ಎರಡೇಟು ಕೊಟ್ಟು ಮಾಸ್ಕ್ ಧರಿಸುವಂತೆ ಸೂಚನೆ ನೀಡಿದ ದಾವಣಗೆರೆ ಎಸ್​ಪಿ

ಮಾಸ್ಕ್ ಧರಿಸದೆ ಓಡಾಡುತ್ತಿರುವವರಿಗೆ ದಾವಣಗೆರೆ ಎಸ್​ಪಿ ಹನುಮಂತರಾಯ ಮತ್ತು ಡಿಸಿ ಮಹಾಂತೇಶ್ ಬೀಳಗಿ ಎರಡೇಟು ಕೊಟ್ಟು ಮಾಸ್ಕ್ ಧರಿಸುವಂತೆ ಸೂಚನೆ ನೀಡುತ್ತಿದ್ದಾರೆ. ದಂಡ ನಿಡದೇ ವಾಗ್ವಾದಕ್ಕೆ ಇಳಿದ ವ್ಯಾಪಾರಿಯನ್ನು ಎಸ್​ಪಿ ಹನುಮಂತರಾಯ ತರಾಟೆಗೆ ತೆಗೆದುಕೊಂಡಿದ್ದಾರೆ.

ಎರಡೇಟು ಕೊಟ್ಟು ಮಾಸ್ಕ್ ಧರಿಸುವಂತೆ ಸೂಚನೆ ನೀಡಿದ ದಾವಣಗೆರೆ ಎಸ್​ಪಿ
ಮಾಸ್ಕ್​ ಧರಿಸುವಂತೆ ತರಾಟೆಗೆ ತೆಗೆದುಕೊಂಡ ದಾವಣಗೆರೆ ಎಸ್​ಪಿ


ದಾವಣಗೆರೆ: ರಾಜ್ಯದಲ್ಲಿ ಕೊರೊನಾ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಈಗಾಗಲೇ ರಾಜ್ಯ ಸರ್ಕಾರ ರಾಜ್ಯದ ಎಂಟು ನಗರಗಳಲ್ಲಿ ನೈಟ್ ಕರ್ಫ್ಯೂ ಜಾರಿಗೊಳಿಸಿದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳಿ ಎಂದು ಹೇಳಲಾಗುತ್ತಿದೆ. ಆದರೆ ಜನರು ಮಾತ್ರ ಯಾಕೋ ಏನು ಮಹಾಮಾರಿ ಕೊರೊನಾ ಬಗ್ಗೆ ನಿರ್ಲಕ್ಷ್ಯ ವಹಿಸುತ್ತಿದ್ದಾರೆ. ಕೊರೊನಾ ಎರಡನೇ ಅಲೆ ಅತಿ ವೇಗವಾಗಿ ಹರಡುತ್ತಿದ್ದರೂ ಜನರು ಈ ಬಗ್ಗೆ ತಲೆ ಕೆಡಿಸಿಕೊಳ್ಳುತ್ತಿಲ್ಲ. ಮಾಸ್ಕ್ ಧರಿಸದೆ, ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳದೆ ಬೇಕಾಬಿಟ್ಟಿಯಾಗಿ ಓಡಾಡುತ್ತಿದ್ದಾರೆ.

ಮಾಸ್ಕ್ ಧರಿಸದೆ ಓಡಾಡುತ್ತಿರುವವರಿಗೆ ದಾವಣಗೆರೆ ಎಸ್​ಪಿ ಹನುಮಂತರಾಯ ಮತ್ತು ಡಿಸಿ ಮಹಾಂತೇಶ್ ಬೀಳಗಿ ಎರಡೇಟು ಕೊಟ್ಟು ಮಾಸ್ಕ್ ಧರಿಸುವಂತೆ ಸೂಚನೆ ನೀಡುತ್ತಿದ್ದಾರೆ. ದಂಡ ನಿಡದೇ ವಾಗ್ವಾದಕ್ಕೆ ಇಳಿದ ವ್ಯಾಪಾರಿಯನ್ನು ಎಸ್​ಪಿ ಹನುಮಂತರಾಯ ತರಾಟೆಗೆ ತೆಗೆದುಕೊಂಡಿದ್ದು, ಈ ಘಟನೆ ಎಪಿಎಂಸಿ ಮಾರುಕಟ್ಟೆಯಲ್ಲಿ ಮಾಸ್ಕ್ ಜಾಗೃತಿ ಅಭಿಯಾನದ ವೇಳೆ ನಡೆದಿದೆ.

ಕೊವಿಡ್ ಬಗ್ಗೆ ನಿರ್ಲಕ್ಷ್ಯವಹಿಸಿ ಕೊಪ್ಪಳ ನಗರದಲ್ಲಿ ಓಡಾಡುತ್ತಿರುವವರಿಗೆ ಪೊಲೀಸರು 100 ರೂ. ದಂಡ ಹಾಕುತ್ತಿದ್ದಾರೆ. ದ್ವಿಚಕ್ರ ವಾಹನ ಸವಾರರನ್ನು ಪೊಲೀಸರು ತಡೆದು ದಂಡ ಹಾಕುತ್ತಿದ್ದಾರೆ ಮತ್ತು ಮಾಸ್ಕ್ ಹಾಕಿಕೊಳ್ಳಿ ಎಂದು ಅರಿವು ಮೂಡಿಸುತ್ತಿದ್ದಾರೆ.

ತುಮಕೂರಿನಲ್ಲೂ ಕೊರೊನಾ ಪ್ರಕರಣ ಹೆಚ್ಚಾದ ಹಿನ್ನೆಲೆ ಡಿಸಿ ವೈ.ಎಸ್.ಪಾಟೀಲ್ ಹಾಗೂ ಎಸ್​ಪಿ ಡಾ. ವಂಶಿಕೃಷ್ಣರವರು ರಸ್ತೆಯಲ್ಲಿ ಮಾಸ್ಕ್ ಓಡಾಡುವ ಜನರಿಗೆ ದಂಡ ಹಾಕುತ್ತಿದ್ದಾರೆ. ಜೊತೆಗೆ ಕೊರೊನಾ ಮಾರ್ಗಸೂಚಿಯನ್ನು ಪರಿಶೀಲನೆ ನಡೆಸಿದ್ದಾರೆ.

ಇದನ್ನೂ ಓದಿ

ನನ್ನ ಮಗಳು ಡಾಕ್ಟರ್ ಆಗಿದ್ರೂ ನನ್ನ ಅಣ್ಣನ ಉಳಿಸಲಾಗಲಿಲ್ಲ.. ಸರ್ಕಾರದ ವಿರುದ್ಧ ಆಕ್ರೋಶ ಹೊರ ಹಾಕಿ ಕಣ್ಣೀರಿಟ್ಟ ಸಹೋದರಿ

ಯುವಕರಲ್ಲೇ ಕೊರೊನಾ ಸೋಂಕು ಹೆಚ್ಚು; ಕಲಬುರಗಿಯಲ್ಲಿ ಕಟ್ಟುನಿಟ್ಟಿನ ಕ್ರಮಕ್ಕೆ ಆರೋಗ್ಯಾಧಿಕಾರಿಗಳಿಂದ ಸೂಚನೆ

(Davangere SP has hit people and instructed them to wear mask)

Published On - 1:30 pm, Sun, 18 April 21

Click on your DTH Provider to Add TV9 Kannada