ಕೊವಿಡ್ ಪ್ರಕರಣಗಳ ಏರಿಕೆ; ಬ್ರಿಟನ್ ,ಪಾಕಿಸ್ತಾನ, ಹಾಂಗ್​ಕಾಂಗ್​ನಲ್ಲಿ ಭಾರತದಿಂದ ಬರುವ ಪ್ರಯಾಣಿಕರಿಗೆ ನಿರ್ಬಂಧ

Coronavirus: ಭಾರತದಲ್ಲಿ ಕೊವಿಡ್ ಪ್ರಕರಣ ದಾಖಲೆ ಏರಿಕೆ ಕಂಡಿರುವುದರಿಂದ ಭಾರತದಿಂದ ಬರುವ ಪ್ರಯಾಣಿಕರಿಗೆ ಎರಡು ವಾರಗಳ ಕಾಲ ನಿರ್ಬಂಧ ವಿಧಿಸುವ ಬಗ್ಗೆ ಪಾಕಿಸ್ತಾನ ಸೋಮವಾರ ನಿರ್ಧಾರ ಕೈಗೊಂಡಿದೆ.

ಕೊವಿಡ್ ಪ್ರಕರಣಗಳ ಏರಿಕೆ; ಬ್ರಿಟನ್ ,ಪಾಕಿಸ್ತಾನ, ಹಾಂಗ್​ಕಾಂಗ್​ನಲ್ಲಿ ಭಾರತದಿಂದ ಬರುವ ಪ್ರಯಾಣಿಕರಿಗೆ ನಿರ್ಬಂಧ
ಪ್ರಾತಿನಿಧಿಕ ಚಿತ್ರ
Follow us
ರಶ್ಮಿ ಕಲ್ಲಕಟ್ಟ
|

Updated on:Apr 20, 2021 | 1:27 PM

ಬ್ರಿಟನ್: ಭಾರತದಲ್ಲಿ ರೂಪಾಂತರಿ ಕೊರೊನಾವೈರಸ್ ನಿಂದಾಗಿಸೋಂಕು ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಬ್ರಿಟನ್ ಭಾರತವನ್ನು ಕೆಂಪು ಪಟ್ಟಿಗೆ ಸೇರಿಸಿದೆ.ಅಂದರೆ ಭಾರತೀಯರಿಗೆ ಬ್ರಿಟನ್  ಪ್ರಯಾಣ ನಿರ್ಬಂಧವನ್ನು ವಿಧಿಸಿದೆ. ಇದರ ಪ್ರಕಾರ ಯುಕೆ, ಐರ್ಲೆಂಡ್‌ನ ನಿವಾಸಿ ಅಥವಾ ಬ್ರಿಟಿಷ್ ಪ್ರಜೆಗಳು ಹತ್ತು ದಿನಗಳ ಹಿಂದೆ ಭಾರತಕ್ಕೆ ಹೋಗಿದ್ದರೆ ಅವರು ಬ್ರಿಟನ್ ಪ್ರವೇಶಿಸುವಂತಿಲ್ಲ. ಈ ನಿಯಮ ಶುಕ್ರವಾರ ಮುಂಜಾನೆ 3 ಗಂಟೆಯಿಂದ ಜಾರಿಗೆ ಬಂದಿದೆ. ಭಾರತ ಮಾತ್ರವಲ್ಲ ಪಾಕಿಸ್ತಾನ, ಬಾಂಗ್ಲಾದೇಶ, ಓಮನ್, ಫಿಲಿಪೈನ್ಸ್, ಕತಾರ್, ದಕ್ಷಿಣ ಆಫ್ರಿಕಾ, ಯುಎಇ ಮತ್ತು ಜಿಂಬಾಬ್ವೆ ದೇಶಗಳನ್ನು ಬ್ರಿಟನ್ ಕೆಂಪು ಕೆಂಪು ಪಟ್ಟಿಗೆ ಸೇರಿಸಿದೆ.

