ಫ್ರಾನ್ಸ್ ವಿರುದ್ಧ ಪ್ರತಿಭಟನೆ: ಪಾಕಿಸ್ತಾನದ ಟಿಎಲ್‌ಪಿ ಸಂಘಟನೆ ಒತ್ತೆಯಾಳುಗಳಾಗಿರಿಸಿದ್ದ 11 ಪೊಲೀಸರು ಬಿಡುಗಡೆ
Anti France Protests in Pakistan: ಕಳೆದ ವರ್ಷ ಫ್ರಾನ್ಸ್ನಲ್ಲಿ ಇಸ್ಲಾಂ ಧರ್ಮಕ್ಕೆ ಸಂಬಂಧಿಸಿ ಚಾರ್ಲಿ ಹೆಬ್ಡೊ ಮ್ಯಾಗಜಿನ್ನಲ್ಲಿ ಅವಹೇಳನಕಾರಿ ವ್ಯಂಗ್ಯ ಚಿತ್ರಗಳನ್ನು ಪ್ರಕಟಿಸಿದ್ದನ್ನು ಫ್ರಾನ್ಸ್ ಅಧ್ಯಕ್ಷ ಇಮ್ಯಾನುವೆಲ್ ಮ್ಯಾಕ್ರನ್ ಬೆಂಬಲಿಸಿದ್ದರು. ಇದನ್ನು ಪ್ರತಿಭಟಿಸಿರುವ ಟಿಎಲ್‌ಪಿ ಫ್ರಾನ್ಸ್ ರಾಯಭಾರಿಯನ್ನು ಉಚ್ಚಾಟಿಸಲು ಒತ್ತಾಯಿಸಿತ್ತು. ಭದ್ರತಾ ಪಡೆ ಮತ್ತು ಟಿಎಲ್ ಪಿ ಬೆಂಬಲಿಗರ ನಡುವೆ ನಡೆದ ಈ ಘರ್ಷಣೆಯಲ್ಲಿ ಏಳು ಮಂದಿ ಮೃತಪಟ್ಟಿದ್ದು,300ಕ್ಕೂ ಹೆಚ್ಚು ಪೊಲೀಸರು ಗಾಯಗೊಂಡಿದ್ದರು.

ಲಾಹೋರ್ : ಪಾಕಿಸ್ತಾನದಿಂದ ಫ್ರಾನ್ಸ್ ನ ರಾಯಭಾರಿಯನ್ನು ಹೊರಹಾಕುವಂತೆ ಒತ್ತಾಯಿಸಿ ಚಳವಳಿ ನಡೆಸಿದ್ದ ತೆಹ್ರೀಕ್ -ಇ -ಲಬೈಕ್ ಪಾಕಿಸ್ತಾನ (TLP) ಸಂಘಟನೆಯ ಬೆಂಬಲಿಗರು ವಶದಲ್ಲಿದಲ್ಲಿರಿಸಿಕೊಂಡಿದ್ದ 11 ಪೊಲೀಸ್ ಅಧಿಕಾರಿಗಳನ್ನು ಸೋಮವಾರ ಬಿಡುಗಡೆ ಮಾಡಿದ್ದಾರೆ. ಲಾಹೋರ್‌ನಲ್ಲಿ ತೆಹ್ರೀಕ್ -ಇ -ಲಬೈಕ್ ಪಾಕಿಸ್ತಾನದ ಬೆಂಬಲಿಗರು ಭಾನುವಾರ ನಡೆಸಿದ ಪ್ರತಿಭಟನೆ ಹಿಂಸಾತ್ಮಕ ರೂಪ ಪಡೆದಿತ್ತು.ಈ ವೇಳೆ ಪ್ರತಿಭಟನಾಕಾರರು ಪೊಲೀಸ್ ಅಧಿಕಾರಿಗಳನ್ನು ಒತ್ತೆಯಾಳುಗಳನ್ನಾಗಿಸಿದ್ದಾರೆ. ಟಿಎಲ್‌ಪಿ ಜತೆಗಿನ ಸಂಧಾನ ಮಾತುಕತೆ ನಂತರ ಸೋಮವಾರ ಬೆಳಗ್ಗೆ ಪೊಲೀಸರು ಬಿಡುಗಡೆಯಾಗಿ ಬಂದಿದ್ದಾರೆ ಎಂದು ಪಾಕಿಸ್ತಾನದ ಆಂತರಿಕ ಸಚಿವ ಶೇಖ್ ರಶೀದ್ ಅಹ್ಮದ್ ಹೇಳಿದ್ದಾರೆ. ಕಳೆದ ವಾರ ಪಾಕಿಸ್ತಾನ ಸರ್ಕಾರ ಟಿಎಸ್ ಪಿ ಸಂಘಟನೆಯನ್ನು ಭಯೋತ್ಪಾದಕ ಸಂಘಟನೆ ಎಂದು ಘೋಷಿಸಿತ್ತು.
