Viral Video: ಬಿಯರ್ ಬಾಟಲಿ ಮುಚ್ಚಳ ತೆಗೆಯಲು ಸಿಂಪಲ್ ವಿಧಾನ; ಕಾಲಲ್ಲಿ ಶೂ ಇದ್ದರೆ ಸಾಕು !
ಇಲ್ಲೊಬ್ಬ ವ್ಯಕ್ತಿ ಸ್ವಲ್ಪ ವಿಭಿನ್ನವಾಗಿ ಬಿಯರ್ ಬಾಟಲಿಯ ಮುಚ್ಚಳ ತೆಗೆದಿದ್ದಾರೆ. ಅದೂ ಶೂ ಲೇಸ್ನಿಂದ. ಬಿಯರ್ ಪ್ರಿಯರಿಗೆ ಈ ವಿಧಾನ ಖಂಡಿತ ಇಷ್ಟವಾಗುತ್ತದೆ.
ಬಿಯರ್ ಬಾಟಲ್ ಮುಚ್ಚಳ ತೆಗೆಯೋಕೆ ಓಪನರ್ ಬೇಕೆಂದೇನೂ ಇಲ್ಲ. ಕಾಲಲ್ಲಿ ಶೂ ಇದ್ದು, ಅದಕ್ಕೆ ಲೇಸ್ ಇದ್ದರೆ ಸಾಕು.. ! ಅದು ಹೇಗೆಂದು ಯೋಚನೆ ಮಾಡುವ ಬದಲು ಈ ವಿಡಿಯೋ ನೋಡಬೇಕು. ಬರೀ ಬಿಯರ್ ಬಾಟಲ್ ಎಂದಲ್ಲ, ಕೆಲವು ಸಾಸ್ಗಳ ಬಾಟಲ್ಗಳಿಗೂ ಸಹ ಓಪನರ್ಗಳ ಅವಶ್ಯಕತೆ ಇರುತ್ತದೆ. ಮುಚ್ಚಲು ಬಿಗಿಯಾಗಿರುವ ಕಾರಣ ಅದನ್ನು ಕೈಯಲ್ಲಿ ತೆಗೆಯುವುದು ಅಸಾಧ್ಯ. ಹೀಗಿರುವಾಗ ಕೆಲವರು ಒಂದಷ್ಟು ವಿಭಿನ್ನ ಮಾರ್ಗಗಳನ್ನು ಕಂಡುಕೊಂಡಿದ್ದಾರೆ. ಹಲ್ಲಲ್ಲಿ ಕಚ್ಚಿ ತೆಗೆಯುವುದು, ಟೇಬಲ್ಗಳ ತುದಿಗೆ ಮುಚ್ಚಲು ಸಿಕ್ಕಿಸಿ ಎಳೆದು ತೆಗೆಯುತ್ತಾರೆ.
ಆದರೆ ಇಲ್ಲೊಬ್ಬ ವ್ಯಕ್ತಿ ಸ್ವಲ್ಪ ವಿಭಿನ್ನವಾಗಿ ಬಿಯರ್ ಬಾಟಲಿಯ ಮುಚ್ಚಳ ತೆಗೆದಿದ್ದಾರೆ. ಅದೂ ಶೂ ಲೇಸ್ನಿಂದ. ಬಿಯರ್ ಪ್ರಿಯರಿಗೆ ಈ ವಿಧಾನ ಖಂಡಿತ ಇಷ್ಟವಾಗುತ್ತದೆ. ಬಿಯರ್ ಬಾಟಲಿಯ ಮುಚ್ಚಳವನ್ನು ಶೂಲೇಸ್ನಿಂದ ತೆಗೆಯುತ್ತಿರುವ ವಿಡಿಯೋವನ್ನು Hold My Beer ಎಂಬ ಟ್ವಿಟರ್ ಅಕೌಂಟ್ನಲ್ಲಿ ಶೇರ್ ಮಾಡಿಕೊಳ್ಳಲಾಗಿದೆ. ಮನಸಿದ್ದರೆ ಮಾರ್ಗ ಎಂಬ ಕ್ಯಾಪ್ಷನ್ ಕೂಡ ಕೊಡಲಾಗಿದೆ.
ವ್ಯಕ್ತಿಯೊಬ್ಬ ತನ್ನ ಶೂ ಲೇಸ್ನ್ನು ಬಿಯರ್ ಬಾಟಲಿಯ ಮುಚ್ಚಳಕ್ಕೆ ಕಟ್ಟಿ, ಹಿಡಿದು ಎಳೆದು ತೆಗೆಯುವುದನ್ನು ವಿಡಿಯೋದಲ್ಲಿ ನೋಡಬಹುದು. ಹೀಗೆ ಶೂ ಲೇಸ್ ಕಟ್ಟುವ ಮೂಲಕ ತುಂಬ ಸರಳ ಹಾಗೂ ಬೇಗನೇ ಮುಚ್ಚಳ ತೆಗೆಯಬಹುದಾಗಿದೆ.
Where there’s a will, there’s a way. ?? pic.twitter.com/5OCKUICrl2
— ? Hold My Beer ? (@HldMyBeer) April 15, 2021
ಇದನ್ನೂ ಓದಿ: ಗಣಿನಾಡು ಬಳ್ಳಾರಿಯಲ್ಲಿ ಪರಸ್ಪರ ಸಗಣಿ ಕುಳ್ಳು ಎರಚಾಟ; 60 ಮಂದಿ ಭಕ್ತರಿಗೆ ಸಣ್ಣಪುಟ್ಟ ಗಾಯ