ಸಿಂಗಾಪುರದಲ್ಲಿ ಪತ್ತೆಯಾದ ಕೊರೊನಾ ವೈರಾಣು ಭಾರತದಲ್ಲಿ ಮೂರನೇ ಅಲೆಗೆ ಕಾರಣವಾಗಬಹುದು: ಅರವಿಂದ್ ಕೇಜ್ರಿವಾಲ್

ಸಿಂಗಾಪುರದಲ್ಲಿ ಸದ್ಯ ರೆಸ್ಟೋರೆಂಟ್​ಗಳು ಬಂದ್ ಆಗಿದೆ. ವರ್ಕ್ ಫ್ರಮ್ ಹೋಮ್ ವ್ಯವಸ್ಥೆ ಮುಂದುವರಿದಿದೆ. 16 ವರ್ಷದೊಳಗಿನ ಮಕ್ಕಳಿಗೆ ಲಸಿಕೆ ನೀಡುವ ಯೋಜನೆ ರೂಪಗೊಳ್ಳುತ್ತಿದ್ದು, ಶಾಲೆಗಳು ಮನೆಯಲ್ಲೇ ಕಲಿಕೆ ವಿಧಾನವನ್ನು ಬಳಸಿಕೊಳ್ಳುತ್ತಿದೆ.

ಸಿಂಗಾಪುರದಲ್ಲಿ ಪತ್ತೆಯಾದ ಕೊರೊನಾ ವೈರಾಣು ಭಾರತದಲ್ಲಿ ಮೂರನೇ ಅಲೆಗೆ ಕಾರಣವಾಗಬಹುದು: ಅರವಿಂದ್ ಕೇಜ್ರಿವಾಲ್
ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್

ದೆಹಲಿ: ಸಿಂಗಾಪುರದಲ್ಲಿ ಪತ್ತೆಯಾಗಿರುವ ರೂಪಾಂತರಿ ಕೊರೊನಾ ವೈರಾಣು ಭಾರತದ ಮೂರನೇ ಅಲೆಗೆ ಕಾರಣವಾಗಬಹುದು ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಇಂದು (ಮೇ 18) ತಿಳಿಸಿದ್ದಾರೆ. ಹೊಸ ಸ್ವರೂಪದ ಕೊವಿಡ್-19 ವೈರಾಣು ಮಕ್ಕಳಿಗೆ ಅತಿ ಕೆಟ್ಟ ಪರಿಣಾಮವನ್ನು ಉಂಟುಮಾಡಬಹುದು ಎಂದು ಕೇಜ್ರಿವಾಲ್ ಅಂದಾಜಿಸಿದ್ದಾರೆ. ಹಾಗಾಗಿ, ಸಿಂಗಾಪುರದೊಂದಿಗಿನ ಸೇವೆಗಳನ್ನು ಕೂಡಲೇ ಸ್ಥಗಿತಗೊಳಿಸಿ, ಮಕ್ಕಳಿಗೆ ಲಸಿಕೆ ನೀಡುವಂತೆ ಮೋದಿ ಸರ್ಕಾರವನ್ನು ಕೇಳಿಕೊಂಡಿದ್ದಾರೆ.

ಸಿಂಗಾಪುರದ ಕಂಡುಬಂದಿರುವ ಕೊರೊನಾ ವೈರಾಣು ಮಕ್ಕಳಿಗೆ ಅಪಾರ ಹಾನಿ ಉಂಟುಮಾಡಬಹುದು ಎನ್ನಲಾಗುತ್ತಿದೆ. ಅದೇ ವೈರಾಣು ಕೊರೊನಾ ಮೂರನೇ ಅಲೆಯಾಗಿ ಕಂಡುಬರಬಹುದು. ಸಿಂಗಾಪುರದೊಂದಿಗಿನ ವಿಮಾನಯಾನವನ್ನು ಸ್ಥಗಿತಗೊಳಿಸಬೇಕು. ಮಕ್ಕಳಿಗೆ ಲಸಿಕೆ ಅಭಿಯಾನವನ್ನು ಆರಂಭಿಸಬೇಕು ಎಂದು ಕೇಜ್ರಿವಾಲ್ ಟ್ವೀಟ್ ಮಾಡಿ ಕೇಳಿಕೊಂಡಿದ್ದಾರೆ.

ದೆಹಲಿಯಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ಕಳೆದ ಕೆಲವು ದಿನಗಳಿಂದ ಇಳಿಕೆಯಾಗಿದೆ. ಕಳೆದ ತಿಂಗಳು ಪ್ರತಿನಿತ್ಯ ದಾಖಲಾಗುತ್ತಿದ್ದ ಕೊರೊನಾ ಪ್ರಕರಣಗಳ ಸಂಖ್ಯೆ 28,000ದ ವರೆಗೆ ಸಾಗಿತ್ತು. ಈಗ ಪ್ರತಿನಿತ್ಯ ಕಂಡುಬರುತ್ತಿರುವ ಪ್ರಕರಣಗಳ ಸಂಖ್ಯೆ 5,000ದಷ್ಟು ಮಾತ್ರ ಇದೆ.

ಸಿಂಗಾಪುರದಲ್ಲಿ ಸದ್ಯ ರೆಸ್ಟೋರೆಂಟ್​ಗಳು ಬಂದ್ ಆಗಿದೆ. ವರ್ಕ್ ಫ್ರಮ್ ಹೋಮ್ ವ್ಯವಸ್ಥೆ ಮುಂದುವರಿದಿದೆ. 16 ವರ್ಷದೊಳಗಿನ ಮಕ್ಕಳಿಗೆ ಲಸಿಕೆ ನೀಡುವ ಯೋಜನೆ ರೂಪಗೊಳ್ಳುತ್ತಿದ್ದು, ಶಾಲೆಗಳು ಮನೆಯಲ್ಲೇ ಕಲಿಕೆ ವಿಧಾನವನ್ನು ಬಳಸಿಕೊಳ್ಳುತ್ತಿದೆ.

ಸಿಂಗಾಪುರದಲ್ಲಿ ಜನರು ಮಾಸ್ಕ್ ಧರಿಸುವಂತೆ ಸರ್ಕಾರ ಕೇಳಿಕೊಂಡಿದೆ. ಮಾಸ್ಕ್ ತೆಗೆದು ಮಾಡಬೇಕಾದ ಕೆಲಸಗಳನ್ನು ಆದಷ್ಟು ಕಡಿಮೆ ಮಾಡುವಂತೆಯೂ ಸರ್ಕಾರ ತಿಳಿಸಿದೆ. ಮುಂದಿನ 3ರಿಂದ 6 ತಿಂಗಳ ಕಾಲ ಇದೇ ನಿಯಮವನ್ನು ಅನುಸರಿಸುವಂತೆ ತಿಳಿಸಲಾಗಿದೆ.

ಇದನ್ನೂ ಓದಿ: ಭಾರತದಲ್ಲಿ ಕೊರೊನಾದ ಎರಡನೇ ಅಲೆ ಅಂತ್ಯ ಯಾವಾಗ?

ಕೊರೊನಾ ಮೂರನೇ ಅಲೆ ಎದುರಿಸಲು ಟಾಸ್ಕ್ ಫೋರ್ಸ್ ಸಮಿತಿ ರಚಿಸುವಂತೆ ಬಿ.ಎಸ್. ಯಡಿಯೂರಪ್ಪ ಆದೇಶ