ಲಾಹೋರ್‌ನಲ್ಲಿ ಟಿಎಲ್‌ಪಿ ಪ್ರಭುತ್ವವಿರುವ ಪ್ರದೇಶದಲ್ಲಿನ ಮಸೀದಿಯೊಂದರಲ್ಲಿ ಪೊಲೀಸರನ್ನು ಒತ್ತೆಯಾಳುಗಳ ನ್ನಾಗಿರಿಸಲಾಗಿತ್ತು. ಈ ಮಸೀದಿಯಲ್ಲಿ ಟಿಎಲ್‌ಪಿ ಬೆಂಬಲಿಗರು ಜಮಾವಣೆ ಆಗಿದ್ದು, ಪೊಲೀಸರು ಸುತ್ತುವರಿದಿದ್ದಾರೆ. ಟಿಎಲ್‌ಪಿ ಜತೆ ಸಂಧಾನ ಶುರು ಮಾಡಿದ್ದೇವೆ. ಮೊದಲ ಸುತ್ತು ಯಶಸ್ವಿಯಾಗಿದೆ ಎಂದು ರಶೀದ್ ಟ್ವಿಟರ್ನಲ್ಲಿ ಶೇರ್ ಮಾಡಿರುವ ವಿಡಿಯೊ ಸಂದೇಶದಲ್ಲಿ ಹೇಳಿದ್ದಾರೆ. ಎರಡನೇ ಸುತ್ತಿನ ಮಾತುಕತೆ ಭಾನುವಾರ ನಡೆದಿದ್ದು, ತದ ನಂತರ 11 ಪೊಲೀಸರನ್ನು ಬಿಡುಗಡೆ ಮಾಡಲಾಗಿದೆ. ಫ್ರಾನ್ಸ್ ರಾಯಭಾರಿಯನ್ನು ಉಚ್ಚಾಟನೆ ಮಾಡಲು ಟಿಎಲ್ ಪಿ ಏಪ್ರಿಲ್ 20ಕ್ಕೆ ಗಡುವು ನೀಡಿತ್ತು
ಯಾಕೆ ಈ ಪ್ರತಿಭಟನೆ?
ಕಳೆದ ವರ್ಷ ಫ್ರಾನ್ಸ್ನಲ್ಲಿ ಇಸ್ಲಾಂ ಧರ್ಮಕ್ಕೆ ಸಂಬಂಧಿಸಿ ಚಾರ್ಲಿ ಹೆಬ್ಡೊ ಮ್ಯಾಗಜಿನ್ನಲ್ಲಿ ಅವಹೇಳನಕಾರಿ ವ್ಯಂಗ್ಯ ಚಿತ್ರಗಳನ್ನು ಪ್ರಕಟಿಸಿದ್ದನ್ನು ಫ್ರಾನ್ಸ್ ಅಧ್ಯಕ್ಷ ಇಮ್ಯಾನುವೆಲ್ ಮ್ಯಾಕ್ರನ್ ಬೆಂಬಲಿಸಿದ್ದರು. ಇದನ್ನು ಪ್ರತಿಭಟಿಸಿರುವ ಟಿಎಲ್‌ಪಿ ಫ್ರಾನ್ಸ್ ರಾಯಭಾರಿಯನ್ನು ಉಚ್ಚಾಟಿಸಲು ಒತ್ತಾಯಿಸಿತ್ತು. ಭದ್ರತಾ ಪಡೆ ಮತ್ತು ಟಿಎಲ್ ಪಿ ಬೆಂಬಲಿಗರ ನಡುವೆ ನಡೆದ ಈ ಘರ್ಷಣೆಯಲ್ಲಿ ಏಳು ಮಂದಿ ಮೃತಪಟ್ಟಿದ್ದು,300ಕ್ಕೂ ಹೆಚ್ಚು ಪೊಲೀಸರು ಗಾಯಗೊಂಡಿದ್ದರು.
