130 ಕೋಟಿ ವಂಚಿಸಿದ್ದ ವಜ್ರದ ಸ್ಮಗ್ಲರ್ ಮುಂಬೈ ಪೊಲೀಸರ ಕಣ್ತಪ್ಪಿಸಿದ್ದು ಅದೇಷ್ಟು ವರ್ಷ ಗೊತ್ತಾ?
ಮುಂಬೈ: ಪೊಲೀಸರು ಒಮ್ಮೆ ಅಪರಾಧಿ ಮೇಲೆ ಹದ್ದಿನ ಕಣ್ಣು ಇಟ್ಟರೇ ಮುಗೀತು, ಅರೆಸ್ಟ್ ಮಾಡಿ ಅಂದರ್ ಮಾಡೋವರೆಗೂ ಬಿಡೋದಿಲ್ಲ. ಇದು ಮುಂಬೈನ ಚಿನ್ನ ಮತ್ತು ವಜ್ರಗಳ ಸ್ಮಗ್ಲರ್‌ಗೆ ಈಗ ಪಕ್ಕಾ ಆಗಿರಬೇಕು. ಯಾಕಂದ್ರೆ ಪೊಲೀಸರಿಂದ ಕಳೆದ 23 ವರ್ಷಿಗಳಿಂದ ತಪ್ಪಿಸಿಕೊಂಡಿದ್ದ ಆಸಾಮಿಯನ್ನ ಮುಂಬೈ ಪೊಲೀಸರು ಕೊನೆಗೂ ಅರೆಸ್ಚ್ ಮಾಡಿ ಕಂಬಿ ಹಿಂದೆ ಕಳಿಸಿದ್ದಾರೆ. ಹೌದು 53 ವರ್ಷದ ಹರಿದಾಸ್ ಭಾವಸಾರ ಉರ್ಫ್ ಪರೇಶ್ ಝವೇರಿ ಮುಂಬೈನಲ್ಲಿ ತನ್ನ ಸಹೋದರನೊಂದಿಗೆ ಚಿನ್ನ ಮತ್ತು ವಜ್ರಗಳ ವ್ಯಾಪಾರ ಮಾಡಿಕೊಂಡಿದ್ದ. ಹೀಗೆ […]
ಮುಂಬೈ: ಪೊಲೀಸರು ಒಮ್ಮೆ ಅಪರಾಧಿ ಮೇಲೆ ಹದ್ದಿನ ಕಣ್ಣು ಇಟ್ಟರೇ ಮುಗೀತು, ಅರೆಸ್ಟ್ ಮಾಡಿ ಅಂದರ್ ಮಾಡೋವರೆಗೂ ಬಿಡೋದಿಲ್ಲ. ಇದು ಮುಂಬೈನ ಚಿನ್ನ ಮತ್ತು ವಜ್ರಗಳ ಸ್ಮಗ್ಲರ್‌ಗೆ ಈಗ ಪಕ್ಕಾ ಆಗಿರಬೇಕು. ಯಾಕಂದ್ರೆ ಪೊಲೀಸರಿಂದ ಕಳೆದ 23 ವರ್ಷಿಗಳಿಂದ ತಪ್ಪಿಸಿಕೊಂಡಿದ್ದ ಆಸಾಮಿಯನ್ನ ಮುಂಬೈ ಪೊಲೀಸರು ಕೊನೆಗೂ ಅರೆಸ್ಚ್ ಮಾಡಿ ಕಂಬಿ ಹಿಂದೆ ಕಳಿಸಿದ್ದಾರೆ.