ನಾವು ಭಾರತವನ್ನು ಕೆಂಪು ಪಟ್ಟಿಗೆ ಸೇರಿಸುವ ಕಠಿಣ ಆದರೆ ಮಹತ್ವದ ನಿರ್ಧಾರವನ್ನು ತೆಗೆದುಕೊಂಡಿದ್ದೇವೆ. ಇದರರ್ಥ ಯುಕೆ, ಐರಿಶ್ ಅಥವಾ ಬ್ರಿಟಿಷ್ ಪ್ರಜೆಯಲ್ಲದವರು ಹಿಂದಿನ 10 ದಿನಗಳಲ್ಲಿ ಭಾರತದಲ್ಲಿದ್ದರೆ ಯುಕೆಗೆ ಪ್ರವೇಶಿಸಲು ಸಾಧ್ಯವಿಲ್ಲ ಎಂದು ಯುಕೆ ಆರೋಗ್ಯ ರಾಜ್ಯ ಕಾರ್ಯದರ್ಶಿ ಮ್ಯಾಟ್ ಹ್ಯಾನ್ಕಾಕ್ ಸಂಸತ್ತಿನಲ್ಲಿ ಹೇಳಿದ್ದಾರೆ. ರಾಯಿಟರ್ಸ್ ವರದಿಯ ಪ್ರಕಾರ ಬ್ರಿಟನ್, ಐರಿಶ್ ಮತ್ತು ಬ್ರಿಟಿಷ್ ನಾಗರಿಕರು ಬ್ರಿಟನ್ ಗೆ ಮರಳುವ ಮುನ್ನ 10 ದಿನಗಳ ಕಾಲ ಭಾರತದಲ್ಲಿದ್ದರ 10 ದಿನಗಳ ಹೋಟೆಲ್ ಕ್ವಾರಂಟೈನ್ ನಲ್ಲಿರಬೇಕಾಗುತ್ತದೆ. ಬ್ರಿಟನ್ ನಲ್ಲಿ ಭಾರತೀಯ ರೂಪಾಂತರ ಎಂದು ಕರೆಯಲ್ಪಡುವ 103 ಪ್ರಕರಣಗಳನ್ನು ಗುರುತಿಸಲಾಗಿದೆ ಅದರಲ್ಲಿ ಬಹುಪಾಲು ಪ್ರಕರಣಗಳು ಅಂತರರಾಷ್ಟ್ರೀಯ ಪ್ರಯಾಣದ ಹಿನ್ನೆಲೆಯುಳ್ಳವರದ್ದಾಗಿದೆ.

ಭಾರತೀಯ ಪ್ರಯಾಣಿಕರಿಗೆ ಪಾಕ್ ನಿರ್ಬಂಧ ಭಾರತದಲ್ಲಿ ಕೊವಿಡ್ ಪ್ರಕರಣ ದಾಖಲೆ ಏರಿಕೆ ಕಂಡಿರುವುದರಿಂದ ಭಾರತದಿಂದ ಬರುವ ಪ್ರಯಾಣಿಕರಿಗೆ ಎರಡು ವಾರಗಳ ಕಾಲ ನಿಬಂಧ ವಿಧಿಸುವ ಬಗ್ಗೆ ಪಾಕಿಸ್ತಾನ ಸೋಮವಾರ ನಿರ್ಧಾರ ಕೈಗೊಂಡಿದೆ. ಭಾರತದಲ್ಲಿ ಒಟ್ಟು ಕೊವಿಡ್ ಪ್ರಕರಣಗಳ ಸಂಖ್ಯೆ 1.50 ಕೋಟಿ ಗಡಿ ದಾಟಿದ್ದು, ಕೇವಲ 15 ದಿನಗಳಲ್ಲಿ ಸುಮಾರು 25 ಲಕ್ಷ ಪ್ರಕರಣಗಳು ವರದಿಯಾಗಿದೆ. ಅದೇ ವೇಳೆ ಸಕ್ರಿಯ ಪ್ರಕರಣಗಳ ಸಂಖ್ಯೆ 19 ಲಕ್ಷಗಳನ್ನು ದಾಟಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಹೇಳಿದೆ.  ಪಾಕಿಸ್ತಾನದ ರಾಷ್ಟ್ರೀಯ ಕಮಾಂಡ್ ಮತ್ತು ಆಪರೇಷನ್ ಸೆಂಟರ್ (NCOC) ತನ್ನ ಮುಖ್ಯಸ್ಥ ಅಸಾದ್ ಉಮರ್ ಅವರ ಅಧ್ಯಕ್ಷತೆಯಲ್ಲಿ ಸೋಮವಾರ ನಡೆದ ಸಭೆಯಲ್ಲಿ ಭಾರತದಿಂದ ಬರುವ ಪ್ರಯಾಣಿಕರಿಗೆ ಎರಡು ವಾರಗಳ ನಿಷೇಧ ಹೇರುವ ನಿರ್ಧಾರವನ್ನು ತೆಗೆದುಕೊಂಡಿದೆ.

