‘ನಾನು ಕಿಸ್ ಮಾಡುತ್ತೇನೆ’; ಮಾಸ್ಕ್ ಧರಿಸದ ಮಹಿಳೆಯಿಂದ ನಡುರಸ್ತೆಯಲ್ಲಿ ಪೊಲೀಸರ ಎದುರು ಅನುಚಿತ ವರ್ತನೆ

ಕಾರಿನಲ್ಲಿ ಚಲಿಸುತ್ತಿದ್ದ ಈ ಜೋಡಿಯ ಬಳಿ ಕರ್ಫ್ಯೂ ಪಾಸ್ ಇರಲಿಲ್ಲ. ಅದಕ್ಕೆ ಪ್ರಶ್ನಿಸಿದ್ದಕ್ಕೆ, ‘ಇವರು ನನ್ನ ಗಂಡ. ಬೇಕಾದರೆ ನಾನು ಕಿಸ್ ಮಾಡುತ್ತೇನೆ’ ಎಂದು ಆ ಮಹಿಳೆ ಕೂಗಾಡಿದ್ದಾರೆ.

‘ನಾನು ಕಿಸ್ ಮಾಡುತ್ತೇನೆ’; ಮಾಸ್ಕ್ ಧರಿಸದ ಮಹಿಳೆಯಿಂದ ನಡುರಸ್ತೆಯಲ್ಲಿ ಪೊಲೀಸರ ಎದುರು ಅನುಚಿತ ವರ್ತನೆ
ಪೊಲೀಸರ ಎದುರು ಅನುಚಿತವಾಗಿ ವರ್ತಿಸಿದ ದಂಪತಿ
Follow us
ಮದನ್​ ಕುಮಾರ್​
|

Updated on: Apr 19, 2021 | 11:45 AM

ಒಂದೆಡೆ ಕೊರೊನಾ ವೈರಸ್​ ಹಾವಳಿ ಮಿತಿ ಮೀರುತ್ತಿದೆ. ಹಾಗಂತ ಜನರು ಎಚ್ಚರಿಕೆ ವಹಿಸುವುದನ್ನು ಮಾತ್ರ ಕಲಿತಿಲ್ಲ. ಈಗಲೂ ಜನರು ಬೇಕಾಬಿಟ್ಟಿ ತಿರುಗಾಡುತ್ತಿದ್ದಾರೆ. ಜನದಟ್ಟಣೆ ತಪ್ಪಿಸಲು ಪೊಲೀಸರು ಹರಸಾಹಸ ಮಾಡುತ್ತಿದ್ದಾರೆ. ಸರ್ಕಾರಗಳು ಕೂಡ ನಿಯಮಗಳನ್ನು ಜಾರಿ ಮಾಡುತ್ತಲೇ ಇವೆ. ಇದರ ನಡುವೆ ಕೆಲವರು ತೀವ್ರ ನಿರ್ಲಕ್ಷ್ಯ ತೋರಿಸುತ್ತಿದ್ದಾರೆ. ದೆಹಲಿಯಲ್ಲಿ ಒಂದು ಜೋಡಿ ಪೊಲೀಸರ ಎದುರಲ್ಲೇ ಉದ್ದಟತನ ಮೆರೆದಿದೆ.

ಭಾನುವಾರ (ಏ.18) ಸಂಜೆ ಇವರಿಬ್ಬರು ಕಾರಿನಲ್ಲಿ ಹೋಗುತ್ತಿದ್ದರು. ಅವರು ಮಾಸ್ಕ್​ ಧರಿಸಿರಲಿಲ್ಲ. ಅವರನ್ನು ತಡೆದು ನಿಲ್ಲಿಸಿದ ಪೊಲೀಸರು ಮಾಸ್ಕ್​ ಯಾಕೆ ಎಂದು ಧರಿಸಿಲ್ಲ ಎಂದು ಪ್ರಶ್ನಿಸಿದ್ದಾರೆ. ಸರಿಯಾಗಿ ಉತ್ತರ ನೀಡುವ ಬದಲು ಪೊಲೀಸರ ಎದುರಲ್ಲೇ ಈ ಜೋಡಿ ಅನುಚಿತವಾಗಿ ವರ್ತಿಸಿದೆ. ಆ ಸಂದರ್ಭದ ವಿಡಿಯೋ ಕೂಡ ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗುತ್ತಿದೆ.