ಹೌದು 53 ವರ್ಷದ ಹರಿದಾಸ್ ಭಾವಸಾರ ಉರ್ಫ್ ಪರೇಶ್ ಝವೇರಿ ಮುಂಬೈನಲ್ಲಿ ತನ್ನ ಸಹೋದರನೊಂದಿಗೆ ಚಿನ್ನ ಮತ್ತು ವಜ್ರಗಳ ವ್ಯಾಪಾರ ಮಾಡಿಕೊಂಡಿದ್ದ. ಹೀಗೆ ವ್ಯಾಪಾರ ಮಾಡಿಕೊಂಡಿದ್ರೆ ಯಾರು ತಲೆ ಕೆಡಿಸಿಕೊಳ್ಳುತ್ತಿರಲಿಲ್ಲ. ಆದ್ರೆ ಹಣದ ದುರಾಶೆ ಹತ್ತಿದ್ದ ವ್ಯಾಪಾರಿ, ಸಿಂಗಾಪೂರ್‌ನಿಂದ ಕಚ್ಚಾ ಚಿನ್ನ ಮತ್ತು ವಜ್ರಗಳನ್ನ ಕಳ್ಳ ದಾರಿಯಲ್ಲಿ ಆಮದು ಅಂದ್ರೆ ಸ್ಮಗಲ್ ಮಾಡಿಕೊಂಡು ಅವನ್ನು ಭಾರತದಲ್ಲಿ ಸಂಸ್ಕರಿಸಿ ಮಾರುತ್ತಿದ್ದ. ಇದರಿಂದ ಕೋಟ್ಯಂತರ ರೂಪಾಯಿಗಳ ಕಮಾಯಿ ಕೂಡಾ ಮಾಡುತ್ತಿದ್ದ.
ಆದ್ರೆ ಇದಕ್ಕೆ ನ್ಯಾಯಬದ್ದವಾಗಿ ಕೊಡಬೇಕಾಗಿದ್ದ ತೆರಿಗೆಯನ್ನ ಸರ್ಕಾರಕ್ಕೆ ಕಟ್ಟಿರಲೇ ಇಲ್ಲ. ಹೀಗೆ ಹರಿದಾಸ್ ಉರ್ಫ್ ಪರೇಶ್ ಸರ್ಕಾರಕ್ಕೆ ಕಟ್ಟ ಬೇಕಾಗಿದ್ದ ತೆರಿಗೆಯೇ ಬರೋಬ್ಬರಿ 130 ಕೋಟಿ ಆಗಿತ್ತು. ಆದ್ರೆ ಈ ತೆರಿಗೆ ಕಟ್ಟೋದು ಬಿಟ್ಟು ಪೊಲೀಸರಿಗೆ ಮತ್ತು ಜಾರಿ ನಿರ್ದೇಶನಾಲಯಕ್ಕೆ ಕಳೆದ 23 ವರ್ಷಗಳಿಂದ ಚಳ್ಳೆ ಹಣ್ಣು ತಿನ್ನಿಸುತ್ತಲೇ ಬಂದಿದ್ದ. ಈ ಸಂಬಂಧ ಜಾರಿ ನಿರ್ದೇಶನಾಲಯ ಈ ಸ್ಮಗ್ಲರ್ ವಿರುದ್ಧ ಕೊಫೆಪೊಸಾ ಕಾಯ್ದೆಯಡಿ 1997ರಲ್ಲಿ ಬಂಧನ ವಾರಂಟ್ ಜಾರಿಗೊಳಿಸಿತ್ತು.
ಖತರ್ನಾಕ್ ಬುದ್ದಿಯ ಈ ಹರಿದಾಸ್‌ನ ಲಕ್ ಮುಗಿದಿತ್ತು ಅಂತಾ ಕಾಣುತ್ತೆ. ಯಾಕಂದ್ರೆ ಮುಂಬೈ ಪೊಲೀಸರು 23 ವರ್ಷಗಳಿಂದ ತಪ್ಪಿಸಿಕೊಂಡು ಓಡಾಡುತ್ತಿದ್ದ ಈ ತೆರೆಗೆ ವಂಚಕನನ್ನು ಕೊನೆಗೂ ಬುಧವಾರ ಬಂಧಿಸಿದ್ದಾರೆ. ಈತನನ್ನು ಬಂಧಿಸಿ ಒಳಗೆ ಹಾಕಿದ್ದಲ್ಲದೇ, ಈತನ ಸಹೋದರನ ಆಸ್ತಿಯನ್ನೂ ಪೊಲೀಸರು ಮುಟ್ಟುಗೋಲು ಹಾಕಿದ್ದಾರೆ.