ಪಾಕಿಸ್ತಾನದ ಪಠ್ಯಪುಸ್ತಕಗಳಲ್ಲಿ ಹಿಂದೂಗಳು, ಹಿಂದೂ ಧರ್ಮದ ಬಗ್ಗೆ ಏನಿದೆ ಗೊತ್ತಾ?

ಪಾಕಿಸ್ತಾನದ ಪಠ್ಯಪುಸ್ತಕಗಳಲ್ಲಿ ಹಿಂದೂಗಳು ಮತ್ತು ಹಿಂದೂ ಧರ್ಮದ ಬಗ್ಗೆ ಏನು ಕಲಿಸಲಾಗುತ್ತಿದೆ ಎಂಬ ಬಗ್ಗೆ ಬಿಬಿಸಿ ಪಾಕಿಸ್ತಾನಿ ಸರ್ವೀಸ್ ವಿಡಿಯೋ ಯೂಟ್ಯೂಬ್​ನಲ್ಲಿದೆ. ಆ ದೇಶದಲ್ಲಿ ಹಿಂದೂಗಳ ಸಂಖ್ಯೆ ಶೇಕಡಾ 2 ಕುಸಿಯುವುದಕ್ಕೆ ಏನು ಕಾರಣ ಎಂಬುದು ಇದರಿಂದ ಗೊತ್ತಾಗುತ್ತದೆ.

ಪಾಕಿಸ್ತಾನದ ಪಠ್ಯಪುಸ್ತಕಗಳಲ್ಲಿ ಹಿಂದೂಗಳು, ಹಿಂದೂ ಧರ್ಮದ ಬಗ್ಗೆ ಏನಿದೆ ಗೊತ್ತಾ?
ಸಾಂದರ್ಭಿಕ ಚಿತ್ರ
Follow us
Srinivas Mata
|

Updated on: Apr 17, 2021 | 4:42 PM

ನವದೆಹಲಿ: ನೆರೆಯ ದೇಶವಾದ ಪಾಕಿಸ್ತಾನದಲ್ಲಿ ಅಲ್ಲಿನ ಹಿಂದೂಗಳಿಗೆ ಕಿರುಕುಳ ಆಗುತ್ತಿದೆ ಎಂಬ ಸುದ್ದಿ ಆಗಾಗ ಭಾರತಕ್ಕೆ ಬರುತ್ತಿರುತ್ತದೆ. ಸದ್ಯಕ್ಕೆ ಆ ದೇಶದಲ್ಲಿ ಹಿಂದೂಗಳ ಜನಸಂಖ್ಯೆ ಕೇವಲ ಎರಡು ಪರ್ಸೆಂಟ್​ಗೆ ಕುಸಿದಿದೆ. ಈ ಎಲ್ಲದರ ಮಧ್ಯೆ, ಇತ್ತೀಚೆಗೆ ಯೂಟ್ಯೂಬ್‌ನಲ್ಲಿ ಒಂದು ವಿಡಿಯೋ ಬಂದಿದ್ದು, ಇದರಲ್ಲಿ ಪಾಕಿಸ್ತಾನದ ಇತಿಹಾಸ ಪುಸ್ತಕಗಳು ಹಿಂದೂಗಳ ಬಗ್ಗೆ ಏನು ಬರೆದಿವೆ ಎಂದು ಹೇಳುವ ಪ್ರಯತ್ನ ಮಾಡಲಾಗಿದೆ. ಬಿಬಿಸಿಯ ಪಾಕಿಸ್ತಾನಿ ಸರ್ವೀಸ್ ಈ ವಿಡಿಯೋವನ್ನು ಮಾಡಿದೆ. ಈ ವಿಡಿಯೋ ಕೇಳಿದ ನಂತರ, ಪಾಕಿಸ್ತಾನದಲ್ಲಿ ಏಕೆ ಹಿಂದೂಗಳ ಮೇಲೆ ದೌರ್ಜನ್ಯಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿವೆ ಎಂಬುದು ಅರ್ಥವಾಗುತ್ತದೆ.

