ಕಾಲುವೆಗೆ ಬಿದ್ದ ವಾಹನ; ಭೀಕರ ಅಪಘಾತದಲ್ಲಿ 13 ಮಂದಿ ಸಾವು

ಕಾಲುವೆಗೆ ಬಿದ್ದ ವಾಹನ; ಭೀಕರ ಅಪಘಾತದಲ್ಲಿ 13 ಮಂದಿ ಸಾವು
ಕಾಲುವೆಗೆ ಬಿದ್ದ ವಾಹನ

11 ಜನರು ಸ್ಥಳದಲ್ಲೇ ಮೃತಪಟ್ಟಿದ್ದರು. ಇನ್ನಿಬ್ಬರು ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗಮಧ್ಯದಲ್ಲಿ ಸಾವನ್ನಪ್ಪಿದ್ದಾರೆ. ಇವರೆಲ್ಲ ಭಾನುವಾರ ಸಂಜೆ 6ರ ಹೊತ್ತಿಗೆ ಟಬೂಕ್ ಸಿಟಿಯ ಬರಂಗೇ ಬುಲೋದಲ್ಲಿರುವ ಪ್ರಸಿದ್ಧ ಸರೋವರ ಬುಲೋ ಲೇಕ್​ಗೆ ಹೊರಟಿದ್ದರು.

Lakshmi Hegde

|

Apr 19, 2021 | 12:54 PM

ಕಳಿಂಗ: ಫಿಲಿಪೈನ್ಸ್​ನ ಕಳಿಂಗಾ ಪ್ರಾಂತ್ಯದಲ್ಲಿ ಏಪ್ರಿಲ್​ 18ರಂದು ಎಸ್​ಯುವಿ ವಾಹನ ನೀರಾವರಿ ಕಾಲುವೆಗೆ ಬಿದ್ದು 13 ಮಂದಿ ಮೃತಪಟ್ಟಿದ್ದಾರೆ. ಇದ್ದ 15ಜನರಲ್ಲಿ 13 ಜನರ ಜೀವ ಹೋಗಿದ್ದು, ಅದರಲ್ಲಿ ಬಹುತೇಕರು ಮಕ್ಕಳು ಎಂದು ವರದಿಯಾಗಿದೆ.

ಕಳಿಂಗ ಪ್ರಾಂತ್ಯದ ಟಬೂಕ್ ಸಿಟಿಯ ಬರಂಗೇ ಬುಲೋ ಎಂಬಲ್ಲಿ ಈ ಭೀಕರ ಅಪಘಾತ ಆಗಿದೆ. AAK 9184 ನಂಬರ್​​ನ ಎಸ್​ಯುವಿ ಕಾಲುವೆಗೆ ಬಿದ್ದು, ನಂತರ ಅಲ್ಲಿಯೇ ಮುಳುಗಿದೆ. ಈ ವಾಹನವನ್ನು ಚಾಲಕ ಸೋಯಾ ಲೋಪ್ ಆಗ್ಟುಲಾವ್ ಓಡಿಸುತ್ತಿದ್ದರು. ಚಾಲಕನ ನಿಯಂತ್ರಣ ತಪ್ಪಿದ್ದೇ ಅಪಘಾತಕ್ಕೆ ಕಾರಣ ಎಂದು ಪ್ರಾಥಮಿಕ ವರದಿಯಲ್ಲಿ ಬಹಿರಂಗವಾಗಿದೆ.

11 ಜನರು ಸ್ಥಳದಲ್ಲೇ ಮೃತಪಟ್ಟಿದ್ದರು. ಇನ್ನಿಬ್ಬರು ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗಮಧ್ಯದಲ್ಲಿ ಸಾವನ್ನಪ್ಪಿದ್ದಾರೆ. ಇವರೆಲ್ಲ ಭಾನುವಾರ ಸಂಜೆ 6ರ ಹೊತ್ತಿಗೆ ಟಬೂಕ್ ಸಿಟಿಯ ಬರಂಗೇ ಬುಲೋದಲ್ಲಿರುವ ಪ್ರಸಿದ್ಧ ಸರೋವರ ಬುಲೋ ಲೇಕ್​ಗೆ ಹೊರಟಿದ್ದರು. ಇದು ನಗರದ ಖ್ಯಾತ ಪ್ರವಾಸಿ ತಾಣವಾಗಿದೆ. ಹೊರಟಿದ್ದ 15 ಮಂದಿಯಲ್ಲಿ ಇಬ್ಬರ ಜೀವ ಉಳಿದಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಇದನ್ನೂ ಓದಿ: ಮಂಗಳನ ಮೇಲೆ ಹೆಲಿಕಾಪ್ಟರ್ ಹಾರಿಸಲು ಮುಂದಾದ ನಾಸಾ ವಿಜ್ಞಾನಿಗಳ ಪಡೆ

‘ನಾನು ಕಿಸ್ ಮಾಡುತ್ತೇನೆ’; ಮಾಸ್ಕ್ ಧರಿಸದ ಮಹಿಳೆಯಿಂದ ನಡುರಸ್ತೆಯಲ್ಲಿ ಪೊಲೀಸರ ಎದುರು ಅನುಚಿತ ವರ್ತನೆ

Follow us on

Related Stories

Most Read Stories

Click on your DTH Provider to Add TV9 Kannada