ಬೆಂಗಳೂರಿನಲ್ಲಿ ಸೋಂಕಿತ ಮೃತಪಟ್ಟರೂ ಬಿಬಿಎಂಪಿಗೆ ಮಾಹಿತಿ ಇಲ್ಲ? ಸೋಂಕಿತನನ್ನು ಸಿಂಗರಿಸಿ ಅಂತ್ಯಸಂಸ್ಕಾರ ಮಾಡಿದ ಕುಟುಂಬಸ್ಥರು

ಬೆಂಗಳೂರಿನಲ್ಲಿ ಸೋಂಕಿತ ಮೃತಪಟ್ಟರೂ ಬಿಬಿಎಂಪಿಗೆ ಮಾಹಿತಿ ಇಲ್ಲ? ಸೋಂಕಿತನನ್ನು ಸಿಂಗರಿಸಿ ಅಂತ್ಯಸಂಸ್ಕಾರ ಮಾಡಿದ ಕುಟುಂಬಸ್ಥರು
ಮನೆ ಮುಂದೆ ಸೋಂಕಿತನ ಮೃತದೇಹವಿಟ್ಟು ಸಿಂಗರಿಸಿರುವ ಕುಟುಂಬಸ್ಥರು

ಸೋಂಕಿತನ ಶವ ಸಾಮಾನ್ಯ ಶವದಂತೆಯೇ ಸಿಂಗಾರ ಮಾಡಿ ಕುಟುಂಬಸ್ಥರು ಅಂತ್ಯಕ್ರಿಯೆ ಮಾಡಿದ್ದಾರೆ. ಅಂತ್ಯಕ್ರಿಯೆಗೆ ಕುಟುಂಬಸ್ಥರೆಲ್ಲ ಭಾಗಿಯಾಗಿದ್ದು ಮೃತದೇಹವನ್ನು ಮುಟ್ಟಿ ಸಂಸ್ಕಾರ ಮಾಡಿದ್ದಾರೆ.

Ayesha Banu

|

Apr 18, 2021 | 12:19 PM


ಬೆಂಗಳೂರು: ಕಿಲ್ಲರ್ ಕೊರೊನಾದಿಂದಾಗಿ ಎತ್ತ ನೋಡಿದ್ರೂ ಸಾವಿನ ಆಕ್ರಂದನ ಕೇಳಿಸುತ್ತಿದೆ. ಹೆಜ್ಜೆ ಹೆಜ್ಜೆಗೂ ಜೀವ ಉಳಿಸಿಕೊಳ್ಳಲು ಜನ ಪರದಾಡುತ್ತಿದ್ದಾರೆ. ಆಸ್ಪತ್ರೆಗಳಲ್ಲಿ ಬೆಡ್ ಸಿಕ್ತಿಲ್ಲ. ಬೆಡ್ ಸಿಕ್ರೂ ಬೇಗ ಟ್ರೀಟ್​ಮೆಂಟ್ ಸಿಕ್ತಿಲ್ಲ. ಐಸಿಯುನಲ್ಲಿದ್ರೂ ಆಕ್ಸಿಜನ್ ಸಿಲಿಂಡರ್ ಸಿಕ್ತಿಲ್ಲ. ಕಣ್ಮುಂದೆಯೇ ತಮ್ಮ ಕುಟುಂಬದವರು ಜೀವ ಬಿಡ್ತಿದ್ದಾರೆ. ಕೊರೊನಾದಿಂದ ದಿನದಿಂದ ದಿನಕ್ಕೆ ಹಲವ್ರು ಸಾವಿನ ಕದ ತಟ್ಟುತ್ತಿದ್ದಾರೆ. ಸಾವಿನೂರಾದ ಬೆಂಗಳೂರಲ್ಲಿ ಕ್ಷಣ ಕ್ಷಣಕ್ಕೂ ಪರಿಸ್ಥಿತಿ ಅತಿ ಭೀಕರವಾಗ್ತಿದೆ. ಇಂತಹ ಸ್ಥಿತಿ ಇದ್ದರೂ ಬಿಬಿಎಂಪಿ ನಿರ್ಲಕ್ಷ್ಯ ವಹಿಸುತ್ತಿದೆ ಎಂಬ ಆರೋಪ ಕೇಳಿ ಬಂದಿದೆ.

