ನನ್ನ ಮಗಳು ಡಾಕ್ಟರ್ ಆಗಿದ್ರೂ ನನ್ನ ಅಣ್ಣನ ಉಳಿಸಲಾಗಲಿಲ್ಲ.. ಸರ್ಕಾರದ ವಿರುದ್ಧ ಆಕ್ರೋಶ ಹೊರ ಹಾಕಿ ಕಣ್ಣೀರಿಟ್ಟ ಸಹೋದರಿ

ಕೊರೊನಾ ಸೋಂಕಿಗೆ ಚಿಕಿತ್ಸೆ ಸಿಗದೆ ಯಲಹಂಕದ 50 ವರ್ಷದ ವೈದ್ಯ ನಿನ್ನೆ ಮೃತಪಟ್ಟಿದ್ದ. ಬೆಂಗಳೂರಿನ ಕೆ.ಸಿ.ಜನರಲ್ ಆಸ್ಪತ್ರೆಯಲ್ಲಿ ಸೂಕ್ತ ಚಿಕಿತ್ಸೆ ನೀಡದೆ, ಬೇರೆ ಆಸ್ಪತ್ರೆಗೂ ಕಳಿಸದ ಹಿನ್ನೆಲೆ ನನ್ನ ಅಣ್ಣ ಮೃತಪಟ್ಟಿದ್ದಾರೆ ಎಂದು ಸುಮತಿ ಆರೋಪಿಸಿದ್ದಾರೆ. ಕೆ.ಸಿ.ಜನರಲ್ ಆಸ್ಪತ್ರೆ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ.

ನನ್ನ ಮಗಳು ಡಾಕ್ಟರ್ ಆಗಿದ್ರೂ ನನ್ನ ಅಣ್ಣನ ಉಳಿಸಲಾಗಲಿಲ್ಲ.. ಸರ್ಕಾರದ ವಿರುದ್ಧ ಆಕ್ರೋಶ ಹೊರ ಹಾಕಿ ಕಣ್ಣೀರಿಟ್ಟ ಸಹೋದರಿ
ಸಂಗ್ರಹ ಚಿತ್ರ


ಬೆಂಗಳೂರು: ‘ನನ್ನ ಮಗಳು ಡಾಕ್ಟರ್ ಆಗಿದ್ರೂ ನನ್ನ ಅಣ್ಣನ ಉಳಿಸಲಾಗಲಿಲ್ಲ’ ಕಾರ್ಪೊರೇಟರ್ ರೆಫರ್ ಮಾಡಿದ್ರೂ, ಪರಿ ಪರಿಯಾಗಿ ಬೇಡಿಕೊಂಡ್ರೂ ಚಿಕಿತ್ಸೆ ಸಿಗಲಿಲ್ಲ ಎಂದು ಕೊರೊನಾಗೆ ಬಲಿಯಾದ ವ್ಯಕ್ತಿಯ ಸಹೋದರಿ ಕಣ್ಣೀರಿಟ್ಟಿದ್ದಾರೆ. ಮಹಾಮಾರಿ ಕೊರೊನಾ ಯಾರನ್ನೂ ಬಿಡುತ್ತಿಲ್ಲ. ಸಿಕ್ಕ ಸಿಕ್ಕವರ ದೇಹ ಸೇರುತ್ತಿದೆ. ಜನರನ್ನು ಹೆದರಿಸಿ ತನ್ನ ಕಪಿಮುಷ್ಟಿಯಲ್ಲಿ ಬಂಧಿಸಿಟ್ಟಿದೆ.