ನೆನಪಾಗುತ್ತವೆ ಶಾಲಾ ದಿನಗಳು ಈ ವಿಡಿಯೋದಲ್ಲಿ ಪಾಕಿಸ್ತಾನದ ಸಿಂಧ್ ಪ್ರಾಂತ್ಯದಲ್ಲಿ ವಾಸಿಸುತ್ತಿರುವ ಕೆಲವು ಪಾಕಿಸ್ತಾನಿ ಹಿಂದೂಗಳು ಇದ್ದಾರೆ. ಈ ಎಲ್ಲರೂ ಕೈಯಲ್ಲೂ ಅವರ ಶಾಲಾ ದಿನಗಳಲ್ಲಿ ಓದಿದ ಇತಿಹಾಸದ ಪುಸ್ತಕಗಳು ಕಂಡುಬರುತ್ತವೆ. ಇನ್ನು ಈ ವಿಡಿಯೋದಲ್ಲಿ ಕಂಡುಬರುವವರು 25 ರಿಂದ 35 ವರ್ಷದೊಳಗಿನವರು. ಅವರೆಲ್ಲರಿಗೂ ತಾವು ಓದಿದ ಪುಸ್ತಕಗಳಲ್ಲಿ ಹಿಂದೂಗಳ ಬಗ್ಗೆ ಏನು ಬರೆಯಲಾಗಿದೆ ಎಂದು ಕೇಳಲಾಗಿದೆ. ಇವರೆಲ್ಲರೂ ಶಾಲೆಯಲ್ಲಿ ಓದಿದ ವಿಷಯಗಳನ್ನೇ ಪುನರಾವರ್ತಿಸಿದ್ದಾರೆ.

ಪಾಕಿಸ್ತಾನದ ಸಮೀಕ್ಷೆ ಪ್ರಾರಂಭವಾಯಿತು ವೃತ್ತಿಯಲ್ಲಿ ಪತ್ರಕರ್ತರಾಗಿರುವ ಸಂಜಯ್ ಮಥರಾನಿ, ವೈದ್ಯಕೀಯ ವೃತ್ತಿಪರರಾಗಿರುವ ಸಿಂಧ್ ಪ್ರಾಂತ್ಯದ ಹೈದರಾಬಾದ್‌ನ ರಾಜೇಶ್ ಕುಮಾರ್, ಡಾ.ರಾಜವಂತಿ ಕುಮಾರಿ, ಅಂಕಣಕಾರರಾದ ಪರಾ ಮಾಂಗಿ ಮತ್ತು ಡಾ.ಸುವ್ರತ್ ಸಿಂಧು ಅವರು ಈ ಅಭಿಮತವನ್ನು ಆರಂಭಿಸಿದ್ದಾರೆ. “ಇತಿಹಾಸದಲ್ಲಿ ಮುಸ್ಲಿಮರ ಮೇಲೆ ಹಿಂದೂಗಳು ತುಂಬಾ ಶೋಷಣೆ ಮಾಡಿದ್ದಾರೆ,” ಎಂದು ಪುಸ್ತಕದಲ್ಲಿ ಬರೆಯಲಾಗಿದೆ ಎಂದು ಸಂಜಯ್ ಹೇಳಿದ್ದಾರೆ. ಒಂದು ದಿನ ನನ್ನ ಕಿರಿಯ ಸಹೋದರ ಮನೆಗೆ ಬಂದು, “ಕಾಫಿರ್ ಎಂದರೆ ಭೂತಗಳನ್ನು ಅಥವಾ ವಿಗ್ರಹಗಳನ್ನು ಪೂಜಿಸುವವನು,” ಎಂದು ಹೇಳಿದ್ದ ಎಂಬುದಾಗಿ ತಿಳಿಸಿದ್ದಾರೆ. ಅಷ್ಟೇ ಅಲ್ಲ, ಹಿಂದಿನ ಕಾಲದಲ್ಲಿ ಹಿಂದೂಗಳು ತಮ್ಮ ಹೆಣ್ಣುಮಕ್ಕಳನ್ನು ಹೇಗೆ ಜೀವಂತವಾಗಿ ಹೂಳುತ್ತಿದ್ದರು ಈ ಪುಸ್ತಕಗಳಲ್ಲಿ ಬರೆಯಲಾಗಿದೆ ಎಂದು ಸಹ ಹೇಳಿದ್ದಾರೆ.