ಬೆಂಗಳೂರಿನಲ್ಲಿ ಸೋಂಕಿತರು ಮೃತಪಟ್ಟರೂ ಬಿಬಿಎಂಪಿಗೆ ಈ ಬಗ್ಗೆ ಮಾಹಿತಿ ಸಿಗುತ್ತಿಲ್ಲವಾ ಎಂಬ ಪ್ರಶ್ನೆ ಮೂಡಿದೆ. ಏಕೆಂದರೆ ವಿಜಯನಗರದ ಮಾರೇನಹಳ್ಳಿಯಲ್ಲಿ ಕೊರೊನಾ ಸೋಂಕಿತ ಮೃತಪಟ್ಟಿದ್ದಾನೆ. ಇಡೀ ರಾತ್ರಿ ಆಟೋದಲ್ಲಿ ಶವವಿಟ್ಟು ಕುಟುಂಬಸ್ಥರು ಕಾದಿದ್ದಾರೆ. ಆದ್ರೆ ಬಿಬಿಎಂಪಿಯ ಯಾವ ಅಧಿಕಾರಿಗಳೂ ಬಂದಿಲ್ಲ. ಕುಟುಂಬಸ್ಥರನ್ನು ವಿಚಾರಿಸಿಲ್ಲ. ಹೀಗಾಗಿ ಸೋಂಕಿತನ ಶವ ಸಾಮಾನ್ಯ ಶವದಂತೆಯೇ ಸಿಂಗಾರ ಮಾಡಿ ಕುಟುಂಬಸ್ಥರು ಅಂತ್ಯಕ್ರಿಯೆ ಮಾಡಿದ್ದಾರೆ. ಅಂತ್ಯಕ್ರಿಯೆಗೆ ಕುಟುಂಬಸ್ಥರೆಲ್ಲ ಭಾಗಿಯಾಗಿದ್ದು ಮೃತದೇಹವನ್ನು ಮುಟ್ಟಿ ಸಂಸ್ಕಾರ ಮಾಡಿದ್ದಾರೆ.

ಕುಟುಂಬಸ್ಥರು ಶವದ ಪಕ್ಕದಲ್ಲೇ ಗುಂಪುಗುಂಪಾಗಿ ನಿಂತಿದ್ದಾರೆ. ಇನ್ನು ಶವವನ್ನ ಪ್ಯಾಕ್ ಸಹ ಮಾಡದೆ ಬಿಟ್ಟಿದ್ದಾರೆ. ಮಾಸ್ಕ್ ಹಾಕದೆ, ಕೈಗೆ ಗ್ಲೌಸ್ ಹಾಕದೆ ಶವ ಮುಟ್ಟಿ ಸಿಂಗಾರ ಮಾಡಿದ್ದಾರೆ. ಇಷ್ಟೆಲ್ಲಾ ಆದ್ರೂ ಬಿಬಿಎಂಪಿಗೆ ಸೋಂಕಿತರ ಸಾವಿನ ಬಗ್ಗೆ ಮಾಹಿತಿಯೇ ಸಿಗ್ತಿಲ್ವಾ ಎಂಬ ಪ್ರಶ್ನೆ ಎದ್ದಿದೆ. ಈ ಹಿಂದೆ ಕೊರೊನಾ ಮೊದಲನೆ ಅಲೆಯ ಸಂದರ್ಭದಲ್ಲಿ ಕೊರೊನಾದಿಂದ ಮೃತಪಟ್ಟವರ ಅಂತ್ಯಸಂಸ್ಕಾರಕ್ಕೆ ಬಿಬಿಎಂಪಿ ಹೆಚ್ಚಿನ ಜಾಗೃತೆವಹಿಸಿ ಕುಟುಂಬಸ್ಥರನ್ನು ಮೃತದೇಹದ ಹತ್ತಿರವೂ ಸೇರಿಸುತ್ತಿರಲಿಲ್ಲ. ಆದ್ರೆ ಈಗ ಬಿಬಿಎಂಪಿಯಿಂದ ಇಷ್ಟೊಂದು ನಿರ್ಲಕ್ಷ್ಯವೇಕೆ? ಬಿಬಿಎಂಪಿ ಇದೇ ರೀತಿ ಸುಮ್ಮನೆ ಕುಳಿತರೆ ಮುಂದೆ ದೊಡ್ಡ ಅನಾಹುತ ಎದುರಿಸಬೇಕಾಗುತ್ತೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಕೊರೊನಾ ಶಂಕಿತ ರೋಗಿಗಳಿಗೆ ಸಂಭಾವ್ಯ ಕೊವಿಡ್ ರೋಗಿಗಳು ಎಂದು ಪರಿಗಣಿಸಿ ಚಿಕಿತ್ಸೆ ನೀಡಲಿದೆ ಉತ್ತರ ಪ್ರದೇಶ ಸರ್ಕಾರ


Follow us on

Related Stories

Most Read Stories

Click on your DTH Provider to Add TV9 Kannada