ಕರ್ನಾಟಕದಲ್ಲಿ ಸಮುದಾಯಕ್ಕೆ ಕೊರೊನಾ ಸೋಂಕು: ಡಾ.ಕೆ.ಸುಧಾಕರ್

ಕರ್ನಾಟಕದಲ್ಲಿ ಸಮುದಾಯಕ್ಕೆ ಕೊರೊನಾ ಸೋಂಕು: ಡಾ.ಕೆ.ಸುಧಾಕರ್
ಡಾ.ಕೆ. ಸುಧಾಕರ್​

ರಾಜ್ಯದಲ್ಲಿ ಆಕ್ಸಿಜನ್ ಕೊರತೆ ಇಲ್ಲ. ಖಾಸಗಿ ಆಸ್ಪತ್ರೆಯವರಿಗೆ ಆಕ್ಸಿಜನ್ ಕೊರತೆ ಆಗಿರಬಹುದು. ಖಾಸಗಿಯವರು ಹಣ ಪಾವತಿಸದ್ದರಿಂದ ಆಕ್ಸಿಜನ್ ಸಿಕ್ಕಿಲ್ಲ. ಇದಕ್ಕೆ ಆಕ್ಸಿಜನ್ ಕೊರತೆ ಎನ್ನುವುದು ಸರಿಯಲ್ಲ. ಫನಾ ಅಸೋಸಿಯೇಷನ್ ಜೊತೆ ಮಾತಾಡಿದ್ದೇನೆ. ಕಡಿಮೆ ಆಕ್ಸಿಜನ್ ಇರುವ ಕಡೆ ಜಂಬೋ ಆಕ್ಸಿಜನ್ ಕೊಟ್ಟಿದ್ದೇವೆ ಎಂದರು.

sandhya thejappa

|

Apr 18, 2021 | 2:53 PM


ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಸೋಂಕು ಸಮುದಾಯಕ್ಕೆ ಹರಡಿದೆ ಎಂದು ಕೇಂದ್ರ ಸರ್ಕಾರ ಹೇಳಿದೆ. ಹೀಗಾಗಿಯೇ ಶೇ.10ಕ್ಕಿಂತ ಹೆಚ್ಚು ಪ್ರಕರಣಗಳು ಬರುತ್ತಿದೆ ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಹೇಳಿದ್ದಾರೆ. ಕೊವಿಡ್ 2ನೇ ಅಲೆ ಗುಣವೇ ಹೀಗಿದೆ. ಇಡೀ ದೇಶದಲ್ಲಿ ಕೊವಿಡ್ 2ನೇ ಅಲೆ ಬಹಳ ವೇಗವಾಗಿ ಹರಡುತ್ತಿದೆ ಎಂದು ಸಚಿವರು ಹೇಳಿದರು. ಬೆಂಗಳೂರಿನಲ್ಲಿ ಕಠಿಣ ನಿಯಮಗಳನ್ನು ಜಾರಿಗೊಳಿಸುವ ಬಗ್ಗೆ ಮಾತನಾಡಿದ ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ನಾಳೆ (ಏಪ್ರಿಲ್ 19) ಸಭೆ ನಡೆಯಲಿದೆ. ವೈಜ್ಞಾನಿಕ ನೆಲೆಗಟ್ಟಿನಲ್ಲಿ ಎಲ್ಲರ ಸಲಹೆ ಸೂಚನೆ ಕೇಳುತ್ತೇವೆ. ಸಭೆ ನಂತರ ಕಠಿಣ ನಿಯಮದ ಬಗ್ಗೆ ತೀರ್ಮಾನಿಸುತ್ತೇವೆ ಎಂದು ತಿಳಿಸಿದ್ದಾರೆ.

ಐಸಿಯು ಬೆಡ್​ಗಳ ಸಮಸ್ಯೆ ಇದೆ. ರಾಜ್ಯದಲ್ಲಿ ಇರುವ ಬೆಡ್​ಗಳಿಗಿಂತ ಹೆಚ್ಚು ರೋಗಿಗಳು ಬಂದರೆ ಐಸಿಯು ಬೆಡ್ ಸಮಸ್ಯೆ ಆಗುವುದು ಸಹಜ. ಈಗಾಗಲೇ ಝೋನಲ್ ವೈಸ್ ನೋಡಲ್ ಅಧಿಕಾರಿ ನೇಮಿಸಿದ್ದೇವೆ. ಎಲ್ಲರಿಗೂ ಚಿಕಿತ್ಸೆ ನೀಡಲು ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದೇವೆ. ನಿತ್ಯ ಐಸಿಯು ಬೆಡ್ ಹೆಚ್ಚಳಕ್ಕೆ ಕ್ರಮವಹಿಸುತ್ತಿದ್ದೇವೆ. ನಮ್ಮ ಜನರ ತಪ್ಪಿನಿಂದ ಇವತ್ತು ಇಷ್ಟು ಸೋಂಕು ಹೆಚ್ಚಳ ಆಗಿದೆ. ನಮ್ಮಲ್ಲೂ ಕೆಲ ನ್ಯೂನತೆ ಇವೆ. ಅದನ್ನು ಸರಿ ಮಾಡುವ ಕೆಲಸ ಮಾಡುತ್ತೀವಿ ಎಂದು ಆರೋಗ್ಯ ಸಚಿವ ಡಾ.ಸುಧಾಕರ್ ಅಭಿಪ್ರಾಯಪಟ್ಟಿದ್ದಾರೆ.