ಹಿಂದೂಗಳು ಅನೇಕರನ್ನು ಕೊಂದಿದ್ದಾರೆ ಸಿಂಧ್ ಪ್ರಾಂತ್ಯದ ಹೈದರಾಬಾದ್ ಮೂಲದ ರಾಜೇಶ್ ಕುಮಾರ್ ವೈದ್ಯಕೀಯ ವೃತ್ತಿಪರರು ಮತ್ತು ಸಮಾಜ ಸೇವಕರು. ಸಿಂಧ್ ಪಠ್ಯ ಪುಸ್ತಕ ಮಂಡಳಿಯ 11 ಮತ್ತು 12 ನೇ ತರಗತಿಯ ಪಠ್ಯಕ್ರಮದಲ್ಲಿ ಸೇರಿಸಲಾಗಿರುವ ಪಾಕಿಸ್ತಾನ ಅಧ್ಯಯನ ಪುಸ್ತಕವನ್ನು ರಾಜೇಶ್ ಉಲ್ಲೇಖಿಸಿದ್ದಾರೆ. ಅವರು ಈ ಪುಸ್ತಕವನ್ನು ಕಾಲೇಜಿನಲ್ಲಿ ಓದಿದ್ದರು. ಪುಸ್ತಕದ 33 ನೇ ಪುಟದಲ್ಲಿ ಬರೆದಿರುವ ವಿಷಯಗಳನ್ನು ಅವರು ತಿಳಿಸಿದ್ದು, ಮಾನವೀಯತೆಯ ಶತ್ರುಗಳಾದ ಹಿಂದೂಗಳು ಮತ್ತು ಸಿಖ್ಖರು ಲಕ್ಷಾಂತರ ಮಹಿಳೆಯರು, ಮಕ್ಕಳು, ವೃದ್ಧರು ಮತ್ತು ಯುವಕರನ್ನು ಕ್ರೂರವಾಗಿ ಹತ್ಯೆ ಮಾಡಿದ್ದಾರೆ ಮತ್ತು ಅವಮಾನಿಸಿದ್ದಾರೆ ಎಂದು ಹೇಳಲಾಗಿದೆ ಎಂದಿದ್ದಾರೆ.

ಮುಸ್ಲಿಮರು ಶತ್ರುಗಳಾಗಲು ಹೇಗೆ ಸಾಧ್ಯ? ಡಾ.ರಾಜವಂತಿ ಕುಮಾರಿ ಅವರು ತಮ್ಮ ಒಂಬತ್ತನೇ ಮತ್ತು ಹತ್ತನೇ ತರಗತಿಯ ಪಾಕಿಸ್ತಾನ ಅಧ್ಯಯನ ಪುಸ್ತಕವನ್ನು ಉಲ್ಲೇಖಿಸುತ್ತಾ, ಈ ಪುಸ್ತಕದಲ್ಲಿ ಹಿಂದೂಗಳನ್ನು ಮುಸ್ಲಿಮರ ಶತ್ರುಗಳೆಂದು ವಿವರಿಸಲಾಗಿದೆ ಎಂದು ಹೇಳಿದ್ದಾರೆ. ಮುಸ್ಲಿಮರ ವಿರುದ್ಧ ಹಿಂದೂಗಳ ಹಗೆತನವು ಮುಂಚೂಣಿಗೆ ಬಂದಿದೆ. ಅವರು ಸ್ವತಃ ಹಿಂದೂ ಆಗಿದ್ದರಿಂದ, ಹೇಗೆ ಮುಸ್ಲಿಮರ ಶತ್ರುವಾಗಬಹುದು ಎಂದು ರಾಜವಂತಿ ಅವರನ್ನು ಕೇಳಲಾಗಿದೆ. ಆಗ ಅವರು ಹೇಳಿದ ಪ್ರಕಾರ, ತಮಗೆ ಅನೇಕ ಮುಸ್ಲಿಮರು ಸ್ನೇಹಿತರಿದ್ದಾರೆ ಮತ್ತು ಎಲ್ಲರೂ ಒಟ್ಟಾಗಿ ಎಲ್ಲಾ ಹಬ್ಬಗಳನ್ನು ಆಚರಿಸುತ್ತಾರೆ.