ಎರಡು ವಾರಗಳ ಕಾಲ ಭಾರತವನ್ನು ವರ್ಗ ಸಿ ದೇಶಗಳ ಪಟ್ಟಿಯಲ್ಲಿ ಇರಿಸಲು ವೇದಿಕೆ ನಿರ್ಧರಿಸಿದೆ. ಭಾರತದಿಂದ ವಿಮಾನ ಮತ್ತು ರಸ್ತೆ ಮಾರ್ಗಗಳ ಮೂಲಕ ಬರುವ ಒಳಬರುವ ಪ್ರಯಾಣಿಕರಿಗೆ ನಿಷೇಧ ಹೇರಲಾಗುವುದು ಎಂದು ಪಾಕ್ ತಮ್ಮ ಪ್ರಕಟಣೆಯಲ್ಲಿ ತಿಳಿಸಿದೆ

ಸಿ ವರ್ಗದಲ್ಲಿ ಈಗಾಗಲೇ ಪಟ್ಟಿ ಮಾಡಲಾಗಿರುವ ಇತರ ದೇಶಗಳ ಪಟ್ಟಿಯಲ್ಲಿ ದಕ್ಷಿಣ ಆಫ್ರಿಕಾ, ಬೋಟ್ಸ್ವಾನ, ಘಾನಾ, ಕೀನ್ಯಾ, ಕೊಮೊರೊಸ್, ಮೊಜಾಂಬಿಕ್, ಜಾಂಬಿಯಾ, ಟಾಂಜಾನಿಯಾ, ರುವಾಂಡಾ, ಬ್ರೆಜಿಲ್, ಪೆರು, ಕೊಲಂಬಿಯಾ, ಚಿಲಿ, ಎಸ್ವಾಟಿನಿ, ಜಿಂಬಾಬ್ವೆ, ಲೆಸೊಥೊ, ಮಲಾವಿ, ಸೀಶೆಲ್ಸ್, ಸೊಮಾಲಿಯಾ, ಸುರಿನಾಮ್, ಉರುಗ್ವೆ ಮತ್ತು ವೆನೆಜುವೆಲಾ ಇದೆ.

ಕಳೆದ ವಾರ, ಬೈಸಾಕಿ ಉತ್ಸವದಲ್ಲಿ ಪಾಲ್ಗೊಳ್ಳಲು ಸುಮಾರು 815 ಸಿಖ್ ಯಾತ್ರಿಕರು ಭಾರತದಿಂದ ಲಾಹೋರ್ ತಲುಪಿದ್ದರು. ಅವರಿಗೆ 10 ದಿನಗಳ ಕಾಲ ಇರಲು ಅನುಮತಿ ಇದೆ. ಸಿ ವರ್ಗದ ದೇಶಗಳ ಪಟ್ಟಿಯಲ್ಲಿ ಯಾವುದೇ ಹೊಸ ದೇಶವನ್ನು ಸೇರಿಸಲು ಅಥವಾ ಪಟ್ಟಿಯಲ್ಲಿರುವ ದೇಶವನ್ನು ತೆಗೆದುಹಾಕಲು ಎನ್‌ಸಿಒಸಿ ಏಪ್ರಿಲ್ 21 ರಂದು ಸಿ ವರ್ಗವನ್ನು ಪರಿಶೀಲಿಸಿ ಪರಿಷ್ಕರಿಸಲಾಗುವು ದು ಎಂದು ಪ್ರಕಟಣೆಯಲ್ಲಿದೆ.