ಕೊರೊನಾ ಸೋಂಕಿಗೆ ಚಿಕಿತ್ಸೆ ಸಿಗದೆ ಯಲಹಂಕದ 50 ವರ್ಷದ ವೈದ್ಯ ನಿನ್ನೆ ಮೃತಪಟ್ಟಿದ್ದ. ಬೆಂಗಳೂರಿನ ಕೆ.ಸಿ.ಜನರಲ್ ಆಸ್ಪತ್ರೆಯಲ್ಲಿ ಸೂಕ್ತ ಚಿಕಿತ್ಸೆ ನೀಡದೆ, ಬೇರೆ ಆಸ್ಪತ್ರೆಗೂ ಕಳಿಸದ ಹಿನ್ನೆಲೆ ನನ್ನ ಅಣ್ಣ ಮೃತಪಟ್ಟಿದ್ದಾರೆ ಎಂದು ಸುಮತಿ ಆರೋಪಿಸಿದ್ದಾರೆ. ಕೆ.ಸಿ.ಜನರಲ್ ಆಸ್ಪತ್ರೆ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ. ಸರ್ಕಾರ ಏನೂ ಸಿದ್ಧತೆ ಮಾಡಿಕೊಳ್ಳದೆ ಸಬೂಬು ಹೇಳುತ್ತಿದೆ. ಸೂಕ್ತ ಸಿದ್ಧತೆ ಮಾಡಿಕೊಳ್ಳಿ ಎಂದು ಸರ್ಕಾರಕ್ಕೆ ಸಲಹೆ ನೀಡಿದ್ದಾರೆ.

ಅಣ್ಣನನ್ನು ಕಳೆದುಕೊಂಡ ತಂಗಿ ಕಣ್ಣೀರು ಹಾಕಿದ್ದಾರೆ. ಕನಿಷ್ಟ ಸೌಲಭ್ಯ ಸಹ ವಹಿಸೋಕೆ ಆಗಿಲ್ಲವಾ ಆಸ್ಪತ್ರೆಗೆ. ನನ್ನ ಮಗಳು ಡಾಕ್ಟರ್ ಆಗಿದ್ರೂ ನನ್ನ ಅಣ್ಣನ ಉಳಿಸಲಾಗಲಿಲ್ಲ. ಕಾರ್ಪೊರೇಟರ್ ರೆಫರ್ ಮಾಡಿ ಕಳುಹಿಸಿದ್ರೂ ಟ್ರೀಟ್ ಮೆಂಟ್ ಸಿಗಲಿಲ್ಲವೆಂದು ಕೆ.ಸಿ ಜನರಲ್ ಆಸ್ಪತ್ರೆ ಮೇಲೆ‌ ಮಹಿಳೆ ಕಿಡಿಕಾರಿದ್ದಾರೆ. ಬೇರೆ ಆಸ್ಪತ್ರೆಗೆ ಕರೆದುಕೊಂಡು ಹೋಗ್ತೀವಿ ಅಂದ್ರೂ ಡಿಸ್ಚಾರ್ಜ್ ಮಾಡಲಿಲ್ಲ. ಆಸ್ಪತ್ರೆಯಲ್ಲಿ ಸರಿಯಾದ ಚಿಕಿತ್ಸೆ ಸಿಗದೆ ಅಣ್ಣ ಮೃತಪಟ್ಟಿದ್ದಾರೆ. ಐದು ದಿನಗಳ ಹಿಂದೆ ಕೆ.ಸಿ ಜನರಲ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ನಿನ್ನೆ ಸಂಜೆ ಅಣ್ಣ ಮೃತಪಟ್ಟಿದ್ದಾರೆ. ಸರ್ಕಾರ ಏನು ಸಿದ್ದತೆ ಮಾಡಿಕೊಳ್ಳದೆ ಸಬೂಬು ಹೇಳ್ತಾ ಇದೆ ಅಷ್ಟೆ. ದಯವಿಟ್ಟು ಸೂಕ್ತ ಸಿದ್ದತೆ ಮಾಡಿಕೊಳ್ಳಿ ಅಂತ ಸರ್ಕಾರಕ್ಕೆ ಮಹಿಳೆ ಮನವಿ ಮಾಡಿಕೊಂಡಿದ್ದಾರೆ. ಸುಮನಹಳ್ಳಿ ಚಿತಾಗಾರದ ಬಳಿ ಅಣ್ಣನನ್ನು ಕಳೆದುಕೊಂಡ ಸುಮತಿ ಕಣ್ಣೀರಿಡುತ್ತ ಆಸ್ಪತ್ರೆ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ.

ಇದನ್ನೂ ಓದಿ: ಬೆಂಗಳೂರು ನಗರದಲ್ಲಿ ವಿಶೇಷ ಕಠಿಣ ಕ್ರಮ ಅನಿವಾರ್ಯ; ಆರೋಗ್ಯ ಸಚಿವ ಡಾ.ಸುಧಾಕರ್


Click on your DTH Provider to Add TV9 Kannada