ಹಿಂದೂ ಧರ್ಮದಲ್ಲಿ ಮಹಿಳೆಯರಿಗೆ ಕಡಿಮೆ ಸ್ಥಾನಮಾನ ಸರ್ಕಾರಿ ವಲಯದ ಉದ್ಯೋಗಿ ಮತ್ತು ಅನೇಕ ಪತ್ರಿಕೆಗಳಲ್ಲಿ ಅಂಕಣಗಳನ್ನು ಬರೆಯುವ ಪರಾ ಮಾಂಗಿ ಅವರು ಶಿಕಾರ್‌ಪುರದ ನಿವಾಸಿ. ಅವರು ಪಾಕಿಸ್ತಾನ ಸ್ಟಡೀಸ್ ಅನ್ನು ಇಂಟರ್​ಮೀಡಿಯಟ್​ನಲ್ಲಿ ಓದಿದ್ದರು. ಅದರಲ್ಲಿ ಬರೆದ ಪ್ರಕಾರ, ‘ಸಂಕುಚಿತತೆ ಹಿಂದೂ ಸಮಾಜವನ್ನು ಪಾರ್ಶ್ವವಾಯುವಿಗೆ ತಳ್ಳಿದೆ. ಈ ಧರ್ಮದಲ್ಲಿ ಮಹಿಳೆಗೆ ಕೆಳ ಸ್ಥಾನವನ್ನು ನೀಡಲಾಗಿದೆ.’ ಆದರೆ ವಾಸ್ತವವು ಇದಕ್ಕಿಂತ ಸಂಪೂರ್ಣವಾಗಿ ಭಿನ್ನವಾಗಿದೆ ಎಂದು ಪರಾ ಹೇಳುತ್ತಾರೆ. ಹಿಂದೂ ಧರ್ಮದಲ್ಲಿ ದೇವತೆಗಳನ್ನು ಪೂಜಿಸಲಾಗುತ್ತದೆ. ದುರ್ಗಾ ಮಾತಾ ಮತ್ತು ಕಾಳಿ ಮಾತಾ ಎಂದು ಕರೆಯಲಾಗುತ್ತದೆ.

ಹಿಂದೂಗಳು ಆಸ್ಪತ್ರೆಗಳನ್ನು ನಿರ್ಮಿಸುತ್ತಾರೆ ಡಾ. ಸಿಂಧು ಸುವ್ರತ್ ಅವರ ಪ್ರಕಾರ, ಹಿಂದೂಗಳ ಬಗ್ಗೆ ತಪ್ಪಾದ ಮಾಹಿತಿ ಇರುವ ಪುಸ್ತಕಗಳನ್ನೇ ಪಾಕಿಸ್ತಾನದ ಮಕ್ಕಳು ಓದುತ್ತಿದ್ದಾರೆ. ಅವರೇ ಹೇಳುವಂತೆ, ಅನೇಕ ಹಿಂದೂಗಳು ಪಾಕಿಸ್ತಾನದಲ್ಲಿ ಆಸ್ಪತ್ರೆಗಳನ್ನು ನಿರ್ಮಿಸಿದ್ದಾರೆ. ಅವರಿಗೆ ತುಂಬಾ ತೊಂದರೆಯಾಗಿದ್ದರೆ, ಹಿಂದೂಗಳು ಮಾತ್ರ ಇಲ್ಲಿಗೆ ಬರಬಹುದು, ಮುಸ್ಲಿಮರು ಯಾರೂ ಇಲ್ಲಿಗೆ ಬರಲು ಸಾಧ್ಯವಿಲ್ಲ ಎಂದು ಅವರು ಬರೆಯಬಹುದಿತ್ತು ಎನ್ನುತ್ತಾರೆ.

ಥಾರ್ ಪಾರ್ಕರ್‌ನಲ್ಲಿ ವಾಸಿಸುವ ಪತ್ರಕರ್ತ ಸಂಜಯ್ ಮಿಥರಾನಿ ಅವರ ಪ್ರಕಾರ, ಪಾಕಿಸ್ತಾನದಲ್ಲಿ ಹಿಂದೂ ಆಗಿ ಬದುಕುವುದು ಬಹಳ ಕಷ್ಟದ ಕೆಲಸ. ಈ ಹೆಸರು ತಮಗೆ ಇಲ್ಲದಿದ್ದರೆ ಚೆನ್ನಾಗಿತ್ತು ಎಂದು ಹಲವು ಸಲ ಅನ್ನಿಸುತ್ತದಂತೆ. ಪಾಕಿಸ್ತಾನದ ಪ್ರಸಿದ್ಧ ಹಿಂದೂಗಳು ಮತ್ತು ಅವರ ಸಾಧನೆಗಳನ್ನು ಕೋರ್ಸ್‌ನಲ್ಲಿ ಹೇಳಿದರೆ, ಹಿಂದೂ ವಿದ್ಯಾರ್ಥಿಗಳು ಈ ವಿಷಯಗಳ ಬಗ್ಗೆ ಆಸಕ್ತಿ ವಹಿಸುತ್ತಾರೆ. ಅಲ್ಲದೆ, ಇತರ ವಿದ್ಯಾರ್ಥಿಗಳಿಗೆ ಮಾಹಿತಿಯೂ ಹೆಚ್ಚಾಗುತ್ತದೆ. ಇದು ರಾಷ್ಟ್ರೀಯ ಏಕತೆಯನ್ನು ಉತ್ತೇಜಿಸಲು ಸಹಾಯ ಮಾಡುತ್ತದೆ.

