ಏರ್ ಶೋ ಸಮಯದಲ್ಲಿ ನೀರಿಗಿಳಿದ ವಿಮಾನ; ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಯ್ತು ವಿಡಿಯೋ
ಫ್ಲೋರಿಡಾ ಏರ್ ಶೋ ಸಮಯದಲ್ಲಿ ವಿಮಾನವು ನೀರಿಗಿಳಿಯುತ್ತಿರುವ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಏರ್ ಶೋ ಎಂದರೆ ಎಲ್ಲರೂ ಒಮ್ಮೆ ಚಕಿತರಾಗಿ ನೋಡುತ್ತೇವೆ. ಆಕಾಶದಲ್ಲಿ ಹಾರಾಡುವ ವಿಮಾನವನ್ನು ನೋಡುವುದೇ ಸುಂದರ ಅನುಭವ. ಜೊತೆಗೆ ಪೈಲಟ್ಗಳ ಚಮತ್ಕಾರ ಅದ್ಭುತ. ಅಂತಹ ದೃಶ್ಯ ನೋಡುತ್ತಿದ್ದ ಕಡಲತೀರದ ಜನರಿಗೆ ಒಮ್ಮೆಲೆ ಆತಂಕ ಮೂಡಿಸುವ ಘಟನೆಯೊಂದು ನಡೆದಿದೆ. ಫ್ಲೋರಿಡಾದಲ್ಲಿ ತಾಂತ್ರಿಕ ದೋಷದಿಂದಾಗಿ ವಿಮಾನ ಕೊಕೊ ಬೀಚ್ಗೆ ಇಳಿದ ದೃಶ್ಯ ಕಂಡ ಕಡಲ ತೀರದ ಜನರು ಭಯಗೊಂಡಿದ್ದಾರೆ.
ಏರ್ ಶೋ ಒಂದರಲ್ಲಿ ವಿಮಾನವು ಫ್ಲೋರಿಡಾದ ಕೊಕೊ ಬೀಚ್ನ ನೀರಿನಲ್ಲಿ ಇಳಿದ ಘಟನೆ ಫ್ಲೋರಿಡಾದ ಕೊಕೊ ಬೀಚ್ನಲ್ಲಿ ಶನಿವಾರ ನಡೆದಿದೆ. ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೋ ವೈರಲ್ ಆಗಿದ್ದು, ನೆಟ್ಟಿಗರು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ. ವಿಡಿಯೋದಲ್ಲಿ ನೋಡ ನೋಡುತ್ತಿದ್ದಂತೆಯೇ ಸಿಂಗಲ್-ಎಂಜಿನ್ ಟಿಬಿಎಂ ಎವೆಂಜರ್ ವಿಮಾನವು ನೀರಿನಲ್ಲಿ ಇಳಿಯುತ್ತಿರುವ ವಿಡಿಯೋ ವೈರಲ್ ಆಗಿದೆ.
ವಿಮಾನವು ತಾಂತ್ರಿಕ ಸಮಸ್ಯೆಯಿಂದಾಗಿ ನೀರಿಗಿಳಿಯುವ ಪ್ರಸಂಗ ಉಂಟಾಗಿದೆ. ಘಟನೆಯಲ್ಲಿ ಪೈಲೆಟ್ ಅಥವಾ ಸುತ್ತಲಿದ್ದ ಸಿಬ್ಬಂದಿಗೆ ಯಾವುದೇ ಗಾಯವಾಗಿಲ್ಲ ಎಂದು ಏರ್ ಶೋ ಮೂಲ ಮಾಹಿತಿ ಹಂಚಿಕೊಂಡಿದೆ. ವಿಡಿಯೋವನ್ನು ನೋಡಿದ ನೆಟ್ಟಿಗರು ಪೈಲ್ಟ್ಗೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ 46 ಸೆಕೆಂಡ್ನ ವಿಡಿಯೋ ಕ್ಲಿಪ್ ನೋಡಿ ನೆಟ್ಟಿಗರು ಆಶ್ಚರ್ಯಚಕಿತರಾಗಿದ್ದಾರೆ.
ತಾಂತ್ರಿಕ ಸಮಸ್ಯೆಯಿಂದಾಗಿ ಏರ್ ಶೋದಲ್ಲಿ ಭಾಗಿಯಾಗಿದ್ದ ವಿಮಾನ ನೀರಿಗಿಳಿದಿದೆ. ಕಡಲ ತೀರದಲ್ಲಿದ್ದ ಅದೆಷ್ಟೋ ಜನರನ್ನು ಉಳಿಸಿದ್ದಕ್ಕಾಗಿ ನೆಟ್ಟಿಗರು ಪೈಲೆಟ್ಅನ್ನು ಹಾಡಿ ಹೊಗಳಿದ್ದಾರೆ. ಪೈಲೆಟ್ನ ಆರೋಗ್ಯವನ್ನು ವಿಚಾರಿಸಿದ್ದಾರೆ. ಜೊತೆಗೆ ಪೈಲೆಟ್ನ ಸಾಧನೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
This happened today at the cocoa beach air show (not my video – not sure who took it) pic.twitter.com/FfwVo3C8D3
— Stephanie Co – SENIOR LEGAL ANALYST (@StephanieCo14) April 17, 2021
ಇದನ್ನೂ ಓದಿ: Viral Video: ರೈಲ್ವೇ ಹಳಿಗೆ ಬಿದ್ದ ಮಗು ಕೂದಲೆಳೆ ಅಂತರದಲ್ಲಿ ಅಪಾಯದಿಂದ ಪಾರು; ಸಿಬ್ಬಂದಿಗೆ ರೈಲ್ವೇ ಇಲಾಖೆ ಪ್ರಶಂಸೆ
ಇದನ್ನೂ ಓದಿ: Viral Video: ಬಿಯರ್ ಬಾಟಲಿ ಮುಚ್ಚಳ ತೆಗೆಯಲು ಸಿಂಪಲ್ ವಿಧಾನ; ಕಾಲಲ್ಲಿ ಶೂ ಇದ್ದರೆ ಸಾಕು !