ಈಗಾಗಲೇ, ಇನ್ನೂ 20 ದೇಶಗಳು ಎ ವರ್ಗದಲ್ಲಿವೆ. ಎ ವರ್ಗದ ಪಟ್ಟಿಯಲ್ಲಿರುವ ದೇಶದ ಪ್ರಯಾಣಿಕರು ಪಾಕಿಸ್ತಾನಕ್ಕೆ ಪ್ರವೇಶಿಸುವ ಮೊದಲು ಕೊವಿಡ್ ಪರೀಕ್ಷೆಗೊಳಪಡುವ ಅಗತ್ಯವಿಲ್ಲ . ಆಸ್ಟ್ರೇಲಿಯಾ, ಭೂತಾನ್, ಚೀನಾ, ಫಿಜಿ, ಜಪಾನ್, ಕಜಕಿಸ್ತಾನ್ , ಲಾವೋಸ್, ಮಂಗೋಲಿಯಾ, ಮಾರಿಟಾನಿಯಾ, ಮೊರಾಕೊ, ಮ್ಯಾನ್ಮಾರ್, ನೇಪಾಳ, ನ್ಯೂಜಿಲೆಂಡ್, ಸೌದಿ ಅರೇಬಿಯಾ, ಸಿಂಗಾಪುರ್, ದಕ್ಷಿಣ ಕೊರಿಯಾ, ಶ್ರೀಲಂಕಾ, ತಜಿಕಿಸ್ತಾನ್, ಟ್ರಿನಿಡಾಡ್ ಮತ್ತು ಟೊಬಾಗೊ ಮತ್ತು ವಿಯೆಟ್ನಾಂ ಮೊದಲಾದ ದೇಶಗಳು ಎ ವರ್ಗದ ಪಟ್ಟಿಯಲ್ಲಿದೆ.

ಎ ಮತ್ತು ಸಿಯಲ್ಲಿ ಪಟ್ಟಿ ಮಾಡದವರನ್ನು ಬಿ ವರ್ಗದಲ್ಲಿ ಪರಿಗಣಿಸಲಾಗುತ್ತದೆ. ಈ ದೇಶಗಳಿಂದ ಬರುವ ಜನರಿಗೆ ಪಾಕಿಸ್ತಾನಕ್ಕೆ ಪ್ರಯಾಣವನ್ನು ಪ್ರಾರಂಭಿಸುವ ಮೊದಲು ಆರ್ ಟಿಪಿಸಿಆರ್ ಪರೀಕ್ಷೆ (ಗರಿಷ್ಠ 72 ಗಂಟೆಗಳ ಮುಂಚೆ ಮಾಡಿದ್ದು) ಅಗತ್ಯವಿರುತ್ತದೆ.

ಸೋಮವಾರ 5,152 ಹೊಸಕೊವಿಡ್ ಪ್ರಕರಣಗಳು ಪತ್ತೆಯಾದ ನಂತರ ಪಾಕಿಸ್ತಾನದಲ್ಲಿ ಕೋವಿಡ್ ರೋಗಿಗಳ ಸ ಸಂಖ್ಯೆ 761,437 ಕ್ಕೆ ತಲುಪಿದೆ. ಅದೇ ದಿನ 73 ಜನರು ಸಾವನ್ನಪ್ಪಿದ್ದರಿಂದ ಸಾವಿನ ಸಂಖ್ಯೆ 16,316 ಕ್ಕೆ ತಲುಪಿದೆ ಎಂದು ರಾಷ್ಟ್ರೀಯ ಆರೋಗ್ಯ ಸೇವೆಗಳ ಸಚಿವಾಲಯ ತಿಳಿಸಿದೆ.

