡೆದಿರಲಿಲ್ಲ. ತನಿಖಾ ದಳದ ಮಾಹಿತಿಯ ಪ್ರಕಾರ, ಈ ಡ್ರಗ್ಸ್​ಗಳ ಮೌಲ್ಯ 17 ಲಕ್ಷ ಅಮೆರಿಕನ್ ಡಾಲರ್​ಗೂ ಹೆಚ್ಚಾಗುತ್ತದೆ. ಭಾರತದ ರೂಪಾಯಿ ಲೆಕ್ಕದಲ್ಲಿ ಹೇಳಬೇಕೆಂದರೆ, 12 ಕೋಟಿಗೂ ಹೆಚ್ಚಾಗುತ್ತದೆ. ಮಾದಕವಸ್ತು ಸಾಗಣೆಯ ಶಂಕಿತ ಆರೋಪಿಯಾದ 22 ವರ್ಷದ ಮಲೇಷ್ಯನ್ ಪ್ರಜೆಯನ್ನು ಈ ಪ್ರಕರಣದ ಸಂಬಂಧ ಕಳೆದ ಶುಕ್ರವಾರದಂದು ಅಧಿಕಾರಿಗಳು ಬಂಧಿಸಿದ್ದಾರೆ.

ಶ್ರೀಮಂತ ನಗರವಾದ ಸಿಂಗಾಪೂರದಲ್ಲಿ ಮಾದಕವಸ್ತು ಪದಾರ್ಥಗಳ ಸಾಗಣೆ ಅಪರಾಧಕ್ಕೆ ಗಂಭೀರವಾದ ಶಿಕ್ಷೆಯನ್ನು ವಿಧಿಸಲಾಗುತ್ತದೆ. ಸುದೀರ್ಘಾವಧಿ ಜೈಲು ಶಿಕ್ಷೆಯೂ ಸೇರಿ, ಕೆಲವು ಪ್ರಕರಣದಲ್ಲಿ ಮರಣದಂಡನೆ ವಿಧಿಸಿದಂತೆ ಉದಾಹರಣೆಗಳು ಸಹ ಸಿಗುತ್ತವೆ. ಕಳೆದ ಒಂದು ದಶಕದಲ್ಲಿ ಹತ್ತಾರು ವಿದೇಶೀಯರೂ ಸೇರಿದಂತೆ ನೂರಾರು ಮಂದಿಯನ್ನು ಮಾದಕವಸ್ತುಗಳ ಸಾಗಣೆ ಆರೋಪದಲ್ಲೇ ನೇಣಿಗೆ ಏರಿಸಲಾಗಿದೆ. 500 ಗ್ರಾಮ್​ಗಿಂತ ಹೆಚ್ಚಿನ ಗಾಂಜಾವನ್ನು ಸಾಗಿಸಿದರೆ ಸಿಂಗಾಪೂರದಲ್ಲಿ ಮರಣದಂಡನೆ ವಿಧಿಸಲಾಗುತ್ತದೆ.

ಇದನ್ನೂ ಓದಿ: 130 ಕೋಟಿ ವಂಚಿಸಿದ್ದ ವಜ್ರದ ಸ್ಮಗ್ಲರ್ ಮುಂಬೈ ಪೊಲೀಸರ ಕಣ್ತಪ್ಪಿಸಿದ್ದು ಅದೇಷ್ಟು ವರ್ಷ ಗೊತ್ತಾ?

(Singapore said, it seized biggest cannabis since 25 years)

ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್