ಇದನ್ನೂ ಓದಿ: ಪಾಕಿಸ್ತಾನಿ ಹುಡುಗನ ಜೊತೆ ಮದುವೆ ರದ್ದು ಮಾಡಿಕೊಂಡ ಬಾಲಿವುಡ್​ ನಟಿ ಸಬಾ! ಕಹಿಸತ್ಯಗಳೇ ಕಾರಣ

(What Pakistan education system teach about Hindus and Hinduism)

ಆಟವೆಲ್ಲ ರಂಪಾಟವಾದಾಗ; ಹದ್ದುಮೀರಿ ನಡೆದುಕೊಂಡ ಸ್ಪರ್ಧಿಗಳು
ಆಟವೆಲ್ಲ ರಂಪಾಟವಾದಾಗ; ಹದ್ದುಮೀರಿ ನಡೆದುಕೊಂಡ ಸ್ಪರ್ಧಿಗಳು
ಕೈ ತುತ್ತಿನ ಹಿಂದಿರುವ ಮಹತ್ವದ ಬಗ್ಗೆ ನಿಮಗೆ ಗೊತ್ತಾ?
ಕೈ ತುತ್ತಿನ ಹಿಂದಿರುವ ಮಹತ್ವದ ಬಗ್ಗೆ ನಿಮಗೆ ಗೊತ್ತಾ?
ವಿಷ್ಣು, ಗಣೇಶನ ಲಹರಿ ಇರುವ ಈ ದಿನದ ರಾಶಿ ಭವಿಷ್ಯ ಹೇಗಿದೆ ತಿಳಿಯಿರಿ
ವಿಷ್ಣು, ಗಣೇಶನ ಲಹರಿ ಇರುವ ಈ ದಿನದ ರಾಶಿ ಭವಿಷ್ಯ ಹೇಗಿದೆ ತಿಳಿಯಿರಿ
2025ರ ಸರ್ಕಾರಿ ಕ್ಯಾಲೆಂಡರ್ ಹೇಗಿರುತ್ತದೆ? ಇಲ್ಲಿದೆ ನೋಡಿ ವಿಡಿಯೋ
2025ರ ಸರ್ಕಾರಿ ಕ್ಯಾಲೆಂಡರ್ ಹೇಗಿರುತ್ತದೆ? ಇಲ್ಲಿದೆ ನೋಡಿ ವಿಡಿಯೋ
ಹಿಮದಿಂದ ತುಂಬಿದ ಕಣಿವೆಯಲ್ಲಿ ಚಿರತೆಗಳ ಕುಣಿದಾಟ
ಹಿಮದಿಂದ ತುಂಬಿದ ಕಣಿವೆಯಲ್ಲಿ ಚಿರತೆಗಳ ಕುಣಿದಾಟ
ನಾಸಿಕ್‌ನಲ್ಲಿ 11 ವರ್ಷದ ಬಾಲಕಿ ಮೇಲೆ ಬೀದಿನಾಯಿಗಳ ದಾಳಿ; ವಿಡಿಯೋ ಇಲ್ಲಿದೆ
ನಾಸಿಕ್‌ನಲ್ಲಿ 11 ವರ್ಷದ ಬಾಲಕಿ ಮೇಲೆ ಬೀದಿನಾಯಿಗಳ ದಾಳಿ; ವಿಡಿಯೋ ಇಲ್ಲಿದೆ
ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ದಲಿತ ಸಮುದಾಯದ ಸಮಸ್ಯೆಗಳ ಚರ್ಚೆಗೆ ಮೀಟಿಂಗ್ ಕರೆದಿದ್ದಾರೆ: ಮಹಾದೇವಪ್ಪ
ದಲಿತ ಸಮುದಾಯದ ಸಮಸ್ಯೆಗಳ ಚರ್ಚೆಗೆ ಮೀಟಿಂಗ್ ಕರೆದಿದ್ದಾರೆ: ಮಹಾದೇವಪ್ಪ
ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್
ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್
ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ
ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