Coronavirus India Update: ಭಾರತದಲ್ಲಿ ಕಳೆದ 24 ಗಂಟೆಗಳಲ್ಲಿ 2,59,170 ಹೊಸ ಕೊವಿಡ್ ಪ್ರಕರಣ ಪತ್ತೆ, 1,761 ಸಾವು

Covid19 India: ಆರೋಗ್ಯ ಸಚಿವಾಲಯದ ಅಂಕಿ ಅಂಶಗಳ ಪ್ರಕಾರ ದೇಶದಲ್ಲಿರುವ ಒಟ್ಟು ಕೊವಿಡ್ ಪ್ರಕರಣಗಳ ಸಂಖ್ಯೆ ಪ್ರಕರಣಗಳ ಸಂಖ್ಯೆ 1,53,21,089 ಆಗಿದೆ. ಈವರೆಗೆ 1,80,530 ಮಂದಿ ಮೃತಪಟ್ಟಿದ್ದು 1,31,08,582 ಮಂದಿ ಚೇತರಿಸಿಕೊಂಡಿದ್ದಾರೆ. ಸಕ್ರಿಯ ಪ್ರಕರಣಗಳ ಸಂಖ್ಯೆ 20,31,977 ಆಗಿದ್ದು, 12,71,29,113 ಮಂದಿ ಕೊವಿಡ್ ಲಸಿಕೆ ಪಡೆದುಕೊಂಡಿದ್ದಾರೆ.

Coronavirus India Update: ಭಾರತದಲ್ಲಿ ಕಳೆದ 24 ಗಂಟೆಗಳಲ್ಲಿ 2,59,170 ಹೊಸ ಕೊವಿಡ್ ಪ್ರಕರಣ ಪತ್ತೆ, 1,761 ಸಾವು
ಕೊವಿಡ್ ಪರೀಕ್ಷೆ
Follow us
ರಶ್ಮಿ ಕಲ್ಲಕಟ್ಟ
|

Updated on:Apr 20, 2021 | 12:00 PM

ದೆಹಲಿ: ದೇಶದಲ್ಲಿ ಕೊವಿಡ್ ಪ್ರಕರಣಗಳ ಸಂಖ್ಯೆಏರಿಕೆಯಾಗುತ್ತಲೇಇದ್ದುಕಳೆದ24ಗಂಟೆಗಳಲ್ಲಿ 2,59,170 ಹೊಸ ಕೊವಿಡ್ ಪ್ರಕರಣಗಳು ಪತ್ತೆಯಾಗಿದೆ. 1,761 ರೋಗಿಗಳು ಮೃತ ಪಟ್ಟಿದ್ದು 1,54,761 ಮಂದಿ ಚೇತರಿಸಿಕೊಂಡಿದ್ದಾರೆ ಎಂದು ಕೇಂದ್ರ ಆರೋಗ್ಯ ಸಚಿವಾಲಯಹೇಳಿದೆ. ಆರೋಗ್ಯ ಸಚಿವಾಲಯದ ಅಂಕಿ ಅಂಶಗಳ ಪ್ರಕಾರ ದೇಶದಲ್ಲಿರುವ ಒಟ್ಟು ಕೊವಿಡ್ ಪ್ರಕರಣಗಳ ಸಂಖ್ಯೆ ಪ್ರಕರಣಗಳ ಸಂಖ್ಯೆ 1,53,21,089 ಆಗಿದೆ. ಈವರೆಗೆ 1,80,530 ಮಂದಿ ಮೃತಪಟ್ಟಿದ್ದು 1,31,08,582 ಮಂದಿ ಚೇತರಿಸಿಕೊಂಡಿದ್ದಾರೆ. ಸಕ್ರಿಯ ಪ್ರಕರಣಗಳ ಸಂಖ್ಯೆ 20,31,977 ಆಗಿದ್ದು, 12,71,29,113 ಮಂದಿ ಕೊವಿಡ್ ಲಸಿಕೆ ಪಡೆದುಕೊಂಡಿದ್ದಾರೆ.