ಕಾರಿನಲ್ಲಿ ಚಲಿಸುತ್ತಿದ್ದ ಈ ಜೋಡಿಯ ಬಳಿ ಕರ್ಫ್ಯೂ ಪಾಸ್​ ಇರಲಿಲ್ಲ. ಅದನ್ನು ಪ್ರಶ್ನಿಸಿದ್ದಕ್ಕೆ, ‘ಇವರು ನನ್ನ ಗಂಡ. ಬೇಕಾದರೆ ನಾನು ಕಿಸ್​ ಮಾಡುತ್ತೇನೆ’ ಎಂದು ಆ ಮಹಿಳೆ ಕೂಗಾಡಿದ್ದಾರೆ. ಅಲ್ಲದೆ ತಾನು ಪೊಲೀಸ್​ ಅಧಿಕಾರಿಯ ಮಗಳು ಎಂಬುದಾಗಿಯೂ ಧಮ್ಕಿ ಹಾಕಿದ್ದಾರೆ. ಮಾಸ್ಕ್​ ಧರಿಸದೇ ಇರುವುದಕ್ಕೆ ದಂಡ ಕಟ್ಟಲು ಕೂಡ ನಿರಾಕರಿಸಿದ್ದಾರೆ.

ಇವರಿಬ್ಬರು ಪತಿ-ಪತ್ನಿಯಾಗಿದ್ದು ದೆಹಲಿಯ ಪಟೇಲ್​ ನಗರದ ಪಂಕಜ್​ ಮತ್ತು ಅಭಾ ಎಂಬುದು ತಿಳಿದು ಬಂದಿದೆ. ಪೊಲೀಸರ ಜೊತೆ ಅನುಚಿತವಾಗಿ ವರ್ತಿಸಿದ್ದಕ್ಕಾಗಿ ಈ ದಂಪತಿ ಮೇಲೆ ಪ್ರಕರಣ ದಾಖಲಾಗಿದೆ. ಇಬ್ಬರನ್ನೂ ಪೊಲೀಸ್​ ಠಾಣೆಗೆ ಕರೆದೊಯ್ಯಲಾಗಿದ್ದು, ಪತಿಯನ್ನು ಬಂಧಿಸಲಾಗಿದೆ. ದೇಶಾದ್ಯಂತ ಕೊರೊನಾ ಎರಡನೇ ಅಲೆ ಹಬ್ಬಿತ್ತಿರುವ ಸಂದರ್ಭದಲ್ಲಿ ಜನರ ಉಡಾಫೆ ವರ್ತನೆಗಳು ಸಮಾಜದ ದಾರಿ ತಪ್ಪಿಸುವಂತಿವೆ.

ಕಾರಿನಲ್ಲಿ ಕುಳಿತು ಪ್ರಯಾಣ ಮಾಡುತ್ತಿರುವ ಒಂದೇ ಕುಟುಂಬದ ಸದಸ್ಯರು ಮಾಸ್ಕ್​ ಧರಿಸಬೇಕೋ ಬೇಡವೋ ಎಂಬ ಬಗ್ಗೆ ಸೋಶಿಯಲ್​ ಮೀಡಿಯಾದಲ್ಲಿ ಮೊದಲಿನಿಂದಲೂ ಚರ್ಚೆ ನಡೆಯುತ್ತಲೇ ಇದೆ. ಮನೆಯೊಳಗೆ ಜೊತೆಯಾಗಿ ಇರುವವರು ತಮ್ಮದೇ ಕಾರಿನಲ್ಲಿ ಹೊರಗಡೆ ಹೋದಾಗ ಮಾಸ್ಕ್​ ಧರಿಸುವ ಅವಶ್ಯತಕೆ ಏನಿದೆ ಎಂದು ಅನೇಕರು ಪ್ರಶ್ನಿಸುತ್ತಿದ್ದಾರೆ.

ಇದನ್ನೂ ಓದಿ: ನನ್ನ ಸಾವಿಗೆ ರಾಜಕಾರಣಿಗಳೇ ಕಾರಣ; ಕೊರೊನಾ ಸೋಂಕಿತ ‘ಮಠ’ ಗುರುಪ್ರಸಾದ್​ ಬಹಿರಂಗ ಡೆತ್​ ನೋಟ್​​