ಟಿಎಲ್‌ಪಿ ಜನರು ಮಸೀದಿಯೊಳಗೆ ಹೋಗಿದ್ದಾರೆ ಮತ್ತು ಪೊಲೀಸರು ಕೂಡ ಹಿಂದೆ ಸರಿದಿದ್ದಾರೆ ಎಂದು ರಶೀದ್ ಹೇಳಿದ್ದಾರೆ. ಆಶಾದಾಯಕವಾಗಿ, ಉಳಿದ ಸಮಸ್ಯೆಗಳು ಎರಡನೇ ಸುತ್ತಿನಲ್ಲಿ ಇತ್ಯರ್ಥವಾಗುತ್ತವೆ. ರಾಜಧಾನಿಯಲ್ಲಿ ಮೆರವಣಿಗೆಗೆ ಕರೆ ನೀಡಿದ ಟಿಎಲ್‌ಪಿ ನಾಯಕನನ್ನು ಲಾಹೋರ್‌ನಲ್ಲಿ ಬಂಧಿಸಿದಾಗಿನಿಂದ ಕಳೆದ ಒಂದು ವಾರದಿಂದ ಗಲಭೆ ತೀವ್ರ ಸ್ವರೂಪ ಪಡೆದಿತ್ತು. ಈ ಪ್ರತಿಭಟನೆಯು ನಗರವನ್ನು ಅಲ್ಲೋಲಕಲ್ಲ ಮಾಡಿದ್ದು, 6 ಪೊಲೀಸರ ಸಾವಿಗೆ ಕಾರಣವಾಗಿತ್ತು
ಅದೇ ವೇಳೆ ಭಾನುವಾರ ನಡೆದ ಘರ್ಷಣೆಯಲ್ಲಿ ಪಕ್ಷದ ಹಲವಾರು ಬೆಂಬಲಿಗರು ಸಾವನ್ನಪ್ಪಿದ್ದಾರೆ ಎಂದು ಟಿಎಲ್‌ಪಿ ನಾಯಕರು ಹೇಳಿದ್ದಾರೆ. ಫ್ರೆಂಚ್ ರಾಯಭಾರಿಯನ್ನು ಹೊರಹಾಕುವವರೆಗೂ ನಾವು ಅವರನ್ನು ದಫನ ಮಾಡುವುದಿಲ್ಲ ಎಂದು ನಗರದ ಟಿಎಲ್‌ಪಿ ಮುಖಂಡ ಅಲ್ಲಮ ಮುಹಮ್ಮದ್ ಶಫೀಕ್ ಅಮಿನಿ ವಿಡಿಯೊ ಹೇಳಿಕೆ ಬಿಡುಗಡೆ ಮಾಡಿದ್ದಾರೆ.
ಪ್ರಧಾನ ಮಂತ್ರಿ ಇಮ್ರಾನ್ ಖಾನ್ ಅವರ ಸರ್ಕಾರವು ಹಲವಾರು ವರ್ಷಗಳಿಂದ ಟಿಎಲ್ಪಿಗೆ ನಿಯಂತ್ರಣ ಹೇರಲು ಪ್ರಯತ್ನಿಸುತ್ತಲೇ ಇತ್ತು. ಆದರೆ ಕಳೆದ ವಾರ ಈ ಸಂಘಟನೆಗೆ ಸಂಪೂರ್ಣ ನಿಷೇಧ ಹೇರಿ ಭಯೋತ್ಪಾದಕ ಸಂಘಟನೆಯ ಪಟ್ಟಿಗೆ ಸೇರಿಸಿತ್ತು.
میں سب پر واضح کر دوں کہ: ہماری حکومت نےتحریک لبیک پاکستان کیخلاف انسدادِ دہشت گردی قانون کےتحت جبھی کارروائی کی جب انہوں نےریاستی عملداری کو للکارا اورکوچہ و بازار کو فساد سےبھرتےہوئےعوام اور قانون نافذ کرنے والےاداروں پر حملہ آور ہوئے۔ کوئی بھی آئین و قانون سےبالاترنہیں ہوسکتا۔
— Imran Khan (@ImranKhanPTI) April 17, 2021
ನಮ್ಮ ಸರ್ಕಾರವು ಭಯೋತ್ಪಾದನಾ-ವಿರೋಧಿ ಕಾನೂನಿನಡಿಯಲ್ಲಿ ಟಿಎಲ್‌ಪಿ ವಿರುದ್ಧ ಕ್ರಮ ಕೈಗೊಂಡಿದ್ದು, ಅವರು ರಾಜ್ಯದ ರಿಟ್ ಅನ್ನು ಪ್ರಶ್ನಿಸಿದ್ದು, ಬೀದಿಯಲ್ಲಿ ಹಿಂಸಾಚಾರ ನಡೆಸಿದ್ದಾರೆ. ಕಾನೂನು ಪಾಲಕರ ವಿರುದ್ಧ ದಾಳಿ ನಡೆಸಿದ್ದಾರೆ ಎಂದು ಇಮ್ರಾನ್ ಖಾನ್ ಟ್ವೀಟ್ ಮಾಡಿದ್ದಾರೆ.
ಇದನ್ನೂ ಓದಿ: ಪಾಕಿಸ್ತಾನದ ಪಠ್ಯಪುಸ್ತಕಗಳಲ್ಲಿ ಹಿಂದೂಗಳು, ಹಿಂದೂ ಧರ್ಮದ ಬಗ್ಗೆ ಏನಿದೆ ಗೊತ್ತಾ?
(Anti France protests in Pakistan Tehreek-e-Labbaik Pakistan releases 11 police hostages )
Published On - 7:38 pm, Mon, 19 April 21