ಮಹಾರಾ ,ಉತ್ತರ ಪ್ರದೇಶ,ದೆಹಲಿ ಮತ್ತುರಾಜಸ್ಥಾನ ಸೇರಿದಂತೆ 10 ರಾಜ್ಯಗಳಲ್ಲಿ ಹೊಸ ಕೊವಿಡ್ ಪ್ರಕರಣಗಳು ದಿನೇ ದಿನೇ ಏರಿಕೆಯಾಗುತ್ತಿದ್ದು ಇದು ದೇಶದ ಶೇ 78.58 ರಷ್ಟಿದೆ ಎಂದುಕೇಂದ್ರ ಆರೋಗ್ಯ ಸಚವ ಹರ್ಷವರ್ಧನ್ ಅವರು ಸೋಮವಾರ ಹೇಳಿದ್ದಾರೆ. ಸಚಿವರು ಹೇಳಿದ 10 ರಾಜ್ಯಗಳ ಪಟ್ಟಿಯಲ್ಲಿ ತಮಿಳುನಾಡು,ಕರ್ನಾಟಕ,ಗುಜರಾತ್,ಕೇರಳ, ಮಧ್ಯಪ್ರದೇಶ ಮತ್ತು ಛತ್ತೀಸಗಡ ಇದೆ.

ದೆಹಲಿಯಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ 6 ದಿನಗಳ ಲಾಕ್ ಡೌನ್ ಘೋಷಿಸಿದ್ದು, ವಲಸೆಕಾರ್ಮಿಕರು ತಮ್ಮ ಊರುಗಳಿಗೆತೆರಳಲು ಬಸ್ ನಿಲ್ದಾಣ,ರೈಲ್ವೆ ನಿಲ್ದಾಣದಲ್ಲಿ ಗುಂಪುಸೇರಿರುವ ದೃಶ್ಯ ಸೋಮವಾರ ಕಂಡು ಬಂದಿದೆ.

ಮುಂಬೈಯಲ್ಲಿ ಶೇ 90ರಷ್ಟು ಪ್ರಕರಣ ಸ್ಲಂ ಪ್ರದೇಶಗಳಿಂದ ದೂರವಿರುವ ಪ್ರದೇಶಗಳಲ್ಲಿದೆ

ಮುಂಬೈನಲ್ಲಿರುವ ಕಟ್ಟಡ, ವಸತಿ ಸಮುಚ್ಛಯಗಳಲ್ಲಿ ಕೊವಿಡ್ ಪ್ರಕರಣ ಸಂಖ್ಯೆ ಏರಿಕೆಯಾಗುತ್ತಿದೆಎಂದು ಬೃಹನ್ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ (BMC) ಹೇಳಿದೆ. ಮುಂಬೈನಲ್ಲಿ ಸರಿ ಸುಮಾರು 87,000 ಸಕ್ರಿಯ ಪ್ರಕರಣಗಳಿದ್ದು ಈ ಪೈಕಿ ಶೇ 90 ರಷ್ಟು ಪ್ರಕರಣಗಳು ಕಟ್ಟಡಗಳಲ್ಲಿ ವಾಸಿಸುವವರಲ್ಲಿದೆ. ಅದೇ ವೇಳೆ ಸ್ಲಂಗಳಲ್ಲಿ ವಾಸಿಸುವ ಜನರಲ್ಲಿ ಶೇ10 ರಷ್ಟು ಮಂದಿಗೆ ಸೋಂಕು ತಗುಲಿದೆ ಎಂದು ಬಿಎಂಸಿ ಹೇಳಿದೆ .

ಬಿಎಂಸಿ ಬಿಡುಗಡೆ ಮಾಡಿದ ಏಪ್ರಿಲ್ 16ರ ಅಂಕಿ ಅಂಶಗಳ ಪ್ರಕಾರ ಮುಂಬೈನಲ್ಲಿರುವ 87,443 ಸಕ್ರಿಯ ಪ್ರಕರಣಗಳಲ್ಲಿ 79,032 ಸಕ್ರಿಯ ಪ್ರಕರಣ ಗಳು ಕಟ್ಟಡಗಳಲ್ಲಿ ವಾಸಿಸುವವರಲ್ಲಿದೆ. ಅದೇ ವೇಳೆ ಸ್ಲಂನಲ್ಲಿ 8,411ಪ್ರಕರಣಗಳು ಪತ್ತೆಯಾಗಿದೆ