ಭಾರತದ ವಿಮಾನಗಳಿಗೆ ನಿರ್ಬಂಧ ವಿಧಿಸಿದ ಹಾಂಗ್‌ಕಾಂಗ್ ಮಂಗಳವಾರ (ಎಪ್ರಿಲ್ 20) ರಿಂದ ಭಾರತ, ಪಾಕಿಸ್ತಾನ ಮತ್ತು ಫಿಲಿಪೈನ್ಸ್ ವಿಮಾನಗಳನ್ನು ಎರಡು ವಾರಗಳವರೆಗೆ ಸ್ಥಗಿತಗೊಳಿಸಲಾಗುವುದು ಎಂದು ಹಾಂಗ್‌ಕಾಂಗ್ ಅಧಿಕಾರಿಗಳು ಭಾನುವಾರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ .

ಕಳೆದ 14 ದಿನಗಳಲ್ಲಿ ಹಾಂಗ್‌ಕಾಂಗ್​ನಲ್ಲಿ ಹೊರ ದೇಶದಿಂದ ಬಂದ ಜನರಲ್ಲಿ ಕೊರೊನಾವೈರಸ್ ಪತ್ತೆಯಾದ ನಂತರ ಈ ಮೂರು ದೇಶಗಳನ್ನು ಅತ್ಯಂತ ಹೆಚ್ಚಿನ ಅಪಾಯ ವರ್ಗದಲ್ಲಿ ವರ್ಗೀಕರಿಸಲಾಗಿದೆ ಎಂದು ಸರ್ಕಾರ ಹೇಳಿದೆ.

ಹಾಂಗ್‌ಕಾಂಗ್ ನಗರದಲ್ಲಿ ಭಾನುವಾರ 30 ಹೊಸ ಕೊವಿಡ್ ಪ್ರಕರಣಗಳು ವರದಿಯಾಗಿದ್ದು ಇವುಗಳಲ್ಲಿ 29 ಮಂದಿ ಹೊರ ದೇಶದಿಂದ ಬಂದವರಾಗಿದ್ದಾರೆ.. ಮಾರ್ಚ್ 15 ರಿಂದೀಚೆಗೆ ಅತಿ ಹೆಚ್ಚು ಪ್ರಕರಣಗಳು ವರದಿಯಾದ ದಿನವಾಗಿದೆ ಇದು. ಹಾಂಗ್ ಕಾಂಗ್​ನಲ್ಲಿ ಒಟ್ಟು 11,600 ಕ್ಕೂ ಹೆಚ್ಚು ಪ್ರಕರಣಗಳು ಪತ್ತೆಯಾಗಿದ್ದು ಮತ್ತು 209 ಮಂದಿ ಸಾವಿಗೀಡಾಗಿದ್ದಾರೆ .

ಇದನ್ನೂ ಓದಿ: ಫ್ರಾನ್ಸ್ ವಿರುದ್ಧ ಪ್ರತಿಭಟನೆ: ಪಾಕಿಸ್ತಾನದ ಟಿಎಲ್​ಪಿ ಸಂಘಟನೆ ಒತ್ತೆಯಾಳುಗಳಾಗಿರಿಸಿದ್ದ 11 ಪೊಲೀಸರು ಬಿಡುಗಡೆ