ರಾಜ್ಯದಲ್ಲಿ ಆಕ್ಸಿಜನ್ ಕೊರತೆ ಇಲ್ಲ. ಖಾಸಗಿ ಆಸ್ಪತ್ರೆಯವರಿಗೆ ಆಕ್ಸಿಜನ್ ಕೊರತೆ ಆಗಿರಬಹುದು. ಖಾಸಗಿಯವರು ಹಣ ಪಾವತಿಸದ್ದರಿಂದ ಆಕ್ಸಿಜನ್ ಸಿಕ್ಕಿಲ್ಲ. ಇದಕ್ಕೆ ಆಕ್ಸಿಜನ್ ಕೊರತೆ ಎನ್ನುವುದು ಸರಿಯಲ್ಲ. ಫನಾ ಅಸೋಸಿಯೇಷನ್ ಜೊತೆ ಮಾತಾಡಿದ್ದೇನೆ. ಕಡಿಮೆ ಆಕ್ಸಿಜನ್ ಇರುವ ಕಡೆ ಜಂಬೋ ಆಕ್ಸಿಜನ್ ಕೊಟ್ಟಿದ್ದೇವೆ ಎಂದು ಆರೋಗ್ಯ ಸಚಿವ ಡಾ.ಸುಧಾಕರ್ ಹೇಳಿದ್ದಾರೆ.

800 ಮೆಟ್ರಿಕ್ ಟನ್ ಉತ್ಪಾದನೆ ಮಾಡುವ ಶಕ್ತಿ ನಮ್ಮಲ್ಲಿದೆ. ಕೇಂದ್ರದಿಂದ 300 ಮೆಟ್ರಿಕ್ ಟನ್ ಆಕ್ಸಿಜನ್ ಅಲಾಟ್ ಆಗಿದೆ. ಇನ್ನೂ ಹೆಚ್ಚು ಆಕ್ಸಿಜನ್ ಬೇಕೆಂದು ಕೇಂದ್ರಕ್ಕೆ ಮನವಿ ಸಲ್ಲಿಕೆಯಾಗಿದೆ. ನಮಗೆ ಈಗ ಸದ್ಯಕ್ಕೆ 200 ಮೆಟ್ರಿಕ್ ಟನ್ ಆಕ್ಸಿಜನ್ ಬೇಕು. ನಮ್ಮ ಬಳಿ ಈಗ 300 ಮೆಟ್ರಿಕ್ ಟನ್ ಇದೆ ಎಂದು ಸಚಿವರು ತಿಳಿಸಿದರು.
ಇದನ್ನೂ ಓದಿ

ಬೆಂಗಳೂರಿನಲ್ಲಿ ಸೋಂಕಿತ ಮೃತಪಟ್ಟರೂ ಬಿಬಿಎಂಪಿಗೆ ಮಾಹಿತಿ ಇಲ್ಲ? ಸೋಂಕಿತನನ್ನು ಸಿಂಗರಿಸಿ ಅಂತ್ಯಸಂಸ್ಕಾರ ಮಾಡಿದ ಕುಟುಂಬಸ್ಥರು

ಕೊರೊನಾ ಶಂಕಿತ ರೋಗಿಗಳಿಗೆ ಸಂಭಾವ್ಯ ಕೊವಿಡ್ ರೋಗಿಗಳು ಎಂದು ಪರಿಗಣಿಸಿ ಚಿಕಿತ್ಸೆ ನೀಡಲಿದೆ ಉತ್ತರ ಪ್ರದೇಶ ಸರ್ಕಾರ

(Dr Sudhakar says special austerity measures were inevitable in Bangalore city)

Follow us on

Related Stories

Most Read Stories

Click on your DTH Provider to Add TV9 Kannada