ಕಳೆದ ವರ್ಷಾಂತ್ಯದಲ್ಲಿನ ಕೊವಿಡ್ ಪ್ರಕರಣ ಹೆಚ್ಚಳ ಮತ್ತು ಈಗಿರುವ ಎರಡನೇ ಅಲೆಯ ಕೊವಿಜ್ ಪ್ರಕರಣಗಳನ್ನು ಹೋಲಿಸಿ ನೋಡಿದರೆ , ಈ ಬಾರಿ ಆಕ್ಸಿಜನ್ ಅವಶ್ಯಕತೆ ಜಾಸ್ತಿ ಇದೆ. ಸಾವಿನ ಪ್ರಮಾಣದಲ್ಲಿ ಯಾವುದೇ ವ್ಯತ್ಯಾಸವಿಲ್ಲ .ಆದರೆ ಎರಡನೇ ಅಲೆಯಲ್ಲಿ ಯುವ ಪೀಳಿಗೆ ಸೋಂಕಿಗೆ ಒಳಗಾಗುತ್ತಿದ್ದಾರೆ ಎಂದು ಸರ್ಕಾರದ ಕಾರ್ಯಪಡೆ ಅಭಿಪ್ರಾಯಪಟ್ಟಿದೆ

ಹಲವಾರು ರಾಜ್ಯಗಳು ವೈದ್ಯಕೀಯ ಆಮ್ಲಜನಕದ ಬೇಡಿಕೆಯೊಡ್ಡಿದ್ದು ಕಾರ್ಯಪಡೆಯು ಉಲ್ಲೇಖಿಸಿದ ಆಸ್ಪತ್ರೆಯ ದತ್ತಾಂಶದ  ಪ್ರಕಾರ ಎರಡನೇ ಅಲೆಯಲ್ಲಿ ಶೇಕಡಾ 54.5 ರಷ್ಟು ರೋಗಿಗಳಿಗೆ ಚಿಕಿತ್ಸೆಯ ಸಮಯದಲ್ಲಿ ಪೂರಕ ಆಮ್ಲಜನಕದ ಅಗತ್ಯವಿದೆ.  ಕಳೆದ ವರ್ಷ ಸೆಪ್ಟೆಂಬರ್ ಮತ್ತು ನವೆಂಬರ್ ಅವಧಿಯಲ್ಲಿ ಇದು ಗರಿಷ್ಠ ಮಟ್ಟದಿಂದ 13.4 ಶೇಕಡಾ ಹೆಚ್ಚಳವಾಗಿದೆ ಎಂದು ದೇಶದಾದ್ಯಂತ 40 ಕೇಂದ್ರಗಳ ಅಂಕಿ ಅಂಶಗಳು ತಿಳಿಸಿವೆ.

ಇದನ್ನೂ ಓದಿ:  ಮೇ ತಿಂಗಳಲ್ಲಿ ಕೊವಿಡ್ ಗಂಭೀರ ಸ್ಥಿತಿ ತಲುಪಲಿದೆ, ತಿಂಗಳ ಕೊನೆಯಲ್ಲಿ ಕಡಿಮೆಯಾಗಬಹುದು: ಐಐಟಿ ಕಾನ್ಪುರ್ ಪ್ರೊಫೆಸರ್ 

(Second wave of the Coronavirus Pandemic 2.59 Lakh new Covid Cases 1761 Covid Deaths reported in India last 24hours)

Published On - 10:21 am, Tue, 20 April 21

ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ
ಅಜ್ಜನ ಜಾತ್ರೆ ಸಂಪನ್ನ: ಭಕ್ತರಲ್ಲಿ ಮೂರು ವಚನ ಕೇಳಿದ ಕೊಪ್ಪಳದ ಗವಿಶ್ರೀ
ಅಜ್ಜನ ಜಾತ್ರೆ ಸಂಪನ್ನ: ಭಕ್ತರಲ್ಲಿ ಮೂರು ವಚನ ಕೇಳಿದ ಕೊಪ್ಪಳದ ಗವಿಶ್ರೀ
ಚಿಟ್ಟಾಣಿ ಆಸೆ ಈಡೇರಿಸಲು ಯಕ್ಷಗಾನದಲ್ಲಿ ಅಭಿನಯಿಸಿದ ನಟಿ ಉಮಾಶ್ರೀ
ಚಿಟ್ಟಾಣಿ ಆಸೆ ಈಡೇರಿಸಲು ಯಕ್ಷಗಾನದಲ್ಲಿ ಅಭಿನಯಿಸಿದ ನಟಿ ಉಮಾಶ್ರೀ