Published On - 1:26 pm, Tue, 20 April 21

ಮದುವೆ ಮಂಟಪದಲ್ಲಿ ಕೋಪಗೊಂಡ ಪೂಜಾರಿ, ಮಾಡಿದ್ದೇನು ನೋಡಿ
ಮದುವೆ ಮಂಟಪದಲ್ಲಿ ಕೋಪಗೊಂಡ ಪೂಜಾರಿ, ಮಾಡಿದ್ದೇನು ನೋಡಿ
ಸಂಸತ್ತನ್ನು ನಗೆಗಡಲಲ್ಲಿ ತೇಲಿಸಿದ್ದ ಮನಮೋಹನ್​ ಸಿಂಗ್ ಕಾವ್ಯ! ವಿಡಿಯೋ ನೋಡಿ
ಸಂಸತ್ತನ್ನು ನಗೆಗಡಲಲ್ಲಿ ತೇಲಿಸಿದ್ದ ಮನಮೋಹನ್​ ಸಿಂಗ್ ಕಾವ್ಯ! ವಿಡಿಯೋ ನೋಡಿ
Daily Devotional: ವಾಕಿಂಗ್​ ಮಾಡುವುದರಿಂದ ಏನೆಲ್ಲಾ ಪ್ರಯೋಜನ
Daily Devotional: ವಾಕಿಂಗ್​ ಮಾಡುವುದರಿಂದ ಏನೆಲ್ಲಾ ಪ್ರಯೋಜನ
Daily Horoscope: ಈ ರಾಶಿಯವರ ಉದ್ದೇಶಗಳು ಇಂದು ಈಡೇರಲಿವೆ
Daily Horoscope: ಈ ರಾಶಿಯವರ ಉದ್ದೇಶಗಳು ಇಂದು ಈಡೇರಲಿವೆ
ಬಟ್ಟೆ ಕದಿಯಲು ರಜತ್ ಪ್ಲ್ಯಾನ್; ಬಾತ್ ರೂಮ್​ನಲ್ಲಿ ಕಣ್ಣೀರು ಹಾಕಿದ ಗೌತಮಿ
ಬಟ್ಟೆ ಕದಿಯಲು ರಜತ್ ಪ್ಲ್ಯಾನ್; ಬಾತ್ ರೂಮ್​ನಲ್ಲಿ ಕಣ್ಣೀರು ಹಾಕಿದ ಗೌತಮಿ
ಗುತ್ತಿಗೆದಾರ ಸಚಿನ್ ಆತ್ಮಹತ್ಯೆ ಪ್ರಕರಣಕ್ಕೆ ಟ್ವಿಸ್ಟ್ ಕೊಟ್ಟ ಖರ್ಗೆ ಆಪ್ತ
ಗುತ್ತಿಗೆದಾರ ಸಚಿನ್ ಆತ್ಮಹತ್ಯೆ ಪ್ರಕರಣಕ್ಕೆ ಟ್ವಿಸ್ಟ್ ಕೊಟ್ಟ ಖರ್ಗೆ ಆಪ್ತ
‘ನಾನು ಶಿಸ್ತುಬದ್ಧವಾಗಿ ಆಡಲಿಲ್ಲ’; ಆಸೀಸ್ ಪ್ರವಾಸದ ಬಗ್ಗೆ ಕೊಹ್ಲಿ ಮಾತು
‘ನಾನು ಶಿಸ್ತುಬದ್ಧವಾಗಿ ಆಡಲಿಲ್ಲ’; ಆಸೀಸ್ ಪ್ರವಾಸದ ಬಗ್ಗೆ ಕೊಹ್ಲಿ ಮಾತು
ಚೈತ್ರಾ ಕುಂದಾಪುರ ಯಾವುದಕ್ಕೂ ಲಾಯಕ್ಕಿಲ್ಲ: ಸಾಕ್ಷಿ ಸಮೇತ ವಿವರಿಸಿದ ರಜತ್
ಚೈತ್ರಾ ಕುಂದಾಪುರ ಯಾವುದಕ್ಕೂ ಲಾಯಕ್ಕಿಲ್ಲ: ಸಾಕ್ಷಿ ಸಮೇತ ವಿವರಿಸಿದ ರಜತ್
ಪ್ರತಾಪ್​ ಸಿಂಹ ಬಕೆಟ್​​ ಹಿಡಿಯುವುದನ್ನು ನಿಲ್ಲಿಸಲಿ: ಬಿಜೆಪಿ ಮುಖಂಡ ಕಿಡಿ
ಪ್ರತಾಪ್​ ಸಿಂಹ ಬಕೆಟ್​​ ಹಿಡಿಯುವುದನ್ನು ನಿಲ್ಲಿಸಲಿ: ಬಿಜೆಪಿ ಮುಖಂಡ ಕಿಡಿ
ಕೊಹ್ಲಿ ಜೊತೆಗಿನ ಭುಜಬಲದ ಕಾಳಗದ ಬಗ್ಗೆ ಮೌನ ಮುರಿದ ಕೊನ್​ಸ್ಟಾಸ್
ಕೊಹ್ಲಿ ಜೊತೆಗಿನ ಭುಜಬಲದ ಕಾಳಗದ ಬಗ್ಗೆ ಮೌನ ಮುರಿದ ಕೊನ್​ಸ್ಟಾಸ್